ಗೋವಿನ ಹಾಡು: ಆಶಾ ಜಗದೀಶ್..

ಪಕ್ಕದ ಮನೆಯ ಹಸು ಉಸ್ಸು ಬುಸ್ಸು ಎಂದು ನಿಟ್ಟುಸಿರಿಡುತ್ತಾ ಅಲ್ಲಿಯವರೆಗೂ ಮೇಯ್ದದ್ದನ್ನು ಕೂತು ಮೆಲುಕು ಹಾಕುತ್ತಿತ್ತು. ಅತ್ತಲಿಂದ ಬಂದ ಹಸೀನ, ಇಮ್ತಿಯಾಜ಼್ ಆಂಟಿಗೆ ಹಸುವನ್ನು ತೋರಿಸುತ್ತಾ “ಪಾಪ ನೋವು ತಿಂತಾ ಇದೆ… ನಾವು ಮನುಷ್ಯರಾದ್ರೆ ಇಷ್ಟೊತ್ತಿಗೆ ಆಸ್ಪತ್ರೆ ಆ್ಯಂಬುಲೆನ್ಸು ಅಂತ ಓಡ್ತಿದ್ವಿ… ಆದ್ರೆ ಪಾಪ ಮೂಕ ಪ್ರಾಣಿಗಳಿಗೆ ಅದೆಲ್ಲ ಏನೂ ಇಲ್ಲ…” ಅಂದಳು. ಅಲ್ಲಿಯವರೆಗೂ ದಿನನಿತ್ಯ ನೋಡುತ್ತಿದ್ದ ಆ ಹಸು ಗಬ್ಬಾಗಿದೆ ಎಂದು ನನಗೆ ತಿಳಿದಿರಲೇ ಇಲ್ಲ! ಸೋ ಕಾಲ್ಡ್ ನಗರಗಳಲ್ಲಿ ಹುಟ್ಟಿ ಬೆಳೆದ ನಮ್ಮಂಥವರಿಗೆ ಇಂತವೆಲ್ಲ … Read more

ಜೀವನವೊಂದು ಮುರಳಿ- ಸುಖ ಸಂತೋಷ ತರಲಿ: ಎಂ.ಎನ್.ಸುಂದರ ರಾಜ್

ದೀಪಾವಳಿ ಅಂದರೆ ಸಾಕು, ಮಕ್ಕಳು ಪುಳಕಿತಗೊಳ್ಳುತ್ತಾರೆ, ಹಿರಿಯರು ಸಂಭ್ರಮಿಸುತ್ತಾರೆ. ಏಕೆಂದರೆ, ಇದೊಂದು ಬೆಳಕಿನ ಹಬ್ಬ, ಅಜ್ಞಾನವೆಂಬ ಕತ್ತಲನ್ನು ಪರಿಹರಿಸಿ, ಜ್ಞಾನದ ಬೆಳಕನ್ನು ನೀಡುವ ದಿವ್ಯ ಸಂದೇಶವೇ ದೀಪಾವಳಿ. ಈ ಹಬ್ಬದ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಅವಶ್ಯಕ. ಶ್ರೀ ರಾಂಜಿ ಜೈನ್ ಎಂಬ ಆಧ್ಯಾತ್ಮಿಕ ಗುರುಗಳು ದೀಪಾವಲಿಯ ಸಂದರ್ಭದಲ್ಲಿ ಒಂದೆಡೆ ಮಾತನಾಡುತ್ತಾ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಿದ್ದಾರೆ. ಜೀವನ ಹೂವಿನ ಹಾಸಿಗೆಯಲ್ಲ, ಅದೊಂದು ಸಮಸ್ಯೆಯ ಗೂಡು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಜೀವನದ ಎಲ್ಲ … Read more

