ನಾಟಕ “ಪುಲಪೇಡಿ”: ನಾಗಸಿಂಹ ಜಿ ರಾವ್
ಸಿಂಹಾವಲೋಕನ ೨ ‘ಪುಲಪೇಡಿ’ ನಾಟಕವು ಕೇವಲ ಒಂದು ರಂಗ ಪ್ರದರ್ಶನವಾಗಿರದೆ, ಕೇರಳದ ಒಂದು ಕಾಲದ ಅನಿಷ್ಟ ಸಾಮಾಜಿಕ ಪದ್ಧತಿಯಾದ ‘ಪುಲಪೇಡಿ’ಯನ್ನು ತೆರೆದಿಡುವ ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸುವ ಜೊತೆಗೆ, ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯಾಗಿ ಎದ್ದು ಕಾಣುತ್ತದೆ. ಲಿಂಗದೇವರು ಹಳೆಮನೆಯವರ ರಚನೆಯಾದ ಈ ಕೃತಿಯನ್ನು ರಮೇಶ್ರವರ ನಿರ್ದೇಶನದಲ್ಲಿ ರಂಗದ ಮೇಲೆ ತರುವಾಗ, ನಾನು ಶೋಷಿತ ವರ್ಗದ ಯುವಕನ ಪಾತ್ರವನ್ನು ನಿರ್ವಹಿಸಿದ ಅನುಭವವು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿದಿದೆ. … Read more