2017ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2017' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗ ದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ … Read more
“ಎಲ್ಲರಂಥವನಲ್ಲ ನನ್ನಪ್ಪ” ಪುಸ್ತಕ ಬಿಡುಗಡೆ
ಆತ್ಮೀಯರೇ, ಪಂಜುವಿನ ಲೇಖಕರು ಮತ್ತು ಅಂಕಣಕಾರರಾದ ಗುರುಪ್ರಸಾದ ಕುರ್ತಕೋಟಿಯವರ ಸಂಪಾದಕತ್ವದಲ್ಲಿ ಮೈತ್ರಿ ಪ್ರಕಾಶನ "ಎಲ್ಲರಂಥವನಲ್ಲ ನನ್ನಪ್ಪ" ಎಂಬ ಪುಸ್ತಕ ಹೊರತರುತ್ತಿದೆ. ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಕೆಳಗಿನ ಚಿತ್ರದಲ್ಲಿದೆ. ಆಸಕ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿನಂತಿ.. ಹಾಗೆಯೇ ಈ ಪುಸ್ತಕದ ಪ್ರತಿಯನ್ನು ಈ ಕೆಳಗಿನ ಲಿಂಕ್ ಒತ್ತಿ ಫಾರಂ ಅನ್ನು ಭರ್ತಿ ಮಾಡಿ ರಿಯಾಯಿತಿ ದರದಲ್ಲಿ ಮುಂಗಡವಾಗಿ ಕಾದಿರಿಸಬಹುದಾಗಿದೆ. https://goo.gl/forms/r7kCj5KlGV86XoBi2 ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪಂಜು ಬಳಗದ ಪರವಾಗಿ ಶುಭಾಶಯಗಳು ಹಾಗು ಗುರುಪ್ರಸಾದ್ ಕುರ್ತಕೋಟಿ ಮತ್ತು ಪುಸ್ತಕದ … Read more
ಪಂಜು ಕಾವ್ಯಧಾರೆ
ದಯಾಮಯಿ ಎಂದು ಬರೆಯಲೆ, ಸುಂದರಿ ಎಂದು ಬರೆಯಲೆ, ಪ್ರಿಯತಮೆ ಎಂದು ಬರೆಯಲೆ, ನಾನು ಕಂಗೆಟ್ಟಿ ಬಿಟ್ಟಿದ್ದೇನೆ ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು; ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ; ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ , ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ; ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ, ಆದರೆ ಇದರಲ್ಲಿ ಕಪ್ಪು ಛಾಯೆ … Read more
ಅನುವಾದಕ್ಕೊಂದು ತಂತ್ರಜ್ಞಾನ: ಉದಯ ಶಂಕರ ಪುರಾಣಿಕ
ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ಪ್ರವಾಸ ಮಾಡುವಾಗ, ಸಾಮಾನ್ಯವಾಗಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನಮಗೆ ಗೊತ್ತಿರುವ ಭಾಷೆಯಲ್ಲಿ ಮತ್ತೊಬ್ಬರ ಜೊತೆ ಸಂಭಾಷಣೆ ನೆಡೆಸುವುದು ವಿಫಲವಾದಾಗ, ಕೈ, ಬಾಯಿ ಸನ್ನೆಗಳು ಮತ್ತು ನಮ್ಮ ಹಾವ ಭಾವಗಳ ಮೂಲಕ ಸಂಭಾಷಣೆ ನೆಡೆಸುವ ಪ್ರಯತ್ನ ಮಾಡುತ್ತೇವೆ. ಕೆಲವೊಮ್ಮೆ ಇದೂ ವಿಫಲವಾಗುವುದುಂಟು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ, ಆದರೆ ಭಾಷೆಯ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆ ಆಗ ನಮಗೆ ಎದುರಾಗುವುದುಂಟು. ಜಪಾನಿನ ಲಾಗ್‍ಬಾರ್ ಹೆಸರಿನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ … Read more
ಮಂಗಳನ ಅಂಗಳದಲ್ಲಿ! (ಭಾಗ 1): ಎಸ್.ಜಿ.ಶಿವಶಂಕರ್