ಜಗದ್ವಂದ್ಯ ಭಾರತಂ ಪುಸ್ತಕ ವಿಮರ್ಶೆ: ಅಶ್ಫಾಕ್ ಪೀರಜಾದೆ

ಜಗದ್ವಂದ್ಯ ಭಾರತಂ {ಕಾದಂಬರಿ} ಲೇಖಕರು- ರಾಜಶೇಖರ ಮಠಪತಿ [ರಾಗಂ] “ದೇಶವೆಂದರೆ ದೇವರಿಗೂ ಮಿಗಿಲು, ನಮ್ಮ ಕಲ್ಪನೆಯಲ್ಲಿ ಹುಟ್ಟುವ ದೇವರಗಳು ಕೋಟಿ ಕೋಟಿ. ಅವರ ರೂಪ ಅವತಾರಗಳು ಸಾವಿರ ಸಾವಿರ. ಆದರೆ ದೇಶ ಹಾಗಲ್ಲ.ಅದು ನಾವು ನೆಲಸಿದ ನೆಲೆಯಾಗಿ ನೆಲವಷ್ಟೆ ಅಲ್ಲ. ನಮ್ಮ ಅನ್ನ, ಅಸ್ತಿತ್ವ, ಸ್ವಾತಂತ್ರ್ಯಗಳ ಭರವಸೆ. ನಾವು ಕಂಡು ಮುಟ್ಟಿ ಅನುಭವಿಸಬಹುದಾದ ವಾಸ್ತವ. ದೇಶ ಭದ್ರವಾಗಿದ್ದರೆ ನಾವೂ ಭದ್ರ. ನಮ್ಮ ನಾಳೆಗಳೂ ಭದ್ರ. ದೇಶದ ಗೌರವಕ್ಕೆ ಧಕ್ಕೆಯಾಗದಂತೆ ಬದುಕುಬೇಕು” ಇದು ಮುಸ್ಲಿಂ ಕುಟುಂಬವೊಂದರ ಆದರ್ಶ ಮತ್ತು … Read more

ಮಕ್ಕಳ ಕಥೆ : ಅರಮನೆಯ ಅರಗಿಣಿ: -ಸಿಂಧು ಭಾರ್ಗವ್

ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ ಮಕ್ಕಳ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ … Read more

ನಮ್ಮೆಲ್ಲರ ಸಿಪಿಕೆ- ಎಂಬತ್ತರ ಮೊಹಬತ್ತು!: ಡಾ. ಹೆಚ್ ಎನ್ ಮಂಜುರಾಜ್

ಸಿಪಿಕೆ ಮತ್ತು ಅವರ ಕಾವ್ಯ ಕುರಿತ ಬರಹ ಅಪ್ರತಿಮ ವಿದ್ವತ್ತು; ಮಾತೋ ವಿದ್ಯುತ್ತು ! ಸಿಪಿಕೆಯವರನ್ನು ಬಲ್ಲ ಯಾರಿಗೂ ಅನಿಸುವ ಸತ್ಯವಿದು. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ ಪಿ ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯದ ಹೆಮ್ಮೆಯ ಆಸ್ತಿ. ಹಳೆಯ ಮೈಸೂರು ಪ್ರಾಂತ್ಯದ ಸತ್ತ್ವ ಮತ್ತು ಸ್ವತ್ವ. ಇವರು ತಮ್ಮೆಲ್ಲ ಚೈತನ್ಯವನ್ನು ಸಾಹಿತ್ಯ ಕೃಷಿಗೆ ಮುಡಿಪಿಟ್ಟವರು. ಕನ್ನಡ ಸಾಹಿತ್ಯ ಸೇವೆಯೇ ಅವರ ಮತ್ತೊಂದು ಹೆಸರು; ಬರೆವಣಿಗೆ ಅವರ ಉಸಿರು. ಕನ್ನಡ, ಇಂಗ್ಲಿಷ್ … Read more

