ಲಾಸ್ಟ್ ಬೇಂಚ್: ಪದ್ಮಾ ಭಟ್


ಲೇ ಮಚ್ಚ ಇವತ್ತಾದ್ರೂ ಬೇಗ ಕ್ಲಾಸಿಗೆ ಹೋಗೋಣ  ಇಲ್ಲಾಂದ್ರೆ ಹಿಂದಿನ ಬೇಂಚಿನಲ್ಲಿ ಯಾರಾದ್ರೂ ಕೂತ್ಕೊಂಡ್ ಬಿಡ್ತಾರೆ.. ಆಮೇಲೆ ದಿನವಿಡೀ ಮುಂದಿನ ಬೇಂಚೆ ಗತಿ.. ಎಂದು ಆತ ಹೇಳುತ್ತಿದ್ದ.. ಅರೇ! ಹಿಂದಿನ ಬೇಂಚಿಗೆ ಇಷ್ಟೆಲ್ಲಾ ಕಾಂಫೀಟೇಶನ್ನಾ? ಎಂದು ಅಂದ್ಕೋಬೇಡಿ ಕಾಲೇಜಿನಲ್ಲಿ ಯಾವಾಗಲೂ ಮುಂದಿನ ಬೇಂಚಿಗಿಂತ ಹಿಂದಿನ ಬೇಂಚಿಗೆ, ಕಾಂಫೀಟೇಶನ್ ಜಾಸ್ತಿ.. ಇಷ್ಟವಿಲ್ಲದ ಪ್ರೊಫೆಸರ್ ಪಾಠವನ್ನು ಮುಂದಿನ ಬೇಂಚಿನಲ್ಲಿ ಕೂತರೆ ಕಷ್ಟಪಟ್ಟು ಕೇಳಲೇಬೇಕಾಗುತ್ತದೆ. ಆದರೆ ಹಿಂದಿನ ಬೇಂಚು ಎನ್ನುವುದು ಒಂಥರಾ ಮನೆ ಇದ್ದಂಗೆ, ಡೆಸ್ಕಿನ ಒಳಗೆ ಪತ್ತೇದಾರಿ ಕಾದಂಬರಿಯನ್ನು ಓದಬಹುದು, ಪಾಠ ಇಷ್ಟವಾಗಿಲ್ಲ ಅಂದ್ರೆ ಅಲ್ಲೇ ಸಣ್ಣಗೆ ಕಣ್‌ಬಿಟ್ಟು ನಿದ್ರೆಯನ್ನೂ ಕೂಡ ಮಾಡಬಹುದು.. ಹಾಗಂತ ಮುಂದಿನ ಬೇಂಚಿನವರೆಂದರೆ ಸಾಚಾಗಳೇನಲ್ಲ.. ಪಾಠ ಕೇಳಿದಂತೆ ಇಡೀ ದಿನವೂ ನಟಿಸುತ್ತಿರೋದೇ ಅವರ ಕೆಲಸ.. ಹೇಗೂ ಮುಂದಿನ ಬೇಂಚಿನವರು ಬುದ್ದಿವಂತರೆಂಬ ಭ್ರಮೆಯಲ್ಲಿ, ಉಪನ್ಯಾಸಕರು ಪ್ರಶ್ನೆಯನ್ನೂ ಕೇಳುವುದಿಲ್ಲವಲ್ಲ..ಅಲ್ಲಿಗೆ ಅವರು ಬಚಾವ್..

ಹಸಿವಾದಾಗ ಬ್ಯಾಗ್‌ನಲ್ಲಿದ್ದ ಮ್ಯಾಡ್‌ಆಂಗಲ್ಸ್ ತಿನ್ನೋಕೆ, ಪಕ್ಕದಲ್ಲಿರುವ ಸ್ನೇಹಿತರನ್ನು ರೇಗಿಸಲು, ಅರ್ಧ ಬರೆದಿಟ್ಟ ಕವನವನ್ನು ಪೂರ್ತಿಗೊಳಿಸಲು ಎಲ್ಲದಕ್ಕೂ ಹಿಂದಿನ ಬೇಂಚೇ ಸಹಕಾರಿ.. ಇನ್ನು ಉಪನ್ಯಾಸಕರು ಪ್ರಶ್ನೆಗಿಶ್ನೆ ಕೇಳಿದ್ರೂ ಏನೋ ಒಂದು ಹೇಳಿ ಬೀಸೋ ದೊಣ್ಣೆ ತಪ್ಪಿಸ್ಕೋಳ್ಳೋಕೂ ಗೊತ್ತಿರೋ ಹಿಂದಿನ ಬೇಂಚಿನವರು ಭಯಂಕರ ಬ್ರಿಲಿಯಂಟ್.. ಮುಂದಿನ ಬೇಂಚಿನವರು ಪಾಠಕೇಳೋದ್ ಒಂದ್ ಬಿಟ್ರೆ ಇನ್ನೇನನ್ನೂ ಮಾಡೋದಿಕ್ಕಾಗೋದಿಲ್ಲ..ಆದರೆ ಹಿಂದಿನ ಬೇಂಚಿನಲ್ಲಿ ಕೂತಿರುವವರು, ಪಾಠಬೇಸರವಾದಾಗ ಚಿತ್ರಕಲಾವಿದರಾಗುತ್ತಾರೆ.. ಕವಿಗಳಾಗುತ್ತಾರೆ..ಹೊಸ ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತಾರೆಂದರೆ ತಪ್ಪಿಲ್ಲ..ಹಿಂದಿನ ಬೇಂಚಿನಲ್ಲಿ ಕೂರುವವರು ದಡ್ಡರೆಂಬ ಮಾತನ್ನು ತೆಗೆದು ಹಾಕಿ.

