ಜೀವ ವೀಣೆಯ ಭಾವ ಲಹರಿ: ಡಾ. ಹೆಚ್ ಎನ್ ಮಂಜುರಾಜ್

ಹಿಂದೆ ಆಹಾರವೇ ಔಷಧವಾಗಿತ್ತು; ಈಗ ಔಷಧವೇ ಆಹಾರವಾಗಿದೆ ಎಂಬುದನ್ನು ಬಹಳ ಮಂದಿ ಹೇಳುತ್ತಿರುತ್ತಾರೆ. ಇದು ನಿಜವೇ. ಏಕೆಂದರೆ ಅಡುಗೆ ಮನೆಯು ಕೇವಲ ಆಹಾರ ಬೇಯಿಸುವ ಪಾಕಶಾಲೆಯಾಗಿರಲಿಲ್ಲ. ವೈದ್ಯಶಾಲೆಯೂ ಆಗಿತ್ತು. ನಮ್ಮ ಆಯುರ್ವೇದದ ಬಹಳಷ್ಟು ಮನೆಮದ್ದುಗಳು ರುಚಿಕರ ಆಹಾರವಾಗಿಯೇ ನಮ್ಮನ್ನು ಕಾಪಾಡುತ್ತಿದ್ದವು. ನಮಗೇ ಗೊತ್ತಿಲ್ಲದಂತೆ ಆಯಾ ಕಾಲಮಾನಕ್ಕೆ ತಕ್ಕುದಾಗಿ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತಿದ್ದವು. ನಮ್ಮ ಅಡುಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಕರಿಬೇವು, ನಿಂಬೆ, ಕೊತ್ತಂಬರಿ, ಮೆಣಸು, ಜೀರಿಗೆ, ಇಂಗು, ಸಾಸುವೆ, ಮೆಂತ್ಯ ಮೊದಲಾದ ಪದಾರ್ಥಗಳು ಏಕಕಾಲಕ್ಕೆ ಆಹಾರಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಪಂಜು ಕಥಾಸಂಕಲನ ಪ್ರಶಸ್ತಿ ಪಂಜು 2023 ರ ಜನವರಿಯಲ್ಲಿ ಹತ್ತು ವರ್ಷ ಪೂರೈಸುತ್ತದೆ. ದಶಕದ ಮೈಲಿಗಲ್ಲು ತುಳಿದ ಬೆರಳೆಣಿಕೆಯ ಕನ್ನಡದ ಅಂತರ್ಜಾಲ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು. ದಶಕದ ಈ ಸಂಭ್ರಮವನ್ನು ಆಚರಿಸಲು ಪಂಜು ಮೊದಲ ಹೆಜ್ಜೆಯಾಗಿ ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸುತ್ತಿದೆ. 2021 ರ ಸಾಲಿನಲ್ಲಿ ಅಂದರೆ ಜನವರಿ 2021 ರಿಂದ ಡಿಸೆಂಬರ್‌ 2021 ರವರೆಗೆ ಪ್ರಕಟವಾಗಿರುವ ಮೊದಲ ಮುದ್ರಣದ ಕಥಾಸಂಕಲನಗಳನ್ನು ಪಂಜುವಿಗಾಗಿ ಕಳುಹಿಸಿಕೊಡಿ. ನಮಗೆ ಬಂದ ಕೃತಿಗಳಲ್ಲಿನ ಅತ್ಯುತ್ತಮವಾದ ಕಥಾಸಂಕಲನವೊಂದಕ್ಕೆ ರೂ. 10,000/- ನಗದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೌರೀ ಹುಣ್ಣಿವೆ: ಡಾ. ವೃಂದಾ ಸಂಗಮ್

ಬಾಲ್ಯದೊಳಗಿನ ಸುಂದರ ನೆನೆಪುಗಳನ್ನು ಹೆಕ್ಕಿ, ನಕ್ಕು ನಲಿಯದ ಜನರೇ ಇಲ್ಲ ಅಥವಾ ಅಂತಹ ಬಾಲ್ಯದ ಅನುಭವದ ಶ್ರೀಮಂತಿಕೆ ಇಲ್ಲದ ವ್ಯಕ್ತಿ ಬದುಕು ಪೂರ್ಣವಾಗಿರುವುದಿಲ್ಲ ಎಂದೇ ಹೇಳಬೇಕು. ಬಾಲ್ಯದಲ್ಲಿನ ಯಾವುದೋ ಒಂದು ಚಿಕ್ಕ ಚಿತ್ರವೂ ನಮಗೆ ರವಿವರ್ಮನ ಚಿತ್ರಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುತ್ತಿತ್ತು. ಯಾರೋ ಹಾಡಿದ ಒಂದು ಹಾಡನ್ನು ಮೂರು ನಾಲ್ಕು ಬಾರಿ ಹಾಡಿ, ಕಲಿತು ಬಿಡುತ್ತಿದ್ದ ದಿನಗಳು. ಯಾವುದೊಂದು ನಾಟಕ, ಹಾಡು, ಡ್ಯಾನ್ಸು ಏನೇ ನೋಡಿದರೂ, ಅದನ್ನು ಕಲಿತು ಬಿಡುತ್ತಿದ್ದೆವು. ಅದರ ಅನುಕರಣೆಯಲ್ಲಿಯೂ ನಮ್ಮದೊಂದು ಅನುಭವದ ಸ್ವಂತಿಕೆಯನ್ನು ಸೇರಿಸುತ್ತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಂತರಂಗದೊಳಗಣ ಉರಿ ತಾಕಿದಾಗ”: ಪ್ರಶಾಂತ್ ಬೆಳತೂರು

