ಮಳೆಯ ಜೋಕಾಲಿಯಲಿ ಜೋಗದಲಿ…..: ಬಿ.ಕೆ.ಮೀನಾಕ್ಷಿ, ಮೈಸೂರು.
ಜೋಗ್ನಲ್ಲಿ ಫಾಗ್ ನೋಡಬೇಕೆಂದು ಆಸೆಯಾಗಿ, ಆ ಆಸೆಯನ್ನು ದಮನಿಸಲಾಗದೆ ಮೈಸೂರಿನಿಂದ ಹೊರಟೇ ಬಿಟ್ಟೆವು. ತಾಳಗುಪ್ಪ ರೈಲು ಹತ್ತಿ ಹೊರಟಿದ್ದು. ರಾತ್ರಿ ಹೊತ್ತು, ಸ್ಲೀಪರ್ ಕೋಚು. ಬೇಜಾರು. ಹೊರಗಡೇದೇನೂ ನೋಡೋದಕ್ಕಾಗಲ್ಲ, ಕಣ್ತುಂಬಿಕೊಳ್ಳೋಕಾಗಲ್ಲ! ಅಲ್ಲಾರೀ ನನಗೇನನಿಸುತ್ತದೆ ಅಂದ್ರೆ ಈ ಜನ, ಕಿಟಕಿಯಿಂದ ಆಚೆ ನೋಡುತ್ತಾ ಕೂರದೆ ಅದು ಹೇಗಾದರೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ ಅಂತ?! ನಿಮಗೂ ಈ ತರ ಯೋಚನೆ ಬರುತ್ತದೆ ತಾನೇ? ಹ್ಞಾಂ! ಸರಿಯಾಗಿ ಯೋಚಿಸಿದ್ದೀರಿ. ಸುತ್ತ ಇರೋರೆಲ್ಲ ಗೊರಕೆ ಆಸಾಮಿಗಳೇ. ನಾನಿನ್ನೇನು ಮಾಡಲಿ? ನಾನೂ ಹಾಗೇ ಮುದುಡಿಕೊಂಡೆ … Read more