ಹಂಬಲ

ಹಂಬಲ ಈ ದಾರಿಯ ತಿರುವಲ್ಲಿ ಒಂದು ಗುಡಿಸಲಿರಲಿ.. ಒಳಗೆ ಮಣ್ಣ ನೆಲದ ಮೇಲೆ ಚಿತ್ತಾರ ಅರಳಿರಲಿ… ಒಳಗಿನ ತಮ ಹೋಗಿಸುವಷ್ಟು ಬೆಳಕಿರಲಿ.. ಅನ್ನಪಾತ್ರೆ ಖಾಲಿಯಾದರೂ ಚಿಂತೆ ಇಲ್ಲ… ಒಡಕಲು ಮಡಿಕೆಯ ಕೆಳಗೆ ನಾಲ್ಕು ಹನಿ ಮಧು ಇರಲಿ.. ಸಖಿ ಅಲ್ಲಿ ನಿನ್ನ ನೆರಳಿರಲಿ… -ಉಮೇಶ್ ದೇಸಾಯಿ

ವಿಶ್ರಾಂತ

  ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ … Read more

ನಮ್ಮ-ನಿಮ್ಮ ಕದ ತಟ್ಟಿದೆ ಈ ಬೆಳಕಿನ ‘ಪಂಜು’

  ಒಮ್ಮೆ ಪ್ರಜಾವಾಣಿಯಲ್ಲಿ ಒಂದು ಸುಂದರ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಅದನ್ನು ಬರೆದದ್ದು ಯಾರೆಂದು ಮರೆತಿದ್ದೇನೆ. ಆ ಚಿತ್ರ ಹೀಗಿತ್ತು: ಒಬ್ಬ ಯುವಕ, ಸಾಕಷ್ಟು ದಿನ ಕೂದಲು ಗಡ್ಡ ಟ್ರಿಮ್ ಮಾಡಿಸದೆ ಫಲವತ್ತಾಗಿ ಬೆಳೆದುಬಿಟ್ಟಿದೆ. ಆತ ಒಂದು ಕಂಪ್ಯೂಟರಿನ ಮುಂದೆ ಕುಳಿತಿದ್ದಾನೆ. ಆತನು ಆಚೀಚೆ ಅಲುಗಾಡದಂತೆ ಕುಳಿತಿದ್ದುದಕ್ಕೆ ಸಾಕ್ಷಿಯೆಂಬಂತೆ ಆತನ ಗಡ್ಡ–ಮುಖಕ್ಕೂ ಮತ್ತು ಆ ಕಂಪ್ಯೂಟರಿನ ಮಾನೀಟರಿಗೂ ದಟ್ಟಾದ ಜೇಡರ ಬಲೆ ಹೆಣೆದುಕೊಂಡುಬಿಟ್ಟಿದೆ. ಈ ಅರ್ಥವತ್ತಾದ ಚಿತ್ರ ಹೇಳುವಂತೆ ನಾವೆಲ್ಲರೂ ಇಂದು ಕಂಪ್ಯೂಟರ್, ಅಂತರ್ಜಾಲ ಎಂಬ ಮೋಹಕತೆಗೆ … Read more

ನನ್ನೊಳಗಿನ ಗುಜರಾತ..!!!

ಜೀವನಯೆಂದರೇನು? ಎಂಬ ಈ ಜಟಿಲ ಪ್ರಶ್ನೆಗೆ ನನ್ನ ಮನಸ್ಸು ತಡಬಡಿಸುತ್ತ ಇಲ್ಲಿಯವರೆಗೂ ಅದೆಷ್ಟು ಉತ್ತರ ನೀಡಿದೆಯೋ ಏನೋ. ಬಾಲ್ಯದ ದಿನಗಳಲ್ಲಿಯೇ ನನ್ನ ಮನಸ್ಸಿಗೆ ಆ ದೇವರು ಯವ್ವನವನ್ನು ನೀಡಿಯಾಗಿತ್ತೇನೊ. ಆವತ್ತಿನಿಂದ ಇವತ್ತಿನವರೆಗೂ ತನ್ನನ್ನೇ ತಾನು ಪ್ರಶ್ನಿಸುತ್ತ ತನಗೆ ತಾನೆ ಉತ್ತರಿಸುತ್ತಿರುವ ನನ್ನ ಮನಸಿಗೆ, ಇದೊಂದು ನಿರಂತರ ಕೆಲಸವಾಗಿ ಹೋಗಿದೆ. ಅಂಥದುದರಲ್ಲಿ ಒಂದಿಷ್ಟು ಉತ್ತರಗಳು ನೆಮ್ಮದಿ ನೀಡಿವೆಯಾದರು ಇನ್ನು ನಿಖರ ಉತ್ತರಕ್ಕಾಗಿ ಕಾಯುತ್ತಿದೆ. ನನು ಏಳನೆ ತರಗತಿ ಓದುವಾಗ ಈ ಪ್ರಶ್ನೆಗೆ ಎರಡು ಉತ್ತರವನ್ನು ಬರೆದು ನನ್ನ ಪುಸ್ತಕದಲಿ … Read more