-೧-ಎಳೆತನದಲ್ಲಿ ಆಡಿ ನಲಿವಾಗಎತ್ತರದ ನಿಲುವಿನ ಅಜ್ಞಾತ ಮನುಷ್ಯನೊಬ್ಬನನ್ನ ಕಂಡು ದೂರ ನಿಲ್ಲು ಪೀಡೆ ಎಂದ..ಯಾಕೆಂದು ತಿಳಿಯದೆ ಕಸಿವಿಸಿಯಾಗಿದೂರ ಸರಿದು ನಿಂತೆ..! ಅಂಗನವಾಡಿಯ ಅಂಗಳಕೆ ಕಾಲಿಟ್ಟಾಗಅಲ್ಲಿಯ ನನ್ನೂರಿನ ಹೆಂಗಸೊಬ್ಬಳುನನ್ನನ್ನು ನನ್ನ ಕೇರಿಯ ಓರಿಗೆಯವರನ್ನುಒಂದೇ ಸಾಲಿನಲ್ಲಿ ಯಾಕೆ ಕೂರಿಸುತ್ತಿದ್ದಾಳೆಂದುಮೊದಮೊದಲಿಗೆ ಅರ್ಥವಾಗುತ್ತಿರಲಿಲ್ಲ..! ಬರುಬರುತ್ತಾ..ನಮ್ ಮೇಷ್ಟ್ರು ಅರ್ಥ ಮಾಡಿಸಿದರುತರಗತಿಯಲ್ಲಿ ಕಲಿಯುವಾಗ ಪದೇ ಪದೇಅಣಕಿಸುವ ಮೇಷ್ಟ್ರುದನ ತಿಂದು ತಿಂದು ದನದ ಹಾಗೆ ಬೆಳಿದಿದ್ದೀರಿಮೆದುಳಿನಲ್ಲಿ ಬರೀ ಗೊಬ್ಬರ ತುಂಬಿದೆಯೆಂದುಜರಿದು ಮಾತಾಡುವಾಗಲೆಲ್ಲಾಎದೆಗೆ ನಾಟುತ್ತಿತ್ತು..! ಆಮೇಲಾಮೇಲೆ ಮೇಡಂಒಬ್ಬರು..ಮನೆಯ ಪಡಸಾಲೆಯಲ್ಲಿ ಸಂಜೆ ಸ್ಪೆಷಲ್ ಕ್ಲಾಸ್ಮಾಡುತ್ತೇನೆಂದು ಕರೆದಾಗನಾನು ಹಾಜರಾಗುತ್ತಿದ್ದೆಒಮ್ಮೆ ಅವರ ಗಂಡ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿವಣ್ಣ ಐ ಲವ್ ಯೂ: ಜಯರಾಮಾಚಾರಿ