ಕನ್ನಡದ ಕಣ್ಮಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಂದೆ ತಾಯಿಗೆ ತಮ್ಮ ಮಗ ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಇಂಗ್ಲೀಷ್ ಮಾತನಾಡುತ್ತಾ ದೊಡ್ಡ ಅಧಿಕಾರಿಯಾಗಿ ದೊಡ್ಡ ಪಟ್ಟಣದಲ್ಲಿ ದೊಡ್ಡ ಭಂಗಲೆಯಲ್ಲಿದ್ದು ಎಲ್ಲರ ಹತ್ತಿರ ಸೆಲ್ಯೂಟ್ ಹೊಡೆಸಿಕೊಳ್ಳುತ್ತಾ ಕಾರಲ್ಲಿ ಓಡಾಡಬೇಕಂತ ಕನಸು. ನನಸು ಮಾಡಿಕೊಳ್ಳಲು ಹಳ್ಳಿಯ ಕನ್ನಡ ಶಾಲೆ ಬಿಡಿಸಿ ಪೇಟೆ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಅವನಿಗೂ ಪೇಟೆ ಬಣ್ಣಬಣ್ಣದ ತಳುಕುಬಳುಕಿನ ಬದುಕು ಖುಷಿ! ಹೊಸ ಶಾಲೆ, ದೊಡ್ಡ ಸುಂದರ ಆಕರ್ಷಕ ಕಟ್ಟಡ , ಮನಸ್ಸೆಳೆಯುವ ವಾತಾವರಣ, ಶಿಸ್ತಾಗಿ ಬೆಳೆಸಿದ ಕೈತೋಟ, ಸ್ಮಾರ್ಟ್ ಕ್ಲಾಸ್ ಗಳು, ಸೈನ್ಸ್ ಲ್ಯಾಬು, … Read more

ವಿಶೇಷಾಂಕಕ್ಕಾಗಿ ಲೇಖನ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ಕನ್ನಡದ ಅನೇಕ ವೆಬ್‌ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು ಇಂಡಿಬ್ಲಾಗರ್‌ ವೆಬ್‌ ತಾಣದ ಕನ್ನಡ ತಾಣಗಳ ರ್ಯಾಂಕಿಗ್‌ ನಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಕಳೆದ ಏಳು ವರ್ಷಗಳ ಪಂಜುವಿನ ಪಯಣದಲ್ಲಿ ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ ವಿಶೇಷ ಸಂಚಿಕೆಯಾಗಿ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ … Read more

ಪಂಜು ಕಾವ್ಯಧಾರೆ

ಹೆಣ್ಣೊಂದು ತಾಯ್ತನದ ಕಣ್ಣು ಬಾಲ್ಯದಲಿ ಅಂಕುರ ಬೆಳೆಯುತ್ತ ಹೂವು ಸುಮಧುರ ಅಮ್ಮನಿಗೆ ಸಹೋದರಿ ಅಪ್ಪನಿಗೆ ಭಾಗ್ಯದ ಗರಿ ಮನೆ ಬೆಳಗುವ ಜ್ಯೋತಿ ನೀನಿಲ್ಲದ ಜಗವೊಂದು ಭೀತಿ ಹೆಣ್ಣೊಂದು ಅಗಾಧ ಶಕ್ತಿ ಪವಾಡದಂತೆ, ಇದೊಂದು ಸೃಷ್ಟಿ ಒಲಿದರೆ ನಾರಿ ಮುನಿದರೆ ಮಾರಿ ಈ ಗಾಧೆಗೆ ಸರಿ ಸಾಟಿ ಬರೋಬರಿ ಸಂಗೀತ ಸಾಹಿತ್ಯ ದೇವತೆ ಸುಂದರ, ನಯನ ಮನೋಹರ ನೀನಿಲ್ಲದ ಯುಗವೇ ಅವನತಿ ಹೆಣ್ಣೊಂದು ಭಕ್ತಿ, ಕೈ ಮುಗಿಯಲು ಜನ್ಮ ದಾತೆಯ ರೂಪ ಸದಾ ಮಿಗಿಲು ಒಡಲ ಪ್ರೀತಿಯ ಸಾರುವ … Read more

