ನವರಾತ್ರಿಯ ಸಂಭ್ರಮ: ಪೂಜಾ ಗುಜರನ್ ಮಂಗಳೂರು.

ಭೂಮಿ ಮೇಲೆ ರಾಕ್ಷಸರ ಅಟ್ಟಹಾಸವು ಮಿತಿಮೀರಿದಾಗ. ಎಲ್ಲೆಲ್ಲೂ ಅನ್ಯಾಯ ವಿಜೃಂಭಿಸಿ ಅಧರ್ಮವೇ ತಾಂಡವಾಡುವಾಗ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು, ರಕ್ಷಿಸಲು ಧರೆಗಿಳಿದು ಬಂದವಳೇ ದುರ್ಗಾಮಾತೆ. ತನ್ನ ಬಳಿಗೆ ನೊಂದು ಬರುವ ಭಕ್ತರಿಗೆ ದೇವಿಯೂ ಅನುಗ್ರಹವನ್ನು ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಹರಸುತ್ತಾಳೆ ಅನ್ನುವ ಅಚಲವಾದ ನಂಬಿಕೆ ಭಕ್ತರಿಗಿದೆ. ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ದುರ್ಗಾದೇವಿಯೂ ಮಹಿಷಾಸುರನೊಂದಿಗೆ ಪಾಡ್ಯದಿಂದ ನವಮಿವರೆಗೆ ಯುದ್ಧ ಮಾಡಿ ನವಮಿಯಂದು ಅಸುರನನ್ನು ಕೊಂದಳು. ಅದುದರಿಂದ ದೇವಿಗೆ ಮಹಿಷಾಮರ್ಧಿನಿ ಎಂದು ಕರೆಯುತ್ತಾರೆ. ಪುರಾಣದ … Read more

ಪರಮ ದೇಶಭಕ್ತ ಕ್ರಾಂತಿಕಾರಿ ಭಗತ್ ಸಿಂಗ್  !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

1931 ರಲ್ಲಿ  ತನ್ನ 23 ನೇ ವಯಸ್ಸಿನಲ್ಲಿ ನೇಣಿಗೆ ಸಿದ್ಧನಾಗಿ ಕಪ್ಪು ಬಟ್ಟೆಯನ್ನು ತೊಟ್ಟರೂ ನೇಣಿಗೆ ಹೆದರಿ ಮುಖ ಮುಚ್ಚಿಕೊಳ್ಳದೆ  ನೇಣಿಗೆ ನಡುಕ ಉಂಟು ಮಾಡಿ ಕತ್ತನ್ನು ನೇಣಿಗೆ ಕೊಟ್ಟು ಕತ್ತನ್ನು ಸುತ್ತುವರಿದ ನೇಣಿನ ಹಗ್ಗಕ್ಕೆ ಮುತ್ತಿಟ್ಟು ತನ್ನ ಇಬ್ಬರು ಸ್ನೇಹಿತರೊಂದಿಗೆ ಹುತಾತ್ಮನಾದ ಧೈರ್ಯವಂತ ಭಗತ್ ಸಿಂಗ್!  ನೇಣಿಗೆ ಕತ್ತು ಕೊಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕ ತಂದಿದ್ದೀರಾ? ಎಂದು ತಮ್ಮ ಕೊನೆಯ ಅಸೆಯ ತಿಳಿಯಲು ಬಂದ  … Read more

ಪಂಜು ಕಾವ್ಯಧಾರೆ

ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ … Read more

ಲೇಖನ ಆಹ್ವಾನ

ಆತ್ಮೀಯರೇ, ಆಯುಧ ಪೂಜೆ ಅಥವಾ ದಸರಾ ಹಬ್ಬದ ನಿಮ್ಮ ಅನುಭವಗಳನ್ನು ಬರೆದು ನಮಗೆ ಕಳುಹಿಸಿಕೊಡಿ. ಲೇಖನಗಳಿಗೆ ಪದಗಳ ಮಿತಿ ಇಲ್ಲ. ಲೇಖನದಲ್ಲಿ ಕನಿಷ್ಠವೆಂದರೂ 500 ಪದಗಳಿರಲಿ. ನಿಮ್ಮ ಲೇಖನಗಳು ಅಕ್ಟೋಬರ್ 5, 2019 ರ ಒಳಗೆ ನಮಗೆ ತಲುಪಲಿ. ನಮ್ಮ ಇ ಮೇಲ್ ವಿಳಾಸ: editor.panju@gmail.com, smnattu@gmail.com ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ಪಂಜು ಬಳಗ

ಸಂಕಲನ ಮತ್ತು ವ್ಯವಕಲನ ಸುಲಭ ವಿಧಾನ: ಪ್ರವೀಣ್‌ ಕೆ.

