“ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಅವನಿ…ವಸುಂಧರೆಯ ಚಿಗುರುಗಳ ಸಾಹಿತ್ಯಿಕ ಪಯಣ
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿ ಅಂತರ್ಜಾಲ ಪಾಕ್ಷೀಕ ಪತ್ರಿಕೆ 

(www.avani.uahs.net)

 

ಈ ವರ್ಷ ಅಂತರರಾಷ್ಟ್ರೀಯ ಮಣ್ಣು ವರ್ಷ ಇದರ ಪ್ರಯುಕ್ತ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿಗಳ ಅಂತರ್ಜಾಲ ಪತ್ರಿಕೆಯಾದ “ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಭಾಗವಹಿಸಲಿಚ್ಚಿಸುವವರು “ಮಣ್ಣು”(ಇದು ಕೇವಲ ಸಮಗ್ರ ವಿಷಯ: ಶೀರ್ಷಿಕೆಯ ಆಯ್ಕೆ ಲೇಖಕ/ಕವಿಯದ್ದು) ಈ ವಿಷಯದ ಮೇಲೆ ತಮ್ಮ ಕವನಗಳನ್ನು “ಅವನಿ”ಯ ಸಂಪಾದಕ ಮಂಡಳಿಗೆ ಜನವರಿ 25, 2016 ರವಳಗಾಗಿ ಕಳುಹಿಸಲು ಸೂಚಿಸಿದೆ. ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚಿನ ಕವನಗಳನ್ನು ಕಳುಹಿಸಬಹುದಾಗಿದೆ. ಆಯ್ದ ಅತ್ಯುತ್ತಮ ಕವನಗಳಿಗೆ ಸೂಕ್ತ ಬಹುಮಾನಗಳಿವೆ

•    ಪ್ರಥಮ ಬಹುಮಾನ: ರೂ.2500/- ಮತ್ತು ಪ್ರಶಸ್ತಿ ಪತ್ರ
•    ದ್ವಿತೀಯ ಬಹುಮಾನ: ರೂ.1500/- ಮತ್ತು ಪ್ರಶಸ್ತಿ ಪತ್ರ
•    ತೃತೀಯ ಬಹುಮಾನ: ರೂ.1000/- ಮತ್ತು ಪ್ರಶಸ್ತಿ ಪತ್ರ
•    ನಾಲ್ಕನೆಯ ಬಹುಮಾನ: ರೂ.500/- ಮತ್ತು ಪ್ರಶಸ್ತಿ ಪತ್ರ
•    ಸಮಾಧಾನಕರ ಬಹುಮಾನ(5 ಬಹುಮಾನಗಳು): ಪ್ರಶಸ್ತಿ ಪತ್ರ
•    ಕೃಷಿ/ತೋಟಗಾರಿಕೆ/ಅರಣ್ಯ ವಿದ್ಯಾರ್ಥಿ ಸ್ಪರ್ಧಿ ವಿಶೇಷ ಬಹುಮಾನ: ರೂ.1000/- ಮತ್ತು ಪ್ರಶಸ್ತಿ ಪತ್ರ

ಸೂಚನೆಗಳು:
•    ಕವನಗಳನ್ನು ಅಂಚೆಯ ಮೂಲಕ ಕಳುಹಿಸುವವರು ತಪ್ಪಿಲ್ಲದಂತೆ ಬರೆದು ಕಳುಹಿಸಲು ಕೋರಿದೆ.
•    ಕವನಗಳನ್ನು ಮಿಂಚಂಚೆಯ ಮೂಲಕ ಕಳುಹಿಸುವವರು ತಪ್ಪಿಲ್ಲದಂತೆ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಬರೆದು ಕಳುಹಿಸಬೇಕು.
•    ಆಯ್ದ ಕವನಗಳನ್ನು ಪುಸ್ತಕದ ಮುಖೇನ ಪ್ರಕಟಿಸಲು ಸಂಪಾದಕ ಮಂಡಳಿ ತೀರ್ಮಾನಿಸಿದೆ.
•    ತೀರ್ಪುಗಾರರ ನಿರ್ಣಯವೇ ಅಂತಿಮ.

ನಮ್ಮ ವಿಳಾಸ:

ನಿಶಾಂತ್, ಜಿ.ಕೆ
ಸಂಪಾದಕರು ‘ಅವನಿ’ಪತ್ರಿಕೆ
ಅನುವಂಶೀಯತೆ ಮತ್ತು ಸಸ್ಯತಳಿ ಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ ನವಿಲೆ
ಶಿವಮೊಗ್ಗ-577225