ನಾಗರಾಜು ಶಿವ ಪುಟ್ಟಸ್ವಾಮಿ – ಸಿನಿಮಾಗಾಗಿ ಶಿವರಾಜ್ ಕುಮಾರ್ ಆದದ್ದು ಹಳೆಯದು. ಶಿವರಾಜ್ ಕುಮಾರ್ ಸಿನಿಮಾದ ಮೂಲಕ , ತಮ್ಮ ಬಿಂದಾಜ್ ನಡೆಯಿಂದ, ಬಾ ಮಾ , ಏನಮ್ಮ ಅಂತ ಮಾತಾಡಿಸುತ್ತಲೇ ಸುಮಾರು 36 ವರುಷಗಳಿಂದ ಸಿನಿಮಾ ಮಾಡುತ್ತ ಅರವತ್ತು ವರುಷವಾದರೂ ಯುವಕರಂತೆ ಹೆಜ್ಜೆ ಹಾಕುತ್ತ, ಮಗುವಿನಂತೆ ಸದಾ ಉತ್ಸಾಹ ತುಂಬಿರುವ ಶಿವರಾಜ್ ಕುಮಾರ್ ಈಗ ನಮ್ಮೆಲ್ಲರ ಶಿವಣ್ಣ . ಶಿವಣ್ಣ ಅಲ್ಲೊಂದು ನಗು ಅಲ್ಲೊಂದು ಎನರ್ಜಿ. ಆನಂದ್ ಸಿನಿಮಾದಿಂದ ಇತ್ತೀಚಿನ ಬೈರಾಗಿವರೆಗೂ. ಶಿವಣ್ಣ ನಮ್ಮ ಪ್ರೀತಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಣುವಿನಲ್ಲಿ ಸಮಷ್ಠಿಯನ್ನು ಕಟ್ಟಿಕೊಡುವ ಪ್ಯಾರಿ ಪದ್ಯಗಳು”: ಅನುಸೂಯ ಯತೀಶ್

ಕನ್ನಡ ಸಾಹಿತ್ಯ ಕ್ಷೇತ್ರ ಚಲನಶೀಲ ಗುಣವನ್ನು ಹೊಂದಿದ್ದು ಸೃಜನಶೀಲತೆಗೆ ನಿರಂತರವಾಗಿ ತನ್ನನ್ನು ತೆರೆದುಕೊಳ್ಳುತ್ತದೆ. ಇದರಿಂದ ಸಾಹಿತ್ಯ ರಚಿಸುವವರ ಸಂಖ್ಯೆ ಹೇರಳವಾಗುತ್ತಿದೆ. ನವ ನವೀನ ಪ್ರಯೋಗಗಳು ಸಾಹಿತ್ಯಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ಇದು ನಮ್ಮ ಕನ್ನಡ ಭಾಷೆಗೆ ಇರುವ ಗಮ್ಮತ್ತು. ಅಂತಹುದೇ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದವರು ಎ.ಎಸ್. ಮಕಾನದಾರರವರು. ಇವರು ಪ್ಯಾರಿ ಪದ್ಯಗಳು ಎಂಬ ಹನಿಗವನ ಸಂಕಲನವನ್ನು ಸಖಿ‌ ಚೆಲ್ಲಿದ ಕಾವ್ಯಗಂಧ ಎಂಬ ಟ್ಯಾಗ್ ಲೈನ್ ನೊಂದಿಗೆ ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ನಮ್ಮ ನಾಡಿನ ಹಿರಿಯ ಹಾಗೂ ಖ್ಯಾತ ಕವಿಗಳಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಟವಾಡೆ…: ಚಂದ್ರಪ್ರಭ ಕಠಾರಿ

ಮಧ್ಯರಾತ್ರಿಯವರೆಗೂ ಪೈಲ್ ಕಾಂಕ್ರೀಟಿಂಗ್ ಸಾಗಿ, ಬೆಳಗ್ಗೆ ತಡವಾಗಿ ಎದ್ದವನು ದಡಗುಡುತ್ತ ಹೊರಟು, ಪಂಚತಾರಾ ಅಶೋಕ ಹೊಟೇಲ್ ಎದುರುಗಿರುವ ಗಾಲ್ಫ್ ಕೋರ್ಟಿನ ಮೇನ್ ಗೇಟನ್ನು ಇನ್ನು ತಲುಪಿರಲಿಲ್ಲ, ಆಗಲೇ ದಳವಾಯಿ ಕನ್ಸ್ ಟ್ರಕ್ಷನ್ ಮಾಲೀಕ ಕಮ್ ಕಂಟ್ರಾಕ್ಟರ್ ಗಂಗಾಧರ ರೆಡ್ಡಿಯಿಂದ ಫೋನು. ಲೇಬರ್ ಕಾಲೊನಿಗೆ ಹೋಗಿ ಬರಬೇಕೆಂದು. ಹೆಸರಿಗೆ ಮಾತ್ರ ತಾನು ಆಸಿಸ್ಟೆಂಟ್ ಜನರಲ್ ಮ್ಯಾನೇಜರ್! ತನ್ನ ಸಿವಿಲ್ ಎಂಜಿನಿಯರಿಂಗ್ ಕೆಲಸಗಳೇ ಸೈಟಿನಲ್ಲಿ ಮಾಡಿದಷ್ಟು ಮುಗಿಯದಿರುವಾಗ, ಕಟ್ಟಡಕಾರ್ಮಿಕರ ತರಲೆ ತಾಪತ್ರಯಗಳ ಉಸಾಬರಿ ತನ್ನ ಹಣೆಗೇಕೆ ಅಂಟಿಸುತ್ತಾರೆಂದು ಚಂದನ ಗೊಣಗಿಕೊಂಡನಷ್ಟೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಧನಕ್ಕಿಂತ ದೊಡ್ಡದು ಇಂ’ಧನ’ ಸಂಪತ್ತು: ಹೊ.ರಾ.ಪರಮೇಶ್ ಹೊಡೇನೂರು

