ಬದುಕು ಮಾಯೆ: ಮಂಜುನಾಥ ಹೆಗಡೆ

ಪ್ರತಾಪ್ ಚೆಂಬರ್ ನಲ್ಲಿ ಕುಳಿತು ಮಂಕಾಗಿದ್ದ, ಆಗಷ್ಟೆ ಸುನಯನಾ ಜೊತೆ ಕೊನೆ ಬಾರಿ ಮಾತನಾಡಿದ್ದ. ಐದು ವರ್ಷಗಳ ಪ್ರೀತಿಗೆ ಕೊನೆಯ ಮಾತಿನೊಂದಿಗೆ ಪರದೆ ಎಳೆದಿದ್ದಳು ಅವಳು. ಪ್ರತಾಪ್ ನೊಂದಿದ್ದ, ಕೆಲಸಕ್ಕೆ ನಾಲ್ಕು ದಿನ ರಜಾ ಹಾಕಿ ಹೋಗಲು ತೀರ್ಮಾನಿಸಿ ರಜಾ ಅರ್ಜಿ ರೆಡಿಮಾಡುತ್ತಿದ್ದ. ಆಗ ನೀತಾ ಮೆ ಐ ಕಮಿನ್ ಎನ್ನುತ್ತ ಬಾಗಿಲು ತಳ್ಳಿ ನಗುತ್ತ ಬಂದಳು, ಆದರೇ ಪ್ರತಾಪ್ ಮುಖನೋಡಿ ಒಮ್ಮೆ ದಿಗಿಲಾಯಿತು, ಮೌನ ಆವರಿಸಿತು ಇಬ್ಬರ ನಡುವೆ. ಪ್ರತಾಪ್ ಟೇಬಲ್ ಮೇಲಿನ ಲೀವ್ ಲೆಟರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಿನ ಪಯಣ – ಭಾಗ 3: ಪಾರ್ಥಸಾರಥಿ ಎನ್  

ಇಲ್ಲಿಯವರೆಗೆ ಆಗ ವಿಚಿತ್ರ ಗಮನಿಸಿದೆ,  ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ  ನಾನು. ’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ ' … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹತ್ವ ಕಳೆದುಕೊಳ್ಳುತ್ತಿರುವ ಮಹಾತ್ಮರ ಜಯಂತಿಗಳು:  ಕೆ ಟಿ ಸೋಮಶೇಖರ ಹೊಳಲ್ಕೆರೆ.

ರಾಮನ ಆದರ್ಶ, ಹನುಮನ ಸೇವಾನಿಷ್ಟೆ, ಮಹಾವೀರನ ಅಹಿಂಸೆ, ಪ್ರಾಣಿದಯೆ, ಅಂಬೇಡ್ಕರವರ ಸ್ವಾಭಿಮಾನ, ಯೋಗ್ಯವಾದುದಕ್ಕಾಗಿ ಅಸದೃಶ ಹೋರಾಟ, ಅಕ್ಕನ ಸ್ವಾತಂತ್ರ್ಯಕ್ಕಾಗಿ ಅರಸೊತ್ತಿಗೆಯನ್ನು ದಿಕ್ಕರಿಸಿದ ದಿಟ್ಟತನ … ಆನುಭಾವ,  ಸ್ವಾಭಿಮಾನ, ಗಾಂಧೀಜಿಯ ಸತ್ಯ –  ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ?  ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ  ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ. " … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ಲಾಸ್ಟಿಕ್: ರೇಖ ಮಾಲುಗೋಡು.