ಸಂಕಲನ ಮತ್ತು ವ್ಯವಕಲನಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಕಲಿಸಿದ ಪಾರಂಪರಿಕ ವಿಧಾನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸುವುದು ಸುಲಭವಲ್ಲ. ಅಲ್ಲದೇ ಆ ವಿಧಾನಗಳನ್ನು ನಾವು ಉಪಯೋಗ ಮಾಡಬೇಕಾಗಿಯೂ ಇಲ್ಲ. ಅದಕ್ಕಿಂತ ಸುಲಭದ ಮನಸ್ಸಿನಲ್ಲಿಯೇ ಕ್ಷಣಮಾತ್ರದಲ್ಲಿ ಮಾಡುವಂತಹ ವಿಧಾನಗಳನ್ನು ಈ ವಿಡಿಯೋ ದಲ್ಲಿ ನೀಡಲಾಗಿದೆ. ಇದಕ್ಕೆ ಪ್ರಾಕ್ಟೀಸ್ ಮಾಡಲು ಕೊಂಡಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಒತ್ತಿ: Practical test  

ಚಿಮಣಿ ಬುಡ್ಡಿ: ಚೈತ್ರಾ ವಿ.ಮಾಲವಿ

ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ. “ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ. “ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು. ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ … Read more

ನನ್ನ ಆನಂದ: ಹೆಚ್. ಷೌಕತ್ ಆಲಿ, ಮದ್ದೂರು

ಖಾಸಗಿ ಶಾಲೆಗಳಲ್ಲಿ ಪ್ರತಿಷ್ಠಿತ ವಿದ್ಯಾರ್ಥಿಗಳೇ ಹೆಚ್ಚು, ಪೋಷಕರಿಗೂ ತಮ್ಮ ಮಕ್ಕಳ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ, ಆಡಳಿತಾಧಿಕಾರಿ, ಕಾರ್ಯಕಾರಿ ಮಂಡಳಿಯ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳೋದೆ ಒಂದು ಶ್ರೀಮಂತಿಕೆ ಎನ್ನಬಹುದು ಒಂದು ನಗರದ ಹೃದಯ ಭಾಗದಲ್ಲಿದ್ದ ಒಂದು ಪ್ರಸಿದ್ಧ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಸೇರಿದ್ದ ಮೊದಲ ವರ್ಷದಲ್ಲಿ ……………. . ! ಎಂಟನೆಯ ತರಗತಿಗೆ ಪ್ರವೇಶ ಮಾಡುವ ಕೆಲ ವಿದ್ಯಾರ್ಥಿಗಳಿಗೆ ನಾನು ಕೆಲವು ಪ್ರಶ್ನೆಗಳನ್ನು ಅವರ ಮೆಂಟಲ್ ಎಬಿಲಿಟಿ, ಮೆಮೋರಿ, ರೀಡಿಂಗ್, ರೈಟಿಂಗ್, ಜಿ. ಕೆ. ಸ್ಕಿಲ್ಸ್ ಬಗ್ಗೆ … Read more

ಜೀವದ ಪ್ರಾಮುಖ್ಯತೆ: ಗಿರಿಜಾ ಜ್ಞಾನಸುಂದರ್

ಅಹ್! ದೇಹ ಹಗುರವಾಗುತ್ತಿರುವ ಅನುಭವ! ಏನಾಯಿತು ಅಷ್ಟೊಂದು ನೋವಾಗುತ್ತಿದ್ದ ದೇಹಕ್ಕೆ? ಪ್ರಸಾದ್ ಯೋಚಿಸುತಿದ್ದಂತೆ ತಿಳಿಯಿತು ಅವನ ಆತ್ಮ ದೇಹದಿಂದ ಹೊರಗೆ ಬಂದಿದೆ!! ಹಾಗಾಗಿ ನೋವು ಮರೆಯಾಗಿದೆ…. ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ನೆನಪಿಗೆ ಬಂತು….. ಕಷ್ಟಪಟ್ಟು ಓದಿ ಶಾಲೆಯಲ್ಲಿ ಮೊದಲನೆಯವನಾಗಿದ್ದ ಪ್ರಸಾದ್. ಎಲ್ಲದರಲ್ಲೂ ಮೊದಲು. ಆಟ ಪಾಠ, ವಿದ್ಯೆ, ಪರಿಶ್ರಮ, ಸಹನೆ, ಸ್ನೇಹ ಎಲ್ಲದರಲ್ಲೂ. ಅತ್ಯಂತ ಶ್ರದ್ಧೆಯಿಂದ ಓದಿ ಡಾಕ್ಟರ್ ಆಗಿದ್ದು ಆಯಿತು. ಉತ್ತಮ ರಾಂಕ್ ಗಳಿಸಿದ್ದಕ್ಕಾಗಿ ಸರ್ಕಾರಿ ಉದ್ಯೋಗವು ಆಯಿತು. ಡಾಕ್ಟರ್ ಆಗಿ ತನ್ನ ಕರ್ತವ್ಯ … Read more

