ಪಂಜು ಕಾವ್ಯಧಾರೆ
ಹಾಯ್ಕುಗಳು.. * ಸೀತೆಯ ಅಶ್ರು ಲಂಕೆಯ ತೊಳೆಯಿತು ಪಾವನಗಂಗೆ * ರಾತ್ರಿ ಚಂದಿರ ಶರಧಿಗೆ ಧುಮುಕಿ ಈಜು ಕಲಿತ * ಲಾಸ್ಯವಾಡಿದೆ ನಂಜು ನುಂಗಿದವನ ವದನ; ತೃಪ್ತಿ * ಮೂರು ಮೊಳದ ಸೀರೆಯುಟ್ಟವಳೀಗ ಹಾಯ್ಕು ಕನ್ನಿಕೆ! * ಮೆತ್ತೆ ಸಿಕ್ಕಿದ ಜಗಳಕ್ಕೆ ನಿಂತಿಹ ಸಿಟ್ಟಿಗೋ ಹಬ್ಬ! … Read more
ಹಾಯ್ಕುಗಳು.. * ಸೀತೆಯ ಅಶ್ರು ಲಂಕೆಯ ತೊಳೆಯಿತು ಪಾವನಗಂಗೆ * ರಾತ್ರಿ ಚಂದಿರ ಶರಧಿಗೆ ಧುಮುಕಿ ಈಜು ಕಲಿತ * ಲಾಸ್ಯವಾಡಿದೆ ನಂಜು ನುಂಗಿದವನ ವದನ; ತೃಪ್ತಿ * ಮೂರು ಮೊಳದ ಸೀರೆಯುಟ್ಟವಳೀಗ ಹಾಯ್ಕು ಕನ್ನಿಕೆ! * ಮೆತ್ತೆ ಸಿಕ್ಕಿದ ಜಗಳಕ್ಕೆ ನಿಂತಿಹ ಸಿಟ್ಟಿಗೋ ಹಬ್ಬ! … Read more
ಮಲೆನಾಡಿನ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಕಾಫಿತೋಟಗಳಿಂದ ಆವರಿಸಲ್ಪಟ್ಟ ಒಂದು ಹಳ್ಳಿ.ಆ ಹಳ್ಳಿಯಲ್ಲೊಂದು ಅನುಧಾನಿತ ಪ್ರೌಢಶಾಲೆ. ಈ ಶಾಲೆ ಒಂದು ರೀತಿ ಹಳ್ಳಿಗೆ ದಾರಿದೀಪವಿದ್ದಂತೆ. ಹಿಂದೆ ಅದೆಷ್ಟೋ ಮಂದಿ ಈ ಜ್ನಾನದೇಗುಲದಲ್ಲಿ ಕಲಿತು ವಿದ್ಯಾವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಿಂದೆಲ್ಲಾ ಶಾಲೆಗೆ-ಗುರುಗಳಿಗೆ ಅಪಾರ ಗೌರವವಿತ್ತು,ದೊಡ್ಡದೊಡ್ಡ ಸಾಹುಕಾರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.ಈಗ ಕಾಲ ಬದಲಾಗಿಬಿಟ್ಟಿದೆ.ಸರಕಾರದಿಂದ ಅನುದಾನ ಬರಲು ಆರಂಬಗೊಂಡದ್ದೇ ರಾಜಕೀಯವೂ ಶಾಲೆಯ ವಠಾರಕ್ಕೆ ವಕ್ಕರಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿಯೂ,ಶಿಕ್ಷಕ ವರ್ಗವೂ … Read more
ಬುದ್ದಿ ಭಾವಗಳ ರೂಪಿತ ವಿಸ್ಮಯವನ್ನು ಕವಿತೆ ಎನ್ನುವದೊ? ಪದಗಳ ಜೋಡಣೆಯನ್ನು ಕವಿತೆ ಎನ್ನುವದೊ?ಪರಿಶ್ರಮ, ಕಲಾ ಕೌಶಲ್ಯ, ಪ್ರತಿಭೆಯ ಅನಾವರಣದ ರೂಪಕವನ್ನು ಕವಿತೆಯೆನ್ನುವದೊ?ಕಾಣದರ ಜೊತೆಗೆ ಕಂಡಂತೆ ಮಾತಿಗೆ ನಿಲ್ಲುವ ಕ್ರಿಯೆ ಕವಿತೆಯೊ? ನಮ್ಮೊಳಗಿನ ಭಾವಗಳ ಜೊತೆಗಿನ ಸಂವಾದವೊ? ಕವಿತೆ ಎಂದರೆ ನನ್ನೊಳಗೊ??? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಗೆ ಎಡತಾಕುವದೆ ಕವಿತೆಯೊ?ನನಗಂತು ಕವಿತೆ ಎಂದರೆ ಏನು ಎಂಭ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬಹುಶಃ ಪ್ರತಿ ಪ್ರಶ್ನೆಗಳು ಕವಿತೆ ಎಂಬುದಕ್ಕೆ ಅರ್ಥ ಕೊಡುತ್ತಿದೆ.ಎಲ್ಲವೂ ಹೌದಾಗಿದ್ದು ಇಲ್ಲದರ ಭಾವಗಳ ಕೂಡುವಿಕೆಯ ಜೊತೆಗಿನ ಸಂವಾದದಲ್ಲಿ … Read more
