ನಾವು ಮತ್ತು ನಮ್ಮ ಸ್ವಭಾವಗಳು: ಅನಿತಾ ನರೇಶ್ ಮಂಚಿ

             ನಮ್ಮ ಹಟ್ಟಿಯಲ್ಲೆರಡು ಎಮ್ಮೆಗಳಿದ್ದವು.  ಮೇವು ಹಾಕುವಾಗ ಹುಲ್ಲಿನ ಕಂತೆಯನ್ನು ಎರಡು ಪಾಲು ಮಾಡಿ ಸಮಾನವಾಗಿ ಹಂಚಿ ಹಾಕಲಾಗುತ್ತಿತ್ತು. ಆ ಎಮ್ಮೆಗಳು ತಮ್ಮ ಪಾಲಿನ  ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಬದಲಿಗೆ ತಮ್ಮದಲ್ಲದ ಮೇವಿನ ರಾಶಿಯಿಂದ ಎಷ್ಟು ಎಟಕುತ್ತದೋ ಅಷ್ಟನ್ನು ಮೊದಲು ತಿನ್ನಲು ತೊಡಗುತ್ತಿದ್ದವು.  ಆಗಾಗ ಸಿಟ್ಟಿನಲ್ಲಿ ಕೊಂಬಿನಿಂದ ತಿವಿದುಕೊಳ್ಳುವುದು, ಹೊಳ್ಳೆಯರಳಿಸಿ ಉಸಿರು ಬಿಡುವುದು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದವು. ಒಂದು ಹುಲ್ಲಿನ ಚೂರೂ ಉಳಿಯದಂತೆ ತಿಂದರೂ ತಮಗೇನೋ ಕಮ್ಮಿ … Read more

” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)

  (ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ … Read more

ಬಡವರ ನಿರ್ಮೂಲನೆಯೋ, ಬಡತನದ ನಿರ್ಮೂಲನೆಯೋ !?: ಆಶಿಕ್ ಮುಲ್ಕಿ

(ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿತ್ತಿವೆ.)  ಹೌದು! ಇತ್ತೀಚಿನ ಪರಿಸ್ಥಿತಿ ನೋಡುವಾಗ ಇಂತಹಾ ಒಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ದಿನ ನಿತ್ಯ ಒಂದೊತ್ತು ಊಟ ಇಲ್ಲದೆ ಕಣ್ಣೀರಿಟ್ಟು ಜೀವನ ‘ಕಳೆಯುವ’ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲಾ. … Read more

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 1): ಅಖಿಲೇಶ್ ಚಿಪ್ಪಳಿ

(ವಾಸ್ತವಿಕ ನೆಲೆಗಟ್ಟಿನ ನೋಟ) ಈ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಹಾಗೂ ನಿರ್ಲಕ್ಷಿತ ಸಮಸ್ಯೆಯೆಂದರೆ ವಾತಾವರಣ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ. 18ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಎಣೆಯಿಲ್ಲದ ಅರಣ್ಯ ನಾಶ ಇದಕ್ಕೆ ಮೂಲ ಕಾರಣ. ಇದಕ್ಕೆ ಮನುಷ್ಯನೇ ನೇರ ಕಾರಣವಾಗಿದ್ದಾನೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸತ್ಯ. ಪ್ರಪಂಚದ ಬಹುಪಾಲು ಜನ “ಹವಾಮಾನ ವೈಪರೀತ್ಯ”ದ ಹಾಗೂ ಅದರ ಫಲಿತಾಂಶದ ಕುರಿತು ಅವಜ್ಞೆ ಹೊಂದಿದ್ದಾರೆ. ಸಾಮೂಹಿಕವಾಗಿ ನಿರ್ಮಿಸಿದ ಈ ಸಮಸ್ಯೆಯನ್ನು ಒಬ್ಬರಿಂದ … Read more

ನನ್ನ ಪ್ಯಾರಂಡ್ ಲೌಲಿ…: ಮಂಜುಳ ಎಸ್.

                 ಘಮ್ಮೆನ್ನುವ ಹಸಿ ಮೈಯ್ಯ ವಾಸನೆಯಿಂದ ಆಗ ತಾನೆ ಮಿಂದು ಎದ್ದಿದ್ದೆ, ಮಣ್ಣಿನ ಗೋಡೆಗೆ ಮೆತ್ತಿಸಿದ್ದ ಕನ್ನಡಿ ಮುಂದೆ ನಿಂತು, ಮುಖವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ, ಕೀವುಗಟ್ಟಿದ ಮೊಡವೆಗಳೊಂದಿಗೆ ಮಾತಾಡುತ್ತಿದ್ದೆ. ಕಪ್ಪು ಚರ್ಮವನ್ನು ಬಿಳಿಯಾಗಿಸುವ ಕನಸು ಕಾಣುತ್ತಿದ್ದೆ. ಆಗಾಗ ಮಡಕೆತಳ ಎಂದು ಛೇಡಿಸುವ ಗೆಳತಿಯರ ಮಾತು, ಒಮೊಮ್ಮೆ ನಾನೇ ನಿಂಗೆ ಗತಿ ಕಣೇ ಎಂದು ರೇಗಿಸುವ ಮುವತ್ತೆರಡರ ಸೋದರ ಮಾವನ ಮಾತು, ನನ್ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು. ಶಾಲೆಯಲ್ಲಿ … Read more

ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

ಮೌಢ್ಯತೆ,,, ಯಾವುದೋ ದಶಕಗಳಾಚೆ ಜುಟ್ಟು  ಜನಿವಾರಗಳ ಧರಿಸಿ ಅರೆಬೆತ್ತಲೆಯಲಿ ಕಾಯಕವಿರದೇ ಮಂತ್ರ ಜಪಿಸುತಿದ್ದವರೆಲ್ಲ ಇಂದು ಮೆತ್ತಗಾಗಿರಬಹುದು,,             ಆದರೆ, ಅವರು ಕಲಿಸಿದ ಹೀನ ಪಾಠ ಮಾತ್ರ             ಹೊತ್ತಿ ಉರಿಯುತಿದೆ ಇಂದಿಗೂ;             ಉಳ್ಳವರು ಬಿಟ್ಟರೂ ಮಾನಸಿಕ ಕಾಯಿಲೆಯಂತೆ             ಜಾತೀಯತೆಯ ವಿಷ ಇವರಿಂದ ಹೊರಹೋಗುತ್ತಲೇ ಇಲ್ಲ,, ದೊಡ್ಡವರೆಂದೆನಿಸಿಕೊಂಡವರೆಲ್ಲ ಹೀಗೆ ಒಂದಿನ ಗೊತ್ತಿಲ್ಲದೇಯೇ ನನ್ನ ಒಳ ಕರೆದರು ಆತ್ಮೀಯತೆಯಲೇ ಮುಗುಳ್ನಕ್ಕು ಪ್ರಶ್ನಿಸಿಯೇ ಬಿಟ್ಟರು ನೀವು ಯಾವ … Read more

ನೀರೆಂಬ ಟಾನಿಕ್: ಪ್ರಶಸ್ತಿ

ಇವತ್ತಿನ ದಿನಪತ್ರಿಕೆಯಲ್ಲಿ ಜನಪ್ರಿಯ ನಟಿ ಪ್ರಿಯಾಮಣಿ ಅವರ ಸಂದರ್ಶನ ಓದುತ್ತಿದ್ದೆ. ನೀರೇ ನನ್ನ ಫಿಟ್ನೆಸ್ ಮೂಲ.ಚೆನ್ನಾಗಿ ನೀರು ಕುಡಿಯೋದ್ರಿಂದ ಫ್ಯಾಟ್ ಬರ್ನ್ ಆಗುತ್ತೆ. ಆರೋಗ್ಯವೂ ಚೆನ್ನಾಗಿರುತ್ತೆ ಎಂದು ಅವರು ಹೇಳ್ತಾ ಇದ್ದಿದ್ದನ್ನು ಓದುತ್ತಿದ್ದ ನನ್ನ ಮನಸ್ಸು "ನೀರಿನಿಂದ ಫ್ಯಾಟ್ ಬರ್ನ್" ಅನ್ನೋ ವಾಕ್ಯದಲ್ಲಿ ನಿಂತೇ ಹೋಯ್ತು. ಹೆಚ್ಚು ನೀರು ಕುಡಿಯೋದ್ರಿಂದ ದೇಹದ ಕಷ್ಮಲಗಳ ಹೊರಹಾಕೋ ಪ್ರಕ್ರಿಯೆಗೆ ಸಹಾಯವಾಗಿ ದೇಹ ಆರೋಗ್ಯಕರವಾಗುತ್ತೆ ಅಂತ ಬೇರೆಡೆಯೂ ಓದಿದ್ದರೂ ಈ ಫ್ಯಾಟ್ ಬರ್ನಿನ ಸತ್ಯಾಸತ್ಯತೆ ಪರೀಕ್ಷಿಸಲೇ ಬೇಕು ಮತ್ತು ಹೆಚ್ಚು ನೀರು … Read more

ಹೋ … ಎನು….? ಪುಸ್ತಕ ಪರಿಚಯ: ಹೆಚ್. ಎಸ್. ಅರುಣ್ ಕುಮಾರ್

"ಅನಿತಾ ನರೇಶ್ ಮಂಚಿ"  ಉದಯೋನ್ಮುಖ ಲೇಖಕಿಯ ಹೋ ….. ಎನು…? ಲಘು ಬರಹಗಳ ಸಂಕಲನ ಓದಿದೆ. ರಂಗಕರ್ಮಿ "ನಟರತ್ನಾಕರ ಡಾ . ಮಾಸ್ಟರ್ ಹಿರಣ್ಣಯ್ಯ " ಅವರ ಮುನ್ನುಡಿ "ರಾಮ್ ನರೇಶ ಮಂಚಿ " ರ ಮುಖಪುಟದ ಛಾಯಾಚಿತ್ರ ಅದ್ಬುತವಾಗಿದೆ.  ಒಟ್ಟು ೪೪ ಲಘು ಹಾಸ್ಯ ಲೇಖನಗಳನ್ನು ಹೊತ್ತ ಸುಂದರ ಮುದ್ರಣದ ಪುಸ್ತಕ. "ಅನಿತಾ ನರೇಶ್ ಮಂಚಿ"  ಯವರು ದಿನ ನಿತ್ಯದ ಅನುಭವಗಳಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ತುಂಬಾ ಸ್ವಾರಸ್ಯವಾಗಿ ಹೇಳುತ್ತಾರೆ . ಅವರ … Read more