ಬದಲಾಗುವ ಬಣ್ಣಗಳು (ಕೊನೆಯ ಭಾಗ): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ -7 – ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ. “ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ … Read more

ಪ್ರಾಮಾಣಿಕತೆ ಎಂಬ ಪ್ರತಿಬಿಂಬ: ಎಂ.ಎಚ್. ಮೊಕಾಶಿ ವಿಜಯಪುರ

ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಾಮಾಣಿಕತೆ ಎಂಬುದು ಮಹಾಮೌಲ್ಯವಾಗಿದೆ ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳ ನಂಬಿಕೆ. ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯ ನಡತೆಯ ಅಂಶವನ್ನು ಸೂಚಿಸುವುದಾಗಿದೆ. ಪ್ರಾಮಾಣಿಕತೆಯಲ್ಲಿ ನಿಷ್ಠೆ, ನಿಷ್ಪಕ್ಷಪಾತ, ವಿಶ್ವಾಸರ್ಹ ಮೊದಲಾದ ಗುಣಗಳು ಸೇರಿವೆ. ಇಂದಿಗೂ ನಮ್ಮಲ್ಲಿ ಸತ್ಯ, ನಿಷ್ಟೆ, ಪ್ರಾಮಾಣಿಕತೆಯಂತಹ ಹಲವಾರು ಸದ್ಗುಣಗಳಿವೆ. ಆದರೆ ಅದನ್ನು ಗುರುತಿಸುವ ಒಳಗಣ್ಣು ಬೇಕಾಗಿದೆ. “ನಾನು ಸರಿ, ಉಳಿದವರು ಸರಿಯಿಲ್ಲ” ಎಂಬ ಭಾವನೆಗಳು ಪ್ರಸ್ತುತ ಹೆಚ್ಚಾಗುತ್ತಿವೆ. ನಾವು ಸತ್ಯ ನಿಷ್ಟರೇ? ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಬಗ್ಗೆ … Read more

ಈ ನೆಲಮೂಲದ ಅನುಭವ ಮತ್ತು ಅಧ್ಯಯನದ ಘಮಲು “ಹಾಣಾದಿ: ಕೆ.ಎಂ.ವಿಶ್ವನಾಥ ಮರತೂರ.

“ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು ನಿಂತ ಅಗಲವಾದ ಜಾಗ. ಮಧ್ಯೆ ಮಧ್ಯೆ ವಿಚಿತ್ರ ಕೀಟಗಳ ಹಾರಾಟ” ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ “ಹಾಣಾದಿ” ಕಾದಂಬರಿಯ ಸಾಲುಗಳು. … Read more

ಪರಿವರ್ತನೆಗೊಂದು ಅವಕಾಶಕೊಟ್ಟಾಗ: ಎಂ. ಡಿ. ಚಂದ್ರೇಗೌಡ ನಾರಮ್ನಳ್ಳಿ

ಬದುಕನ್ನು ರೂಪಿಸಿಕೊಳ್ಳಲು ಒಂದು ಕೆಲಸ ಬೇಕು. ಕೆಲವರು ವೈಟ್ ಕಾಲರ್ ವೃತ್ತಿಯನ್ನೆ ಹುಡುಕುತ್ತಾರೆ. ಕೆಲವರು ಕಮಾಯಿ ಅಧಿಕವಿರುವುದನ್ನು ಅಪೇಕ್ಷಿಸುತ್ತಾರೆ. ಮತ್ತೆ ಕೆಲವರು ಆದರ್ಶಗಳ ಬೆನ್ನು ಹತ್ತುತ್ತಾರೆ. ದೇಶ ಪ್ರೇಮದ ತುಡಿತವುಳ್ಳವರು ಸೈನಿಕರಾಗುತ್ತಾರೆ. ಅರ್ಪಣಾ ಮನೋಭಾವ ಇರುವವರು ಶಿಕ್ಷಕರಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ‘ತಮ್ಮ ಗುರುಗಳನ್ನು ಅನುಕರಿಸಿ ಶಿಕ್ಷಕರಾಗಬೇಕೆಂದು’ ಹೊರಡುತ್ತಾರೆ . ಕೆಲವರು ಸ್ವ- ಉದ್ಯೋಗದ ದಾರಿ ಹಿಡಿದು ಬದುಕು ಕಟ್ಟಿಕೊಳ್ಳುತ್ತಾರೆ. ಎಷ್ಟೋ ದಿನಗಳ ನಂತರ, ಎದುರು ಸಿಕ್ಕಾಗಲೋ, ಪೋನ್ ಕರೆ ಮಾಡಿದಾಗಲೋ, ನೆನಪುಗಳಿಗೆ ಮತ್ತಷ್ಟು ಹಸಿರು ಬಣ್ಣ ಬಳಿಯುತ್ತಾರೆ. … Read more

