ಆಲಾಪ: ಡಾ. ವಿಶ್ವನಾಥ ಎನ್ ನೇರಳಕಟ್ಟೆ
“ಇನ್ನೂ ಇಪ್ಪತ್ತು ನಿಮಿಷ ಆಗಬಹುದಂತೆ ಅವರು ಬರುವಾಗ” ಎಂದು ಮಣಿವಣ್ಣನ್ ಹೇಳಿದಾಗ ಸನಾತನಿ ಆಗಬಹುದು ಕಾಯುತ್ತೇನೆ ಎಂಬ ಂತೆ ತಲೆಯಾಡಿಸಿದಳು. ಹಾಗೆ ತಲೆಯಾಡಿಸದೆ ಬೇರೆ ದಾರಿ ಅವಳಿಗಿರಲಿಲ್ಲ. ನಿಜವಾಗಿಯೂ ಸಲ್ಲಾಪ್ನ ಈ ಸ್ಟುಡಿಯೋಗೆ ಬರುವ ಇಚ್ಛೆ ಅವಳಿಗಿರಲಿಲ್ಲ. ಆದರೆ ಸಂಪಾದಕರು “ಒಂದೆರಡು ಸಲ ಅವನ ಸಂದರ್ಶನ ಮಾಡಿದ್ದೀಯಲ್ಲ. ನೀನೇ ಹೋಗು. ನಿನ್ನ ಜೊತೆ ಈಗಾಗಲೇ ಮಾತನಾಡಿದ್ದಾನೆ. ಏನಾದರೂ ಮುಕ್ತವಾಗಿ ಮಾತನಾಡಿದರೆ ನಾಳೆಯ ದಿನ ನಮ್ಮ ಪತ್ರಿಕೆಗೆ ಅದುವೇ ಮುಖ್ಯ ಕಂಟೆ ಂಟ್ ಆಗುತ್ತದೆ” ಎಂದಿದ್ದರು. ಅವರ ಮಾತನ್ನು … Read more