ಮಾದಕ ವ್ಯಸನಿಗಳನ್ನು ನಿರ್ವಹಿಸುವಲ್ಲಿ ಪಾಲಕರ ಪಾತ್ರ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಜೀವಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುವ ಯಾವುದೇ ಸಂಯುಕ್ತ ಅಥವಾ ರಾಸಾಯನಿಕ ಪದಾರ್ಥವೇ ಮಾದಕವಸ್ತು. ಮಾದಕ ವಸ್ತುವು ನೇರವಾಗಿ ಮೆದುಳಿನ ಮೇಲೆ ಅಥವಾ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಮೇಲೆ, ಗ್ರಹಿಕೆಯ ಮೇಲೆ, ಪ್ರಜ್ಞಾವಸ್ಥೆಯ ಮೇಲೆ, ಭಾವನಾಸ್ಥಿತಿಯ ಮೇಲೆ ಪರಿಣಾಮವನ್ನು ಬೀರುವಂತಹುದು.ಅದನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿದ್ದು ಅದು ವ್ಯಸನಿಗೆ ಮತ್ತು ಸಮಾಜಕ್ಕೆ ಕೆಟ್ಟದ್ದನ್ನು ಉಂಟುಮಾಡುವ ಸಾಮಥ್ರ್ಯ ಪಡೆದಿದೆ. ಮಧ್ಯಸಾರ, ಕೆಫಿನ್, ಬಾರ್ಬಿಚುರೇಟ್ಸ್, ಟ್ರಾಂಕ್ವಿಲೈಸರ್ಸ, ಕೊಕೇನ್, ಮಾರ್ಫಿನ್, ಹೆರಾಯಿನ್, ಕೋಡೇನ್, ಅಫೀಮು, ಪಿತೆಡೈನ್, ಗಾಂಜಾ, ಚರಸ್, … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸಮಸ್ಯೆಗೆ ಹೋಜ ಸೂಚಿಸಿದ ಪರಿಹಾರ ಒಂದು ದಿನ ಹೋಜ ತನ್ನ ಪರಿಚಯದವನೊಬ್ಬನನ್ನು ರಸ್ತೆಯಲ್ಲಿ ಸಂಧಿಸಿದ. ಆ ಮನುಷ್ಯ ಚಿಂತಾಕ್ರಾಂತನಾಗಿದ್ದಂತೆ ಗೋಚರಿಸುತ್ತಿದ್ದದ್ದರಿಂದ ಹೋಜ ಅವನನ್ನು ಕಾರಣ ವಿಚಾರಿಸಿದ. “ನನಗೊಂದು ಭಯಾನಕ ಕನಸು ಬೀಳುತ್ತಿದೆ,” ವಿವರಿಸಿದ ಆತ, “ನನ್ನ ಮಂಚದ ಕೆಳಗೆ ಒಂದು ಪೆಡಂಭೂತವೊಂದು ಅಡಗಿ ಕುಳಿತಿರುವಂತೆ ಪ್ರತೀ ದಿನ ರಾತ್ರಿ ಕನಸು ಬೀಳುತ್ತಿದೆ. ಎದ್ದು ನೋಡಿದರೆ ಅಲ್ಲೇನೂ ಇರುವುದಿಲ್ಲ. ಎಂದೇ ನಾನೀಗ ವೈದ್ಯರ ಹತ್ತಿರ ಹೋಗುತ್ತಿದ್ದೇನೆ. ೧೦೦ ದಿನಾರ್‌ ಶುಲ್ಕ ಕೊಟ್ಟರೆ ಇದಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.” … Read more

ಸಾಮಾನ್ಯ ಜ್ಞಾನ (ವಾರ 85): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- 1.    1966ರಲ್ಲಿ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಕರ್ನಾಟಕದ ಸಂಗೀತ ವಿದೂಷಿ ಯಾರು? 2.    ಐ.ಎಫ್.ಸಿ.ಐ ನ ವಿಸ್ತೃತ ರೂಪವೇನು? 3.    ರಸಿಕ ಪುತ್ತಿಗೆ ಇದು ಯಾರ ಕಾವ್ಯನಾಮವಾಗಿದೆ? 4.    ಪಚ್‍ಮರ್ಹಿ ಗಿರಿಧಾಮ ಯಾವ ರಾಜ್ಯದಲ್ಲಿದೆ? 5.    1971ರಲ್ಲಿ ಶ್ರೀರಂಗ ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ? 6.    ಯಾವ ವರ್ಷವನ್ನು ಅಂತರಾಷ್ಟ್ರೀಯ ಮಹಿಳೆಯರ ವರ್ಷವನ್ನಾಗಿ ಆಚರಿಸಲಾಯಿತು? 7.    ವಾಟ್ಸನ್ ಮ್ಯೂಸಿಯಂ ಎಲ್ಲಿದೆ? 8.    ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ … Read more