ಕಲೆಗೋಸ್ಕರ ಜೀವನವನ್ನೆ ಮುಡಿಪಾಗಿಟ್ಟ ಅಮಟೂರ ದಂಪತಿಗಳು: ಅಶ್ಫಾಕ್ ಪೀರಜಾದೆ, ಧಾರವಾಡ

ಧಾರವಾಡ ಜಿಲ್ಲೆ ಮತ್ತು ತಾಲೂಕೀನ ಹಾರೋಬೆಳಡಿ ಗ್ರಾಮದ ವಾಸಿಗಳಾದ ವೀರಬಸಪ್ಪ ಅಮಟೂರ ಇವರು ವೃತ್ತಿಯಿಂದ ರೈತರಾದರು ದೊಡ್ಡಾಟ ಕಲಾವಿದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ವೀರಬಸಪ್ಪನ್ನವರು ದೋಡ್ಡಾಟದಲ್ಲಿ ಸ್ತ್ರೀ ಪಾತ್ರ ಮಾಡುವದರಲ್ಲಿ ನಿಷ್ಣಾತರು. ಅವರ ಅಭಿನಯಕ್ಕೆ ಮನಸೋಲದ ಕಲಾಸಕ್ತರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರು ಮುಖಕ್ಕೆ ಬಣ್ಣಬಳಿದುಕೊಂಡು ಸ್ತ್ರೀಪಾತ್ರದಲ್ಲಿ ಅಭಿನಯಸಲು ನಿಂತರೆಂದರೆ ಸಾಕು ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗುತ್ತದೆ. ಅವರ ಭಾವಾಭಿನಯವಂತೂ ಕಣ್ಣಲ್ಲಿ ನೀರು ಬರಿಸುವಂಥದ್ದು. ಸ್ಪುರದ್ರೂಪಿಯಾದ ವೀರಬಸಪ್ಪಗೆ ಅವರ ಶರೀರ ಮತ್ತು ಶಾರೀರಗಳೇ ಸಂಪತ್ತು. ತಮ್ಮ … Read more

ಅವಮಾನವೇ ಆದರ್ಶವಾದ ಕಥೆ: ಅಯ್ಯಪ್ಪ ಕಂಬಾರ

ಊರ ಅಗಸಿ ಬಾಗಿಲಿನ ಬಳಿ ಕಾರು ಬಂದ ತಕ್ಷಣ ಡ್ರೈವರ್ ಸರ್. . ಸರ್. . ಎದ್ದೇಳಿ ಸರ್ ನಿಮ್ಮ ಊರು ಬಂತು ಎಂದ. ಆಗ ಸಮಯ 11 ಗಂಟೆ ರಾತ್ರಿ. ಆಜೀವ ದಡಬಡಾಯಿಸಿ ಎದ್ದು ಕಾರು ನಿಲ್ಲಿಸು ಎಂದವನೇ ಕಣ್ಣು ಪಿಚ್ಚು ಒರೆಸಿಕೊಳ್ಳುತ್ತ, ಮುಖದಲ್ಲಿ ಎಲ್ಲಿಂದಲೋ ನಗು ಕಡ ತಂದು ಕಾರಿನ ಗಾಜು ಇಳಿಸಿ ಆಕಡೆ ಈಕಡೆ ಹಿಂದೆ ಮುಂದೆ ಮೇಲೆ ಕೆಳಗೆ ನೋಡುತ್ತ, ಇದ್ದಕ್ಕಿದ್ದವನೆ ಕೆಳಗಿಳಿದು, ಬಾಗಿ ನೆಲ ಮುಟ್ಟಿ ನಮಸ್ಕರಿಸಿ ಮೇಲೆದ್ದ. ಬೀದಿ … Read more