ಸೆಳತ: ಕಿರಣ್. ವ್ಹಿ, ಧಾರವಾಡ

ಸುಧಾಕರ ಹಾಗು ಸ್ವಾತಿ ರಾತ್ರೋರಾತ್ರಿ ಊರು ಬಿಟ್ಟು ಹೊರಟು ಹೋದರು. ಇಬ್ಬರದು ಮೂರು ವರ್ಷಗಳ ಪ್ರೇಮ್ ಕಹಾನಿ ಆಗಿದ್ದರಿಂದ ಸೆಳತ ಹೆಚ್ಚಿಗೆಯೆ ಇತ್ತು. ಸುಧಾಕರ, ಆಟೊ ಓಡಿಸಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡುತಿದ್ದ. ಅದ್ಹೇಗೊ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಸುಧಾಕರನ ತಾಯಿ ಜಲಜಮ್ಮನಿಗೆ, ಗಂಡ ತೀರಿ ಹೋದಾಗಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಬಡತನವೊ, ಅಥವ ಮನೆಯ ಯಜಮಾನನಿಲ್ಲವೆಂಬ ಕಾರಣಕೋ, ಸುಧಾಕರನಿಗೆ ವಿದ್ಯೆ ಅಷ್ಟೊಂದು ತಲೆಗೆ ಹೋಗಲಿಲ್ಲ. ಕಾಲಕಳದಂತೆ ಓದಬೇಕೆಂಬ ಹಂಬಲವು ಕಡಿಮೆಯಾಯಿತು. ತಾಯಿಗೆ ವಯಸ್ಸಾಗುತ್ತಿದೆ ಎಂದು … Read more

ಕನಸುಗಳು ನನಸಾಗುವುದು ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಕನಸುಗಳು ಮನುಷ್ಯನನ್ನು ಪ್ರಾಚೀನ ಕಾಲದಿಂದಲೂ ವಿಸ್ಮಯಗೊಳಿಸಿವೆ. ಕನಸೆಂಬುದು ಮಾಯಾಲೋಕ! ನಿಜ ಜೀವನದಲ್ಲಿ ಆಗದಿರುವುದು ಕನಸಿನಲ್ಲಿ ಸಾಧ್ಯವಾಗಬಹು. ಮಲಗಿದ್ದಾಗ ಅರೆ ಎಚ್ಚರದ ಸ್ಥಿತಿಯಲ್ಲಿ ಬೀಳುವಂಥವು ‘ ಕನಸು ‘ . ಕನಸು ಎಂದರೆ ಮಿಥ್ಯ! ಅವು ನನಸು ಆಗಬಹುದು ಆಗದೇ ಇರಬಹುದು. ಬಹುತೇಕ ಆಗಲಾರವು! ರಾತ್ರಿ ಅರೆ ಎಚ್ಚರದ ಸ್ಥಿತಿಯಲ್ಲಿ ಬಿದ್ದು ಎಚ್ಚರವಾಗುತ್ತಿದ್ದಂತೆ ಮಾಯವಾಗುವಂಥವು ಎಷ್ಟರಮಟ್ಟಿಗೆ ನನಸಾಗಿಯಾವು? ಬೆಳಗಿನಜಾವದಲ್ಲಿ ಬಿದ್ದ ಕನಸುಗಳು ನನಸಾಗುತ್ತವಂತೆ ಅಂತ ಯಾರು ಹೇಳಿದರೋ ಏನೋ ಆ ನಂಬಿಕೆಯಿದೆ! ಮನಸ್ಸಿಗೆ‌ ಸಂತೋಷ ನೀಡುವ ಸಕಾರಾತ್ಮಕವಾದ ಕನಸಿರುವಂತೆ … Read more

