ಪಂಜು ಕಾವ್ಯಧಾರೆ
ಪಾಣೀಗ್ರಹಣ ಎಲ್ಲೂ ಅವಳಿಗೊಂದು ಹೊಚ್ಚ ಹೊಸ ಸವಿಯಿರುವ ವರ ಸಿಗುತ್ತಿಲ್ಲ ದೇವಾನುದೇವತೆಗಳ ವರಗಳ ಸ್ಟಾಕ್ ಖಾಲಿಯಾಗಿದೆ…… ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ ವಸಂತ ಕಟ್ಟಲು ಬೇಕಿರುವ ಮತ್ತೆರೆಡು ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು ಉಳಿ ಸುತ್ತಿಗೆ ತೆಗೆದು ಕಟೆಕಟೆದು ನೋಡುತ್ತಿದ್ದಾಳೆ ನಿರರ್ಥಕವಾಗಿ ಮನದ ಮಾದರಿ ಮಸಕಾಗುತ್ತಿರುವ ಹೊತ್ತಲ್ಲಿ ಅದು ತನ್ನದೇ ಚಿತ್ರ ! ನಿರಾಶೆಯ ಮಡುವು ಸಂತೋಷದ ಚಿಲುಮೆ ಒಟ್ಟೊಟ್ಟಿಗೆ ಕಣ್ಣಿ … Read more
ವಿಕ್ಷೇಪ: ಸಾತ್ವಿಕ್ ಹ೦ದೆ
ಮತ್ತದೇ ಕನಸು, ದೂರದೂರದವರೆಗೂ ಚಾಚಿದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳಿರಲಿ ಒ೦ದು ಹುಲ್ಲುಕಡ್ಡಿಯೂ ಇಲ್ಲ. ಬಿರುಬಿಸಿಲಿನಲ್ಲಿ ಐವರು ಅಪರಿಚಿತರು ನಡೆದೇ ಸಾಗುತ್ತಿದ್ದಾರೆ. ಸಮವಸ್ತ್ರ ಧರಿಸಿದವರ೦ತೆ ಐವರೂ ಬಿಳಿಯ ಅ೦ಗಿ ಮತ್ತು ಷರಾಯಿಯನ್ನು ತೊಟ್ಟಿದ್ದಾರೆ. ಅ೦ಗಿಯ ಮೇಲೆಲ್ಲಾ ರಕ್ತದ ಕಲೆಗಳು. ರಕ್ತದ ಕೆ೦ಪು ಭುಜದಿ೦ದ ಇಳಿದು ಹೊಟ್ಟೆಯ ಉಬ್ಬುತಗ್ಗುಗಳನ್ನು ದಾಟಿ ಇಳಿಯುತ್ತಿದೆ. ಐವರಲ್ಲೊಬ್ಬರಿಗೂ ಅದರ ಅರಿವೇ ಇದ್ದ೦ತಿಲ್ಲ. ಒಬ್ಬೊಬ್ಬರೂ ಹೆಗಲ ಮೇಲೆ ಸತ್ತ ನಾಯಿಗಳನ್ನು ಹೊತ್ತಿದ್ದಾರೆ. ಮುಖದ ಮೇಲೆಲ್ಲಾ ರಕ್ತದ ಕಲೆಗಳಿದ್ದುದರಿ೦ದ ಯಾರೆ೦ದು ಕ೦ಡುಹಿಡಿಯುವುದು ಕಷ್ಟ. ಆ ಐವರಲ್ಲೊಬ್ಬ … Read more
ಸಾಲ: ಗಿರಿಜಾ ಜ್ಞಾನಸುಂದರ್
ಬೆಳಿಗ್ಗೆ ಎದ್ದದ್ದು ತಡವಾಗಿತ್ತು. ಇನ್ನು ಆಲಸ್ಯ. ಇವತ್ತು ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲ. ಆದರೆ ರಜೆ ಇಲ್ಲದ ಕಾರಣ ಸೂರ್ಯ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿ ಕೆಲಸಕ್ಕೆ ಹೊರಟ. ಸೂರ್ಯ ತನ್ನ ಊರನ್ನು ಬಿಟ್ಟು ಬಂದು ೮ ತಿಂಗಳು ಆಗಿತ್ತು. ಅಪ್ಪ ಅಮ್ಮನ ಹತ್ತಿರ ದುಡ್ಡಿಗಾಗಿ ಬೇಡುವುದು ಅವನಿಗೆ ಹಿಂಸೆ ಅನ್ನಿಸುತ್ತಿತ್ತು. ಮೊದಲೆಲ್ಲ ಹೀಗೆ ಆಡುತ್ತಿರಲಿಲ್ಲ ಅವರು. ಕೇಳುವುದಕ್ಕೆ ಮುಂಚೆಯೇ ಸೂರ್ಯನಿಗೆ ದೊಡ್ದು ಕೊಡುವುದು, ಬಟ್ಟೆ ಕೊಡಿಸುವುದು, ತಿಂಡಿ ತಿನಿಸು ಹೀಗೆ ಹಲವಾರು ವಿಷಯಗಳಲ್ಲಿ ಸೂರ್ಯನ … Read more
ನಮ್ಮ ನಡುವಿನ ಗೋಮುಖವ್ಯಾಘ್ರರು: ಪ್ರಸಾದ್ ಕೆ.