“ಲೋ ರಾಕೇಶ… ಮಾರ್ಕೆಟ್ ಗೆ ಹೋಗಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು ತಗೊಂಡು ಬೇಗ ಬಾರೋ….” ಹೀಗಂತ ಅಮ್ಮಾ ಹೇಳಿದ್ದೇ ತಡ, ಮಗ ರಾಕೇಶ್ ಪಕ್ಕದ ರಸ್ತೆಯ ಕೂಗಳತೆ ದೂರದಲ್ಲಿದ್ದ ಮಾರ್ಕೆಟ್ ಗೆ ತನ್ನ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಫುಲ್ ಜೋಶ್ ಆಗಿ ಹೋಗಿ ಕೊತ್ತಂಬರಿ ಸೊಪ್ಪು ತಂದ. ಖುಷಿಪಟ್ಟ ಅಮ್ಮ “ತಿಂಡಿ ಮಾಡೋದು ಸ್ವಲ್ಪ ತಡ ಆಗುತ್ತೆ, ಸರ್ಕಲ್ ನಲ್ಲಿ ಇರೋ ಬೇಕರಿಯಲ್ಲಿ ಒಂದು ಪೌಂಡ್ ಬನ್ ತಗೊಂಡು ಬಾರೋ ರಾಕೇಶ” ಎಂದ ತಕ್ಷಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

2022 ರ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ ಪ್ರಕಟಿತ ಕೃತಿಗಳ ಆಹ್ವಾನ

2022 ರ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ ಪ್ರಕಟಿತ ಕೃತಿಗಳ ಆಹ್ವಾನ ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಗಳಮುಖಿಯ ಮುಖದಲ್ಲಿ ಕಂಡ ತಾಯಿಯ ಒಲುಮೆ: ಪ್ರಜ್ವಲ್‌ ಎಸ್.ಜಿ., ಸೀಗೆಕೋಟೆ

ಸೃಷ್ಟಿಯಲ್ಲಿ ಕೋಟ್ಯಾಂತರ ಜೀವರಾಶಿಗಳು ಉಂಟು. ಪ್ರತಿಯೊಂದು ಜೀವಿಗೂ ಅದರದೇ ಆದ ದೇಹರಚನೆ, ಆಹಾರಪದ್ದತಿ, ಬಣ್ಣ, ವರ್ತನೆ ಹೀಗೆ ಹಲವಾರು ವಿಭಿನ್ನವಾದ ವ್ಯತ್ಯಾಸಗಳನ್ನು ನೋಡಬಹುದು. ಈ ಸೃಷ್ಟಿಯನ್ನು ಬುದ್ದಿವಂತ ಜೀವಿಯಾದ ಮಾನವನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತಾನೆ ಮತ್ತು ವ್ಯಾಖ್ಯಾನಿಸುತ್ತಾನೆ. ಕೆಲವರು ವೈಜ್ಞಾನಿಕ ದೃಷ್ಟಿಯಿಂದ, ಕೆಲವರು ಜೋತಿಷ್ಯ ಮತ್ತು ಖಗೋಳ ವೈಜ್ಞಾನಿಕ ದೃಷ್ಟಿಯಿಂದ ಅವರವರ ಮನಸ್ಥಿಗೆ ತಕ್ಕಂತೆ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿಯೊಂದು ಜಾತಿಯ ಪ್ರಾಣಿಗಳು, ಪಕ್ಷಿಗಳು, ಜೀವಜಂತುಗಳು ಪ್ರಕೃತಿಯ ಭಾಗಗಳಾಗಿ ಭೂಮಿಯಲ್ಲಿ ಮತ್ತು ನೀರಿನಲ್ಲಿ ವಾಸಿಸುತ್ತವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಲುಗನ್ನಡಿ ಪುಸ್ತಕ ಕುರಿತು ಕುಂ.ವೀ.ಅವರ ಅನಿಸಿಕೆ