ಪಂಜು ಕಾವ್ಯಧಾರೆ

**ಮಾರಿಬಲೆಯಾ ** ಬಲೆಯೆತ್ತಿ ಹೊರಟಿಹರು ಬೆಸ್ತರು ಸಡಗರದಿ ಜಡಿಮಳೇಲಿ ಕಡಲ ತಡಿಗೆ I ಇಂದು ಸಿಕ್ಕಾವೋ? ಭೂತಾಯಿ ಕೊಡವಾಯಿ ಕಂಡಿಕಿ ಜಾರಿ ನನ್ನ ಬಲಿಗೆ I ಬಂದಿಹುದು ಮಳೆಗಾಲ ಬೀಸುವುದೇ ಬಲೆ ಈಗ! ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I ಮರವಂತೆ ಕಡೆಹೋಪ ಬರುವುದು ಬಾರಿ ಬೆಲೆ ಸಿಕ್ಕರೆ ಭೂತಾಯಿ ಕಂಡಿಕಿ I ಬೋರ್ಗರೆವ ಕಡಲೆಡೆಗೆ ಬಂದಾನೋ ಮೊಗವೀರ ಬೀಸಿದಾ *ಮಾರಿ**ಬಲೆಯಾ I ನನ್ನಯ ಮನೆಯಿಂದ ದೂರಾದ ಮೈಲುವರೆಗೂ ಇಂದು ನನ್ನದೇ ಬಲೆಯೂ I ಬಲೆ ಬಿಡುವುದು … Read more

”ಸಲೂನೆಂಬ ಶೋಕಿಯ ಸುಖಗಳು”: ಪ್ರಸಾದ್‌ ಕೆ.

”ಮುನ್ನೂರು ರೂಪಾಯಿ ಸಾರ್…”, ಅಂದಿದ್ದೆ ನಾನು. ಪರಿಚಿತ ಹಿರಿಯರೊಬ್ಬರು ನನ್ನ ಈ ಮಾತನ್ನು ಕೇಳಿ ನಿಜಕ್ಕೂ ಹೌಹಾರಿಬಿಟ್ಟಿದ್ದರು. ಅಂದು ನಾವು ಮಾತನಾಡುತ್ತಿದ್ದಿದ್ದು ಕ್ಷೌರದ ಬಗ್ಗೆ. ಊರಿನಲ್ಲಿ ನಲವತ್ತು-ಐವತ್ತು ರೂಪಾಯಿಗಳಿಗೆ ಮುಗಿದುಹೋಗುತ್ತಿದ್ದ ಹೇರ್ ಕಟ್ಟಿಂಗಿಗೆ ಅಷ್ಟೊಂದು ಹಣ ಸುರಿಯುವಂಥದ್ದೇನಿದೆ ಎನ್ನುವ ಅಚ್ಚರಿ ಅವರದ್ದು. ‘ಇವೆಲ್ಲ ಬೇಕಾ ನಿಂಗೆ’ ಎಂದು ಕಣ್ಣಲ್ಲೇ ನುಂಗುವಂತೆ ನನ್ನನ್ನು ನೋಡಿದರು. ಎಲ್ಲರಿಗೂ ಈಗ ಶೋಕಿಯೇ ಬದುಕಾಗಿಬಿಟ್ಟಿದೆ ಎಂದು ಬೈದೂಬಿಟ್ಟರು. ಬೈದಿದ್ದು ನನಗೋ ಅಥವಾ ಕ್ಷೌರ ಮಾಡಿಸಿದವನಿಗೋ ಗೊತ್ತಾಗಲಿಲ್ಲ. ಆದರೆ ಭೌತಿಕವಾಗಿ ನಾನೇ ಅಲ್ಲಿ ಇದ್ದಿದ್ದರ … Read more

ಧರ್ಮಸಂಕಟ: ಗಿರೀಶ ಜಕಾಪುರೆ

ಹಿಂದಿ ಮೂಲ – ಪ್ರೇಮಚಂದ ಕನ್ನಡಕ್ಕೆ – ಗಿರೀಶ ಜಕಾಪುರೆ 1. ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’ ‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’ ‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’ ‘ನಾನು ಸದಾಕಾಲ ನಿನ್ನನ್ನು … Read more