“ಹೌದು, ಕಳೆದ ಕೆಲ ವರ್ಷಗಳಿಂದ ಈ ಕೃತ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಅವುಗಳೆಲ್ಲಾ ಹತ್ತರಿಂದ ಹದಿನೈದು ವರ್ಷದ ಮಕ್ಕಳು'' ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೇಳುತ್ತಾ ಹೋಗುತ್ತಿದ್ದ ಆತನನ್ನು ನೋಡಿ ನನಗೆ ದಿಗಿಲಾಗಿದ್ದು ಸತ್ಯ. ಈಗಷ್ಟೇ ಹತ್ತನೇ ತರಗತಿಯ ಕ್ಲಾಸಿನಿಂದ ಬಂಕ್ ಮಾಡಿಕೊಂಡು ಬಂದವನೇನೋ ಎಂಬಂತಿದ್ದ, ಇವನಿಗೇನಾದರೂ ಪೋಲೀಸರು ಎರಡೇಟು ಬಿಟ್ಟರೆ ಸತ್ತೇಹೋಗುವನೇನೋ ಎಂಬಂತಿದ್ದ ಈ ನರಪೇತಲನನ್ನು ನೋಡಿ ನಾನು ಒಂದು ಕ್ಷಣ ನಕ್ಕೂ ಬಿಟ್ಟಿದ್ದೆ. ವಿಪಯರ್ಾಸವೆಂದರೆ ಈತನ ಕೃತ್ಯಗಳನ್ನು ಟೆಲಿವಿಷನ್ ವರದಿಯಲ್ಲಿ ನೋಡಿದ ನಂತರ ನಾನು ನಗುವ … Read more
ತ್ಯಾಜ್ಯ-ಮಾಲಿನ್ಯ-ತ್ಯಾಜ್ಯ: ಅಖಿಲೇಶ್ ಚಿಪ್ಪಳಿ
ಪ್ರೇಮಿಗಳ ದಿನದಂದೇ ಸಾಗರದಲ್ಲಿ ಮಾರಿಜಾತ್ರೆಯೂ ಶುರುವಾಗಿದೆ. ಮಾರಿಗೆ ಉಡಿ ತುಂಬಲು ಜನ ಬೆಳಗಿನ ಜಾವದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಯುವಪ್ರೇಮಿಗಳೆಲ್ಲಾ ಬಹುಷ: ಫೇಸ್‍ಬುಕ್ ಅಥವಾ ವ್ಯಾಟ್ಸಪ್‍ಗಳಲ್ಲೇ ಸಂದೇಶ ರವಾನಿಸುತ್ತಲೇ ದಿನವನ್ನು ಕಳೆದರೇನೋ? ಪ್ರೇಮಿಗಳ ದಿನಾಚರಣೆ ವಿರುದ್ಧ ಮಾರಲ್ ಪೋಲೀಸ್‍ಗಿರಿ ಮಾಡಿದ್ದು ವರದಿಯಾಗಲಿಲ್ಲ. ಜನದಟ್ಟಣೆ ಹೆಚ್ಚು ಇರುವಲ್ಲಿ ಕೊಳಕೂ ಹೆಚ್ಚಿರುತ್ತದೆ. ಮಾರಿಜಾತ್ರೆಯಲ್ಲಿ ಜನಸಂದಣಿ ಹೆಚ್ಚು ಇರುವುದರಿಂದ ತ್ಯಾಜ್ಯಗಳ ಬಳಕೆಯೂ ಹೆಚ್ಚಿರುತ್ತದೆ ಹಾಗೂ ಅದರ ವಿಲೇವಾರಿ ಸಮರ್ಪಕವಾಗಿ ಆಗುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ … Read more
ಹಬ್ಬಗಳ ಆಚರಣೆ – ಆರೋಗ್ಯ: ಕೆ ಟಿ ಸೋಮಶೇಖರ ಹೊಳಲ್ಕೆರೆ.
ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹಬ್ಬ ಹರಿದಿನಗಳ ಆಚರಣೆಗೆ ತಂದಿರುವುದು ಬಹಳ ಔಚಿತ್ಯಪೂರ್ಣವೂ, ಆರೋಗ್ಯಪೂರ್ಣವೂ ಆಗಿದೆ. ಜತೆಗೆ ಆಚರಣೆ ವಿಧಾನಗಳು, ರೀತಿ ನೀತಿಗಳು ಅಷ್ಟೇ ಮಹತ್ವ ಪಡೆದಿವೆ. ಈ ದೃಷ್ಟಿಯಿಂದ ನಮ್ಮ ಪೂರ್ವಜರ ಮೆಚ್ಚಬೇಕಾದದ್ದೇ! ಅವು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಭಾಗವಾಗಿವೆ! ಹಬ್ಬಗಳ ನೆಪದಲ್ಲಿಯಾದರೂ ಆಗಾಗ ಮನೆ ಧೂಳು ತೆಗೆದು, ಸುಣ್ಣ, ಬಣ್ಣ ಬಳಿಸಿ ಶುಚಿಗೊಳಿಸುತ್ತೇವೆ. ಇದರಿಂದ ಕ್ರಿಮಿ, ಕೀಟಗಳು, ರೋಗಾಣುಗಳು ನಾಶವಾಗುತ್ತವೆ. ಇದರಿಂದ ರೋಗಗಳು ಹರಡದಂತೆ, ಅವು ಬರದನ್ನು ತಡೆಗಟ್ಟಿದಂತೆ ಆಗುತ್ತದೆ. ಮನೆ ಸ್ವಚ್ಛ … Read more