ಇಡೀ ಮನೆ ಅಲುಗಾಡಿದಂತ ಅನುಭವವಾಯಿತು ಸೃಜನನಿಗೆ. ಇದೊಂದು ಹೊಸ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ! ಭೂಕಂಪನವಾಗುತ್ತಿದೆ ಎನಿಸುವಂತ ಅನುಭವ! ಕೆಲವು ನಿಮಿಷಗಳ ನಂತರ ಆ ಕಂಪನ ನಿಂತಿಂತೆ ಅನಿಸಿತು. ಎಲ್ಲ ಸ್ಥಬ್ದವಾಯಿತು; ನೆಮ್ಮದಿ! ಸ್ವಲ್ಪ ಎಚ್ಚರವಾಗಿತ್ತು-ಅಲುಗಾಟಕ್ಕೆ. ಸ್ಥಬ್ದವಾದನಂತರ ಮತ್ತೆ ಜೋಂಪು. ಮತ್ತೆ ಅಲುಗಾಟ, ಕುಲುಕಾಟ! ಮನೆಯೇ ಅತ್ತಿತ್ತ ವಾಲಿದಂತೆ, ಮತ್ತೆ ಅದೇ ಸಾವರಿಸಿಕೊಂಡು ನೆಟ್ಟಗೆ ನಿಂತಂತೆ! ಛೆ..ಇದೆಂತಾದ್ದು..? ನಿಜಕ್ಕೂ ಏನಾಗುತ್ತಿದೆ..? ಈ ಸಾರಿ ಬಹಳ ಹೊತ್ತು ಸ್ಥಬ್ದತೆ ಇದ್ದಂತೆ ಭಾವನೆ. ಈ ಕಂಪನ, ಸ್ಥಬ್ದತೆಗಳ ನಡುವೆ ಎಂತದೋ ಕಿರಿಕಿರಿ! … Read more
ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ: ನಾಗರೇಖಾ ಗಾಂವಕರ
ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ ವಿಸ್ತøತವಾಗುತ್ತಲೋ ಇಲ್ಲ ಸಂಕೀರ್ಣವಾಗುತ್ತಲೋ ಇವೆ. ಈ ಕೌಟಂಬಿಕ ನೆಲೆಗಟ್ಟಿನಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಂಡಿವೆ. ಗಂಡ-ಹೆಂಡತಿ,ತಂದೆ-ತಾಯಿ,ಮಗ -ಸೊಸೆ,ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಆಲದ ಮರದ ಬೀಳಲುಗಳಂತೆ ಭಾರತೀಯ ಸಂಬಂಧಗಳು ಹಲವಾರು. ಅದರಲ್ಲಿ ಅತ್ತೆ-ಸೊಸೆ ಸಂಬಂಧ ಸಮಾಜದ ಮೂಲ ಘಟಕವಾದ ಕುಟುಂಬದ ಬಲಬೇರು. ಅತ್ತೆ … Read more
“ಮಾಡರ್ನ್ ಲೋಕದ ಮಿನಿಕಥೆಗಳು”: ಪ್ರಸಾದ್ ಕೆ.
ಅವಳಿಗೆ ಮುಂಜಾನೆಯ ಏಳಕ್ಕೆ ಸರಿಯಾಗಿ ಎಚ್ಚರವಾಯಿತು. ಕಣ್ಣುಜ್ಜಿ ಅತ್ತಿತ್ತ ನೋಡಿದರೆ ಅವನಿನ್ನೂ ವಿವಸ್ತ್ರನಾಗಿಯೇ ಬಿದ್ದುಕೊಂಡಿದ್ದ. ಲಗುಬಗೆಯಲ್ಲೇ ಕಾಲನ್ನು ನೀಲಿ ಜೀನ್ಸ್ ಪ್ಯಾಂಟಿನೊಳಗೆ ತೂರಿಸಿ, ಟೀಶರ್ಟೊಂದನ್ನು ಧರಿಸಿ ತನ್ನ ಪುಟ್ಟ ಬ್ಯಾಗಿನೊಂದಿಗೆ ಅವಳು ಹೊರಟುಹೋದಳು. ಹತ್ತರ ಸುಮಾರಿಗೆ ಅವನಿಗೆ ಎಚ್ಚರವಾಯಿತು. ಹೋಟೇಲ್ ರೂಮಿನಲ್ಲಿ ಅವಳ ಪತ್ತೆಯಿರಲಿಲ್ಲ. ಅವಳ ಮೈಬೆವರಿನ, ಉನ್ಮಾದಗಳ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದ. ಛೇ, ನಿನ್ನೆ ರಾತ್ರಿ ಅವಳ ನಂಬರನ್ನಾದರೂ ಕೇಳಬಹುದಿತ್ತು ಎಂದು ಪರಿತಪಿಸಿದ ಆತ. ಹಾಸಿಗೆಯಿಂದೆದ್ದು ಒಳಉಡುಪನ್ನು ಧರಿಸಿ ನೀರಿನ ಬಾಟಲಿಗೆಂದು ಫ್ರಿಡ್ಜ್ ಕಡೆಗೆ … Read more
ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್
ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. … Read more
ನೆನಪಿನ ಪಯಣ – ಭಾಗ 4: ಪಾರ್ಥಸಾರಥಿ ಎನ್
ಇಲ್ಲಿಯವರೆಗೆ ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು. ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, … Read more
ಲೇಡಿ ವಿತ್ ದ ಲ್ಯಾಂಪ್: ಕೆ ಟಿ ಸೋಮಶೇಖರ್ ಹೊಳಲ್ಕೆರೆ.