ಅವತಾರ್ ವರ್ಸಸ್ ಬಬ್ರುವಾಹನ

ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಜೇಮ್ಸ್ ಕ್ಯಾಮೆರಾನ್, ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ…..ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕ, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್‍ಗೆ ತೋರಿಸಿದಾಗ,  ಅರೆರೆ….ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ … Read more

ನಾ ಕಂಡ ಹೀರೋಗಳು

ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ. ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು … Read more

‘ತಾಯಿಯ ಮಡಿಲು’

ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯೊಲ್ಲ ಜೋಗಿ… ಕಡೆತನಕ ಮರೆಯೊಲ್ಲ ಜೋಗಿ… ಎನ್ನುವ 'ಜೋಗಿ ಚಿತ್ರದ ಗೀತೆಯನ್ನು ನಾವೆಲ್ಲಾ ಟೀವಿ, ರೇಡಿಯೋಗಳಲ್ಲಿ ಕೇಳಿರುತ್ತೇವೆ. ಇದು ೨೦೦೫ ರಲ್ಲಿ ತೆರೆಕಂಡ 'ಶಿವರಾಜ್ ಕುಮಾರ್' ನಾಯಕ ನಟನ ಸೂಪರ್ ಹಿಟ್ ಚಲನ ಚಿತ್ರ.  ಈ ಚಿತ್ರ ಬಿಡುಗಡೆಯದಾಗ ಹೆಚ್ಚು ಸಿನೆಮಾ ಮಂದಿರಕ್ಕೆ ಹೋಗದವಳಾದ ನಾನು ಸಹ ಈ ಹಾಡಿಗೆ ಮನಸೋತು ಚಿತ್ರ ನೋಡಲು ಹೋಗಿದ್ದೆ.  ಚಿತ್ರ ತುಂಬಾ ಚೆನ್ನಾಗಿತ್ತು. ತಾಯಿ ಪ್ರೀತಿ ಪ್ರಧಾನವಾದ ಚಿತ್ರ, ಎಂತಹವರನ್ನು ಬರಸೆಳೆಯುವ … Read more

ಪೂರ್ಣತೆಯ ಕಡೆಗೆ

  ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||   ಬಗೆಹರಿಯದ ಮೌಲ್ಯವದು ’ಪೈ’ ಎಂದು ಪರಿಧಿ ವ್ಯಾಸದ ಸರಳ ಅನುಪಾತವದು ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ ಸನಿಹವಾದರೂ ಎಂದೂ ನಿಖರವಲ್ಲ ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ ತೀರದ ಹಠಕೆ ಅರ್ಪಣೆಯೇನು ಕಡಿಮೆಯ ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|   ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ … Read more

ಕತೆಯಾದವಳು

  ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು. ರೇಣುಕನ ಎಂದಿನ … Read more

ಪಂಜು ಕುರಿತು…

  ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ. ದೂರದೂರಿನಲ್ಲಿ ಕುಳಿತು ಒಬ್ಬ ಸಾಮಾನ್ಯ ಓದುಗನಂತೆ ಕನ್ನಡದ ಸಾಹಿತ್ಯ ತಾಣಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುವಾಗ, ಕೇವಲ ಸಾಹಿತ್ಯ ಸಂಬಂಧಿತ ಬರಹಗಳಷ್ಟೇ ತುಂಬಿರುವ ಅಂತರ್ಜಾಲ ತಾಣ ಕಣ್ಣಿಗೆ ಕಂಡಿದ್ದು ಅಪರೂಪ. ದಿನ ನಿತ್ಯ ಹೆಚ್ಚು ಓದಿಗೆ ಸಿಕ್ಕುವ ಫೇಸ್ ಬುಕ್ ನಂತಹ ಪ್ರಭಾವಿ ಅಂತರ್ಜಾಲ ತಾಣದಲ್ಲಿ ಸಾಹಿತ್ಯವೆಂದರೆ ಬರೀ ಕವನಗಳು ಚುಟುಕಗಳು ಎನ್ನುವಂತಹ ವಾತಾವರಣ ಇಂದಿನ ದಿನಗಳಲ್ಲಿ … Read more