ಬರೆಯುವುದು ಹೇಗೆ?: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ ಅನೂಷಾಳಿಗೆ ಕಾಲ್ ಮಾಡಿದ. “ಹೇ ಅನೂಷ ಏನ್ ಮಾಡ್ತಿದ್ದೀಯಾ?” ” ಏನಿಲ್ಲಪ್ಪ. ಈಗ ಜಸ್ಟ್ ಊಟ ಆಯ್ತು, ಸುಮ್ಮನೆ ಕೂತಿದ್ದೀನಿ. ಮನೆಯಲ್ಲಿ ಫುಲ್ ಖುಷ್ ಕಣೋ, ಕೆಲಸ ಸಿಕ್ಕಿದ್ದಕ್ಕೆ” ” ಹೌದಾ… ನಮ್ಮನೇಲೂ ಅಷ್ಟೇ, ತುಂಬಾ ಖುಷಿಯಾಗಿದ್ದಾರೆ. ಆದ್ರೂ ನಮ್ಮಪ್ಪ, ಕೊನೆಗೊಂದು ಬಾಂಬ್ ಹಾಕಿನೆ ಹೋದ್ರು ನೋಡು.” ” ಹ್ಹ….ಹ್ಹ…. ಹಂಗೆ ಆಗ್ಬೇಕು ನಿನಗೆ. ಅಂದ್ಹಾಗೆ, ಏನ್ ಬಾಂಬು ಅದು ಮಿಸ್ಟರ್ ಹರಿ?”. ಎಂದು ರೇಗಿಸಿದಳು ಅನೂಷಾ. “ಏಯ್… ಸಾಕು ಸುಮ್ನಿರೇ … Read more

ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ

ಮಹಾ ಶರಣ ಹರಳಯ್ಯ ಪಾರಪಯ್ಯ ಹೊನ್ನಮ್ಮ ದಂಪತಿಗೆ ದವಣದ ಹುಣ್ಣಿಮೆಯೆಂದು ಬಿಜಾಪೂರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಹರಳಯ್ಯನದಾಗಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ … Read more

ಮನುಷ್ಯನಿಗಿರಲಿ ಮಾನವೀಯತೆ: ತುಳಸಿ ನವೀನ್. ಬೆಂಗಳೂರು

ಮಾನವೀಯತೆಯು ಹುಟ್ಟಿನಿಂದಲೇ ಬರುವಂತದ ಗುಣ. ಆದರೆ ನಾವು ಬೆಳೆಯುವ ಪರಿಸರ,ವ್ಯವಹರಿಸುವ ಜನರು, ಅವರ ಮನಸ್ಥಿತಿಯಿಂದ ಬದಲಾಗುತ್ತಾ ಹೋಗುತ್ತದೆ. ಮುಗ್ಧತೆ ಮಾಯವಾಗಿ ಕುಕೃತ್ಯಕ್ಕೆ ತಿರುಗುತ್ತದೆ. ಮತ್ಸರ,ದ್ವೇಷ ಮನಸ್ಸಿನಲ್ಲಿ ಮನೆಮಾಡುತ್ತದೆ. ಆಸೆ-ದುರಾಸೆ ಲಾಲಸೀತನ ಮೈದಳೆಯುತ್ತದೆ. ನೀವು ಗಮನಿಸಬಹುದು, ಶಾಲಾ-ಕಾಲೇಜಿನಲ್ಲಿ ಪುಟ್ಟಪುಟ್ಟ ಮನಸ್ಸುಗಳು, ಮುಗ್ಧ ಮನಸ್ಸುಗಳೆಲ್ಲವೂ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸ್ವಚ್ಛಂದವಾಗಿ ಸ್ನೇಹಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ಪರಸ್ಪರ ಪ್ರೀತಿ, ಸ್ನೇಹ, ಸಹಾಯ ಮಾಡಿಕೊಂಡು ಸಂತೋಷದಿಂದ ಜೀವನ ಕಳೆಯುತ್ತಾ ಇರುತ್ತಾರೆ. ಆ ಮನಸ್ಸುಗಳಲ್ಲಿ ಯಾವುದೇ ಬೇಧಭಾವದ ಕಪ್ಪುಚುಕ್ಕೆಗಳಿರುವುದಿಲ್ಲ. ಅದೇ ಕಾಲೇಜು ಜೀವನದಿಂದ … Read more