ಮೇ ೧೨ ಪ್ಲಾರೆನ್ಸ್ ನೈಟಿಂಗೆಲ್ ಜನ್ಮದಿನ. ಅವಳ ಜನ್ಮದಿನದ ನೆನಪಿಗಾಗಿ ಮೇ ೬ ರಿಂದ ೧೨ ರ ವರೆಗ ನರ್ಸ್ ಗಳ ಅಂತರಾಷ್ಟ್ರೀಯ ದಿನ ಆಚರಿಸುತ್ತಾರೆ. ಇಂತಹ ಗೌರವಕ್ಕೆ ಅವಳು ಭಾಜನವಾಗಬೇಕೆಂದರೆ ಅವಳು ಯಾರು ? ಅವಳು ಮಾಡಿದ ಸಾಧನೆಯಾದರೂ, ಮಹತ್ಕಾರ್ಯವಾದರೂ ಏನೆಂದು ತಿಳಿಯುವುದು ಸೂಕ್ತ. ಸೇವೆಗೆ ಮತ್ತೊಂದು ಹೆಸರೇ ಪ್ಲಾರೆನ್ಸ್ ನೈಟಿಂಗೇಲ್! ' ಲೇಡಿ ವಿತ್ ದ ಲ್ಯಾಂಪ್ ' ಎಂದು ಪ್ರಸಿದ್ಧರಾದವರು. ಇವಳು ಶ್ರೀಮಂತ ಕುಟುಂಬದ ಹಿನ್ನೆಲೆಯವಳು. ೧೮೨೦ ಮೇ ೧೨ ರಂದು … Read more
” ಸೂಫಿ, ಪ್ರೇಮ ಮತ್ತು ಗಜಲ್ “: ಕೃಷ್ಣ ಶ್ರೀಕಾಂತ ದೇವಾಂಗಮಠ
ಉರ್ದು, ಅರೇಬಿಕ್ ಹಾಗೂ ಪರ್ಷಿಯನ್ ಗಜಲ್ ಕಾವ್ಯ ಮತ್ತು ಹಲವು ಪ್ರಕಾರದ ಸೂಫಿ ಕಾವ್ಯಗಳು ಮೂಲದಲ್ಲಿ ಪ್ರೇಮ ಕಾವ್ಯಗಳೇ. ಅನೇಕ ಸೂಫಿಗಳು ಬರೆದಿರುವುದು ಗಜಲ್ ಪ್ರಕಾರದಲ್ಲೇ. ಕೆಲವು ಸೂಫಿಗಳು ' ಮಸನವಿ ' ಅಂದರೆ ದ್ವಿಪದಿಯಂಥ ರಚನೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಸೂಫಿಯನ್ನು ಪ್ರೇಮ ಕಾವ್ಯ ಎಂದು ಅರ್ಥೈಸುವಲ್ಲಿ ಅವರ ಪ್ರೇಮದ ತೀವ್ರ ಒಡನಾಟವಿರುವುದು ಬೇರಾರ ಮೇಲು ಅಲ್ಲಾ ಅದು ಸ್ವತಃ ಅವರ ಆರಾಧ್ಯ ದೈವ ಅಲ್ಲಾಹನ ಮೇಲೆಯೇ . ಹೀಗೆ ಸೂಫಿಯಲ್ಲಿ ಅಲ್ಲಾಹನ … Read more
“ಮಲ್ಲಿಗೆ ಮುಡಿದು ಸುಖದಿಂದುರು ಗೆಳತಿ”: ಸಿದ್ದುಯಾದವ್ ಚಿರಿಬಿ
ನಿನ್ನೊಲವಿನ ಹಸಿ ಮಳೆಗೆ, ನೆನಪುಗಳ ಅಭ್ಯುಂಜನಕೆ ಈಗ ಕೇದಿಗೆಯ ಘಮ ನಲ್ಲೆ. ಮುಂಗಾರಿನ ಮೊದಲ ಮಳೆಯ ಹನಿ ಸಿಂಚನದಿ ಇಳೆಯು ಮೆದುವಾದಂತೆ ಈ ಹೃದಯ ನಿನ್ನ ಒಲವಿ ಝಡಿ ಮಳೆಗೆ ಮೆದುವಾಗಿ ಘಮ್ಮೆನ್ನುತಿದೆ. ಪ್ರೀತಿಯ ಸಿಂಚನದ ಮಂಪರಿನಲಿ ಮನಸು ತೂಗುಯ್ಯಾಲೆಯಾಡುತಿದೆ. ಈ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಉದ್ಬವಿಸಿಬಿಡುತ್ತದೋ ತಿಳಿಯದು. ನಯನಗಳ ಮಹಲಿನಲಿ ಹೊಕ್ಕು ಗೆಜ್ಜೆಕಟ್ಟಿ ಭರತ ನಾಟ್ಯವಾಡಿಬಿಡುತ್ತದೆ. ಅದೇಷ್ಟೋ ಮೋಹಕ ನಿನ್ನಾ ನಗೆ ಮೊಗ, ಗಲ್ಲದ ಮೇಲಿನ ಆ ಹೂ ದಳ, ಪದಗಳೆ ಇಲ್ಲದೆ ಪಾದಗಳು … Read more