”ಸಂಬಂಧಗಳು ನಮಗೆಷ್ಟು ಮುಖ್ಯ?”: ಪೂಜ ಗುಜಾರನ್‌

ಸಂಬಂಧಗಳು ನಮಗೆಷ್ಟು ಮುಖ್ಯ? ಯಾವ ಸಂಬಂಧಗಳು ನಮ್ಮನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ.? ಯಾವ ಸಂಬಂಧಗಳನ್ನು ನಾವು ಯಾವತ್ತು ಬಿಟ್ಟು ಹೋಗುವುದಿಲ್ಲ.?ಯಾರು ನಮ್ಮನ್ನು ಅತಿಯಾಗಿ ಕಾಡುತ್ತಾರೆ.? ಇಲ್ಲಿ ಸಂಬಂಧಗಳನ್ನು ಬೆಳೆಸಲು ಯಾವ ಮಾನದಂಡಗಳ ಅಗತ್ಯವಿದೆ.? ಪ್ರಶ್ನೆಗಳು ಮುಗಿಯಲಾರದಷ್ಟಿವೆ.. ಉತ್ತರಗಳನ್ನು ನಾವು ಹುಡುಕಬೇಕಷ್ಟೆ.. ನಮ್ಮ ಬದುಕಿನಲ್ಲಿ ಬರುವ ಸಂಬಂಧಗಳು ಅರಿತೋ ಅರಿಯದೆನೋ ನಮ್ಮನ್ನು ಗಾಢವಾಗಿ ತನ್ನ ಬಾಹುಗಳಲ್ಲಿ ಬಂಧಿಸಿರುತ್ತದೆ. ಮಾನವ ಸಂಬಂಧಗಳೆ ಹೀಗೆ ಹುಟ್ಟಿದ ಕೂಡಲೇ ಸಂಬಂಧಗಳ ಸಂಕೋಲೆಯೊಳಗೆ ಬಂಧಿಯಾಗಿರುತ್ತಾನೆ. ತನ್ನ ತಾಯಿ ಜೊತೆ ಶುರುವಾದ ಈ ಸಂಬಂಧ ಇನ್ನಷ್ಟು … Read more

ಬದಲಾಗುವ ಬಣ್ಣಗಳು (ಭಾಗ 3): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ – 5 – ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ … Read more

ಅಲಪಿಯ ಹೌಸ್ ಬೋಟ್ ಎಂಬ ಸ್ವರ್ಗದತುಣುಕು!: ಭಾರ್ಗವ ಎಚ್ ಕೆ

ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು! ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ … Read more

ನೆನಪುಗಳ ಮಾಲೀಕ………: ರಘು ಕ.ಲ.,

ಶಿಕ್ಷಣ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಪಡೆದರೆ ಬಹಳ ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ, ಸೃಜನಶೀಲತೆ, ನೃತ್ಯ, ಸಂಗೀತ …… ಹೀಗೆ ಇನ್ನೂ ಹತ್ತಾರು ವಿಚಾರಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಬಹಳ ಹತ್ತಿರವಾದದ್ದು, ಅನುಕೂಲವಾದದ್ದು ನಗರ ಪ್ರದೇಶ ಎಂಬ ಹಂಬಲದಲ್ಲಿಯೋ, ಬೆಂಬಲದಲ್ಲಿಯೋ ಏನೋ ಗ್ರಾಮೀಣ ಪ್ರದೇಶದ ಕೆಲವರು ನಗರದೆಡೆಗೆ ಮೊರೆ ಹೋಗುತ್ತಿದ್ದಾರೆ. ಎಲ್ಲವೂ ಸಿಗುತ್ತದೆಂಬುದು ಅವರ ಕಲ್ಪನೆಯಷ್ಟೇ ಸರಿ. ಸರಿಯೋ? ತಪ್ಪೋ? ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅವರವರ ಮನಸ್ಸಿನಂತೆ ಅವರವರ … Read more

ಕೊಠಡಿ ಮೇಲ್ವಿಚಾರಣೆ ಎಂಬ ಗುಮ್ಮ…!: ಶೀಲಾ. ಗೌಡರ. ಬದಾಮಿ.