ಧೃತರಾಷ್ಟ್ರಾಲಿಂಗನ !: ಕೆ ಟಿ ಸೋಮಶೇಖರ. ಹೊಳಲ್ಕೆರೆ

‘ ಆಲಿಂಗನ ‘ ಎಂಬ ಪದವೇ ಆಪ್ಯಾಯಮಾನ ಅನಿಸುವಂತಹದ್ದು! ಹಿತಕರ ಅನುಭವ ಉಂಟು ಮಾಡುವಂತಹದ್ದು. ಆಲಿಂಗನವೆಂಬ ಕ್ರೀಯೆ ಎರಡು ದೇಹಗಳ ಬೆಸುಗೆ! ಮಧುರ ಅನುಭವ! ಗಾಢ ಪ್ರೀತಿ, ಸ್ನೇಹ, ಮಮತೆ ಆಲಿಂಗನದ ಸಂಕೇತಗಳು! ಆಲಿಂಗನದಲ್ಲಿ ದೇಹಗಳಷ್ಟೇ ಬೆಸೆದಿರುವಂತೆ ಕಂಡರೂ ಮನಸ್ಸುಗಳು ಮೊದಲೇ ಸೂಜಿಗಲ್ಲಿನಂತೆ ಸೆಳೆದು ಆಲಂಗಿಸಿಕೊಂಡಿರುತ್ತವೆ. ಮನಸ್ಸುಗಳು ಆಕರ್ಷಿಸದೆ ದೇಹಗಳು ಆಲಿಂಗನಗೊಳ್ಳುವುದಿಲ್ಲ! ದೇಹಗಳ ಆಲಿಂಗನದಿಂದ ಮನಸ್ಸುಗಳು ಸ್ಪರ್ಷಾನಂದದ ಅನುಭವ ಹೊಂದುತ್ತಿರುತ್ತವೆ! ಸ್ಪರ್ಷಾನುಭವ ವ್ಯಕ್ತಿಗಳು ಹೊಂದಿರುವ ಅನ್ಯೋನ್ಯತೆಯ ಆಧಾರದ ಮೇಲೆ ಸಂತಸ ಉಂಟು ಮಾಡುತ್ತಿರುತ್ತದೆ. ಹಾಗೇ ಗಾಢಾಲಿಂಗನ ಅವರ … Read more

ಪಂಜು ಕಾವ್ಯಧಾರೆ

ಅಜ್ಜ ಬರುವುದ ಇನ್ನೂ ಬಿಟ್ಟಿಲ್ಲ..!! ಅಗೋ..! ನೋಡು ಅಲ್ಲಿ..? ಗೋಡೆನೆತ್ತಿಯ ಮೊಳೆಯಲ್ಲಿ ಅಹಿಂಸಾ ಮೂರುತಿಯ ಬಂಧಿಸಿ ಕಟ್ಟಿ ಹಾಕಿದಂತೆ ನೇತು ಹಾಕಿದೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಹುಬ್ಬುಗಂಟಿಕ್ಕದೆ ಒಮ್ಮೆ ನಸು ನಗುತ್ತಾ ಜೀಸಸ್ ಕ್ರಿಸ್ತನಂತೆ ಕಾಣುತ್ತಿದ್ದಾನೆ..!! ನನ್ನ ತಾತ ಕೋಲು ಹಿಡಿದು ಸುಕ್ಕುಗಟ್ಟಿದ ಮೈಯ್ಯಲ್ಲಿ ತುಂಡು ಬಟ್ಟೆ ತೊಟ್ಟು ಮೇಲೆ ಹೊದಿಕೆ ಹೊದ್ದು ಕಾಲ್ನಡಿಗೆಯಲ್ಲೇ ಯಾರನ್ನೋ ? ಯಾವುದನ್ನೋ ! ಅರಸುತ್ತಾ , ನಡೆಯುತ್ತಾ ಹೊರಟಂತಿದೆ…!! ಕಪ್ಪು ಜನಾಂಗೀಯ ನಿಂದನೆ ದಹಿಸಿ ಅಹಿಂಸೆಯಿಂದ ಹಿಂಸೆ ಜಯಿಸಿ … Read more

