ವಿಶ್ರಾಂತ
ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ … Read more