ಶೈಕ್ಷಣಿಕ ವರ್ಷ ಪ್ರಾರಂಭವಾದೊಡನೆ ಮೊದಲ ಸಭೆಯಲ್ಲೇ ಮುಖ್ಯಸ್ಥರು,”ಕಳೆದ ವರ್ಷ ಆದದ್ದಾಯ್ತು. ಈ ವರ್ಷ ಮಾತ್ರ ನಾವು 100/ ರಿಸಲ್ಟ ಮಾಡಬೇಕು.ಅದಕ್ಕಾಗಿ ಪರೀಕ್ಷೆ ಬಂದಾಗ ಗಡಿಬಿಡಿ ಮಾಡುವುದಕ್ಕಿಂತ ಈಗಿನಿಂದಲೇ ಗುರಿ ಸಾಧನೆಗೆ ಕಂಕಣಬದ್ದರಾಗಬೇಕು. “ ಎಂದು ಎಚ್ಚರಿಸುತ್ತಾರೆ. ಆಗಿನಿಂದಲೇ ಎಲ್ಲ ಶಿಕ್ಷಕರ, ಉಪನ್ಯಾಸಕರ ಎದೆ ಢವ….ಢವ…..ವಾರ್ಷಿಕ ಅಂದಾಜು,ಕ್ರಿಯಾಯೋಜನೆ ಸಿದ್ದಪಡಿಸಿ, ಡಿಸೆಂಬರ್ ಅಂತ್ಯಕ್ಕೆ ಸಿಲ್ಯಾಬಸ್ ಮುಗಿಸಿ, ಎರಡು ತಿಂಗಳು ರಿವಿಜನ್ ಮಾಡಬೇಕು ಎಂದು ಜೂನ್ ಒಂದರಿಂದಲೇ ಆನ್ ಯುವರ್ ಮಾರ್ಕ, ಗೆಟ್ ಸೆಟ್,ಗೋ……ಎಂದು ನಮ್ಮನ್ನು ರೇಸಿಗೆ ಬಿಟ್ಟು ಬಿಡುತ್ತಾರೆ. ಅದು … Read more

20ನೇ ಶತಮಾನ ಕಂಡ ಸಂತ ಶ್ರೇಷ್ಠ- ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್: ಶ್ರೀವಲ್ಲಭ ರಾ. ಕುಲಕರ್ಣಿ

ಭಾರತೀಯ ಸಮಾಜದ ರೂಢ ಮೂಲ ನಂಬಿಕೆಗಳ ಮೂಲ ಸ್ವರೂಪವನ್ನು ಪ್ರಶ್ನಿಸಿದ, ಅಲುಗಾಡಿಸಿದ ತೀಕ್ಷ್ಣ ವಿಚಾರವಾದಿ, 20ನೇ ಶತಮಾನದ ಭಾರತೀಯ ಮಹಾನ್ ಚಿಂತಕ ದ್ರಾವಿಡ ನಾಡಿನ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ 1879 ಸೆಪ್ಟೆಂಬರ್ 17ರಂದು ಮದ್ರಾಸ್ ರಾಜ್ಯದ ಕೊಯಿಮತ್ತೂರ್ ಜಿಲ್ಲೆಯ ಈರೋಡು ಎಂಬಲ್ಲಿ ಹುಟ್ಟಿದರು, ತಮ್ಮ ವಿಚಾರಗಳಿಗೆ ಚಳುವಳಿಯ ಸ್ಪರ್ಶ ನೀಡಿದ ಅವರ ಬದುಕು ಮತ್ತು ಚಿಂತನೆಗಳು ದ್ರಾವಿಡ ಅಸ್ಮಿತೆಯೊಂದನ್ನು ಹುಟ್ಟು ಹಾಕಿ, ತಮಿಳು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದು ಇತಿಹಾಸ. ಪೆರಿಯಾರ್ ರಾಮಸ್ವಾಮಿಯವರ … Read more

ಯಾವುದೇ ಗುಣಾಕಾರ 5 ಸೆಕೆಂಡಿನಲ್ಲಿ ಮಾಡಿ: ಪ್ರವೀಣ್‌ ಕೆ.

https://www.youtube.com/watch?v=Y0frHVjYAEo  ಈ ವಿಡಿಯೋದಲ್ಲಿ ಮನಸ್ಸಿನಲ್ಲಿಯೇ ಹೇಗೆ ಗುಣಾಕಾರಗಳನ್ನು ಮಾಡಬಹುದು ಎಂಬುದನ್ನು ತಿಳಿಸಲಾಗಿದೆ. ಇದನ್ನು ಪ್ರತಿಯೊಂದೂ ಲೆಕ್ಕದಲ್ಲಿ ಉಪಯೋಗಿಸಿದರೆ ನಿಮ್ಮ ಗಣಿತದ ವೇಗ ಹೆಚ್ಚುತ್ತದೆ. ಪ್ರಾಕ್ಟೀಸ್ ಮಾಡಲು ಇಲ್ಲಿ ಒತ್ತಿ : Practice Question 1  

ಅಂತರ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಮಹೇಶ್: ಎಂ.ಎನ್.ಸುಂದರ ರಾಜ್