ತುಂಬಾ ಸುಸ್ತು, ನಿಶಕ್ತಿ ಅನ್ನಿಸುತ್ತಿತ್ತು. ನನ್ನ ಒಡೆಯನ ಮಾತು ಕೇಳಿಸುತ್ತಿತ್ತು. ಆದರೆ ಬಾಲ ಅಲ್ಲಾಡಿಸಲು ಸಹ ಆಗದಷ್ಟು ನಿತ್ರಾಣ. ಅವನ ಮಾತಿಗೆ ಪ್ರತಿಕ್ರಿಯೆ ಕೊಡಲೇಬೇಕೆಂಬ ಬಯಕೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಕಣ್ಣು ತೆರೆಯಲು ಪ್ರಯತ್ನಿಸಿದೆ. ಕಣ್ಣ ತುಂಬಾ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಿದ್ದ ನನ್ನ ಜನ. ಅವರಿಗೆ ನಾನು ಚಿರಋಣಿ. ನನ್ನ ಜೀವ ಅವರೆಲ್ಲರೂ. ನಾನು ತುಂಬಾ ಪುಟ್ಟವನಿದ್ದೆ ಈ ಮನೆಗೆ ಬಂದಾಗ. ನನ್ನ ಅಮ್ಮನಿಗೆ ಯಾವುದೋ ಕಾರ್ ಡಿಕ್ಕಿ ಹೊಡೆದು ಸತ್ತಳಂತೆ. ೨೦ ದಿನದ ಮರಿ … Read more
ಲೋ ಗೂಬೆಯಂತವನೇ ಎಂದು ಬಯ್ಯುವುದುಂಟು. ಅದೇಕೆ ಹಾಗೆ ಕೇಳಿದರೆ ಗೊತ್ತಿಲ್ಲ. ಲೇ ಕತ್ತೆ ಎನ್ನುವುದಿಲ್ಲವೇ ಹಾಗೆಯೇ ಇದು. ಗೂಬೆಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ರಾತ್ರಿ ಹೊತ್ತು ಬೆಳೆಗಳಿಗೆ ಕನ್ನ ಇಕ್ಕುವ ಇಲಿಗಳನ್ನು ತಿನ್ನುತ್ತದೆ. ಹಗಲುಹೊತ್ತಿನಲ್ಲಿ ವಿಶ್ರಮಿಸುವ ಇದಕ್ಕೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೂ ಅಳಿವಿನಂಚಿನಲ್ಲಿರುವ ಪಕ್ಷಿ. ಇದೇಕೆ ಹೀಗೆ ಕೇಳಿದರೆ ಅದಕ್ಕೆ ಕಾರಣ ಮತ್ತೆ ನಾವೇ ಮನುಷ್ಯತ್ವ ಕಳೆದುಕೊಂಡಿರುವವರು. 2016ರ ಕೊನೆಯ ವಾರದಲ್ಲಿ ಒಂದು ಸುದ್ಧಿಯಿತ್ತು. ಗೂಬೆ ಮಾರಾಟಗಾರರ ಬಂಧನ. ಅದೂ ಸಾಗರದ … Read more
ಅಂದು ರಾತ್ರಿ ಸರಿಯಾಗಿ ಹತ್ತು ಗಂಟೆ ಸಮಯ ಊಟ ಮಾಡಿ ನಿದ್ರಾದೇವತೆಯ ಮುತ್ತಿಟ್ಟು ಮಲಗುವ ಸಮಯವಾಗಿತ್ತು, ಆಗ ಕಾವ್ಯಮನೆಯ ರುವಾರಿ ಪುಟಾಣಿ ಗೆಳೆಯ ಕಪಿಲ್ ಅವರ ಕರೆ ರಿಂಗಣಿಸಿತು. “ಗುರುಗಳೆ ನಮಸ್ಕಾರ ಗೆಂಡೆದೇವ್ರು ಕಳಿಸಿದ್ದೀನಿ ನೀವು ಓದಬೇಕು” ಆಗಲಿ ಕ್ಯಾಪ್ಟ್‍ನ್ ಅವರೆ ಎಂದು ನಿದ್ದೆ ಬಂದಿದ್ದರಿಂದ ಮಲಗಿದೆ. ಆ ರಾತ್ರಿಯಿಂದು ಸರಿ ಸುಮಾರು ಏಳು ರಾತ್ರಿಗಳು ಗೆಂಡೆದೇವ್ರ ಕಡೆಗೆ ಮನಸ್ಸು ಹೋಗಲೆಯಿಲ್ಲ. ಕೆಲಸದ ಒತ್ತಡದೊಳಗೆ ಜೀವನ ಹೊಸೆಯುತ್ತಾ, ಹತ್ತಾರು ಕಾರ್ಯಕ್ರಮಗಳು ವೃತ್ತಿ ಜೀವನದಲ್ಲಿ ಭರದಲ್ಲಿ ಗೆಂಡೆದೇವ್ರನ ಕಾಣಲು … Read more