ಕಾಯಿಲೆಯೇ ಏನೆಂದು ಗೊತ್ತಿಲ್ಲದೇ ಹೊಟ್ಟೆ ಉಬ್ಬರಿಸಿ ಅಡ್ಡಬಿದ್ದ ದನದಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ಪಶುವೈದ್ಯ ಎಂದು ಓದುವಾಗ ಮುಂದಿನ ದಿನಗಳಲ್ಲಿ ದನದ ಬದಲು ಮನುಷ್ಯ  ಎನ್ನುವ ಪದ ಬಂದರೆ ಆಶ್ಚರ್ಯವೇನಿಲ್ಲ. ಈಗ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕವರ್ಗಳದ್ದೇ ಸಾಮ್ರಜ್ಯ.ಪ್ಲಾಸ್ಟಿಕ್ ಪದ ಬಳಕೆಗೆ  ನಮ್ಮ ಕನ್ನಡದಲ್ಲಿ ಸುಲಭವಾಗಿ ಆಡುವಂತ ಪರ್ಯಾಯ ಪದವಿಲ್ಲ. ಆದ್ದರಿಂದ ಬೇರೆ ಆಂಗ್ಲ ಪದದ ತರವೇ ನಮ್ಮನ್ನು ನಾವು ಆಂಗ್ಲಪದಗಳಿಗೆ ಹೊಂದಿಸಿಕೊಂಡು ಬಿಟ್ಟಿದ್ದೇವೆ.  ನಮ್ಮ ಪರಿಸರ ಶುದ್ದವಾಗಿರಬೇಕೆಂದರೆ ನಾವೇ ಪ್ಲಾಸ್ಟಿಕ್ನ್ನುಆದಷ್ಟು ಕಡಿಮೆ ಮಾಡುತ್ತಾ ಹೋಗಬೇಕು.ನಮ್ಮ ಹಿಂದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ದಾನಾ ಮಾಂಝಿ ಮೂಲ : ವಿಶ್ವನಾಥ ಪ್ರಸಾದ ತಿವಾರಿ (ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ, ದಿಲ್ಲಿ)  ಬರೀ ದಾನಾ ಮಾಂಝಿಯದಲ್ಲ ಈ ದೈನ್ಯತೆಯ ಕಥೆ..! ಭ್ರಮೆಯಿರಲಿಲ್ಲ ‘ದಾನಾ’ನಿಗೆ ಇರಲಿಲ್ಲ ಯಾರಿಂದಲೂ ಆಸೆ ಇರಲಿಲ್ಲ ಯಾರ ಮೇಲೂ ಸಿಟ್ಟು ಭಾವನೆಗಳಿದ್ದವು, ವೇದನೆಗಳಿದ್ದವು ಸೋಲು ಇತ್ತು ಹಾಗೂ ಮೌನವೂ ದಾನಾ ತನ್ನ ಹೆಂಡತಿ ‘ಅಮಂಗ’ಳ  ಹೆಣವನ್ನು ಚಾಪೆಯಲ್ಲಿ ಸುತ್ತುವಾಗ ಭೂಮಿಯೂ ನಾಚಿ ನೀರು ನೀರಾಗಿ ಭೂಮಿಗಿಳಿದಿತ್ತು ತಲೆತಗ್ಗಿಸಿತ್ತು ಕಲ್ಲೂ ತನ್ನ ಕಲ್ಲೆದೆಯ ಮೇಲೆ ಕಲ್ಲು ಹೊತ್ತುಕೊಂಡಿತ್ತು ಅವಳ ನಿರ್ಜೀವ ದೇಹವನ್ನೆತ್ತಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಿಮಾಲಯವೆಂಬ ಸ್ವರ್ಗ (ಭಾಗ 1): ವೃಂದಾ ಸಂಗಮ್