ಪ್ರಕೃತಿ ಛಾಯಾಚಿತ್ರಗಳು ಕೇವಲ ಬಣ್ಣಬಣ್ಣದ ಚಿತ್ರಗಳಲ್ಲ, ಪ್ರಕೃತಿಯಲ್ಲಿ ಮೂಡಿಬಂದ ಸುಂದರ ಕಲಾಕೃತಿಗಳು. ಅವುಗಳನ್ನು ಕೆಮರಾದಲ್ಲಿ ಸೆರೆಹಿಡಿದು ಕಣ್ಮನಗಳಿಗೆ ಮುದನೀಡುವಂತೆ ಸಮಾಜಕ್ಕೆ ನೀಡಿರುವುದರ ಹಿಂದೆ, ಅಪಾರ ಪರಿಶ್ರಮ ಮತ್ತು ತನ್ಮಯತೆಯಿದೆ. ಅದೊಂದು ತಪಸ್ಸು. ನಾವು ಆ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಎಂದು ಒಂದೇ ಮಾತಿನಲ್ಲಿ ಹೇಳುತ್ತೇವೆ. ಆದರೆ ಅಂತಹ ಫೋಟೋ ತೆಗೆಯಲು ಪಟ್ಟ ಪಾಡು, ತಿರುಗಿದ ಕಾಡು ಮೇಡುಗಳು, ಜೀವದ ಹಂಗು ತೊರೆದು ವನ್ಯ ಜೀವಿಗಳ ಅಪಾಯವನ್ನೂ ಲೆಕ್ಕಿಸದೆ ಒಂದು ಉತ್ತಮ ಚಿತ್ರಕ್ಕೆ ದಿನಗಟ್ಟಲೆ ಆಹಾರ ನಿದ್ರೆಯಿಲ್ಲದೆ ಕಾದು … Read more

ಕೃಷ್ಣಂ ವಂದೇ ಜಗದ್ಗುರುಂ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ರಾಮಾಯಣ ಮಹಾಭಾರತಗಳು ಭಾರತ ದೇಶದ ಮಹಾಕಾವ್ಯಗಳು, ಹಾಗೇ ಅವು ಇತಿಹಾಸ ಅಂತನೂ ಸಾಕ್ಷಸಮೇತ ಇತಿಹಾಸಕಾರರು ಹೇಳುತ್ತಿದ್ದಾರೆ. ‘ಮಹಾಭಾರತ’ ಪ್ರಪಂಚದಲ್ಲೇ ಅತಿ ದೊಡ್ಡ ಮಹಾಕಾವ್ಯ. ಇದರ ಕತೃ ವ್ಯಾಸ. ಮಹಾಭಾರತದಲ್ಲಿ ಭೀಷ್ಮ ಪರ್ವ ಬಹಳ ಮುಖ್ಯವಾದುದು. ಏಕೆಂದರೆ ಭೀಷ್ಮಪರ್ವದಲ್ಲೇ ಕುರುಕ್ಷೇತ್ರ ಯುದ್ದ ಆರಂಭವಾಗುವ ಕಥನವಿರುವುದು, ಕೃಷ್ಣಾರ್ಜುನರ ಸಂವಾದ ರೂಪದಲ್ಲಿರುವ ಭಗವದ್ಗೀತೆ ಇರುವುದು. ಅರ್ಜುನನ ವಿಷಾದ ಭಾವದಿಂದ ಆರಂಭವಾಗುವ ಭಗವದ್ಗೀತೆ ಶ್ರೀಕೃಷ್ಣ ಅರ್ಜುನನಿಗೆ ಅನುಗ್ರಹಿಸುವ ಪ್ರಸಾದದೊಂದಿಗೆ ಮುಗಿಯುತ್ತದೆ. ವೇದಗಳ ಸಾರ ಉಪನಿಷತ್ತುಗಳು, ಉಪನಿಷತ್ತುಗಳ ಸಾರಸರ್ವಸ್ವ ಭಗವದ್ಗೀತೆ ಅಂತ ಹೇಳುವರು. ಮಹಾಭಾರತದಲ್ಲಿ … Read more

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ … Read more

ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ … Read more

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, … Read more

ಗುಲಾಮಿ: ಗಿರೀಶ ಜಕಾಪುರೆ

ಮೂಲ : ಖಲೀಲ ಜಿಬ್ರಾನ್ ಕನ್ನಡಕ್ಕೆ : ಗಿರೀಶ ಜಕಾಪುರೆ ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. … Read more