ಯಾರೋ ಮಾತನಾಡಿದರೂ ಹಿಂದಿನ ಬೇಂಚಿನವರನ್ನೇ ಮೊದಲು ಎಬ್ಬಿಸುವುದು.. ಪ್ರಶ್ನೆಗಳೆಂದು ಬಂದಾಗಲೂ ಅವರನ್ನೇ ಮೊದಲು ಕೇಳುವುದು ಒಂಥರಾ ಸಾಮಾನ್ಯವೇ..ಹಿಂದೆ ಕೂತು ಲೆಕ್ಚರರ್ಸ್ ಗೆ ಕಾಮೆಂಟ್ ಹಾಕೋದೂ ಆಫ್ ದಿ ರೆಕಾರ್ಡ್ ಎಲ್ರಿಗೂ ಗೊತ್ತಿರೋ ವಿಷಯಾನೇ ಸರಿ..ಆದರೆ ಮುಂದೆ ಮೊದಲನೇ ಬೇಂಚಿನಲ್ಲಿ ಕೂರುತ್ತಾರಲ್ಲ.. ಅವರು ಯಾರಿಗೂ ಗೊತ್ತಾಗದಂತೇ ಚಾಕೋಲೇಟ್ ಜಗಿಯುತ್ತಾರೆ, ಬಾಹ್ಯವಾಗಿ ಮುಂದೆ ಕೂತಿದ್ದರೂ, ಮನಸ್ಸೆಲ್ಲ ಬೇರೇ ಎಲ್ಲೋ ಹರಿಸುತ್ತಿರುತ್ತಾರೆ.. ಈ ಲೆಕ್ಚರರ್ ಚನ್ನಾಗಿದ್ದಾರಲ್ವಾ ಎಂದೂ ಕೆಲವರು  ಅಂದುಕೊಳ್ಳುವುದೂ ಹೌದು..
ಹುಶಾರಿಲ್ಲ ಅಂದ್ರೆ ರೆಸ್ಟ್ ತೆಗೆದುಕೊಳ್ಳಲು, ಮಾಹಿತಿಪೂರ್ಣ ಲೇಖನ ಓದಲು, ಯಾವುದೋ ಪೇಪರಿನ ಪದಬಂಧ ತುಂಬಲು ಎಲ್ಲದಕ್ಕೂ ಹಿಂದಿನ ಬೇಂಚೇ ಸಪೋರ್ಟಿವ್. ಕ್ಲಾಸಿನಲ್ಲೇ ಇರುವ ಕ್ರಶ್ ನ್ನು ಮುಂದೆ ಕೂತು ಪದೇ ಪದೇ ಹಿಂದೆ ತಿರುಗಿ ನೋಡುವುದಕ್ಕಿಂತ, ಹಿಂದೆ ಕೂತರೆ ಎಲ್ಲರನ್ನೂ ನೋಡಬಹುದು.. ಮಹಿಂದಿನ ಬೇಂಚಿಗೂ ಎಷ್ಟೋ ವಿಷಗಳು ಗೊತ್ತು.. ಬೇಸರವಾದಾಗಲೂ ಅದು ಜೊತೆಗಿರುತ್ತದೆ. ಖುಷಿಯಲ್ಲಿಯೂ ಜೊತೆಗಿರುತ್ತದೆ. .ನೆನಪುಗಳ ಲೋಕಕ್ಕೆ ಹೋಗಲೂ ಸಹಕರಿಸುತ್ತದೆ.. ಇಷ್ಟೆಲ್ಲಾ ಉಪಯೋಗವಾಗಿರುವ ಹಿಂದಿನ ಬೇಂಚನ್ನು ಅಣುಕಿಸಿದರೆ, ಹಿಂದಿನ ಬೇಂಚಿನವರನ್ನು ದಡ್ಡರೆಂದು ಕರೆದರೆ..       ಹುಶಾರ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x