ದೇಶ ನೋಡು ಅಥವಾ ಕೋಶ ಓದು ಅಂತಾರೆ. ಈಗೆಲ್ಲ ವರ್ಷಕ್ಕೊಂದು ಫಾರಿನ್ ಟ್ರಿಪ್ ಜಸ್ಟ ಕಾಮನ್ ಆಗಿದೆ. ಊರು ಸುತ್ತೋದು ಅಥವಾ ದೇಶ ಸುತ್ತೋದು ತುಂಬಾ ಅನುಭವಗಳನ್ನ ನೀಡುತ್ತವೆ ಅಂತನೇ ಈ ಮಾತು ಹಿರಿಯರು ಹೇಳುವುದು. ಈ ಅನುಭವಗಳನ್ನು ಪಡೆಯುವುದಕ್ಕಾಗಿಯೇ ಈಗಿನ ಕಾಲದವರಿಗಾಗಿ ಟ್ರೆಕ್ಕಿಂಗ್ ರಾಫ್ಟಿಂಗ ಎಲ್ಲಾ ಇವೆ. ಆದರೂ ಕೂಡಾ ಹಿಂದಿನ ಕಾಲದ ಪವಿತ್ರ ಯಾತ್ರೆಗಳೂ ಇನ್ನೂ ಚಾಲ್ತಿಯಲ್ಲಿವೆ. ಅಮರನಾಥ ಯಾತ್ರೆ ಮುಂತಾದವುಗಳಿಗೆ ಎಷ್ಠೋ ದಿನ ಕಾಯಬೇಕಾಗುತ್ತದೆ.  ಕಾಶೀಯಾತ್ರೆ ಎಂದರೆ ನೆನಪಾಗುವುದು, ತ್ರಿವೇಣಿಯವರು ತಮ್ಮ ಕಾಶೀಯಾತ್ರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಪ್ಪು ಹುಡುಗಿ: ಸುನೀತಾ ಕುಶಾಲನಗರ

     “ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ನಡುವೆ ಸಿಗುವ ಸುಳ್ಯದ ಸಮೀಪದ ಕಲ್ಲುಗುಂಡಿ ಎಂಬ ಸಣ್ಣಪೇಟೆಯಿಂದ ಒಂದಿಷ್ಟು ಊರೊಳಗೆ ಹೋದರೆ ಸಿಗುವ ಚೆಂಬು ಎಂಬ ಪುಟ್ಟ ಹಳ್ಳಿಯ ಹೊಸೂರು ಎಂಬಲ್ಲಿ ಕುಳಿತುಕೊಂಡು ಜಗತ್ತಿಗೆ ಪ್ರತಿಕ್ರಿಯಿಸುತ್ತಿರುವ ಶ್ರೀಮತಿ ಸಂಗೀತಾ ರವಿರಾಜ್ ಅವರಿಗೆ ಸಾಹಿತ್ಯವೆಂದರೆ ಒಂದು ರೀತಿಯ ಭರವಸೆ” ಎನ್ನುತ್ತಾರೆ ಬೆನ್ನುಡಿಸುತ್ತಾ ಡಾ|| ಪುರುಷೋತ್ತಮ ಬಿಳಿಮಲೆಯವರು.  ದಿಟ! ಬೆರಗುಗೊಳಿಸಿದ ಕಾಲ  ತಲ್ಲಣಗಳ ರಂಗಲ್ಲಿಯ ಚುಕ್ಕಿ ಉತ್ಸಾಹದ ಮೂಟೆ ಸಕ್ಕರೆಯ ಸಾಲು ಬಿತ್ತುತ್ತಾ ನಡೆಯುವೆನು ಹೆಜ್ಜೆ ಹಾಕಿ ಎಂಬ ಮೆಲುದನಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಾಪದ ನಾಗರಿಕನೂ, ಪಾಲಿಟಿಕ್ಸೂ…: ಪ್ರಸಾದ್ ಕೆ.

ಆಗ ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದೆ ಅನಿಸುತ್ತೆ.  ಆ ದಿನ ನಮ್ಮ ಶಾಲಾಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸ್ಥಳೀಯ ರಾಜಕಾರಣಿಯೊಬ್ಬರು ಬಂದಿದ್ದರು. ಉಡುಪಿ ಕ್ಷೇತ್ರದಲ್ಲಿ ತಕ್ಕಮಟ್ಟಿನ ಹೆಸರು ಮಾಡಿದ್ದ ರಾಜಕಾರಣಿ ಅವರು. ಪ್ರಾರ್ಥನೆ, ಉದ್ಘಾಟನೆ ಇತ್ಯಾದಿಗಳನ್ನು ಮುಗಿಸಿ ಅಧ್ಯಕ್ಷೀಯ ಭಾಷಣವು ಶುರುವಾಯಿತು ನೋಡಿ. ಅಚ್ಚರಿಯೆಂದರೆ ಆ ವಯಸ್ಸಿನಲ್ಲೂ ನಾನು ಭಾಷಣಗಳನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ತೀರಾ ನೀರಸವಾಗಿದ್ದ ಉದಾಹರಣೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಭಾಷಣಗಳು ನನಗೆ ಬೋರುಹುಟ್ಟಿಸುತ್ತಿರಲಿಲ್ಲ. ಹೀಗೆ ವೇದಿಕೆಯಲ್ಲಿ ಮಾತನಾಡುತ್ತಲೇ “ನಾನು ಹಲವಾರು ಶಾಲೆಗಳಿಗೆ ವಿವಿಧ ಕಾರ್ಯಕ್ರಮಗಳಿಗೆಂದು ಹೋಗುತ್ತಿರುತ್ತೇನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ತ್ರೀತ್ವದ ನೆಲೆ ಬೆಲೆ: ನಾಗರೇಖಾ ಗಾಂವಕರ