ಭೂ ಕೊಳಕರ ವಶೀಲಿಬಾಜಿ!!!: ಅಖಿಲೇಶ್ ಚಿಪ್ಪಳಿ

(ಕಳೆದ 20 ಜಾಗತಿಕ ಹವಾಗುಣ ಶೃಂಗಗಳನ್ನು ವಿಫಲಗೊಳಿಸಿದ ಅಂತಾರಾಷ್ಟ್ರೀಯ ಕಂಪನಿಗಳ ಹುನ್ನಾರ ಜಗತ್ತಿನ ಹೆಚ್ಚಿನ ಜನರ ಅರಿವಿಗೆ ಬರಲಿಲ್ಲ. ಅತೀ ನಿರೀಕ್ಷಿತ 21ನೇ ಶೃಂಗ ಸಭೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹುನ್ನಾರವನ್ನು ನಡೆಸಿರುವ ಜಗತ್ತಿನ ಅತೀ ಪ್ರತಿಷ್ಟಿತ ಕಂಪನಿಗಳ ಕಾರ್ಯಯೋಜನೆಗಳೇನು? ಎಂಬುದನ್ನು ಬಿಂಬಿಸುವ ಲೇಖನವಿದು. ವಿಶ್ವನಾಯಕರು ಹೇಳಿದ್ದಷ್ಟನ್ನೇ ಸುದ್ಧಿ ಮಾಡುವ ಮಾಧ್ಯಮಗಳು, ಈ ಅಂತಾರಾಷ್ಟ್ರೀಯ ಬಂಡವಾಳಶಾಹಿಗಳ ಗುಪ್ತ ಕಾರ್ಯಸೂಚಿಗಳನ್ನು ಬಯಲು ಮಾಡುವುದರಲ್ಲಿ ವಿಫಲವಾಗುತ್ತಿವೆ ಎಂಬ ಸಂಗತಿ ಅತ್ಯಂತ ಖೇದಕರವಾದದು). ಈ ಪ್ರಪಂಚದ ಪರಿಸರದ, ಜೀವಜಾಲದ, ವಾತಾವರಣದ … Read more

ಹೊಸ ವಿದ್ಯೆಯ ಪ್ರವಚನ: ಫ್ಲಾಪಿಬಾಯ್

(ಹಿಂದಿನ ಸಂಚಿಕೆಯಿಂದ) ಬಾಬಾ.. ಬಾಬಾ.. ಓಡುತ್ತಾ ಬಂದ ಫ್ಲಾಪಿಬಾಯ್. ಲಗೋರಿಬಾಬಾ ಕೊನೆಗೂ ಬಹಳ ಕಷ್ಟಪಟ್ಟು ನೀವು ಹೇಳಿದ ವಿದ್ಯೆ ಬಗ್ಗೆ ಹಲವರಲ್ಲಿ ವಿಚಾರಿಸಿ ಅದು ಏನಂತ ತಿಳ್ಕೊಂಡ್ ಬಂದಿದ್ದೀನಿ. ನೀವು ಹೇಳಿದ ವಿದ್ಯೆ ಹೆಸರು ‘ರೇಕಿ’. ಅದು ಜಪಾನಿ ಭಾಷೆ ಪದ. ರೇ ಅಂದ್ರೆ ಬ್ರಹ್ಮಾಂಡ ಮತ್ತು ಕಿ ಅಂದ್ರೆ ಪ್ರಾಣಶಕ್ತಿ. ಸರಿ ತಾನೆ?” ಎಂದ ಖುಷಿಯಿಂದ. ಅದಕ್ಕೆ ಲಗೋರಿಬಾಬಾ, “ಶಭಾಶ್ ಫ್ಲಾಪಿ ನಾನು ಊಹಿಸಿದ್ದೆ ನೀನು ಹೇಳೇ ಹೇಳ್ತೀಯ ಅಂತಾ” ಎಂದು ನುಡಿದ ಮೆಚ್ಚುಗೆಯಿಂದ. “ಹೇಳ್ಕೊಡಿ … Read more

ಹೆಣ್ಣಿಗೆ ಯಾಕೆ ‘ವಿಧವೆ’ಯೆಂಬ ಹಣೆಪಟ್ಟಿ: ಬಾಬುರೆಡ್ಡಿ.ಕೆ.ಬಿ.

ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನವನ್ನು ನೀಡಲಾಗಿದೆ. ಹೆಣ್ಣನ್ನು ಭಾರತದಂತಹ ದೇಶದಲ್ಲಿ ಹೆಚ್ಚಾಗಿ ಗೌರವಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣಗಳಲ್ಲಿ  ಹೆಣ್ಣನ್ನು ಅತ್ಯಂತ ಗೌರವದಿಂದ ನೋಡಿರುವುದನ್ನು ನೋಡಬಹುದಾಗಿದೆ. ಹೆಣ್ಣನ್ನು ದೇಶದಲ್ಲಿ ದೇವರಿಗೆ ಹೋಲಿಸಲಾಗಿದೆ. ಮನುಷ್ಯ ಜನ್ಮವಾಘಬೇಕಾದರೆ ಮಹಿಳೆ ಪಾತ್ರ ಬಹಳ ಮುಖ್ಯವಾದುದಾಗಿದೆ. ಇಂತಹ ಸಂಧರ್ಭದಲ್ಲಿ ಮಹಿಳೆಯನ್ನು ಅತ್ಯಂತ ಕೀಳಾಗಿ ನೋಲು ಪ್ರಾರಂಬಿಸಿರುವುದು ಅವಮಾನಕರವಾದ ಸಂಗತಿಯಾಗಿದೆ. ಹೆಣ್ಣು ಎಂದ ತಕ್ಷಣ ಅವಳು ಹೀಗೇ ಇರಬೇಕು, ಅವಳು ಹಾಕುವ ಬಟ್ದಟೆಯಿಂದ ಹಿಡಿದು ಅವಳ ಜೀವನ ಪೂರ್ತಿಯಾಗಿ ಸ್ವತಂತ್ರ್ಯವಾಗಿ ಬದುಕಲು ಬಿಡುತ್ತಿಲ್ಲ … Read more