“ಮರೆಯಾದ ಜೀವಾ”: ಪಿ ಕೆ…? ನವಲಗುಂದ
ಹಂಗೆ ಸುಮ್ಮನೆ ಕೆಲಸವಿರಲಿಲ್ಲ ಹರಟೆ ಹೊಡೆಯುತ್ತಾ ಕುಂತಿದ್ದೆ ಆ ಕಡೆ ನನ್ನ ಆತ್ಮೀಯ ಮಿತ್ರನ ಕರೆ ಬಂತು. ಆ ಕಡೆಯಿಂದ ಎಲ್ಲಿದ್ದೀಯಾ? ನಾನು. ಮಾರ್ಕೆಟ್ ನಲ್ಲಿ . ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಬಾ. ಯಾಕೋ.? ಬಾರೋ ಮಾರಾಯ ಆಯ್ತು ಬಂದೆ. ಗೆಳೆಯನ ಬೈಕು ತೆಗೆದುಕೊಂಡು ಹೊರಟೆ ಆದರೆ ಮನಸ್ಸುನಲ್ಲಿ ಏನೋ ತಳಮಳ ಏನಾಗಿರಬೇಕು? ಅನ್ನುವ ವಿಚಾರದಲ್ಲಿಯೇ ಆಸ್ಪತ್ರೆ ಹತ್ತಿರವೇ ಬಂದೆ ಗೆಳೆಯ ಮುಖದಲ್ಲಿ ಕೊಂಚು ನೋವು ಕೊಂಚು ಸಂತಸ . ಇತ್ತ ತಂದೆಯಾಗುವ ಸಂತಸ ಒಂದಾದರೆ ಇತ್ತ … Read more
ಅನಿಲ್ ರೇವೂರ ಅವರ ಪಂಚಾವರಂ: ನಟರಾಜು ಎಸ್. ಎಂ.
ಇಸವಿ 2014 ರಲ್ಲಿ ಮಹದೇವಣ್ಣನ ಆಹ್ವಾನ ಸ್ವೀಕರಿಸಿ ಸಂಸ ಬಯಲು ರಂಗಮಂದಿರದಲ್ಲಿ ಗೆಳೆಯ ಹನುಮಂತ ಹಾಲಗೇರಿ ವಿರಚಿತ "ಊರ ಸುಟ್ಟರೂ ಹನುಮಪ್ಪ ಹೊರಗೆ" ನಾಟಕ ನೋಡಿ ಬೆರಗಾಗಿದ್ದೆ. ಆ ದಿನ ಮಹದೇವಣ್ಣ (ಮಹಾದೇವ ಹಡಪದ) ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಅನಿಲ್ ರೇವೂರ ಅವರ ಪರಿಚಯ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಎಫ್ ಬಿ ಯಲ್ಲಿ ಅನಿಲ್ ಗೆಳೆಯರಾದರು. ಇಸವಿ ಎರಡು ಸಾವಿರದ ಹದಿನಾರರಲ್ಲಿ ಅನಿಲ್ ನಿರ್ದೇಶನದ ನಾಟಕಕ್ಕೆ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂಬ ಸುದ್ದಿ … Read more
ಪಂಜು ಕಾವ್ಯಧಾರೆ
"ಶಬ್ದಾರ್ಥ ಶಿಲ್ಪ" ಕಾವ್ಯವೆನುವುದು ಒಂದು ಶಬ್ದಾರ್ಥ ಶಿಲ್ಪ ಕವಿಯ ಕೈಯಲಿ ನುಡಿಗೆ ಕಾಯಕಲ್ಪ ಸಾಹಿತ್ಯ ಸಂಸ್ಕೃತಿಯ ಶೃತಿನಾದ ಹಿಮ್ಮೇಳ ಲಯಬದ್ದ ಪ್ರಾಸವಿಹ ರಸ ಭಾವಗಳ ಮೇಳ ಸಕಲ ಕಲೆಗಳ ಮೂಲ ವೈವಿಧ್ಯತೆಯ ವರ್ಣಜಾಲ ನವರಸಗಳು ಕೂಡಿ ಆದ ಪದ ವಾಕ್ಯಗಳ ಮೋಡಿ ಜಗದ ಜನ ಜೀವನದ ನಲಿವು ನೋವಿನ ಕಥನ ನಾಕ ನರಕದ ಸೃಷ್ಟಿ ವ್ಯಕ್ತಿ-ಸಮಷ್ಠಿಗೆ ಪುಷ್ಟಿ ರವಿ ಕಾಣದೆಡೆಯಲ್ಲು ಕಂಡ ಕವಿಗಳ ಕಾಣ್ಕೆ … Read more
ಡಿಯರ್ ಹಸ್ಬೆಂಡ್: ಅಮರ್ ದೀಪ್ ಪಿ.ಎಸ್.