ಸಹಸ್ರಾರು ವರ್ಷಗಳ ಹಿಂದೆಯೇ ‘ಮಸ್ಕಿ’ ಸಾಮ್ರಾಟ್ ಅಶೋಕನನ್ನು ಆಕರ್ಷಿಸಿದ ರಾಜ್ಯದ ಪ್ರಾಚೀನಾತಿ ಪ್ರಾಚೀನ ಸ್ಥಳ. ಆದರೆ ಸ್ವಾತಂತ್ರ್ಯೋತ್ತರವಾಗಿ ಮಸ್ಕಿ, ‘ಕೋಡಗುಂಟಿ’ ಎಂಬ ಹೆಸರಿನಿಂದ ಸಾಹಿತ್ಯಿಕವಾಗಿ ಹೆಸರಾಗಿದೆ. ಇಲ್ಲಿನ ಈ ಫ್ಯಾಮಿಲಿಗೆ ಸಾಂಸ್ಕೃತಿಕ ಹಿನ್ನಲೆ ಇದೆ, ಸದಭಿರುಚಿ ವ್ಯಕ್ತಿತ್ವವಿದೆ. ಬಸವರಾಜ ಮತ್ತು ಅವರ ತಂಗಿ ರೇಣುಕಾ, ಬಂಡಾರ ಹೆಸರಿನ ಪ್ರಕಾಶನ ಸಂಸ್ಥೆ ಆರಂಭಿಸಿದವರು, ತನ್ಮೂಲಕ ಸದಭಿರುಚಿ ಕಿತಾಬುಗಳನ್ನು ಪ್ರಕಟಿಸಿದವರು, ಈ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಿದವರು. ರೇಣುಕಾಳ ಚಟವಟಿಕೆಗಳನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಶಿವಮನ್ಯೂ ಪಾಟೀಲ

೧ ಆ ಬೆಳಕೊಂದು ಕತ್ತಲ ಆ ಬೆಳಕೊಂದು ಕತ್ತಲಗರ್ಭ ಸೀಳಿ ಬರುತಲಿದೆ ಈ ಜಗಕೆ.ಧರಣಿ ಒಡಲ ಬಿಗಿದಪ್ಪಿಕೊಳ್ಳಲುಹಸಿರ ಹುಲ್ಲು ಹಾಸಿನ ಇಬ್ಬನಿಯ ಚುಂಬಿಸಲು. ಜಗವೆಲ್ಲಾ ಗಾಢ ನಿದ್ರೆಯಲ್ಲಿಮೈಮರೆತಿರಲುಹೊಂಬೆಳಕು ತಾ ಹೊಸತನದಿಕೋಳಿ ಕೂಗುವ ದನಿಗೆ ದನಿಗೂಡಿಸುತಿದೆ.ಸ್ಫೂರ್ತಿಯ ದಾರಿ ತೆರೆದು, ಹೊಸಹೆಜ್ಜೆಗೆ ಹೆಜ್ಜೆ ಹಾಕುತ್ತಾ ಜೊತೆ ಸಾಗಿದೆ. ಹಸಿರ ಬನದ ಸೊಬಗಿಗೆಹಾರೋ ಹಕ್ಕಿಯ ಹುರುಪಿಗೆ.ಬಾಗಿಲು ತಾ ತೆರೆದು ನಲಿಸುತಿದೆ.ಹರಿವ ಜಲಧಾರೆಯ ನಾದದೊಳಗೆಮೀಯುತ.ಮೂಡುವ ಕಾಮನಬಿಲ್ಲಲಿ ಹೊಳೆಯುತ್ತಾ.ಇರುಳ ತೆರೆಯ ಪರದೆಯ ಸರಿಸುತ್ತಾಬೆಳಕೊಂದೂ ಓಡೋಡಿ ಬರುತಿದೆಕತ್ತಲ ಗರ್ಭ ಸೀಳಿ, ಜಗಕೆ. ೨ ಜನನಿಗೊಂದು ಪ್ರಣಾಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊಡಲಿಲ್ವೇ ! ಕೊಡಲಿಲ್ವೇ ! ?: ಎಂ ಆರ್ ವೆಂಕಟರಾಮಯ್ಯ