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ?ಅದು ಆತನ ದೈಹಿಕ ಬಯಕೆ ಮಾತ್ರವೇ ಅಥವಾ ಮಾನಸಿಕ ಬೌದ್ಧಿಕ ಚಿಂತನೆಗಳಿಗೂ ಅನ್ವಯಿಸುತ್ತದೆಯೇ ಎಂದೆಲ್ಲಾ ಚಿಂತಿಸಿದರೆ ಮೂಡುವ ಉತ್ತರ ಸ್ಪಷ್ಟ. ಹೆಣ್ಣಿನ ಸಂವೇದನೆಗಳು ತಳಮೂಲದಲ್ಲಿ ಪಲ್ಲವಿಸುತ್ತವೆ. ಆಕೆ ವಿಸ್ತಾರಕ್ಕಿಂತ ವಿಶಾಲಕ್ಕಿಂತ ತನ್ನ ನೆಲೆಯಲ್ಲಿ ನೆಲದಲ್ಲಿ  ಆಳಕ್ಕಿಳಿದು ಬೇರೂರಲು ಬಯಸುತ್ತಾಳೆ. ಗಂಡಿನ ವಿಶಾಲ ಪ್ರಪಂಚದೆದುರು ಆಕೆ ಸಂಕುಚಿತವೆನಿಸಿದರೂ ಸ್ತ್ರೀ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

 ಕಾಯಕದ ಅನಿವಾರ್ಯತೆ ಮತ್ತು ಮಹತ್ವ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಕಾಯಕ ಎಂದರೆ ಕೆಲಸ. ಪ್ರತಿಯೊಬ್ಬರೂ ಕೆಲಸ ಮಾಡಬೇಕಿರುವುದು ಅನಿವಾರ್ಯ. ಬ್ರಹ್ಮಾಂಡದಲ್ಲಿರುವ ಸಕಲ ಕಾಯಗಳೂ ಚಲಿಸುತ್ತಾ ಸದಾ ಕೆಲಸದಲ್ಲಿ ನಿರತವಾಗಿವೆ. ಗ್ರಹ, ಉಪಗ್ರಹ, ನಕ್ಷತ್ರ ….. ಆಕಾಶ ಕಾಯಗಳು ಭ್ರಮಿಸುತ್ತಾ, ಪರಿಭ್ರಮಿಸುತ್ತಾ ಕಾರ್ಯನಿರ್ವಹಸುತ್ತಿವೆ. ಭೂಮಿ ಒಂದು ದಿನ ಭ್ರಮಿಸದಿದ್ದರೆ ಹಗಲು – ರಾತ್ರಿಗಳು ಆಗುವುದಿಲ್ಲ. ಪರಿಭ್ರಮಿಸದಿದ್ದರೆ ಋತುಮಾನಗಳು ಸಂಭವಿಸುವುದಿಲ್ಲ. ಆಗ ಬದುಕಾಗುವುದು ಅಯೋಮಯ! ನಮಗಷ್ಟೇ ಅಲ್ಲದೆ ಭೂಮಿಗೂ ಬರುವುದು ಆಪತ್ತು! ಭೂಮಿ ನಿತ್ಯ ಕಾಯಕದಲ್ಲಿ ತೊಡಗಿರುವುದರಿಂದ ಎಂದಿನಂತೆ ಬದುಕು ಸಾಗುವುದು.     … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ಮಾ ಕ್ಷಮಿಸು: ನಂದಾ ಹೆಗಡೆ