ಮೈ ಡಿಯರ್, ಯಾಕಿಷ್ಟು ತೊಂದರೆ ಅನುಭವಿಸ್ತಾ ಇದೀಯಾ? ಕೂಲ್…… ನೀನು ಒಂದು ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದಿಯಾ. ನಿನ್ನ ಕೆಳಗೆ ಸಾಕಷ್ಟು ಜನ ಕೆಲಸ ಮಾಡ್ತಿದಾರೆ. ಐದು ಬೆರಳೂ ಸಮಾ ಇರಲ್ಲ. ಹಾಗಂತ ಐದೂ ಬೆರಳಿಗೂ ನಿಯತ್ತಿರುವುದಿಲ್ಲ. ಒಂದೊಂದು ಬೆರಳಿಗೂ ಒಂದೊಂದು ಇಶಾರೆ. ಹಾಗೇನೇ ಎಲ್ರನ್ನೂ ಪ್ಲೀಸ್ ಮಾಡೋಕಾಗಲ್ಲ. ಎಲ್ರತ್ರಾನೂ ಪ್ರೀತಿ, ವಿಶ್ವಾಸದಿಂದ ಕೆಲಸ ತೆಗೀತೀನಿ ಅಂತಂದ್ರೆ ಸಾಧ್ಯಾನೂ ಆಗಲ್ಲ. ನಿನ್ನ ಮುಂದೆ ನಗ್ತಾ “ನೀವೇ ಗುರುಗಳೂ” ಅಂದವರು ನಿನ್ನಿಂದೆ “ಇವ್ನಂಥ ದರಿದ್ರದವನು ಎಲ್ಲೂ ಇಲ್ಲ” ಅಂತೆಲ್ಲಾ ಹೇಳೋದಿಲ್ಲಾಂತ … Read more
ವೃದ್ಧಾಪ್ಯದ ಕಥೆ-ವ್ಯಥೆ: ಈಶ್ವರ. ಜಿ. ಸಂಪಗಾವಿ, ಕಕ್ಕೇರಿ.
ಕರುಳ ಬಳ್ಳಿ ಚಿಗುರಬೇಕೆಂಬುದು ಎಲ್ಲ ಜೀವಿಗಳ ಸಹಜ ಬಯಕೆ. ಅದರಂತೆ ಮನುಷ್ಯನು ಮಕ್ಕಳಿಂದ ತನ್ನ ವಂಶದ ಬಳ್ಳಿ ಚಿಗುರಲಿ ಎಂದು ಹಂಬಲಿಸುತ್ತಾನೆ. ಮಕ್ಕಳಾಗದೇ ಇದ್ದಾಗ ಹತ್ತು ಹನ್ನೆರಡು ದೇವರುಗಳಿಗೆ ಹರಕೆ ಹೊತ್ತು ಸುಸ್ತಾಗುತ್ತಾನೆ. ಛಲದಂಕಮಲ್ಲನಂತೆ ಎಡೆಬಿಡದೆ ಅನೇಕ ಡಾಕ್ಟರಗಳನ್ನು ಸಂಪರ್ಕಿಸುತ್ತಾನೆ. ಮಕ್ಕಳಾಗುವ ಮುನ್ಸೂಚನೆ ಅವನನ್ನು ಪುಲಕಿತಗೊಳಿಸುತ್ತದೆ. ಹೆತ್ತ ಮಕ್ಕಳನ್ನು ಚನ್ನಾಗಿ ಬೆಳೆಸಿ, ವಿದ್ಯಾವಂತರನ್ನಾಗಿಸಲು ಹಗಲಿರುಳು ತನ್ನ ಜೀವ ಸವೆಸುತ್ತಾನೆ. ಜೀವಮಾನದಲ್ಲಿ … Read more
ಕದ ತಟ್ಟಿದ ಕನಸು ಪುಸ್ತಕ ವಿಮರ್ಶೆ: ಪಿ ಕೆ…? ನವಲಗುಂದ
ಕೃತಿ-ಕದ ತಟ್ಟಿದ ಕನಸು ಕವಿ- ಭೀಮಪ್ಪ ಮುಗಳಿ ಪ್ರಕಾಶಕರು-ಸಹಜ ಪ್ರಕಾಶನ ವಿದೇಶದಲ್ಲಿ ಇದ್ದು ಕನ್ನಡದ ಹಣತೆ ಹಚ್ಚಿ ಮೂರು ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಭೀಮಪ್ಪ ಮುಗಳಿಯವರಿಗೆ ಮೊದಲ ಅಭಿನಂದನೆಗಳು ತಿಳಿಸುತ್ತೇನೆ. ಮೈತುಂಬ ಕೆಲಸ ಹೊಟ್ಟೆ ತುಂಬಾ ಊಟ ಕಣ್ಣು ತುಂಬಾ ನಿದ್ದೆಯಿದ್ದರೆ ಊಹೆಗೆ ಮೀರಿದ್ದ ಕನಸುಗಳು ಮೂಡುತ್ತವೆ. ಆ ಕನಸುಗಳು ಕೆಟ್ಟದ್ದು ಆಗಿದೆಯೋ? ಒಳ್ಳೆಯದು ಆಗಿದೆಯೋ? ಅನ್ನೋದು ಎರೆಡನೇ ವಿಚಾರ ಆದರೆ ಕನಸುಗಳು ಸುತ್ತ ಹೆಣೆದಿರುವ ಕವನ ಸಂಕಲನವೇ. "ಕದ ತಟ್ಟಿದ ಕನಸು" … Read more
ಆ ಒಂದು ಮಾತು !: ಕೆ ಟಿ ಸೋಮಶೇಖರ ಹೊಳಲ್ಕೆರೆ.