ಮೂವರ ಕವನಗಳು: ದಿವ್ಯ ಆಂಜನಪ್ಪ, ಪುನೀತ್, ದುರ್ಯೋಧನ (ರವೀಂದ್ರ ಕತ್ತಿ)

"ಇಂದು ನೆನ್ನೆಗೆ ನಾಳೆಯಾದವನು" ಮಿಣುಕು ಹುಳುಗಳು ಮಿನುಗಿ ಕರೆದಾವೊ ಅಗೋ, ಆಗೊಂದು ಈಗೊಂದು ಕತ್ತಲಿನೂರಿನೊಳು ಗುಡಿಸಲ ಅಂಚಿನೆದೆಯಲಿ ಇಣುಕಿ ಇಣುಕಿ ನೋಡಿವೆ ಪಿಳಿಪಿಳಿ ಕಣ್ಣುಗಳು ಅದೇನೋ ಹೊಳಪು,  ಅದೇನೋ ಹುರುಪು ಈ ಕಾಡಿನೂರಿನಲಿ  ಹೀಗೊಂದು ನಡುರಾತ್ರಿಯ  ಮಿಂಚಿನ ಬೆಳಕು ಕರೆದಿಹುದು  ಬಡವನ ನೆತ್ತಿಯ  ಕಣ್ಮಣಿಗಳ ಸೆಳೆಸೆಳೆದು ಅಂಧಕಾರವ ಮೆಟ್ಟಿ ನಿಂತಿದೆ ಅದೋ, ಆ ಮಣ್ಣಿನ ಹಣತೆ ಪಕ್ಕದೂರಿನ ಬೀದಿ ಬೀದಿಯ  ಕೊನೆಯ ತಿರುವುಗಳಲಿ ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ ಪಟ್ಟಣವೆಂಬೊ ಸಂತೆಯಲಿ ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ … Read more

Breakup ಆದಮೇಲೆ ಹುಡುಗರು: ಪ್ರಮೋದ ಶೇಖರ

ಹುಡುಗರು ಪ್ರೀತಿಯಲ್ಲಿ ಹುಚ್ಚರಂತೆ Behave ಮಾಡ್ತಾರೆ. ತುಂಬಾ ಜಾಸ್ತಿ ಪ್ರೀತಿಯಲ್ಲಿ ಮುಳುಗಿರುವ ಹುಡುಗರದಂತೂ ಬೇರೆನೇ ಲೋಕ. ಅವರ ನಡೆನುಡಿ ಅದರಲ್ಲೇನೂ ಮಜಾ ಇರುತ್ತದೆ. ಮುಖದಲ್ಲಿ ಸುಮ್ಮನೆ ನಗು ಮುಡುವುದು, ಚಿಕ್ಕ ವಿಷಯಗಳಿಗೇಲ್ಲ ಸಿಟ್ಟು ಮಾಡಿಕೊಳ್ಳೋದು, ಗಾಳಿಯಲ್ಲಿ ಚಿತ್ತಾರ ಬಿಡಿಸುವುದು ಅದರ ದೈನಂದಿನ ಕಾರ್ಯವಾಗಿರುತ್ತದೆ. ಕೆಲವರಿಗೆ ಒಳ್ಳೆಯ ಗುಣಗಳುಳ್ಳ ಹುಡುಗಿಯರು ಸಿಗುತ್ತಾರೆ, ಕೆಲವರಿಗೆ ಮುಗ್ಧ ಮನಸ್ಸಿನ ಹುಡುಗಿಯರು ಸಿಗುತ್ತಾರೆ, ಮತ್ತೆ ಕೆಲ ಹುಡುಗರಿಗೆ ಹಠ ಸಾಧಿಸುವ ಹುಡುಗಿಯರು ಗಂಟ್ಟು ಬೀಳುತ್ತಾರೆ. ಬೇರೆಬೇರೆ ಹುಡುಗಿರ ವಿಚಾರಗಳು Different ಆಗಿರುತ್ತವೆ, ಅವರು … Read more

ಐಚ್ಚಿಕಮು: ಪಾರ್ಥಸಾರಥಿ ಎನ್

ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು.  ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು.  ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು.  ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ  ’ಅವುನೂ ’ ಎನ್ನುತ್ತ ಇಳಿದುಹೋದ!,  ನಾನು ಸಹ ಬ್ಯಾಗ್ … Read more

ನವೆಂಬರ್ ಕನ್ನಡ ಮತ್ತು ನಾವು: ಪ್ರಶಸ್ತಿ

ನವೆಂಬರ್ ಕೊನೆಯಲ್ಲೊಂದು ವಾರ ಬೆಂದಕಾಳೂರಲ್ಲಿ ಕನ್ನಡ ಸಿನಿಮಾ ನೋಡೊ ಉಮೇದಲ್ಲಿ ಕನ್ನಡ ಥಿಯೇಟರೊಂದ ಹುಡುಕಿ ಹೊರಟಿದ್ದೆ. ಎದುರು ನೋಡಲು ಒಂದು ಕಿಂಡಿಯಷ್ಟು ಮಾತ್ರವೇ ಜಾಗ ಬಿಟ್ಟು ಉಳಿದೆಲ್ಲಾ ಭಾಗದಲ್ಲಿ ಕನ್ನಡದ ಧ್ವಜ ಚಿತ್ರಿಸಿದ್ದ ಆಟೋವೊಂದು ಎದುರಾಯ್ತು. ಆಟೋದಲ್ಲಿ ಕನ್ನಡ ಧ್ವಜ, ಬಸ್ಸಲ್ಲಿ ಜ್ಞಾನಪೀಠಿಗಳ ಚಿತ್ರ, ಕನ್ನಡ ಘೋಷವಾಕ್ಯಗಳ ನೋಡಿದ್ದೆ ನವೆಂಬರ್ ಆಚರಣೆಯ ಫಲವಾಗಿ. ಈ ತರದ ಡಿಸೈನೊಂದನ್ನು ನೋಡಿದ್ದು ಮೊದಲಾದ್ದರಿಂದ ಅದರದೊಂದು ಫೋಟೋ ತೆಗೆಯೋಣ ಅಂತ ಹೊರಟೆ. ತನ್ನ ಆಟೋ ಫೋಟೋದಲ್ಲಿ ಸೆರೆಯಾಗಿದ್ದನ್ನ ನೋಡಿ ನಾಚಿದ ಆಟೋದವ, … Read more

