ಲಂಕೇಶ್ ಮತ್ತು ಮನಶಾಸ್ತ್ರ: ಶ್ರೀಮಂತ್ ಯನಗುಂಟಿ
ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. … Read more