ವ್ಯಕ್ತಿ – ದೇಶಭಕ್ತಿ- ಭೂಶಕ್ತಿ: ಅಖಿಲೇಶ್ ಚಿಪ್ಪಳಿ
ಪಶ್ಚಿಮಘಟ್ಟಗಳ ತಪ್ಪಲಿನಲ್ಲಿಂದ ಹಿಡಿದು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಅದೆಷ್ಟೋ ಪ್ರಭೇದಗಳು ನಾಶವಾಗಿವೆ. ಋತುಮಾನಗಳ ಬದಲಾವಣೆಯಿಂದಾಗಿ ಹೊಸ-ಹೊಸ ಪ್ರಭೇದಗಳು ಸೃಷ್ಟಿಯೂ ಆಗುತ್ತಿವೆ. ಸ್ಟೀಫನ್ ಹಾಕಿಂಗ್ಸ್‍ನಂತಹ ಮೇಧಾವಿಗಳು ಮಾನವನ ಕಾರಣಕ್ಕಾಗಿ ಬದಲಾವಣೆಯಾಗುತ್ತಿರುವ ಹವಾಗುಣದಿಂದ ಮನುಷ್ಯಕುಲಕ್ಕೇ ಆಪತ್ತು ಬಂದಿದೆ. ಇನ್ನೊಂದು ಸಾವಿರ ವರ್ಷದ ಒಳಗೆ ನಮ್ಮಗಳ ವಾಸಕ್ಕೆ ಬೇರೆ ಗ್ರಹವನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಅವಸಾನ ಖಂಡಿತ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ ವಿಜ್ಞಾನವನ್ನು ಕಂಡುಕೊಳ್ಳುವ ಹಂತದಲ್ಲಿ ನಮ್ಮ ವೈಜ್ಞಾನಿಕ ಕಾರ್ಯಕ್ಷೇತ್ರ ತ್ವರಿತವಾಗಿ ಬದಲಾಗಬೇಕಿದೆ. ವ್ಯಕ್ತಿಗಳನೇಕರು ಸೇರಿ … Read more