ಆ ಒಂದು ಮಾತು ಅವನ ಬದುಕಿನ ಗುರಿಯನ್ನು ನಿರ್ಧರಿಸಿತು. ಮಾರ್ಗವನ್ನು ಕಂಡುಕೊಳ್ಳುವ ಒತ್ತಾಯ ಮಾಡಿತು. ಕಂಡುಕೊಂಡು ಗುರಿ ತಲುಪುವಂತೆ ಮಾಡಿ, ಆಕಾಶದಲ್ಲಿ ನಕ್ಷತ್ರವಾಗಿ ಹೊಳೆಯುವಂತೆ ಮಾಡಿತು. "Where there is a will there is a way" ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಮರ್ಥ ಇದ್ದಾನೆ. ಈ ಮಾತುಗಳು ಮತ್ತು ಯುವಕರೇ ," ಏಳಿ, ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ " , " ಯುವಶಕ್ತಿ ಹುಚ್ಚು … Read more
ಪಂಜು ಕಾವ್ಯಧಾರೆ
ಚುಟುಕಗಳು ಚಿಕ್ಕ ಚುಕ್ಕೆಗಳಿಟ್ಟು ಎಳೆಗಳೆಳೆದು ಬರೆದಿದ್ದಾಳೆ ರಂಗೋಲಿ ಚಡಪಡಿಸುತ್ತಾಳೆ ಮರಳು ಮಾಡುವ ಬಣ್ಣಗಳೊಳಗೆ ಬಿಡಿಸಿಕೊಳ್ಳಲಾಗದ ಬಂಧಿ **** ಹೊಸದರೆಡೆಗೆ ಪಯಣವೆಂದರೆ ಹಳೆಯದು ಸಲ್ಲದೆಂದಲ್ಲ ಹಳೆಯದ ಒಟ್ಟಿಗಿಟ್ಟುಕೊಂಡೇ ಹೊಸತರೆಡೆ ಸಾಗುವದು **** ನಡೆದಿದ್ದಾಳೆ ಅವಳು ಎಲ್ಲಿಗೋ ಅವಳಿಗೇ ಗೊತ್ತಿಲ್ಲ ಮಾತಲ್ಲೇ ಎದೆಬಗೆವವರ ಹೊತ್ತು ಹೊತ್ತಿಗೆ ನೆತ್ತಿಕುಟ್ಟಿ ಕರ್ತವ್ಯ ನೆನಪಿಸುವವರನ್ನೆಲ್ಲ ಹಿಂದಕ್ಕೆ ಬಿಟ್ಟು **** ನಿತ್ಯ … Read more
ಫರಿಶ್ತಾನ ಆತ್ಮಕಥೆ: ಪ್ರಸಾದ್ ಕೆ.
ಸವ್ಯಸಾಚಿ ಕಳೆದ ಮೂರು ಘಂಟೆಗಳಿಂದ ತನ್ನ ಹಸ್ತಾಕ್ಷರವನ್ನು ಒಂದರ ಹಿಂದೆ ಒಂದರಂತೆ ಪುಸ್ತಕಗಳ ಮೊದಲ ಪುಟದಲ್ಲಿ ನೀಡುತ್ತಲೇ ಇದ್ದಾನೆ. ಸವ್ಯಸಾಚಿ ಎಂಬುದು ಅವನ ದಾಖಲೆಗಳಲ್ಲಿರುವ ಹೆಸರು. ಅವನ ಅಭಿಮಾನಿಗಳಿಗೆ ಅವನು `ಫರಿಶ್ತಾ'. ತನ್ನ ಕಾವ್ಯನಾಮಕ್ಕೆ ತಕ್ಕಂತೆ ಎಲ್ಲರಿಗೂ ಆತ ಒಬ್ಬ ಗಂಧರ್ವ. ಮುಂಜಾನೆಯ ಒಂಭತ್ತರಿಂದ ಶುರುವಾದ ಈ ಆಟೋಗ್ರಾಫ್ ಕಾರ್ಯಕ್ರಮವು ಮುಗಿಯುವಂತೆಯೇ ಕಾಣುತ್ತಿಲ್ಲ. ಕ್ಯಾಮೆರಾದ ಮಿಂಚುಗಳು ಆಗಾಗ ಚಕ್ಕನೆ ಹೊಳೆದು ಮರೆಯಾಗುತ್ತಿವೆ. ಸವ್ಯ ಮೊದಮೊದಲು ಕೂತಲ್ಲಿಂದಲೇ ತನ್ನ ಅಭಿಮಾನಿಗಳನ್ನು ಸಂಕ್ಷಿಪ್ತವಾಗಿ ಮಾತನಾಡಿಸುತ್ತಾ, ಮುಗುಳ್ನಗುತ್ತಾ ಪುಸ್ತಕಗಳಿಗೆ ಹಸ್ತಾಕ್ಷರವನ್ನು ದಯಪಾಲಿಸುತ್ತಿದ್ದನಾದರೂ … Read more
ಕರಿನೆರಳು: ಶಿವಕುಮಾರ ಚನ್ನಪ್ಪನವರ
ತನಗೆ ರಥಬೀದಿಯಲ್ಲೇನು ಕೆಲಸವಿಲ್ಲವೆಂಬಂತೆ, ಕುಮದ್ವತಿಯು ತುಂಗಭದ್ರೆಯ ತಟಗೆ ಸೇರಿಕೊಂಡು ಜುಳು, ಜುಳು ನಾದ ಒಮ್ಮೆಲೇ ಸುಮ್ಮನಾಗಿ ಹೀರೇಹೊಳಿಯ ಬೃಹತ್ತಾದ ಮೈದಾನದಲ್ಲಿ ಮೈ ಚೆಲ್ಲಿ ಅಕ್ಕ-ತಂಗಿಯರಿಬ್ಬರೂ ತಳಕಿಬಿದ್ದ ನಾಗರಹಾವಿನಂತೆ ಗುರುತಿಸಲು ಕಷ್ಟವಾಗುವಷ್ಟು ಹೊಂದಿಕೊಂಡು ಮುಂದೆ ಸಾಗಬೇಕಾದ ಜಾಗದಲ್ಲಿ ಆನ್ವೇರಿಯವರು ದೊಡ್ಡ ಸೇತುವೆಯ ಪಕ್ಕಕ್ಕೆ ಚಿಕ್ಕದೊಂದು ಸೇತುವೆ ಕಟ್ಟಿ ಐದು ಗೇಟುಗಳಿಂದ ಕುಮಧ್ವತಿಯನ್ನು ಕೂಡಿ ಹಾಕಿ ತಮಗೆ ಸಾಕೆನಿಸಿ ಹೊರಬಿಟ್ಟ ನೀರಿನ ಬೋರ್ಗರೆತದ ಸದ್ದಿನೊಂದಿಗೆ ಬೆರೆತು ಮುಂಜಾನೆಯ ಮೂಢಣಕ್ಕೆ ಮುಖ ಮಾಡಿ ನಿಂತಿದ್ದ ಸಿದ್ರಪಾಲನಿಗೆ, ಇಷ್ಟು ದಿನಗಳು ತೊಗಲುಗೊಂಬೆಯಂತೆ ತಲೆಯಾಡಿಸಿದ್ದು … Read more
ಮಹಿಳಾ ಕಲಾವಿದರ “ಏಕಲವ್ಯ” ದೊಡ್ಡಾಟ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ
ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, … Read more
ಪ್ರೀತಿಯ ಮೇಲ್ಮೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.