ಕೆಲವರಿಗೆ ಕುರ್ಚಿಯಿಂದ ಬೆಲೆ ಬರುತ್ತದೆ. ಅವರು ಕುರ್ಚಿಯಲ್ಲಿ ಇರುವತನಕ ಗೌರವಿಸಲ್ಪಡುತ್ತಾರೆ. ಕುರ್ಚಿಯಿಂದ ಕೆಳಗಿಳಿದ ತಕ್ಷಣ ಹತ್ತಿರ ಯಾರೂ ಸುಳಿಯದಾಗುತ್ತಾರೆ. ಮತ್ತೆ ಕೆಲವರು ಕುರ್ಚಿಯ ಬೆಲೆ ಹೆಚ್ಚಿಸುತ್ತಾರೆ. ಕುರ್ಚಿಯ ಬೆಲೆ ಹೆಚ್ಚಿಸುವವರು ಅಪರೂಪ, ಅವರಿಂದ ಅನನ್ಯವಾದ ಸಾಧನೆಯಾಗುತ್ತದೆ. ಅವರು ಕುರ್ಚಿ ತೊರೆದ ನಂತರವೂ ಮೊದಲಿಗಿಂತ ಹೆಚ್ಚು ಗೌರವಿಸಲ್ಪಡುತ್ತಾರೆ. ಇದು ಜನರು ಕೊಡುವ ಆತ್ಮಪೂರಕ ಗೌರವವಾಗಿರುತ್ತದೆ. ಇವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಇನ್ನೂ ಕೆಲವರು ಯಾವ ಅಧಿಕಾರ, ಅಂತಸ್ಥು ಇಲ್ಲದೆ ಅದ್ಭುತ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದು ಅಮರರಾಗುತ್ತಾರೆ. ಕೆಲವರು … Read more
ದಿನಚರಿಯಂತೆ facebook ನಲ್ಲಿ ಅವಳ profile ಚೆಕ್ ಮಾಡುತಿದ್ದ ನಾನು ಸಿಡಿಲು ಬಡೆದವನಂತೆ ಇದು ನಿಜವೋ..ಅಥವಾ ದೃಷ್ಟಿ ಭ್ರಮೆಯೋ ಎಂದು ದಿಜ್ಞೂಢನಾಗಿ ಮತ್ತೊಮ್ಮೆ ಮೋಬೈಲ್ ನ ಸ್ಕ್ರೀನ್ ದಿಟ್ಟಿಸಿ ನೋಡಿದೆ. ಹೌದು ಇದು ಕೆಟ್ಟ ಕನಸು ಅಲ್ಲ..ಕನಸ್ಸಾಗಿದ್ದರೆ ಪಕ್ಕದ ಸೀಟಲ್ಲಿ ಕುಳಿತವನ ಬೇವರಿನ ವಾಸನೆ ನನ್ನ ಮೂಗಿಗೆ ಬಡಿಯುತಿರಲಿಲ್ಲ. ಛೇ..!! ಅವಳು ನನ್ನನು unfriend ಮಾಡುವಷ್ಟು ನಾ ಅವಳಿಗೆ ಬೇಡ ವಾಗಿ ಹೋದನೆ? ಅವಳು ಮೊದ ಮೊದಲು ಪರಿಚಯವಾದಾಗ ಆವಳು online ಬರುವುದನ್ನು ಬಕ ಪಕ್ಷಿಯಂತೆ ಒಂಟಿ … Read more
ಭಾರತ ಜ್ಯೋತಿ ಲೇಖನ ಸರಣಿ : ತೆಲಂಗಾನಾದ ಚಿಂತಕಿಂಡಿ ಮಲ್ಲೇಶಂ, ಹುಟ್ಟಿದ್ದು ತೆಲಂಗಾನಾ ರಾಜ್ಯದಲ್ಲಿರುವ ಪುಟ್ಟ ಹಳ್ಳಿ ಶಾರ್ಜಿಪೇಟೆಯ ಬಡ ನೇಕಾರ ಕುಟುಂಬವೊಂದರಲ್ಲಿ. ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ, ಶಾಲೆಯಲ್ಲಿ 6ನೆ ತರಗತಿ ಓದುವಾಗಲೇ ತನ್ನ ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆದರೆ ಅವರು ಮಾಡಿರುವ ಸಾಧನೆಗಾಗಿ ದೊರೆತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳನ್ನು ಒಮ್ಮೆ ನೋಡಿ. ಇವರು, ವರ್ಷ 2009ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಗೌರವ ಪುರಸ್ಕಾರ, ವರ್ಷ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅಮೇಜಿಂಗ್ ಇಂಡಿಯನ್ ಗೌರವ ಪ್ರಶಸ್ತಿ, … Read more
ಕರೆದೊಡನೆ ಬಂದುದ ಕಂಡು ಯಾಮಾರಿದೆಯಾ.. ನಾ ಕಂದಮ್ಮನಲ್ಲ ಕಣ್ಣ ದಿಟ್ಟಿಸಿ ನೋಡು ಕ್ರೂರ ದೈತ್ಯನು ನಾನು ಎಷ್ಟೋ ತ್ವಚೆಯ ಸೀಳಿ ಹಸಿ ರಕುತವ ಕುಡಿದ ಹಲ್ಲಿನ ಮಸಿ ಕಂಡು ಕರಳು ನಡುಗುತಿದೆಯಾ… ಕಂದನೆಂದ್ ಯಾಮಾರಿದೆಯಾ..! ಅಂದೊಮ್ಮೆ ನೆನಪಿದೆಯಾ ಕತ್ತನು ಮುತ್ತಿಡಲು ಬಂದದು ಸರಸವಲ್ಲವದು ನೆತ್ತರಾಸೆ ತುಟಿಯ ತಾಕಲು ಉಸಿರ ಸೋಕುತ ಪಕ್ಕ ಸುಳಿದದು ರಕುತದಾಸೆ ನಂಬಿ ಕೆಟ್ಟೆ ನೀ ಪಾಪದ್ಹೆಣ್ಣೆ ಓಡಿ ಹೋದರೂ ಬಿಡೆನು ನಾನು ಶರಣು ಎಂದರೆ ಬಿಡುವೆನೇನು..? ಚೂಪು ಕಂಗಳ ನೋಟಗಾತಿ ಹಾಗೆ ನೋಡದಿರು … Read more