ಟ್ರಿಣ್ ಟ್ರಿಣ್ . . . . . . . ದಾರಿಬಿಡಿ: ಸಂಗೀತ ರವಿರಾಜ್

ಸೈಕಲ್ ತುಳಿಯುತ್ತ, ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ, ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ, ಮೂರು ಕತ್ತೆ ವಯಸ್ಸಾಗಿ, ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು. ಬಾಲ್ಯದ ಬಾಗಿಲಲ್ಲಿಯೆ ಕಲಿತ ಸೈಕಲ್ ಸವಾರಿ, ಈಗಲು ನನ್ನ ಕಾಲತುದಿಯಲ್ಲಿ ಅದೇ ಆಸಕ್ತಿಯಿಂದ ಕುಳಿತಿದೆ ಅಂದರೆ ನನಗೆ ನಾನೆ ಪರಮಾಶ್ಚರ್ಯಗೊಳ್ಳುತ್ತೇನೆ. ಮನೆಗೆ ಯಾರಾದರೂ ಸೈಕಲಲ್ಲಿ ಬಂದರೆ, ಅಥವ ನಾವು ಹೋದ … Read more

ಅಂತರಾಗ್ನಿ (ಭಾಗ 3): ಕಿರಣ್. ವ್ಹಿ

ಇಲ್ಲಿಯವರೆಗೆ ಹೊರಗೆ ಬಂದ ಇಬ್ಬರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಮುಂದಾದರು. ಹರಿಗೆ ತನ್ನ ಬೈಕ್ ಸರಿಯಾದರೆ ಸಾಕಾಗಿತ್ತು. ಆ ನಡುರಸ್ತೆಯಲ್ಲಿ ಕೆಟ್ಟು ನಿಂತದ್ದು ಮತ್ತೊಂದು ತಲೆನೋವಾಗಿತ್ತು. ಸಹಾಯಕ್ಕೆಂದು ಮ್ಯಾನೇಜರ್ ರವಿಯ ಬಳಿ ಹೋದ. ಗೋಪಾಲ್ ವರ್ಮಾರವರು ಕೂಡ ತಮ್ಮ ಮನೆಯವರೆಲ್ಲರ ಜೊತೆ ಸಪ್ತಗಿರಿಯನ್ನು ನೋಡಲು ಹೊರಟರು. ರವಿ, ಹರಿಗೆ ಒಬ್ಬ ಮೆಕ್ಯಾನಿಕ್ನನ್ನು ಪರಿಚಯಿಸಿ ಅವನ ಜೊತೆಯಲ್ಲಿ ಹೋಗಿ ಬೈಕನ್ನು ರಿಪೇರಿ ಮಾಡಿ, ತೆಗೆದುಕೊಂಡು ಬರಲು ಹೇಳಿದ. ಇಬ್ಬರು ಮೆಕ್ಯಾನಿಕ್ ನ ಬೈಕ್ನಲ್ಲಿ ಹೋಗಿ ಗಾಡಿಯನ್ನು ರಿಪೇರಿ … Read more