ನಮ್ಮ ಭಾರತ ದೇಶದ ಪರಂಪರೆ, ಸಂಸ್ಕೃತಿ ಉದಾತ್ತವಾದುದು. ಸಂಬಂಧಗಳ ನಡುವಿನ ಅನ್ಯೋನ್ಯತೆ, ಪ್ರೀತಿ, ತ್ಯಾಗ ಉನ್ನತವಾದುದು. ಅವು ಇತಿಹಾಸ, ಪುರಾಣ, ಕಾವ್ಯಗಳಲ್ಲಿ ಓತಪ್ರೋತವಾಗಿ ಹರಿದಿವೆ! ಪ್ರೀತಿ ಎಂಬುದು ಅನನ್ಯವಾದುದು! ಉದಾತ್ತವಾದುದು! ಸಂಬಂಧಗಳನ್ನು ಬೆಸೆಯುವಂಥದ್ದು! ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಪ್ರೀತಿಯಿಂದ ಜಗತ್ತು ಸೃಷ್ಟಿಯಾಗಿದೆ. ಪ್ರೀತಿಯೇ ಜಗದ ತುಂಬ ತುಂಬಿದೆ. ಗಾಳಿ ಸುಳಿದಾಡುವುದು, ಆದಿತ್ಯ ಬೆಳಕು ಕೊಡುವುದು, ಮಳೆ ಇಳೆಗೆ ಇಳಿದು ಬರುವುದು, ಸಸ್ಯಗಳು ಹೂ ಹಣ್ಣು ಕೊಡುತ್ತಿರುವುದು, ನದಿಗಳು ಹರಿಯುತ್ತಿರುವುದು, ಹಗಲು – ರಾತ್ರಿಗಳಾಗುತ್ತಿರುವುದು ಬ್ರಹ್ಮಾಂಡ ಸೃಷ್ಟಿಯಾಗಿರುವುದು … ಪ್ರೀತಿಯಿಂದ! … Read more
ಹೊಸ ತನವನ್ನು ಹೇಳುವ ಮಕ್ಕಳೇ ಬರೆದ ಪುಸ್ತಕ: ಅಕ್ಕಿಮಂಗಲ ಮಂಜುನಾಥ
ಈಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ತಾತ್ಸಾರದಿಂದ ನೋಡುವವರೇ ಹೆಚ್ಚು. ಆದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಬೆಳೆಯುತ್ತಿರುವ ರೀತಿ ಮತ್ತು ಕ್ರಿಯಾಶೀಲತೆ ಗಮನಿಸಿದರೆ, ಈ ಶಾಲೆಗಳ ಮುಂದೆ ಲಕ್ಷಾಂತರ ಡೊನೇಶನ್ ದೋಚುವ ಕಾನ್ವೆಂಟುಗಳು ಏನೇನೂ ಅಲ್ಲ ಎನ್ನಿಸುತ್ತದೆ. ಅಂತಹ ಒಂದು ಸರ್ಕಾರಿ ಶಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಪುಟ್ಟ ಹಳ್ಳಿ ಕನ್ನಮಂಗಲದಲ್ಲಿದೆ ಎಂದರೆ ಎಂಥವರಿಗೂ ಆಶ್ಚರ್ಯಕರವಾಗಿ ಕಾಣಬಹುದು. ಈ ಶಾಲೆಯ ಅಧ್ಯಾಪಕ ವೃಂದ ವ್ಯವಸ್ಥಿತವಾಗಿ ವಿದ್ಯೆ ಕಲಿಸುವುದರ ಜೊತೆಗೆ ಕ್ರೀಡೆ ಮತ್ತು ಕಲೆಯನ್ನು ವಿಶೇಷವಾಗಿ ಮಕ್ಕಳಿಗೆ … Read more
ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮ
ಮಾನ್ಯರೆ, ತಮ್ಮೆಲ್ಲರ ಹಾರೈಕೆ, ಸಹಕಾರದ ನೆಲೆಯಲ್ಲಿ, ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮವನ್ನು ದಿನಾಂಕ 18.2.2017, ಶನಿವಾರ, ಸಂಜೆ 5.00 ರಿಂದ 7.30 ರ ತನಕ, ಮಲೆನಾಡ ಸಿರಿ ಸಭಾಂಗಣ, ವರದ ಶ್ರೀ, ಸಾಗರದಲ್ಲಿ ಹಮ್ಮಿ ಕೊಳ್ಳಲಾಗಿದೆ. ದಯಮಾಡಿ ಬಂದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಡಾ ಮಮತಾ ಜಿ ಮತ್ತು ಅನೇಕ ಬಳಗ, ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು. ಅoಟಿಣಚಿಛಿಣ ಟಿo : 9945744833 ಕನ್ನಡದ ಬರಹಗಳನ್ನು ಹಂಚಿ ಹರಡಿ