ಏನು ಕೊಡಲಿಲ್ಲಾ ! ಯಾರು ಕೊಡಲಿಲ್ಲಾ ? ಯಾತಕ್ಕೆ ಕೊಡಲಿಲ್ಲಾ ! ಏನೂ ಅರ್ಥವಾಗದೇ ! ಯಾರದೀ ಆಲಾಪ, ಪ್ರಲಾಪ, ಎಂದಿರಾ ! ಇದೆಲ್ಲಾ ನಮ್ಮವರದೇ, ನಮ್ಮ ಜನರದೇ, ಈ ಸಮಾಜದಲ್ಲಿರುವ ಹಲವರದೇ ಎಂದರೆ, ಉಹೂಂ, ಇದರಿಂದಲೂ ಏನೂ ಅರ್ಥವಾಗಲಿಲ್ಲಾ. ಎಲ್ಲಾ ಒಗಟು, ಗೊಂದಲಮಯವಾಗಿದೆ ಎನ್ನಬಹುದು ಕೆಲವು ಓದುಗರು. ಕೆಲ ಕೆಲವರ ಆಲಾಪ ಅವರವರದೇ ಆದ ಕಾರಣಗಳಿಗಾಗಿರುತ್ತದೆ, ಇವುಗಳ ಜಲಕ್ ಹೀಗಿದೆ : ಪ್ರತಿ ದಿನವೂ ನಿಮ್ಮ ವ್ಯಾಪಾರ, ವ್ಯವಹಾರ, ಕಸುಬಿನ ಸಂಬಂಧವಾಗಿ ನೀವು ಭೇಟಿ ಮಾಡುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ.ಅರವಿಂದ ಪಟೇಲ್ ಅವರ “ಹಾಲು ಚೆಲ್ಲಿದ ಹೊಲ” ಕವನ ಸಂಕಲನ ಬಿಡುಗಡೆ ಸಮಾರಂಭ

ಅಂಕುರ ಪ್ರಕಾಶನ ಪ್ರಕಟಿಸಿರುವ ಡಾ.ಅರವಿಂದ ಪಟೇಲ್ ಅವರ “ಹಾಲು ಚೆಲ್ಲಿದ ಹೊಲ” ಕವನ ಸಂಕಲನವನ್ನು ಮಾರ್ಚ್ 20, ಭಾನುವಾರ, ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯ ಐಎಂಎ ಸಭಾಂಗಣದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಜನಾರ್ಪಣೆ ಮಾಡಲಿದ್ದಾರೆ.  ಉಪಸ್ಥಿತಿ: ವಿಪ್ರೋ ಸಂಸ್ಥೆಯ ತರಬೇತಿ ವಿಭಾಗದ ಜಾಗತಿಕ ಮುಖ್ಯಸ್ಥರಾದ ಪಿ.ಬಿ.ಕೋಟೂರ, ವೈದ್ಯ ಲೇಖಕ ಡಾ.ಸಲೀಮ ನದಾಫ, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ದಕ್ಷಿಣ ವಲಯ) ಉಪಾಧ್ಯಕ್ಷರಾದ ಸಿರಿಗೇರಿ ಪನ್ನರಾಜ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಸೌಮ್ಯಾ ಕೋಡೂರು, ಕವಿ ಡಾ.ಅರವಿಂದ ಪಟೇಲ್, ಪ್ರಕಾಶಕ ಚಂದ್ರಕಾಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನುವಾದಿತ ಕವಿತೆಗಳು: ಡಾ. ಮಲರ್ ವಿಳಿ . ಕೆ

ನಿನ್ನ ಮತ್ತು ನನ್ನ ನಡುವಿನ ಪದ‌ ಪ್ರಾಣಿಯೊಂದನುಬೇಟೆಯಾಡುವಂತೆಆ ಪದವನು ಹಿಡಿಯಲುನನ್ನ ಬಲೆ/ಕುಣಿಕೆಗಳನ್ನು ಹಾಕಿಕಾದಿದ್ದೇನೆ. ಗಾಳಿಯಂತೆ ಸಂವೇದನಾಶೀಲವಾದದೇವರಂತೆ ಯಾಮಾರಿಸುವ ಆ ಪದನನಗೆ ಸಿಗದೆ ತೊಂದರೆ ಕೊಡುತ್ತಿದೆ. ಎಲ್ಲರ ಸಮ್ಮುಖದಲ್ಲೂನಿಮ್ಮನ್ನು ನನ್ನ ಮಡಿಲಲ್ಲಿಟ್ಟುನಿಮ್ಮ ಹೊಟ್ಟೆಯಿಂದಕರುಳನ್ನು ಕೀಳುವಂತೆಆ ಪದವನುಕೀಳಬೇಕು ಎಂಬುದು ನನ್ನ ಬಯಕೆ ನನ್ನ ಮೂಳೆಗಳನು ಚುರುಗುಟ್ಟಿಸುವಆ ಪದವಂತೂನಿಮ್ಮ ರಕ್ತದ ನಂಜಾಗಿ ಹರಿಯುತ್ತಿದೆ ಒಂದು ಪದ ಅಷ್ಟೇ!ನಿಮಗೆ ವರವಾಗಿಯೂನಮಗೆ ಶಾಪವಾಗಿಯೂಜನಿವಾರವ ಎದೆಯ ಮೇಲೆ ಧರಿಸುವಮಂತ್ರವಾಗಿಯೂ ನನ್ನ ಅಗಲಿಸಿ ನಿಲ್ಲಿಸುವಬೈಗುಳವಾಗಿಯೂ ನಾನು ಸೋಲಬಹುದುಇಂದಲ್ಲ ನಾಳೆನಮ್ಮ ಮಕ್ಕಳುಆ ಪದದ ಕೊಂಬನ್ನು ಹಿಡಿದು ನೂಕಿಅದರ ಧ್ವನಿಪೆಟ್ಟಿಗೆಯನ್ನೇಕತ್ತರಿಸುವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೇತುರಾಮ್.ಎಸ್.ಎನ್. ಇವರ ದಹನ ಪುಸ್ತಕದ ಬಗ್ಗೆ ಅನಿಸಿಕೆ: ದೀಪು ಹುಲ್ಕುಳಿ