ದಿನಪತ್ರಿಕೆಯೊಂದಕ್ಕೆ ನನ್ನ ಅತ್ತೆಯವರ ಅಡಿಗೆ ರೆಸಿಪಿಯನ್ನ ಕಳುಹಿಸಿದ್ದೆ. ಆದರೆ ಈಗ ಆರು ತಿಂಗಳಿನಿಂದಲೂ ಪ್ರತೀ ವಾರ ಕಾಯುತ್ತಲೇ ಇದ್ದೇನೆ. ಆದರೆ ಅದು ಪ್ರಕಟವಾಗಲೇ ಇಲ್ಲ. 83 ವರ್ಷದ ನನ್ನ ಅತ್ತೆಯವರ ಜೀವನೋತ್ಸಾಹದ ಬಗ್ಗೆ ಚಿಕ್ಕ ಮಾಹಿತಿಯನ್ನೂ ಕೂಡ ಬರೆದು ಒಪ್ಪವಾಗಿಯೇ ಕಳುಹಿಸಿದ್ದೆ ಅಂದುಕೊಂಡಿದ್ದೆ. ಆದರೂ ಯಾಕೋ ಪ್ರಕಟವಾಗಲಿಲ್ಲ. . . . . . . . . ಅವರ ಮಾನದಂಡವೇನೋ. . . . . . . . ಅಂದುಕೊಳ್ಳುತ್ತಿರುವ ಹಾಗೇ ನನ್ನ ಉದ್ಯೋಗದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈಗ ಹಂಪಿಯೆಂದರೇ ?: ಬಿ. ಎಲ್. ಆನಂದ ಆರ್ಯ

ಹಂಪಿಯೆಂದು ಹೆಸರು ಕೇಳಿದ ಕೂಡಲೆ ನೆನಪಾಗೋದು ;   ಅಲ್ಲಿನ ಶಿಲ್ಪ-ಕೆತ್ತನೆಗಳು, ಬೆಟ್ಟ-ಗುಡ್ಡಗಳು, ದೇವಾಲಯಗಳು. ಇತ್ತೀಚಿಗೆ ನಾವು ಕಾಣುವ ಹಂಪಿಯ ಪರಿಚಯಿಸಲು ಪ್ರಯತ್ನಿಸುವೆ.  ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹೀಗಾಗಿ ಸುಮಾರು 30 ಚದರ ಕೀ. ಮೀ. ನಷ್ಟು ಈಗಲೂ ವ್ಯಾಪಕವಾದ ಗುಡಿಗುಂಡಾರ, ಶಿಲ್ಪಕೆತ್ತನೆ, ಪುಷ್ಕರಣಿ, ಕೋಟೆಗಳ ಮಾರ್ದನಿಯಿದೆ. ಹಾಗೆಯೇ ಕನ್ನಡದಷ್ಟೆ ಇಂಗ್ಲೀಷ್ ಮಾತಾಡುವ ಹಾಗೂ ಪಾಶ್ಚತ್ಯ, ಭಾರತೀಯ ಸಂಸ್ಕೃತಿಗಳ ಮಹಾಸಂಗಮತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರ ಪ್ರಭಾವದಿಂದ ಅಲ್ಲಿನ ಜನರು ಕೃಷಿಯ ಹೊರತುಪಡಿಸಿ ವ್ಯಾಪಾರವಹಿವಾಟು ನಡೆಸಿ ನಿಶ್ಚಿಂತರಾಗಿ ಹೊಟ್ಟೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಿನ ಪಯಣ: ಬಾಗ – 2: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ನೆನಪಿನ ಪಯಣದ ಪ್ರಯೋಗ ಪ್ರಾರಂಭ:  ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.  ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ. ಜ್ಯೋತಿ ಆರಾಮವಾಗಿ ಅನ್ನುವಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮೌಲ್ಯ    ನೀ ಉಸಿರಾಡುವ ಗಾಳಿ ನಾ , ತಂಗಾಳಿಗೆ ನೀ ಕೊಡುವ ಮೌಲ್ಯ ನನಗಿಲ್ಲ….  ನಡೆದಾಡುವ ಹಾದಿ ನಾ, ಮೆಟ್ಟಿಗೆ ನೀ ನೀಡುವ ಮೌಲ್ಯ ನನಗಿಲ್ಲ …..  ಬಾಯಾರಿದಾಗ ಕುಡಿವ ಜಲ ನಾ, ಅದರ ನಡುವೆ ತೇಲಾಡುವ ಮಂಜುಗಡ್ಡೆಗಿರುವ ಮೌಲ್ಯ ನನಗಿಲ್ಲ…  ದಣಿದಾಗ ಸುಡುಬಿಸಿಲಲ್ಲಿ ಆಶ್ರಯಿಸುವ ಮರ ನಾ, ನೆರಳಿಗಿರುವ ಮೌಲ್ಯ ನನಗಿಲ್ಲ…..  ಭಾವನೆಗಳನ್ನು ಬೆಸೆದು ಹರವಿ  ಕೊನೆಗೂ  ಒಂದು ಕವನವಾಗುವೆ ನಾ, ಅದ ಬರೆಯುವ ಹಾಳೆಗಿರುವ ಮೌಲ್ಯ ನನಗಿಲ್ಲ….  ಗೀಚುವ ಲೇಖನಿಗಿದೆ ಬೆಲೆ, ಪಾಪ!!ಕೈಗಳಿಗೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಾಯ್ತನ ಮತ್ತು ಹೆಣ್ಣು: ನಾಗರೇಖಾ ಗಾಂವಕರ

ಅದುರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶ ದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣುಇಟ್ಟು ಮಾರುತ್ತಿದ್ದರು.ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿಕೊಡುತ್ತಿದ್ದರೆ ತಂದೆ ಗಿರಾಕಿಗಳ ಕಡೆಗಮನವಿಟ್ಟು  ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ  ನನಗಾಗ ಆತನಿಗಿಂತ ಸಮರ್ಥಳಾಗಿ ಕಂಡಿದ್ದಳು. ಹೌದು. ಏಕಕಾಲಕ್ಕೆ ಅಪಕರ್ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹನ್ನೊಂದು ದಿನಗಳ ವನವಾಸ (ಕೊನೆಯ ಭಾಗ): ಪ್ರಸಾದ್ ಕೆ.

ಇಲ್ಲಿಯವರೆಗೆ ಇವೆಲ್ಲವೂ ಕಮ್ಮಿಯೆಂಬಂತೆ ಜೂಲಿಯಾನಳ ಹೆಜ್ಜೆಹೆಜ್ಜೆಗೂ ಅಪಾಯಗಳಿದ್ದವು. ನದಿಯ ಬದಿಯಲ್ಲಿ ನಡೆಯುತ್ತಿದ್ದರೆ ಅಪಾಯಕಾರಿ ಸ್ಟಿಂಗ್ ರೇಗಳಿಂದ ಮತ್ತು ನೋಡಲು ಮೊಸಳೆಗಳಂತಿರುವ ಕಾಯ್ಮನ್ ಗಳಿಂದ ರಕ್ಷಿಸಿಕೊಂಡು ನಡೆಯಬೇಕಾಗಿತ್ತು. ಇನ್ನು ಕಾಲ್ನಡಿಗೆಯು ನಿಧಾನವಾಗುತ್ತಿದೆ ಎಂದು ಅರಿವಾದಾಗಲೆಲ್ಲಾ ಆಗಾಗ ಈಜುತ್ತಲೂ ಇದ್ದುದರಿಂದ ಜೂಲಿಯಾನಳ ಬೆನ್ನಿನ ಚರ್ಮವು ಸೂರ್ಯನ ಬಿಸಿಲಿಗೆ ಸುಟ್ಟಂತಾಗಿ ಬಿಳಿಚಿಕೊಂಡಿತ್ತು. ಕೆಂಡ ಸುರಿದಂತೆ ನೋವಿನಿಂದ ಉರಿಯುತ್ತಿದ್ದ ತನ್ನ ಬೆನ್ನನ್ನು ಮೆಲ್ಲನೆ ಮುಟ್ಟಿ ನೋಡಿದಾಗ ಅವಳ ಬೆರಳುಗಳಿಗೆ ಸೋಕಿದ್ದು ರಕ್ತ. ಇನ್ನು ಮರದ ದಿಮ್ಮಿಗಳೂ ಕೂಡ ನದಿಯಲ್ಲಿ ತೇಲುತ್ತಿದ್ದರಿಂದ ಅವುಗಳಿಗೆ ಢಿಕ್ಕಿಯಾಗದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