ಪಂಜು ಕಾವ್ಯಧಾರೆ
ಹಾಯ್ಕುಗಳು.. * ಸೀತೆಯ ಅಶ್ರು ಲಂಕೆಯ ತೊಳೆಯಿತು ಪಾವನಗಂಗೆ * ರಾತ್ರಿ ಚಂದಿರ ಶರಧಿಗೆ ಧುಮುಕಿ ಈಜು ಕಲಿತ * ಲಾಸ್ಯವಾಡಿದೆ ನಂಜು ನುಂಗಿದವನ ವದನ; ತೃಪ್ತಿ * ಮೂರು ಮೊಳದ ಸೀರೆಯುಟ್ಟವಳೀಗ ಹಾಯ್ಕು ಕನ್ನಿಕೆ! * ಮೆತ್ತೆ ಸಿಕ್ಕಿದ ಜಗಳಕ್ಕೆ ನಿಂತಿಹ ಸಿಟ್ಟಿಗೋ ಹಬ್ಬ! … Read more
ಖಾಲಿ ಹುದ್ದೆ: ಜಾನ್ ಸುಂಟಿಕೊಪ್ಪ
ಮಲೆನಾಡಿನ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಕಾಫಿತೋಟಗಳಿಂದ ಆವರಿಸಲ್ಪಟ್ಟ ಒಂದು ಹಳ್ಳಿ.ಆ ಹಳ್ಳಿಯಲ್ಲೊಂದು ಅನುಧಾನಿತ ಪ್ರೌಢಶಾಲೆ. ಈ ಶಾಲೆ ಒಂದು ರೀತಿ ಹಳ್ಳಿಗೆ ದಾರಿದೀಪವಿದ್ದಂತೆ. ಹಿಂದೆ ಅದೆಷ್ಟೋ ಮಂದಿ ಈ ಜ್ನಾನದೇಗುಲದಲ್ಲಿ ಕಲಿತು ವಿದ್ಯಾವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಿಂದೆಲ್ಲಾ ಶಾಲೆಗೆ-ಗುರುಗಳಿಗೆ ಅಪಾರ ಗೌರವವಿತ್ತು,ದೊಡ್ಡದೊಡ್ಡ ಸಾಹುಕಾರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.ಈಗ ಕಾಲ ಬದಲಾಗಿಬಿಟ್ಟಿದೆ.ಸರಕಾರದಿಂದ ಅನುದಾನ ಬರಲು ಆರಂಬಗೊಂಡದ್ದೇ ರಾಜಕೀಯವೂ ಶಾಲೆಯ ವಠಾರಕ್ಕೆ ವಕ್ಕರಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿಯೂ,ಶಿಕ್ಷಕ ವರ್ಗವೂ … Read more
ಕವಿತಾ ಲಹರಿ: ರಾಘವೇಂದ್ರ ತೆಕ್ಕಾರ್
ಬುದ್ದಿ ಭಾವಗಳ ರೂಪಿತ ವಿಸ್ಮಯವನ್ನು ಕವಿತೆ ಎನ್ನುವದೊ? ಪದಗಳ ಜೋಡಣೆಯನ್ನು ಕವಿತೆ ಎನ್ನುವದೊ?ಪರಿಶ್ರಮ, ಕಲಾ ಕೌಶಲ್ಯ, ಪ್ರತಿಭೆಯ ಅನಾವರಣದ ರೂಪಕವನ್ನು ಕವಿತೆಯೆನ್ನುವದೊ?ಕಾಣದರ ಜೊತೆಗೆ ಕಂಡಂತೆ ಮಾತಿಗೆ ನಿಲ್ಲುವ ಕ್ರಿಯೆ ಕವಿತೆಯೊ? ನಮ್ಮೊಳಗಿನ ಭಾವಗಳ ಜೊತೆಗಿನ ಸಂವಾದವೊ? ಕವಿತೆ ಎಂದರೆ ನನ್ನೊಳಗೊ??? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಗೆ ಎಡತಾಕುವದೆ ಕವಿತೆಯೊ?ನನಗಂತು ಕವಿತೆ ಎಂದರೆ ಏನು ಎಂಭ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬಹುಶಃ ಪ್ರತಿ ಪ್ರಶ್ನೆಗಳು ಕವಿತೆ ಎಂಬುದಕ್ಕೆ ಅರ್ಥ ಕೊಡುತ್ತಿದೆ.ಎಲ್ಲವೂ ಹೌದಾಗಿದ್ದು ಇಲ್ಲದರ ಭಾವಗಳ ಕೂಡುವಿಕೆಯ ಜೊತೆಗಿನ ಸಂವಾದದಲ್ಲಿ … Read more
ಭೀಮ: ಗಿರಿಜಾ ಜ್ಞಾನಸುಂದರ್