ನಾನು ಓದಿದ ಪುಸ್ತಕ : ದಹನಲೇಖಕರು : ಶ್ರೀ ಸೇತುರಾಮ್ ಇಲ್ಲಿ ಬಂಡಾಯವಿಲ್ಲ … ಭಾವವಿದೆನೈತಿಕತೆಗೆ ಬಣ್ಣಗಳಿಲ್ಲ … ಒಳ ನೊಟವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸ್ತ್ರೀ ಸಂವೇದಿಶೀಲ ಸಾಹಿತಿಗಳಿದ್ದಾರೆ, ಆಗಿ ಹೋಗಿದ್ದಾರೆ, ಮುಂದೆ ಭವಿಷ್ಯದಲ್ಲಿ ಆಗುವರು ಇದ್ದಾರೆ. ಆ ಎಲ್ಲಾ ಸಾಹಿತಿಗಳ ಸಾಹಿತ್ಯ ಒಳಗೊಂಡ ಮಹಿಳಾ ಸಂವೇದನಾ ಶೀಲ ಸಾಹಿತ್ಯದ ವಿಮರ್ಷೆ ಸಂಪೂರ್ಣವೆನಿಸುವುದು ಶ್ರೀ ಸೇತುರಾಮರ ದಹನ ಹಾಗೂ ನಾವಲ್ಲ ಈ ಎರಡು ಪುಸ್ತಕಗಳ ಬಗ್ಗೆ ಉಲ್ಲೇಖಿಸಿದಾಗ ಮಾತ್ರ ಎಂಬುವುದು ನನ್ನ ದೃಢವಾದ ಅಭಿಮತ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಜ್ಜೆ: ವಿಜಯಾಮೋಹನ್‍ ಮಧುಗಿರಿ

ಇನ್ನು ಮಸುಕರಿಯದ ಮೋಡ, ಅದು ನೆಟ್ಟಗೆ ಕಣ್ಣಿಗ್ಗಲಿಸ್‍ತ್ತಿಲ್ಲ. ಆವತ್ತು ಬೆಳಕರದ್ರೆ ಊರು ನಾಡಿಗೆ ಹೊಸ ಸಮೇವು(ಸಂದರ್ಭ) ಚೆಲ್ಲುವ. ಬೇವು ಬೆಲ್ಲ ಒಂದಾಗಿ,ಭೂಮಿ ಮ್ಯಾಲೆ ಬದುಕೀರೆ ಕಷ್ಟ ಸುಖದ ಸಮಪಾಲಾಗಿ ಹಂಚಿ ಬದುಕ ಬೇಕೆಂದು, ಮತ್ತು ಅಂಗೆ ಹಂಚಿ ಉಣ್ಣುಬೇಕೆಂದ, ಅಜ್ಜ ಮುತ್ತಜ್ಜಂದಿರೆಲ್ಲ ಹೇಳುತ್ತಿದ್ದ ಯುಗಾದಿ ಹಬ್ಬ. ಮೊಗ್ಗುಲಲ್ಲಿ ಮಲಗಿದ್ದ ಹೆಂಡತಿಯ ಗೊರಕೆ, ಅದು ಅದ್ರ ಪಾಡಿಗದು ಯಾರ ಮುಲಾಜಿಗಜಂದೆ ಏರಿಳಿತದ ಸವಾರಿ ಮಾಡುತ್ತಿತ್ತು. ಹಬ್ಬದ ದಿನಗಳೇನಾದರು ಬಂದರೆ ಯಾರಿಗ್ ಮಾಡ್‍ಬೇಕ್ ಹಬ್ಬ ಅದು ಇಂಗೆ ಮಾಡ್‍ಬೇಕ್‍ಅಂಬೋದೇನೈತೆ? ಹೆಂಡತಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೇಸರನಿಲ್ಲದ ಬಾನ ಎದೆಯಲ್ಲಿನ ಮೌನ: ಚೇತನ್ ಪೂಜಾರಿ, ವಿಟ್ಲ.