2016ರ ಪಾರಿಸಾರಿಕ ಯಶೋಗಾಥೆಗಳು: ಅಖಿಲೇಶ್ ಚಿಪ್ಪಳಿ

ವರುಷಗಳು ಉರುಳಿ ಹೊಸ ವರ್ಷಗಳು ಬರುತ್ತಲೇ ಇರುತ್ತವೆ. ಕಾಲ ಯಾರಿಗೂ ಕಾಯುವುದಿಲ್ಲ ಹಾಗೂ ಉಚಿತವಾಗಿ ದೊರಕುವ ಸಮಯಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಇಪ್ಪತೊಂದನೇ ಶತಮಾನದಲ್ಲಿ 16 ವರುಷಗಳು ಕಳೆದುಹೋದವು. ವಿವಿಧ ಕಾರಣಗಳಿಂದಾಗಿ ಕೆಲವು ದೇಶಗಳ ಜಿಡಿಪಿಯಲ್ಲಿ ಹೆಚ್ಚಳವಾದರೆ, ಹಲವು ದೇಶಗಳ ಜಿಡಿಪಿ ರೇಖೆ ಕೆಳಮುಖವಾಗಿ ಹರಿಯಿತು. ಮಹತ್ವದ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿದವು. ಪರಿಸರವಾದಿಗಳನ್ನು ಅಭಿವೃದ್ಧಿ ವಿರೋಧಿಗಳು ಎಂದು ಬಿಂಬಿಸುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪತ್ತು ಈ ಭೂಮಿಯ ಎಲ್ಲಾ ಚರಾಚರಗಳಿಗೂ ಸಂಬಂಧಿಸಿದ್ದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ಮ ಅಂದ್ರೆ ಚಿಕ್ಕ ಚಿಕ್ಕ ಖುಷಿ : ಕೃಷ್ಣ ದೇವಾಂಗಮಠ

ಅಮ್ಮ ಎನ್ನುವವಳು ಜಗತ್ತಿನ ಅದಮ್ಯ ಜ್ಯೋತಿ ಚೇತನ. ಈ ಎರಡಕ್ಷರಗಳಲ್ಲಿ ಸೃಷ್ಟಿಯನ್ನೇ ಮೋಡಿಮಾಡಬಲ್ಲ ಅದೆಂಥದೋ ಶಕ್ತಿ ಇದೆ. ಆ ಶಕ್ತಿ ಅದರ ಉಚ್ಚಾರಣೆಯಿಂದ ಬಂದದ್ದೋ ಅಥವಾ ಆ ಪದದ ಹುಟ್ಟಿನಿಂದ ಬಂದದ್ದೊ ತಿಳಿಯದು ಆದರೆ ಆ ಪದಕ್ಕೆ ಶೋಭೆಯಂತಿರುವ ಆ  ಹೆಣ್ಣು ಮಾತ್ರ ಮಮತೆ, ಪ್ರೀತಿ, ಸಹನೆ, ಕರುಣೆ ಇಂಥ ಹೇಳಲು ಅಸಾಧ್ಯವಾದ ಗುಣ ಭೂಷಿತೆ. ಜಗತ್ತಿನ ಎಲ್ಲರೂ ಇದನ್ನು ಕಂಡುಂಡವರೇ ! ಇವುಗಳೇ ನಮಗೆ ಅವಳನ್ನು ದೈವ ಸ್ವರೂಪಿ ಎನ್ನಲು ಪ್ರೇರಕ ಮತ್ತು ಅಮ್ಮ ಎನ್ನುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