`ನೆನ್ನೆ ರಾತ್ರಿ ದಾವಣಗೆರೆಯವರು ಫೋನು ಮಾಡಿದ್ದರು..ಶಾಲಿನಿಯನ್ನು ಹುಡುಗ ಒಪ್ಪಿದ್ದಾನಂತೆ..ಆದ್ರೆ ಹುಡುಗ ಕಾರು ತಗೋಬೇಕಂತೆ, ಆರು ಲಕ್ಷ ವರದಕ್ಷಿಣೆ ಕೇಳ್ತಿದ್ದಾರೆ..ನೀನು ಹೂ ಅಂದರೆ..ನಿಮ್ಮಪ್ಪ ಫೋನು ಮಾಡಿ ಮಾತುಕತೆಗೆ ಕರೀಬೇಕೂಂತಿದ್ದಾರೆ…! ತಿಂಡಿಯ ತಟ್ಟೆ ಟೇಬಲ್ಲಿನ ಮೇಲಿಡುತ್ತಾ ತನ್ನ ತಾಯಿ ಹೇಳಿದಾಗ ರಾಜೀವನಿಗೆ ತನ್ನ ಶರೀರದ ಆ ಜಾಗ ನೆನಪಾಯಿತು. ಹೌದು ಸ್ನಾನ ಮಾಡುವಾಗ ನೋಡಿಕೊಂಡೆನಲ್ಲ..! ಅದರ ನೆನಪಿಂದ ಅವನಿಗೆ ವಿಚಿತ್ರವಾದ ಸಂಕಟವಾಯಿತು. ಆಹಾರ ಗಂಟಲಲ್ಲಿ ಇಳಿಯಲಿಲ್ಲ. ಕಿಟಿಕಿಯಿಂದಾಚೆ ನೋಡಿದ ಇನ್ನೂ ಕತ್ತಲಿತ್ತು. ಗಡಿಯಾರ ಆರೂವರೆಯನ್ನು ತೋರಿಸುತ್ತಿತ್ತು. `ಥೂ..ದರಿದ್ರದ ಟೈಮು! ಇದು … Read more
ಮರದ ಮೇಲೆ ಹಸಿರೆಲೆ ನೋಡಿದಾಗ ಏನೋ ಒಂಥರಾ ಹೊಸತನ, ಮನಸ್ಸಲ್ಲಿ ಮಲ್ಲಿಗೆ ಹೂವಿನ ಪರಿಮಳ ಮತ್ತು ಏನೋ ಹೇಳಲಾಗದ ಸಡಗರ ಮತ್ತು ಸಂಕೋಚದ ಅನುಭವ.ತನ್ನ ಮದುವೆಯ ದಿನಗಳ ನೆನಪು ತರುವ ಪರಿಮಳ. ಆದರೆ ಇತ್ತೀಚಿಗೆ ಬರುಬರುತ್ತಾ ಆ ಭಾವನೆಗಳು ಎಲ್ಲೋ ಕಾಣೆಯಾಗುತ್ತಿರೋ ಹಾಗಿದೆ. ಹೊಸತನದ ಬದಲು ಭಾರವಾಗುತ್ತಿರುವ ಭಾವನೆಗಳು.. ಹೀಗೆ ಯೋಚಿಸುತ್ತಿರುವಾಗಲೇ ಕಣ್ಣಂಚಿನಲ್ಲಿ ಹನಿ …. "ಕುಕ್ಕರ್ ಎಷ್ಟ್ ಸಲ ವಿಸಿಲ್ ಆಯಿತು.. ಅಡುಗೆ ಮನೆಲ್ಲಿ ಯಾರು ಇಲ್ವಾ? ಏನ್ ರೋಗ ಬಂದಿದೆ ಮಾನಸಂಗೆ?" ಅಂತ ಅತ್ತೆ … Read more
“ನೋಡಮ್ಮಾ ಆ ಕರು ಅಷ್ಟು ಹೊತ್ತಿಂದ ಅಲ್ಲಿ ಅಂಬೇ ಅಂತ ಕರೆಯುತ್ತಾ ಇತ್ತು. ನಾನು ಗಿಡಕ್ಕೆ ನೀರು ಹಾಕಲಿಕ್ಕೆ ಹೊರಗೆ ಹೋಗಿದ್ದೆನಲ್ಲಾ, ಬಡಬಡಾಂತ ನಮ್ಮ ಗೇಟಿನ ಹತ್ತಿರ ಬಂತು, “ಏನೂ ಇಲ್ಲ ಮುದ್ದೂ” ಅಂದೆ, ತನ್ನಷ್ಟಕ್ಕೆ ಹೋಯ್ತು. ಎಷ್ಟು ಅರ್ಥ ಆಗುತ್ತೆ ನೋಡಮ್ಮಾ. ಅದೇ ಆ ಕೆಂಪು ಕಣ್ಣಿನ ದನ ಬಂದಿದ್ದರೆ ಮೊಂಡಾಟ ಮಾಡಿಕೊಂಡು ಇನ್ನೂ ಇಲ್ಲೇ ನಿಂತಿರುತ್ತಿತ್ತು ಅಲ್ವಾ?” ಅಂದಳು ಮಗಳು. ಹೌದಲ್ಲವೇ ಅನ್ನಿಸಿತು. ನಮ್ಮ ಏರಿಯಾದಲ್ಲಿ ಒಂದಷ್ಟು ದನ ಕಟ್ಟಿಕೊಂಡು ಹಾಲು ಪೂರೈಸುವವನೊಬ್ಬನಿದ್ದಾನೆ. ಪ್ರತಿದಿನ … Read more
ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೆ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರೀಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. … Read more
ಆಸೆ ಹುಡುಗನ ಪತ್ರವಿದು. ಅತಿರೇಕ ಅಂದುಕೊಳ್ಳಬೇಡ . ತಿರುಗಿ ಬೀಳುವ ಮನಸ್ಸಿಗೆ ತುಂಬಾ ದಿನ ಸಮಾಧಾನ ಹೇಳಲಾರೆ. ಮನಸ್ಸಿನದು ಒಂದೇ ಹಠ, ತನಗೆಎಲ್ಲವೂ ಬೇಕು. ಎಷ್ಟುಸಲ ತಿಳಿ ಹೇಳಿದರೂ ಕೇಳಲೊಲ್ಲದು. ನಾನು ವಿಹ್ವಲನಾಗಿ ಹೋಗಿದ್ದೇನೆ. ಕಣ್ಣಂಚಿನಲ್ಲಿ ನೆನಪಿನ ನೀರು. ಎಲ್ಲವನ್ನೂ ಹೇಳಬೇಕು ಅಂದುಕೊಂಡಿದ್ದೆ. ನನ್ನ ಮಾತು ನಿರುಪಯಕ್ತವೆನಿಸುವುದು ನಿನ್ನ ಕಣ್ಣುಗಳ ನವಿಲ ನರ್ತನ ಕಂಡಾಗ. ನಿನಗೆ ಗೊತ್ತು! ಸುಮ್ಮನೆ ಕಾಲಕಳೆಯಲೆಂದು ಸಮುದ್ರದ ದಡದಲ್ಲಿ ನಿಂತವ ನಾನು. ಅಂದು ಅಂಬೆಗಾಲಿಟ್ಟುಕೊಂಡು ಮಗುವಿನಂತೆ … Read more
ಬೆಂಗಳೂರಿನ ಹೊರವಲಯದಲ್ಲಿ ಮಾನವನ ದೌರ್ಜನ್ಯಕ್ಕೆ ತುತ್ತಾಗಿ ಕಾಲುಮುರಿದುಕೊಂಡು ಜೀವನ್ಮರಣಗಳ ನಡುವೆ ಒದ್ದಾಡುತ್ತಿರುವ ಸಿದ್ಧ ಎಂಬ ಹೆಸರಿನ ನಡುಹರಯದ ಆನೆಯನ್ನು ಕಡೆಗೂ ಜನರ ಒತ್ತಾಯಕ್ಕೆ ಮಣಿದು ಇಲಾಖೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಹೊತ್ತಿನಲ್ಲೆ, ಏನೇ ಆದರೂ 800 ಚಿಲ್ಲರೆ ಮರಗಳನ್ನು ಕಡಿದು ಉಕ್ಕಿನ ಸೇತುವೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಹಠ ಹಿಡಿದು ಸರ್ಕಾರ ಗಟ್ಟಿ ನಿಲುವು ತಳೆದ ಹೊತ್ತಿನಲ್ಲೇ, ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ಯೋಜನೆಯನ್ನು ಅದರಲ್ಲೂ ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದ … Read more
ಮಕ್ಕಳ ಲೋಕದ ಒಗ್ಗಟ್ಟಿನ ಸೂತ್ರ ಹೇಳುವ ‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ. ಮಗು ಮನಸ್ಸಿನ ಧಾರವಾಡದ ಉದಯೋನ್ಮುಖ ಹವ್ಯಾಸಿ ರಂಗನಟಿ ಶ್ರೀಮತಿ ಗಿರಿಜಾ ಹಿರೇಮಠ ಅವರು ಬಹು ಆಸಕ್ತಿ-ಶ್ರಮವಹಿಸಿ ಎಸ್.ಮಾಲತಿ ವಿರಚಿತ ‘ಬುದ್ಧ ಹೇಳಿದ ಕಥೆ’ ನಾಟಕವನ್ನು ಇತ್ತೀಚೆಗೆ (ಡಿ.27) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪದ ಆಶ್ರಯದಲ್ಲಿ ಸಾಧನಕೇರಿಯ ಆಲೂರ ವೆಂಕಟರಾವ್ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳು ಮುದ್ದು-ಮುದ್ದಾಗಿ ಅಭಿನಯಿಸಿ ನೆರದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಶಾಲಾ-ಕಾಲೇಜುಗಳ ಮಕ್ಕಳು ಕೇವಲ ಶಾಲಾ … Read more