ಪಂಜು ಕಾವ್ಯಧಾರೆ
ಆಡು ನವಿಲೇ ಕನಸುಗಳ ಬಚ್ಚಿಟ್ಟು ಕಾಡದಿರು ಹೀಗೆ ಬೆಚ್ಚುತ್ತ ನೋಡದಿರು ಎದೆಹೂವು ನಲುಗೆ ।। ನೆನಪು ಬುತ್ತಿಯು ಚೆಲ್ಲಿ ಈಗ ಚೆಲ್ಲಾಪಿಲ್ಲಿ ಕಿರಿಬೊಗಸೆಯಲ್ಲದನು ಮೊಗೆಯುವುದು ಹೇಗೆ ।। ಜೊತೆ ಜೊತೆಗೆ ನಡೆವಲ್ಲಿ ಬೀಸಿ ಸುಂಟರಗಾಳಿ ಮರೆಯಾದ ಹೆಜ್ಜೆಗಳು ಹೆಚ್ಚಿಸಿವೆ ಬೇಗೆ।। ಎದೆಯಲ್ಲಿ ಎದೆ ಬೆರೆತು ಹಾಡು ಹೊಮ್ಮಿರುವಂದು ಯಾವ ಗಂಟಲ ಗಾಣ ಒತ್ತಿದ್ದು ಹಾಗೆ ।। ನುಡಿಸು ನೀ 'ಗೋವಿಂದ' ಕೊಳಲಿಗುಸಿರನ್ನೂಡಿ ಕರಗಿ ಎದೆ ನವಿಲಾಡಿ ಬಿಚ್ಚುತ್ತ ಸೋಗೆ।। … Read more
ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!: ಗುರುಪ್ರಸಾದ ಕುರ್ತಕೋಟಿ
ಅವತ್ತ ನನ್ ಕಣ್ ನನಗ ನಂಬದಷ್ಟು ಆಶ್ಚರ್ಯ ಆತು. ಎರಡೂ ಕಣ್ಣಾಗ ದಳ ದಳ ನೀರು ಹರಿಲಿಕತ್ತಾವು. ತಡಕೊಳ್ಳಲಿಕ್ಕೆ ಆಗದಷ್ಟು. ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು! … ನನಗ ನೆನಪಿದ್ದಂಗ ಹತ್ತು ವರ್ಷದ ಹಿಂದ ಇರ್ಬೇಕು ನನ್ನ ಹೆಂಡತಿ ನನ್ನ ಬಿಟ್ಟು ತಾ ಒಬ್ಬಾಕಿನ ತೌರ ಮನೀಗೆ ಹೋಗಿದ್ದು. ಅದನ್ನ ಬಿಟ್ರ ಅಕಿ ಒಬ್ಬಾಕಿನ ಎಂದೂ ಹೋಗೇ ಇಲ್ಲ. ಪ್ರತಿ ಸಲ ಊರಿಗೆ ಹೋಗುಮುಂದ ಜೊತಿಗೆ ನಾನೂ ಇದ್ದ ಇರ್ತಿದ್ದೆ. ಅಥವಾ ತನ್ನ ಜೋಡಿ … Read more
ಹಿಮಾಲಯವೆಂಬ ಸ್ವರ್ಗ (ಭಾಗ 2): ವೃಂದಾ ಸಂಗಮ್
ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ಗಂಗೆ, ಸಗರನ ಮಕ್ಕಳಿಗೆ ಮೋಕ್ಷ ಕೊಟ್ಟ ಗಂಗೆ, ಭೀಷ್ಮ ಪಿತಾಮಹನ ತಾಯಿ ಗಂಗೆ, ಶಂತನು ಮಹರಾಜನ ಪ್ರೇಮಿ ಗಂಗೆ, ಜಹ್ನು ಋಷಿಯಿಂದ ಜಾಹ್ನವಿಯಾದ ಗಂಗೆ, ಭಗೀರಥನಿಂದ ಭಾಗೀರಥಿಯಾದ ಗಂಗೆ, ಪರಮ ಪಾವನೆ, ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರುವ ಗಂಗೆ, ‘ಗಂಗೆಗೇ ಕೊಳೆ ಸೋಕದು ಪಾಪದಾ ಫಲ ತಟ್ಟದು’ ಎಂದು ನಾವು ಮಲಿನಗೊಳಿಸಿದ ಗಂಗೆ, ಕೋಟ್ಯಾನು ಕೋಟಿ ಭಾರತೀಯರ ಪಾಪ ತೊಳೆದು ಈಗ ಕೋಟ್ಯಾನು ಕೋಟಿ ರೂಪಾಯಿಯ ಒಡತಿಯಾಗಿ … Read more
ಗಂಡು ಹೆಣ್ಣಿನ ಪ್ರೀತಿ- ರೀತಿ: ನಾಗರೇಖಾಗಾಂವಕರ
ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ wuthering heights ನಲ್ಲಿವೆ. ಕಾದಂಬರಿಯ ನಾಯಕಿಕ್ಯಾಥರಿನ್ ಹಾಗೂ ನಾಯಕ ಹೇತ್ಕ್ಲಿಫ್. ಪ್ರೀತಿ ಮೂಲಬೂತವಾದ ಬಯಕೆ. ವಿಶ್ವಸನೀಯವಾದ ಪ್ರೀತಿ ಶ್ರೇಷ್ಟವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್ಣತೆ … Read more
ಓದಿ ಓದಿ ಲವ್ವೂ ಆಗಿ: ಪ್ರಸಾದ್ ಕೆ.
“ಪ್ರೀತಿಯು ಸದಾ ಕರುಣಾಮಯಿ. ಅದು ತಾಳ್ಮೆಯ ಪ್ರತಿರೂಪ. ಮತ್ಸರಕ್ಕೆ ಅಲ್ಲಿ ಜಾಗವಿಲ್ಲ. ಪ್ರೀತಿಯು ವೃಥಾ ಜಂಭ ಕೊಚ್ಚಿಕೊಳ್ಳುವುದನ್ನೋ, ದುರಹಂಕಾರವನ್ನೋ ತೋರಿಸುವುದಿಲ್ಲ. ಪ್ರೀತಿ ಒರಟೂ ಅಲ್ಲ, ಸ್ವಾಥರ್ಿಯೂ ಅಲ್ಲ. ಪ್ರೀತಿಯು ಸುಖಾಸುಮ್ಮನೆ ಎಲ್ಲವನ್ನೂ ತಪ್ಪುತಿಳಿದುಕೊಳ್ಳುವುದಿಲ್ಲ. ದ್ವೇಷವನ್ನೂ ಅದು ತನ್ನೊಳಗೆ ಬಿಟ್ಟುಕೊಳ್ಳಲಾರದು…'' ಹೀಗೆ ತಣ್ಣಗೆ ಶಾಂತಚಿತ್ತಳಾಗಿ ಹೇಳುತ್ತಾ ಹೋಗುತ್ತಿದ್ದಿದ್ದು `ಎ ವಾಕ್ ಟು ರಿಮೆಂಬರ್' ಚಿತ್ರದ ನಾಯಕಿ ಜೇಮಿ. ಹಾಗೆ ನೋಡಿದರೆ ಪ್ರೇಮಕಥೆಯ ಸುತ್ತ ಹೆಣೆದಿರುವ ನೂರಾರು ಚಲನಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರವೇನೂ ಅಲ್ಲದಿದ್ದರೂ ಜೇಮಿ ಪಾತ್ರಕ್ಕೆ ಜೀವವನ್ನು ತುಂಬುವ … Read more