ನೀನೊಂತರ ಹವಳದ ಮುತ್ತು. ಬಳಿ ಇಲ್ಲದೆಯೂ ಏರಿಸುತ್ತಿರುವೆ ನಿನ್ನದೇ ಮತ್ತು. ನಗು ನಗುತ ನನ್ನೆದೆ ಹೊಕ್ಕು ಬಾಳ ಕಣ್ಣಾದವಳು ಇಂದು ಕಣ್ಣಂಚಲಿ ನೆನಪಾಗಿ ಕುಳಿತಿರುವೆ. ಕರೆವೆನೆಂದರೂ ಕೇಳಿಸದ ಊರಲಿ ನೀ ಕುಳಿತಿರುವೆ. ನಕ್ಕು ನಲಿವ ನಕ್ಷತ್ರವಾಗಿ ಮಿನುಗುತ ಎಲ್ಲರಿಗೂ ಮೆರುಗು ತರುತ್ತಿರುವೆ ಎಂದು ಭಾವಿಸುವೆ. ಏಕೆಂದರೆ ನೀ ಎನಗೆ ಕಲಿಸಿದ ಮೊದಲ ಪ್ರೇಮವೇ ನಗು. ನೋವಿನಲ್ಲೂ ನಗು. ನೋವ ಮರೆಸಲು ನಗು. ಮಗುವಾಗಿಸೋ ನಗು. ಪೆದ್ದು ಪೆದ್ದು ಮಾತಿನಲೂ ಪ್ರಬುದ್ಧೆ ನೀ.ತಿದ್ದಿ ಬುದ್ಧಿ ಹೇಳೋ ತಿಳುವಳಿಕೆಯಲಿ ಬುದ್ಧೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದಿಂದ 2021 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ (ರಿ)ಮಕ್ಕಳ ಮಂದಾರ ಬಳಗ ಸಹಯೋಗದಲ್ಲಿ2021 ನೇ ಸಾಲಿನ ವಿವಿಧ ಐದು ವಿಭಾಗಗಳ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 1. ಡಾ.ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪುರಸ್ಕಾರ ರಾಜ್ಯದ ಅಂಗವಿಕಲ ಮಕ್ಕಳ ಶಿಕ್ಷಣ , ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲಾಗಿದೆ. ಸಂಬಂಧಿಸಿದ ತಮ್ಮ ಸೇವಾ ವಿವರಗಳನ್ನು ಪಿಡಿ ಎಪ್ ಕಳುಹಿಸಲು ಕೋರಿದೆ. Makkalamandara@gmail.com 2 .”ಮಕ್ಕಳ ಮಂದಾರ ರಾಜ್ಯ ಪ್ರಶಸ್ತಿ” ಪುರಸ್ಕಾರಕ್ಕೆ ಅರ್ಜಿ ಆಹ್ವಾನ 21 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉತ್ತರ ಪುಸ್ತಕ ಪರಿಚಯ: ಪೂಜಾ ಮಂಗಳೂರು

ಮನಸ್ಸನ್ನು ಕಾಡಿಸುವ ಪ್ರಶ್ನೆಗಳು ಬದುಕಲ್ಲಿ ಬಂದಾಗ “ಉತ್ತರ” ದ ಮೂಲವನ್ನು ಹುಡುಕುವ ನಿರ್ಧಾರವನ್ನು ಮನಸ್ಸು ಮಾಡುತ್ತದೆ. ಆ “ಉತ್ತರ”ಕ್ಕಾಗಿಯೇ ಸುಪ್ರೀತ್ ಕೆ.ಎನ್. ಅವರು ಈ ಕೃತಿಯನ್ನು ಆಧ್ಯಾತ್ಮದ ಬೇರೆ ಬೇರೆ ಆಯಾಮದಲ್ಲಿ ರಚಿಸಿದ್ದಾರೆ.ಕೆಲಸದ ಒತ್ತಡದ ಮಧ್ಯೆಯೂ ಈ ಪುಸ್ತಕವನ್ನು ಓದಿ ಕೆಳಗಿಟ್ಟಾಗ ಮನಸ್ಸು ಒಮ್ಮೆ ಅಧ್ಯಾತ್ಮದತ್ತ ವಾಲಿದ್ದೂ ನಿಜ.‌ ಇದರ ಮೊದಲು ಸುಪ್ರೀತ್ ಅವರ ಎಲ್ಲ ಬರವಣಿಗೆಯನ್ನು ಓದಿದ್ದೇನೆ. ಕಳೆದ ಬಾರಿ ಅವರು ಬರೆದ “ಸಾವು” ಕಾದಂಬರಿಯು ತುಂಬಾ ಕಾಡಿಸಿತ್ತು. ಈಗ “ಉತ್ತರ” ದ ಮೂಲಕ ಅವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