ತುಂಬಾ ಸುಸ್ತು, ನಿಶಕ್ತಿ ಅನ್ನಿಸುತ್ತಿತ್ತು. ನನ್ನ ಒಡೆಯನ ಮಾತು ಕೇಳಿಸುತ್ತಿತ್ತು. ಆದರೆ ಬಾಲ ಅಲ್ಲಾಡಿಸಲು ಸಹ ಆಗದಷ್ಟು ನಿತ್ರಾಣ. ಅವನ ಮಾತಿಗೆ ಪ್ರತಿಕ್ರಿಯೆ ಕೊಡಲೇಬೇಕೆಂಬ ಬಯಕೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಕಣ್ಣು ತೆರೆಯಲು ಪ್ರಯತ್ನಿಸಿದೆ. ಕಣ್ಣ ತುಂಬಾ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಿದ್ದ ನನ್ನ ಜನ. ಅವರಿಗೆ ನಾನು ಚಿರಋಣಿ. ನನ್ನ ಜೀವ ಅವರೆಲ್ಲರೂ. ನಾನು ತುಂಬಾ ಪುಟ್ಟವನಿದ್ದೆ ಈ ಮನೆಗೆ ಬಂದಾಗ. ನನ್ನ ಅಮ್ಮನಿಗೆ ಯಾವುದೋ ಕಾರ್ ಡಿಕ್ಕಿ ಹೊಡೆದು ಸತ್ತಳಂತೆ. ೨೦ ದಿನದ ಮರಿ … Read more
ನಂಬಿ! ನಾನು ಅದೃಷ್ಟ ಅಲ್ಲ!!: ಅಖಿಲೇಶ್ ಚಿಪ್ಪಳಿ
ಲೋ ಗೂಬೆಯಂತವನೇ ಎಂದು ಬಯ್ಯುವುದುಂಟು. ಅದೇಕೆ ಹಾಗೆ ಕೇಳಿದರೆ ಗೊತ್ತಿಲ್ಲ. ಲೇ ಕತ್ತೆ ಎನ್ನುವುದಿಲ್ಲವೇ ಹಾಗೆಯೇ ಇದು. ಗೂಬೆಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ರಾತ್ರಿ ಹೊತ್ತು ಬೆಳೆಗಳಿಗೆ ಕನ್ನ ಇಕ್ಕುವ ಇಲಿಗಳನ್ನು ತಿನ್ನುತ್ತದೆ. ಹಗಲುಹೊತ್ತಿನಲ್ಲಿ ವಿಶ್ರಮಿಸುವ ಇದಕ್ಕೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೂ ಅಳಿವಿನಂಚಿನಲ್ಲಿರುವ ಪಕ್ಷಿ. ಇದೇಕೆ ಹೀಗೆ ಕೇಳಿದರೆ ಅದಕ್ಕೆ ಕಾರಣ ಮತ್ತೆ ನಾವೇ ಮನುಷ್ಯತ್ವ ಕಳೆದುಕೊಂಡಿರುವವರು. 2016ರ ಕೊನೆಯ ವಾರದಲ್ಲಿ ಒಂದು ಸುದ್ಧಿಯಿತ್ತು. ಗೂಬೆ ಮಾರಾಟಗಾರರ ಬಂಧನ. ಅದೂ ಸಾಗರದ … Read more
ಗೆಂಡೆದೇವ್ರು ಸಾಮಾಜಿಕ ನೆಲೆಗಟ್ಟಿನಲ್ಲಿ ರಚಿತವಾದ ಕಥಾಸಂಕಲನ: ಕೆ.ಎಂ.ವಿಶ್ವನಾಥ ಮರತೂರ.
ಅಂದು ರಾತ್ರಿ ಸರಿಯಾಗಿ ಹತ್ತು ಗಂಟೆ ಸಮಯ ಊಟ ಮಾಡಿ ನಿದ್ರಾದೇವತೆಯ ಮುತ್ತಿಟ್ಟು ಮಲಗುವ ಸಮಯವಾಗಿತ್ತು, ಆಗ ಕಾವ್ಯಮನೆಯ ರುವಾರಿ ಪುಟಾಣಿ ಗೆಳೆಯ ಕಪಿಲ್ ಅವರ ಕರೆ ರಿಂಗಣಿಸಿತು. “ಗುರುಗಳೆ ನಮಸ್ಕಾರ ಗೆಂಡೆದೇವ್ರು ಕಳಿಸಿದ್ದೀನಿ ನೀವು ಓದಬೇಕು” ಆಗಲಿ ಕ್ಯಾಪ್ಟ್‍ನ್ ಅವರೆ ಎಂದು ನಿದ್ದೆ ಬಂದಿದ್ದರಿಂದ ಮಲಗಿದೆ. ಆ ರಾತ್ರಿಯಿಂದು ಸರಿ ಸುಮಾರು ಏಳು ರಾತ್ರಿಗಳು ಗೆಂಡೆದೇವ್ರ ಕಡೆಗೆ ಮನಸ್ಸು ಹೋಗಲೆಯಿಲ್ಲ. ಕೆಲಸದ ಒತ್ತಡದೊಳಗೆ ಜೀವನ ಹೊಸೆಯುತ್ತಾ, ಹತ್ತಾರು ಕಾರ್ಯಕ್ರಮಗಳು ವೃತ್ತಿ ಜೀವನದಲ್ಲಿ ಭರದಲ್ಲಿ ಗೆಂಡೆದೇವ್ರನ ಕಾಣಲು … Read more