ದೇಶವನ್ನು ಆಳುವವರ ಉದ್ದೇಶ ದೇಶದ ನೆಮ್ಮದಿ. ದೇಶವನ್ನು ಕಾಡುವ ಸಮಸ್ಯೆಗಳನ್ನು ಗುರುತಿಸಿ, ಹೋಗಲಾಡಿಸುವ ಮಾರ್ಗಗಳನ್ನು ತಿಳಿದು, ಅದಕ್ಕೆ ಶಾಶ್ವತ ಯೋಜನೆಗಳನ್ನು ರೂಪಿಸಿ, ನಿಗಧಿತ ಸಮಯದೊಳಗೆ ಅವುಗಳನ್ನು ಪರಿಹರಿಸುವುದು ಉತ್ತಮ ಆಡಳಿತಗಳ ಲಕ್ಷಣ. ಆಗ ಸರ್ಕಾರಗಳ ಹೊರೆ ಕಡಿಮೆಯಾಗಿ, ಹೆಸರು ಜಾಸ್ತಿಯಾಗಿ, ಜನಕ್ಕೆ ನೆಮ್ಮದಿ ಲಭಿಸೀತು. ಭಾರತ ವಿಜ್ಙಾನ, ತಂತ್ರಜ್ಙಾನ, ಬಾಹ್ಯಾಕಾಶ … ಗಳಲ್ಲಿ ರಭಸವಾಗಿ ಮುನ್ನುಗ್ಗುತ್ತಿದೆ. ಸರ್ವತೋಮುಖ ಅಭಿವೃದ್ದಿಗೆ ಅನೇಕ ಸಮಸ್ಯೆಗಳು ಅಡ್ಡಿಯಾಗಿವೆ. ಆ ಸಮಸ್ಯೆಗಳಲ್ಲಿ ಎರಡು ವಿಧ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು. ಬಡತನ, … Read more
ಆತ್ಮೀಯರೆ, "ವಾರ್ಡ್ ನಂಬರ್ 6", ಕನ್ನಡ ನಾಟಕದ ಎರಡನೇ ಪ್ರಯೋಗಕ್ಕೆ ತಮಗಿದು ಆದರದ ಆಹ್ವಾನ. ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತನಗರ, ರಾಮಾಂಜನೇಯ ಗುಡ್ಡದ ಪಕ್ಕದಲ್ಲಿ, ಬೆಂಗಳೂರು ದಿನಾಂಕ: 28, ಜನವರಿ 2017 (ಶನಿವಾರ) ಸಮಯ: ಸಂಜೆ 7.30ಕ್ಕೆ. ಮೂಲಕತೆ: ಆಂಟನ್ ಚೆಕಾವ್ (ರಷ್ಯನ್ ಬರಹಗಾರ) ಮೂಲ ನಾಟಕ ರಚನೆ: ಡಿ.ಆರ್. ನಾಗರಾಜ್ ವಿಸ್ತೃತ ರಂಗರೂಪ: ಚನ್ನಕೇಶವ ಸಂಗೀತ: ಅಭಿ-ಜೋಯಲ್ ಬೆಳಕು: ಮಂಜು ನಾರಾಯಣ್ ವಿನ್ಯಾಸ-ನಿರ್ದೇಶನ: ಕೆ.ಎಸ್ ಪರಮೇಶ್ವರ ಗೆಳೆಯರೊಂದಿಗೆ ಮರೆಯದೆ ಬನ್ನಿ… ಧನ್ಯವಾದಗಳೊಂದಿಗೆ, ಕಲಾಮಾಧ್ಯಮ ತಂಡ ದೂ: … Read more
ಜನ್ನನ ಯಶೋಧರ ಚರಿತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವಾದ ಕೃತಿ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ಧೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದದೆ. ಸಾಂಪ್ರದಾgಯಿಕ ಜೈನಕಾವ್ಯಗಳಿಗಿಂತಲೂ ಮಿಗಿಲಾಗಿ ಜೀವದಯೆ ಜೈನಧರ್ಮಂ ಅನ್ನುವ ಆಶಯದೊಂದಿಗೆ ಇಡೀ ಕಾವ್ಯ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. ಬೆರಳೆಣಿಕೆಯಷ್ಟು ವೃತ್ತಗಳಿವೆ. ಸಮಕಾಲೀನ ಸಂದರ್ಭದಲ್ಲಿ ಜರುಗುತ್ತಿದ್ದ ಧಾರ್ಮಿಕ ಮತ್ತು ರಾಜಕೀಯ ಪಲ್ಲಟಗಳಿಂದಾಗಿ ಜನ್ನ ಅನುಸರಿಸಿದ ಮತ ಪ್ರತಿಪಾದನೆಯ ಮಾರ್ಗ ಆ ಕಾಲದ ಸರಿದಾರಿ ಎನಿಸಿತು. ಈ ಕೃತಿಯ ಮತಪ್ರತಿಪಾದನೆಯ ತತ್ವವನ್ನು … Read more
ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಸದಾ ವಿವಾದದಲ್ಲೇ ಮುಳುಗೇಳುತ್ತಾ ಅಮೇರಿಕಾದ ಅಧ್ಯಕ್ಷ ಪದವಿಯನ್ನು ಏರಿದ ರಿಪಬ್ಲಿಕ್ ಬಣದ ಮಹಾನುಭಾವ ಟ್ರಂಪ್ ಮೂಲತ: ಉದ್ದಿಮೆದಾರ, ಬಂಡವಾಳಶಾಹಿ. ಇವನ ಎದುರಾಳಿ ಇವನಿಗಿಂತ ಹೆಚ್ಚು ಮತ ಪಡೆದರೂ ತಾಂತ್ರಿಕ ರಾಜಕಾರಣದ ಕಾರಣಗಳಿಂದಾಗಿ ಸೋಲಬೇಕಾಯಿತು. ಬಿಡಿ ಈ ಅಂಕಣದಲ್ಲೇಕೆ ರಾಜಕೀಯವೆಂದು ಮೂಗು ಮುರಿದೀರಿ. ಅಪಾಯವಿರುವುದು ಈ ಮನುಷ್ಯನ ಚಿಂತನೆಗಳಲ್ಲಿ ಹಾಗೂ ಧೋರಣೆಗಳಲ್ಲಿ ಎಂದು ಹೇಳಲೇಬೇಕಾಗಿದೆ. ಹವಾಗುಣ ಬದಲಾವಣೆ ಅಥವಾ ವಾತಾವರಣ ವೈಪರೀತ್ಯವೆನ್ನುವುದು ಬರೀ ಸುಳ್ಳು ಎಂದು ಹೇಳುವವರ ಗುಂಪಿನ ನಾಯಕನೀತ. ಇಂಗಾಲಾಮ್ಲ ಹೆಚ್ಚುವುದರಿಂದ … Read more
ನಾನು ಕುಳಿತಿದ್ದ ರೈಲು ಹೊರಡಲು ಇನ್ನೂ ಸಮಯವಿತ್ತು. ಜನರು ಹತ್ತುವ ಇಳಿಯುವ ಗಜಿಬಿಜಿಯ ಗಲಾಟೆ ಕಡೆ ಕಣ್ಣಾಯಿಸಿದೆ. ಕೆಲವರು ಬೋಗಿಯೊಳಗೆ ತಮ್ಮ ಆಸನ ಹುಡುಕುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಲಗೇಜು ಇಡುವ ಭರದಲ್ಲಿದ್ದಾರೆ. ಕೆಲವರ ಬ್ಯಾಗುಗಳನ್ನು ಅಪ್ಪರ್ ಬರ್ತ್‍ನಲ್ಲಿಡುತ್ತಿದ್ದಾರೆ. ಇನ್ನೂ ಕೆಲವರು ಇಡೀ ಮನೆ ಖಾಲಿ ಮಾಡಿ ಬಂದಷ್ಟು ಲಗೇಜ್ ತಂದು ಇಡಲು ಸ್ಥಳವಿಲ್ಲದೆ ಪೇಚಾಡುತ್ತಿದ್ದಾರೆ. ಈ ಎಲ್ಲಾ ಗಲಾಟೆಯ ಮಧ್ಯೆಯೂ ಸೀಬೆಬುಟ್ಟಿ ಹಿಡಿದ ಹುಡುಗಿಯೊಬ್ಬಳು ತೂರಿ ಬಂದಳು. ಅವಳು ಮಾರಲು ತಂದ ಬುಟ್ಟಿಯೊಳಗೆ ಬಿಸಿಲಿಗೆ ಬಾಡಿ … Read more
"ಭಟ್ರನ್ನ ಒಳಗೆ ಕರಿಲನೇ" ಎಂದು ನನ್ನವಳಿಗೆ ಕೇಳಿ ಒಪ್ಪಿಗೆ ಪಡೆದು ನಾನು ಇಬ್ಬರು ಭಟ್ಟರೊಂದಿಗೆ ದೇವರ ಮನೆ ಪ್ರವೇಶಿಸಿದೆ. ಇಂದು ನನ್ನಮ್ಮನ ಎಂಟನೇ ಶ್ರಾಧ್ದ. ಪ್ರತೀ ಶ್ರಾಧ್ದದ ದಿನವೂ ನಾನು ಒಂದು ರೀತಿಯ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಅಮ್ಮನ ನೆನಪೇ ಹಾಗೆ. ನೋವು ನಲಿವಿನ ತಂತಿ ಎದೆಯಲ್ಲಿ ಮೀಟಿದ ಹಾಗೆ. ನನ್ನಮ್ಮ ಹುಟ್ಟು ಹೋರಾಟಗಾರ್ತಿ. ಮದುವೆಗೆ ಮೊದಲೇ ತನ್ನ ಅಪ್ಪ, ಅಣ್ಣನ ಜೊತೆಗೆ ತೋಟ ಗದ್ದೆಗಳ ಕೆಲಸ ಮಾಡುವವಳಂತೆ. ನನ್ನಜ್ಜಿ ಯಾವಾಗಲೂ "ನಿನ್ನಮ್ಮ ಗಂಡಾಗಿ ಹುಟ್ಟಬೇಕಿತ್ತು"ಎಂದು ಹೇಳುತ್ತಿದ್ದರು. ಮದುವೆ … Read more
ಈ ಮನುಷ್ಯನಿಗೆ ತಲೆಬಾಗಿ ಹೃದಯಪೂರ್ವಕ ನಮಿಸಬೇಕೆನ್ನಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳು ಆಗಿದ್ದ ಎಂದು ಅಲ್ಲ. ಹೋರಾಡಲು ಆಯ್ದುಕೊಂಡ ಮಾರ್ಗ ಅತ್ಯುನ್ನತವಾದುದು ಆಗಿತ್ತೆಂದು. ಸ್ವಾತಂತ್ರ್ಯ ಎಂದರೆ ನಾವು ಬಯಸಿದಂತೆ ಬದುಕಲು ಸಾಧ್ಯವಾಗುವದು. ಬದುಕಿನ ಮೇಲೆ ಯಾರ, ಯಾವ ಒತ್ತಡವೂ ಇರದೆ ಬದುಕುವುದು. ಯಾರ ಕಟ್ಟುಪಾಡುಗಳಿಗೆ ದೌರ್ಜನ್ಯಕೂ ಒಳಗಾಗದೆ ಬದುಕುವುದು. ಕಟ್ಟುಪಾಡುಗಳೇನಾದರೂ ಹಾಕಿದರೆ, ಹಿಂಸೆ ಮಾಡಿದರೆ ಮಾನವನು ಬದುಕಲು ತೊಂದರೆಯಾಗುತ್ತದೆ.