“ಕಣ್ತುಂಬ ನಿದ್ದೆಮಾಡಿ, ಸದಾ ಖುಷಿಯಾಗಿರಿ”: ಗೂಳೂರು ಚಂದ್ರು

ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ಸಮಾನಾವಾಗಿ ಕೊಟ್ಟಿದೆ.ಆ ಪ್ರಕೃತಿ ಕೊಟ್ಟಿರುವುದನೆಲ್ಲಾ ನಾವು ಸಮನಾಗೇ ಅನುಭವಿಸಬೇಕು,ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮಗೆ ಆಪತ್ತು.  ಪ್ರಕೃತಿದತ್ತವಾಗಿ ಮನುಷ್ಯನಿಗೆ ಸಿಕ್ಕಿರುವುದರಲ್ಲಿ 'ನಿದ್ದೆ'ಯು ಒಂದು.ಒಬ್ಬ ಮನುಷ್ಯ ಕನಿಷ್ಠ 7ರಿಂದ 8ಗಂಟೆ ನಿದ್ದೆ ಮಾಡಲೇಬೇಕು.  ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಅವನೆ ಕಾರಣನಾಗುತ್ತಾನೆ.ಈಗಿನ ಬ್ಯುಸಿ ಜೀವನದಲ್ಲಿ ನಿದ್ರೆಯನ್ನು ಕೆಲವರು ಮರೆತೆಬಿಟ್ಟಿದ್ದಾರೆ. ಈಗಿನ ಬಹುತೇಕರು ನಿದ್ದೆ ಮಾಡದೇ ಬಳಲುತ್ತಿದ್ದಾರೆ, ಒಂದಲ್ಲಾ ಒಂದು ಯೋಚನೆ, ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ನೀವು ಕೆಲವರನ್ನು ಗಮನಿಸಿರಬೇಕು ಸದಾ ಏನನ್ನೋ ಕಳೆದುಕೊಂಡವರಹಾಗೆ ಇರುತ್ತಾರೆ, ವೈಯುಕ್ತಿಕ … Read more

ಪ್ರಸ್ತುತ ಮತ್ತು ಭವಿಷ್ಯ: ಶ್ರೀಮಂತ್ ರಾಜೇಶ್ವರಿ ಯನಗುಂಟಿ

ಮನುಷ್ಯನ ಪ್ರಜ್ಞೆಯೆನ್ನುವುದು ಪ್ರಸ್ತುತ ಮತ್ತು ಭವಿಷ್ಯದ ಬುನಾದಿಯೆನ್ನಬಹುದೆನೊ. ಪ್ರಸ್ತುತದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಘಟನೆಗಳು ನಮ್ಮ ಈ ಪ್ರಜ್ಞೆಯ ಮೇಲೇ ಅವಲಂಬಿತವಾದದ್ದು. ಈ ಪ್ರಜ್ಞೆ ಸಹಜ ನೈಜತೆಯಿಂದ ಕೂಡಿದೆಯೋ ಅಥವ ಸೃಷ್ಟಿತ ನೈಜತೆಯಿಂದ ಕೂಡಿದೆಯೋ ಎನ್ನುವುದು ಭವಿಷ್ಯವನ್ನು ನಿರ್ಣಯಿಸುವ ಪ್ರಧಾನ ಅಂಶ. ಪ್ರಸ್ತುತದಲ್ಲಿ ಸಂಭವಿಸುತ್ತಿರುವ ಕಾರ್ಯಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಇದರ ಹಿಂದೆ ನನಗೇನೂ ಮನುಷ್ಯನ ಅಂಥಹ ಜಾಗೃತಿಯಿಂದ ಅಥವ ದೂರದೃಷ್ಟಿಯಿಂದ ಕೂಡಿದ ಪ್ರಜ್ಞೆ ಕೆಲಸ ಮಾಡುತ್ತಿಲ್ಲವೆನಿಸುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕ ರಂಗಗಳಲ್ಲಿ ತಲ್ಲಿನವಾಗಿರುವ ಮನುಷ್ಯನ ಪ್ರಜ್ಞೆ … Read more

“ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಅವನಿ…ವಸುಂಧರೆಯ ಚಿಗುರುಗಳ ಸಾಹಿತ್ಯಿಕ ಪಯಣ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿ ಅಂತರ್ಜಾಲ ಪಾಕ್ಷೀಕ ಪತ್ರಿಕೆ  (www.avani.uahs.net)   ಈ ವರ್ಷ ಅಂತರರಾಷ್ಟ್ರೀಯ ಮಣ್ಣು ವರ್ಷ ಇದರ ಪ್ರಯುಕ್ತ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿಗಳ ಅಂತರ್ಜಾಲ ಪತ್ರಿಕೆಯಾದ “ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಭಾಗವಹಿಸಲಿಚ್ಚಿಸುವವರು “ಮಣ್ಣು”(ಇದು ಕೇವಲ ಸಮಗ್ರ ವಿಷಯ: ಶೀರ್ಷಿಕೆಯ ಆಯ್ಕೆ ಲೇಖಕ/ಕವಿಯದ್ದು) ಈ ವಿಷಯದ ಮೇಲೆ ತಮ್ಮ ಕವನಗಳನ್ನು “ಅವನಿ”ಯ ಸಂಪಾದಕ ಮಂಡಳಿಗೆ ಜನವರಿ 25, … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

  ೧. ಧೂಳಿನಲ್ಲಿ ಹೋಜ ನಜ಼ರುದ್ದೀನ್‌ ಹೋಜನ ಹತ್ತಿರ ಒಂದು ಎಮ್ಮೆ ಇತ್ತು. ಅದರ ಕೊಂಬುಗಳ ನಡುವಿನ ಅಂತರ ಗಮನಾರ್ಹವಾಗಿ ದೊಡ್ಡದಾಗಿತ್ತು. ಆ ಕೊಂಬುಗಳ ನಡುವೆ ಕುಳಿತುಕೊಳ್ಳಬೇಕೆಂಬ ಪ್ರಬಲ ಅಪೇಕ್ಷೆ ಹೋಜನಿಗೆ ಆಗಾಗ್ಗೆ ಉಂಟಾಗುತ್ತಿದ್ದರೂ ಅಂತು ಮಾಡಲು ಧೈರ್ಯವಾಗುತ್ತಿರಲಿಲ್ಲ. ಒಂದು ದಿನ ಹೋಜ ಮನೆಯ ಅಂಗಳದಲ್ಲಿ ಏನೋ ಮಾಡುತ್ತಿದ್ದಾಗ ಆ ಎಮ್ಮೆ ಬಂದು ಅವನ ಹತ್ತಿರವೇ ಮಲಗಿತು. ಆದದ್ದಾಗಲಿ ಎಂಬ ಮೊಂಡ ಧೈರ್ಯದಿಂದ ಹೋಜ ಅದರ ಕೊಂಬುಗಳ ನಡುವೆ ಕುಳಿತು ಸಂಭ್ರಮದಿಂದ ಹೆಂಡತಿಗೆ ಹೇಳಿದ, “ನನಗೀಗ ಸಿಂಹಾಸನದ … Read more

ಸಾಮಾನ್ಯ ಜ್ಞಾನ (ವಾರ 84): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ ಹೆಸರೇನು? 2.    ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು? 3.    ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ? 4.    ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ ಹೆಸರೇನು? 5.    ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ ಯಾವುದು? 6.    ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು? 7.    ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ ಯಾವುದು? 8.    ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ … Read more

ಗುರುಶಾಪವೂ … ಲಘು ಬರಹವೂ..: ಅನಿತಾ ನರೇಶ್ ಮಂಚಿ

ಮೊಣ್ಣಪ್ಪ ಸರ್ ನ ಕ್ಲಾಸ್ ಎಂದರೆ ಯಾಕೋ ನಮಗೆಲ್ಲಾ ನಡುಕ. ಅವರ ಜೀವಶಾಸ್ತ್ರದ ಕ್ಲಾಸ್ ವಾರಕ್ಕೆರಡೇ ಪಿರಿಯೆಡ್ ಇದ್ದರೂ ಅದನ್ನು ನೆನೆಸಿಕೊಂಡರೆ ನಮಗೆಲ್ಲಾ ಹೆದರಿಕೆ. ಕ್ಲಾಸಿನೊಳಗೆ ಬರುವಾಗ ಚಾಕ್ಪೀಸಿನ ಡಬ್ಬ ಮತ್ತು ಡಸ್ಟರ್ ಮಾತ್ರ ತರುವ ಅವರು ಒಳ ನುಗ್ಗಿದೊಡನೇ ಕಣ್ಣಲ್ಲೇ ಅಟೆಂಡೆನ್ಸ್ ತೆಗೆದುಕೊಳ್ಳುತ್ತಿದ್ದರು. ಈಗಿನ ಸಿ ಸಿ ಕ್ಯಾಮೆರಾ ಅವರ ಕಣ್ಣೊಳಗೆ ಫಿಕ್ಸ್ ಆಗಿತ್ತೇನೋ.. ಆಫೀಸ್ ರೂಮಿಗೆ ಹೋಗಿಯೇ ನಮ್ಮೆಲ್ಲರ ಹಾಜರಿಯನ್ನು ಪುಸ್ತಕದೊಳಗೆ ಮಾರ್ಕ್ ಮಾಡ್ತಾ ಇದ್ದರು. ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದವರ ಅಟೆಂಡೆನ್ಸ್ ಹಾಕುವುದಿಲ್ಲ … Read more

ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ

                       ಅಂದು ಮಟಮಟ ಮದ್ಯಾಹ್ನ  ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ  ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ  ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ … Read more