ಇ ಮೇಲ್: 

avniuahs@gmail.com

gknishanth89@gmail.com

sanjay.ramann@gmail.com

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Shaku
7 years ago

                   ಮುಗ್ಧತೆ

ನೆನೆಪಿದೆಯಾ ನನ್ನೆದೆಯಾ ತೋಟದಲ್ಲಿ ನೀ ನಲಿದಾಡುತ್ತಿದ್ದ ಆ ದಿನ
ಮರೆತಿದಿಯಾ ಮನದಾಳದ ಆ ಮಾತು,
ತುಸು ದೂರ ನೀ ನಿಂತು ಪಿಸುಗುಟ್ಟಿದ ಸವಿಮಾತು
ಮರೆಯಲಾರೆನೆ ನಾನು ಎಂದಿಗೂ,
ಕಣ್ಣ ಸನ್ನೆಯಲೇ ನನ್ನ ಕೊಂದವಳು ನೀನಲ್ಲವೆ
ಬಲು ಚೂಟಿ ಹೆಣ್ಣು ನಿಂಗಾಗಿ ನಾ ಕದ್ದೆ ರಸಪುರಿಯ ಮಾವಿನ ಹಣ್ಣು
ತಿನ್ನಲು ನೀ ಓಡಿ ಬಂದೆ ನಾ ಕಚ್ಚಿದೆ ನಿನ್ನ ಕೆನ್ನೆಯ,ಸವಿದೆ ಮಾವಿನ ಹಣ್ಣಂತೆಯೇ
ನಾ ಮಾಡಿದ ತುಂಟತನದ ನಿನಗರಿವಿಲ್ಲದೆಯೇ .
ಆಹಾ ಆಹಾ ಎಂದು ನೀನು ಹಣ್ಣನ್ನು ಚಪ್ಪರಿಸುತ್ತಾ ಮಗುವಿನಂತೆ ತಿನ್ನುವಾಗ,
ನಿನ್ನ ಮುಗ್ಧತೆಗೆ ನಾ ಸೋತೆ..

Shaku
7 years ago

ಮೊದಲನೆ ನಿನ್ನ ಕಣ್ಣ ನೋಟಕೆ ಸೋತೆ,
ಸೋತು ಶರಣಾಗಿರುವೆ ಓ ಸೀತೆ,
ನಿನಗಾಗಿ ನಾ ಹಾಡುವೆ ಒಂದು ಗೀತೆ,
ಹಗಲಿರುಳು ನಾನಿರುವೆ ನಿನ್ನ ಜೊತೆ…!

ಆ ಕಣ್ಣಲ್ಲಿ ಏನೋ ಮಿಂಚು,
ಮಿಂಚಿಗೆ ನಾ ಮಾಡಲೆ ಒಂದು ಸಂಚು,
ಸಂಚು ಮಾಡಿ ನಿನ್ನ ಗೆಲ್ಲುವೆ,
ಗೆಲ್ಲದಿದ್ದರೆ ನಾ ನಿನಗಾಗಿ ಸಾಯುವೆ..!

ಓ ನನ್ನ ಹೃದಯದ ಮಲ್ಲಿಗೆ,
ದುಂಡು ಮುಖದ ಚೆಲುವೆ ನೀ ದುಂಡು ಮಲ್ಲಿಗೆ,
ನಿನ್ನ ಪರಿಮಳಕ್ಕೆ ಮೆಲ್ಲಗೆ ಅರಳಿದೆ ನನ್ನ ಮನಸ್ಸು,
ಮನಸ್ಸಿನ ಮಾತು ಕೇಳಬಾರದೆ ನನ್ನ  ಸೂರ್ಯಕಾಂತಿ,
ಕೇಳಿ ನನ್ನ ಮನಸ್ಸಿಗೆ ಕೊಡಬಾರದೆ ಶಾಂತಿ…!

Shaku
7 years ago

                            ಮಣ್ಣು
 
ನೇಗಿಲನು ಹಿಡಿದು ಹೊಲವನು ಹುಳುವನು  ನಮ್ಮಣ್ಣ
ಕೆಸರನು ತುಳಿದು ಹಸಿರನು ಬೆಳೆಸಿ, ಉಸಿರನು ಬರಿಸುವನು ನೋಡಣ್ಣ
ಹಗಲಿರುಳು ಎನ್ನದೆ ಎತ್ತಿನ ಹಾಗೆ ದುಡಿವನು ನಮ್ಮಣ್ಣ
ಕೈಯನು ಕೆಸರಾಗಿಸಿ, ಬಾಯಿಗೆ ಮೊಸರಾಗಿಸುವನು ನೋಡಣ್ಣ
ಪೇಟೆ ಮಂದಿಯ ಶೋಕಿ ಜನರ ಕಣ್ಣಿಗಿದು ಕಾಣದಣ್ಣ
ರೈತರ ಕಷ್ಟ ,ಇಷ್ಟಗಳನು ಕೇಳುವವರು ಇಲ್ಲಿ ಯಾರಣ್ಣ
ಮಣ್ಣಿನ ಮಗನಿವನು ನಮ್ಮೆಲ್ಲರ ಬಾಳಿನ ಕಣ್ಣು…!ಶಕುಮುನಿಯಪ್ಪ ಎಂ.ಎಸ್.

Shaku
7 years ago

ಚುಟುಕು ಚೆನ್ನಾಗಿದೆ. ಶಕುಗೌಡ ಎಂ.ಎಸ್

4
0
Would love your thoughts, please comment.x
()
x