ಕಟ್ಟುಪಾಡುಗಳು, ಹಿಂಸೆ ಹೆಚ್ಚಿದಂತೆಲ್ಲ ಬದುಕಲು ತೊಂದರೆ ಹೆಚ್ಚಿ,ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ. ಇದೇ ವಾತಾವರಣ ಮುಂದುವರಿದರೆ, … Read more
★ಸುತ್ತೋಣ ಬನ್ನಿ ಕರ್ನಾಟಕ★ ಬನ್ನಿರಿ ಗೆಳೆಯರೆ ನಾಡನು ಸುತ್ತಿ ದಸರ ರಜೆಯನು ಕಳೆಯೋಣ|| ಸ್ವಚ್ಛ ನಗರ ಮೈಸೂರಿಗೆ ಹೋಗಿ ದಸರೆಯ ವೈಭವ ನೋಡೋಣ|| ರಾಜಧಾನಿ ಬೆಂಗ್ಳೂರಿಗೆ ಹೋಗಿ ಪ್ರೇಕ್ಷಣೀಯ ಸ್ಥಳ ಸುತ್ತೋಣ|| ಬಡವರ ಊಟಿ ಹಾಸನ ಜಿಲ್ಲೆಯ ಬೇಲೂರು ಹಳೇಬೀಡು ನೋಡೋಣ|| ಬಿಸಿಲು ನಗರಿ ಬಳ್ಳಾರಿಗೆ ಹೋಗಿ ಹಂಪಿಯ ಶಿಲ್ಪಗಳ ಸುತ್ತೋಣ|| ಬೆಳಕ ನೀಡುವ ರಾಯಚೂರಿನಲಿ ಶಕ್ತಿನಗರವನು ನೋಡೋಣ|| ಬಾದಾಮಿ ಐಹೊಳೆ ಪಟ್ಟದ ಕಲ್ಲಿನ ಕಲಾವೈಭವವ ಸವಿಯೋಣ|| ಬಂದರು ನಗರ ಮಂಗಳೂರಿನಲಿ ಕಡಲಿನ ಆರ್ಭಟ ಅರಿಯೋಣ|| ಕರುನಾಡ … Read more
ಜಸ್ಟ್ ಮಿಸ್ಸು..!! ಎರಡು ಜಿಲ್ಲೆಗಳ ಗಡಿಯಲ್ಲಿ ನೆಲೆಸಿ ಕಾಯುವ ಮ್ಯಾಗಲಟ್ಟಿ ಜಕ್ಕಪ್ಪನ ಮುಂದೆ ಸಣ್ಣೀರ ಬಕುತಿಯಿಂದ ಕೈ ಮುಗಿದು ಕೆನ್ನೆ ಬಡಿದುಕೊಂಡು ಮನಸಲ್ಲೇ ಅಪ್ಪಣೆ ಕೇಳಿಕೊಳುತಿದ್ದ. “ಸೈಕಲ್ ಪಕ್ಸಕ್ ಓಟಾಕ್ತೀನಿ ಅಂತವ ದುಡ್ ತಕಂಡ್ ಬುಟ್ಟಿದೀನಿ ನನ್ನಪ್ಪಾ.. ಅವ್ನಿಗೇ ಓಟ್ ಆಕದ್ ಒಳ್ಳೇದನ್ನಂಗಿದ್ರೆ ಬಲ್ಗಡಿಕ್ ಕೊಡೂ.. ಬ್ಯಾಡಾ ಚೆಂಡೂವಿನ್ ಪಕ್ಸಕ್ಕೇ ಓಟ್ ಆಕು ಅನ್ನಂಗಿದ್ರೆ ಎಡಗಡಿಕ್ ಕೊಡೂ..” ಜಕ್ಕಪ್ಪನಿಗೆ ಏನೋ ಕೋಪ, ಚೆಂಡೂವಿನ್ ಪಕ್ಸದೋನ್ ಗೆಲ್ಲಬಾರದು ಅಂತ. ಅದ್ಕೆ ಬಲದಾಗಡೆ ಊವಾನಾ ಪಳುಕ್ಕುನ್ ಉದುರಿಸಿಬಿಟ್ಟಾ. ಆದ್ರೆ ಅಷ್ಟರಲ್ಲಿ … Read more
ಅವಳ ಡೈರಿಯ ಪುಟಗಳಿಂದ… ಆತ ವಿಕ್ರಮ್, ಆ ವರುಷ ತಾನೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಎಮ್.ಎನ್.ಸಿ. ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕ. ಆ ದಿನ ಶನಿವಾರ ಆಫಿಸ್ ಗು ರಜ, ಬೆಳಗ್ಗೆ ಎದ್ದು ಸುಮ್ಮನೆ ಒಂದು ರೌಂಡ್ ತಿರುಗಾಡಿ ಬಂದು ಉಟ ಮಾಡಿ ಮಲಗಿ ಎದ್ದವನಿಗೆ ಏನು ಮಾಡಲೂ ಮನಸಿಲ್ಲದ ಒಂದು ರೀತಿಯ ಜಡತ್ವ ಆವರಿಸಿತ್ತು. ಆಗಲೇ ನೆನಪಾಗಿದ್ದು ಕಳೆದ ವಾರ ತನ್ನ ಉರಿಗೆ ಹೋದಾಗ ಗೆಳತಿ ಸುನೀತಾ ಫ್ರೆಂಡ್ ಪ್ರೇಮ ಕೊಟ್ಟ ಗಿಫ್ಟ್. ಬೇರೆ ಯಾರಾದರು … Read more