ಹೊಸ ವಿದ್ಯೆ ಕಲಿತು ಬಂದ ಲಗೋರಿಬಾಬಾ: ಫ್ಲಾಪಿಬಾಯ್

“ಬಾಬಾ ಎಲ್ಲೋಗಿದ್ದೆ ಇಷ್ಟು ದಿನ? ನೀನಿಲ್ಲದೆ ನಂಗಿಲ್ಲಿ ಒಬ್ನಿಗೆ ತಲೆ ಕೆಟ್ಟೋಗಿತ್ತು! ಜೀವನಾನೇ ಶೂನ್ಯ ಅನ್ನೋ ಸ್ಥಿತಿಗೆ ಬಂದು ಬಿಟ್ಟಿದ್ದೆ! ಒಂದೂ ಸ್ಟೇಟಸ್ ಅಪ್ಡೇಟ್ ಇಲ್ಲಾ, ಫೋಟೋ ಅಪ್ಲೋಡ್ ಇಲ್ಲ.. ಎಲ್ಲಾ ಬೋರಿಂಗ್ ಲೈಫ್ ಬಾಬಾ ನೀನಿಲ್ದೆ..” ಓವರ್ ಎಕ್ಸೈಟ್ ಆಗಿ ಒಂದೇ ಸಮನೇ ಬಡಬಡಿಸಹತ್ತಿದ ಫ್ಲಾಪಿಬಾಯ್. ಲಗೋರಿಬಾಬಾಗೆ ಗೊತ್ತಿದ್ತೆ, ಫ್ಲಾಪಿಬಾಯ್ ತನ್ನ ಎಷ್ಟು ಹಚ್ಕೊಂಡಿದಾನೆ ಅಂತ! ಪಾಪ ಅತನಿಗಾದ್ರೂ ನನ್ನ ಬಿಟ್ರೆ ಯಾರಿದ್ದಾರೆ? ಆಂದುಕೊಂಡ್ರೂ ಅದನ್ನ ತೋರಿಸಿಕೊಳ್ಳದೇ, “ಸಾರಿ ಫ್ಲಾಪಿ, ಒಂದು ರಹಸ್ಯ ವಿದ್ಯೆಯನ್ನು ತ್ವರಿತವಾಗಿ … Read more

ನೂರನೇ ಕೋತಿ: ಅಖಿಲೇಶ್ ಚಿಪ್ಪಳಿ

ಅತ್ತ ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗತಿಕ ಶೃಂಗ ಸಭೆ ನಡೆಯುತ್ತಿದ್ದಾಗಲೇ ಇತ್ತ ಚೆನೈ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು. ಅಧಿಕೃತ ಲೆಕ್ಕಾಚಾರದಂತೆ ಸುಮಾರು 200 ಜನ ಅತಿವೃಷ್ಟಿಯ ಕಾರಣಕ್ಕೆ ಸತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದವು. ಸಹಿಷ್ಣು-ಅಸಹಿಷ್ಣು ಚರ್ಚೆಗಳು ನಡೆಯುತ್ತಲೇ ಇದ್ದವು. ಮಲೆನಾಡಿನಲ್ಲಿ ಮಳೆಯ ಕೊರತೆಯಿಂದಾಗಿ ಬತ್ತದ ಗದ್ದೆಗಳು ಒಣಗಿಹೋಗುತ್ತಿದ್ದವು. ತೀರಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಲ್ಲದಿದ್ದರೂ, ರೈತರಿಗೆ ಆತಂಕದ ಪರಿಸ್ಥಿತಿ ಏರ್ಪಟ್ಟಿರುವುದು ಬೀಸಾಗಿಯೇ ತೋರುತ್ತಿದೆ. ಈ ಮಧ್ಯೆ ಕಾರ್ಯಕ್ರಮ ನಿಮಿತ್ತ ನಮ್ಮಲ್ಲಿಗೆ ಬಂದಿದ್ದ ಶ್ರೀ … Read more

ಬಾಲೀ ಲೆಕ್ಕಾಚಾರ: ಸೂರಿ ಹಾರ್ದಳ್ಳಿ

‘ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನಿಮ್ಮ ವೀಸಾಕ್ಕೆ ‘ಆನ್ ಅರೈವಲ್ ವೀಸಾ’ದಂತೆ ತಲಾ 35 ಡಾಲರ್ ಕೊಡಬೇಕು,’ ಎಂದು ಮೇಕ್‍ಮೈಟ್ರಿಪ್‍ನವರು ತಪ್ಪಾಗಿ ಹೇಳುತ್ತಲೆ ನನ್ನ ತಲೆ ಬಿಸಿಯಾಗಿತ್ತು. ನೂರರ ನಾಲ್ಕು, ಅಂದರೆ ನಾಲ್ಕು ನೂರು ಡಾಲರ್ (ಅಮೆರಿಕದ್ದು) ಖರೀದಿಸಿದ್ದೆ. ತೆರಿಗೆ, ಕಮಿಷನ್ ಇತ್ಯಾದಿ ಸೇರಿ ಪ್ರತೀ ಡಾಲರ್‍ನ ವಿನಿಯಮ ಬೆಲೆ ರೂ. 65.79 ಆಗಿತ್ತು. ಒಬ್ಬರಿಗೆ ಮೂವತ್ತೈದು ಡಾಲರ್ ಎಂದರೆ ಮೂವರಿಗೆ ನೂರೈದು ಡಾಲರ್. ಅಕಸ್ಮಾತ್ ವೀಸಾ ಕೊಡುವಾತ ಚಿಲ್ಲರೆ ಇಲ್ಲ ಎಂದು ಐದು ಡಾಲರ್ ಚಿಲ್ಲರೆ … Read more