ಮೆಂಟಲ್ ಎಬಿಲಿಟಿ ಕೋಡಿಂಗ್ ಭಾಗ – 1: ಪ್ರವೀಣ್ ಕೆ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಡಿಂಗ್ ಕುರಿತ ಪ್ರಶ್ನೆಗಳನ್ನು ಉತ್ತರಿಸಲು ಈ ವಿಡಿಯೋ ನಿಮಗೆ ತುಂಬಾ ಸಹಕಾರಿ… ಕೋಡಿಂಗ್ ಭಾಗ – 1:
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಡಿಂಗ್ ಕುರಿತ ಪ್ರಶ್ನೆಗಳನ್ನು ಉತ್ತರಿಸಲು ಈ ವಿಡಿಯೋ ನಿಮಗೆ ತುಂಬಾ ಸಹಕಾರಿ… ಕೋಡಿಂಗ್ ಭಾಗ – 1:
ದಿನ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ ಒಂದೆರಡಾದರೂ ಸ್ತ್ರೀಯರ ಮೇಲಿನ ಅತ್ಯಾಚಾರಗಳು, ಚೀಟಿಹಾಕಿ ಮೋಸಹೋದ ಪ್ರಕರಣಗಳು, ಪೋಲೀಸ್ ಅಧಿಕಾರಿಗಳು ಪೋಲೀಸರಿಗೆ ನೀಡಿದ ಕಿರುಕುಳಗಳು, ವರದಕ್ಷಿಣೆ ಕಿರುಕುಳ ತಾಳಲಾಗದೆ ಹಸುಗೂಸನ್ನು ಬಿಟ್ಟು ತಾಯಿ ಮಾಡಿಕೊಂಡ ಆತ್ಮಹತ್ಯೆಗಳು, ಲಂಚ ಪ್ರಕರಣಗಳು, ಭಯೋತ್ಪಾದನೆಗಳು, ಜನಾಂಗೀಯ ದ್ವೇಷಕ್ಕೆ ತುತ್ತಾದ ಬಲಹೀನರು, ಬಹುಸಂಖ್ಯಾತರಿಂದ ತೊಂದರೆಗೊಳಗಾದ ಅಲ್ಪಸಂಖ್ಯಾತರ ನೋವುಗಳು ವರದಿ ಆಗಿಯೇ ಇರುತ್ತವೆ! ಇಲ್ಲೆಲ್ಲಾ ತೊಂದರೆ ಅನುಭವಿಸಿದ್ದು ದುರ್ಬಲರು! ತೊಂದರೆ ನೀಡಿದ್ದು ಸಬಲರು! ಅಂದರೆ ಪ್ರಬಲರು ದುರ್ಬಲರಿಗೆ ಸದಾ ತೊಂದರೆ ನೀಡುವುದನ್ನು ಕಾಣುವಂತಾಗಿದೆ. ದುರ್ಬಲರ ಶೋಷಣೆಗೆ … Read more
ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…! ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು! ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ ಬೆರಳ ಹಾರ ಮಾಡಿದವರ ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ ರೋಗಕ್ಕೆ ಹೆದರಿ, ಸಾವಿಗೆ ಬೆದರಿ ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ ಉದ್ದುದ್ದ, ಮಾರುದ್ದದ ಬೋಧನೆ ನೀಡದೇ ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು ಸಿದ್ದಾರ್ಥನ ನಿರ್ವಾಣ ಮಾಡಿ ಗೌತಮನ ನಿರ್ಮಾಣ ಹೊಂದುವುದೆಂದರೆ ಕಡು ಕಷ್ಟವೇ ಅದು!! ಬುದ್ಧನಾಗುವುದೆಂದರೆ ಬರೀ … Read more
ಇದು ಮಳೆಗಾಲವಾ? ಅನುಮಾನವಾಯಿತು. ಕಡು ಬೇಸಿಗೆಗಿಂತ ಧಗೆಯಾದ ವಾತಾವರಣ. ಮಳೆಗಾಲವೇ ಹೀಗೇ… ಇನ್ನು ಬೇಸಿಗೆ ಹೇಗೆ? ಎನ್ನುವ ಆತಂಕ ಬೇರೆ. ಆಗಾಗ ಆಯಾಸ, ಸುಸ್ತು, ಚೂರು ರೆಸ್ಟ್ ಬೇಕು ಎನ್ನುವ ವಯಸ್ಸು ನಾವು ಹರೆಯದಿಂದ ಇಪ್ಪತ್ತು ಇಪ್ಪತ್ತೈದು ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆನ್ನುವುದಕ್ಕೆ ಮತ್ತು ಗಂಭೀರತೆ, ತಿಳುವಳಿಕೆಯಿಂದ, ಘನತೆಯಿಂದ ಇರಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಯಾವಾಗ ಮಳೆ ಬರುತ್ತದೋ, ಮತ್ತೆ ಬಿಸಿಲು ಸುರಿಯುತ್ತದೋ ತಿಳಿಯುವುದಿಲ್ಲ. ಪ್ರತಿ ದಿನ ಆಫೀಸ್, ಮನೆ, ಮಾರ್ಕೆಟ್ಟು, ಕೊನೆಗೆ ತಲೆಕೆಟ್ಟು ಹೋದರೆ ಒಂದು ಸಿನಿಮಾ, … Read more
ಸತತವಾಗಿ ಹತ್ತು ವರ್ಷ ಯಾವುದೋ ಖಾಸಗಿ ವಿದೇಶಿ ಕಂಪನಿಗೆ ಜೀತದಾಳಾಗಿ ದುಡಿದ ಮೇಲೆ ಯಾಕೋ ಬೇಸರ, ಒಂಟಿತನ, ಜಿಗುಪ್ಸೆ ನಿತ್ಯ ನೋಡೋ ಮಾನಿಟರ್ ಗಿಂತ ಹತ್ತಿರವಾಗಿ ಕಾಣುತ್ತಿತ್ತು. ಟ್ರಾಫಿಕ್ ಜಾಮ್ ನಲ್ಲಿ ನಿಂತಾಗ ನಮ್ಮೂರು ಜಾತ್ರೇಲಿ ನಿಂತ ನೆನಪು, ಯಾರದೋ ಬೈಕ್ ಹಿಂದಿನಿಂದ ಹಾರ್ನ್ ಮಾಡಿದಾಗ ನಮ್ಮೂರ ಗಣೇಶ ಹಬ್ಬ ದಲ್ಲಿ ಹೊಡೆದ ತಮಟೆ ಸದ್ದಿನ ಹಾಗೆ ಭಾಸವಾಗುತ್ತಿತ್ತು. ಆರಂಭದ ದಿನಗಳಲ್ಲಿ ಇಷ್ಟವಾಗುತಿದ್ದ ಮಾಲ್ಗಳು ಹೀಗೇ ಮಾಮೂಲಿಯಾಗಿ ಕಾಣುತ್ತಿವೆ. ಬೆಂಗಳೂರಿನ ದೆವ್ವಗಳೆಲ್ಲ ಒಂದು ಕಡೆ ಸೇರಿ ಜೋರಾಗಿ … Read more
ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು. ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್‌ಕರ್, ಮೈಸೂರು ‘ಮುಂಬೈ ಮಾವ ತೀರಿ ಹೋದನಂತೆ.’ ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್‍ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ … Read more
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ … Read more
ಭಾಗಾಕಾರವನ್ನು ಸುಲಭವಾಗಿ ಮಾಡಲು ಭಾಜ್ಯತೆಯ ನಿಯಮಗಳು ಸಹಕಾರಿಯಾಗಿವೆ. ಈ ವಿಡಿಯೋ (https://www.youtube.com/watch?v=zJzuz6baRkM)ದಲ್ಲಿ ಭಾಜ್ಯತೆಯ ನಿಯಮಗಳನ್ನು ಅರ್ಥಮಾಡಿಸಿ ಅವುಗಳನ್ನು ನೆನಪಿಡಲು ಸುಲಭ ವಿಂಗಡನೆಯನ್ನು ನೀಡಲಾಗಿದೆ.
ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ. “ಥೋ ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. … Read more
“ಸಾಯ್‍ಲೆನ್ಸ ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್, ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ? ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ … Read more
ಭೂಮಿ ಮೇಲೆ ರಾಕ್ಷಸರ ಅಟ್ಟಹಾಸವು ಮಿತಿಮೀರಿದಾಗ. ಎಲ್ಲೆಲ್ಲೂ ಅನ್ಯಾಯ ವಿಜೃಂಭಿಸಿ ಅಧರ್ಮವೇ ತಾಂಡವಾಡುವಾಗ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು, ರಕ್ಷಿಸಲು ಧರೆಗಿಳಿದು ಬಂದವಳೇ ದುರ್ಗಾಮಾತೆ. ತನ್ನ ಬಳಿಗೆ ನೊಂದು ಬರುವ ಭಕ್ತರಿಗೆ ದೇವಿಯೂ ಅನುಗ್ರಹವನ್ನು ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಹರಸುತ್ತಾಳೆ ಅನ್ನುವ ಅಚಲವಾದ ನಂಬಿಕೆ ಭಕ್ತರಿಗಿದೆ. ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ದುರ್ಗಾದೇವಿಯೂ ಮಹಿಷಾಸುರನೊಂದಿಗೆ ಪಾಡ್ಯದಿಂದ ನವಮಿವರೆಗೆ ಯುದ್ಧ ಮಾಡಿ ನವಮಿಯಂದು ಅಸುರನನ್ನು ಕೊಂದಳು. ಅದುದರಿಂದ ದೇವಿಗೆ ಮಹಿಷಾಮರ್ಧಿನಿ ಎಂದು ಕರೆಯುತ್ತಾರೆ. ಪುರಾಣದ … Read more
1931 ರಲ್ಲಿ ತನ್ನ 23 ನೇ ವಯಸ್ಸಿನಲ್ಲಿ ನೇಣಿಗೆ ಸಿದ್ಧನಾಗಿ ಕಪ್ಪು ಬಟ್ಟೆಯನ್ನು ತೊಟ್ಟರೂ ನೇಣಿಗೆ ಹೆದರಿ ಮುಖ ಮುಚ್ಚಿಕೊಳ್ಳದೆ ನೇಣಿಗೆ ನಡುಕ ಉಂಟು ಮಾಡಿ ಕತ್ತನ್ನು ನೇಣಿಗೆ ಕೊಟ್ಟು ಕತ್ತನ್ನು ಸುತ್ತುವರಿದ ನೇಣಿನ ಹಗ್ಗಕ್ಕೆ ಮುತ್ತಿಟ್ಟು ತನ್ನ ಇಬ್ಬರು ಸ್ನೇಹಿತರೊಂದಿಗೆ ಹುತಾತ್ಮನಾದ ಧೈರ್ಯವಂತ ಭಗತ್ ಸಿಂಗ್! ನೇಣಿಗೆ ಕತ್ತು ಕೊಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕ ತಂದಿದ್ದೀರಾ? ಎಂದು ತಮ್ಮ ಕೊನೆಯ ಅಸೆಯ ತಿಳಿಯಲು ಬಂದ … Read more
ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ … Read more
ಆತ್ಮೀಯರೇ, ಆಯುಧ ಪೂಜೆ ಅಥವಾ ದಸರಾ ಹಬ್ಬದ ನಿಮ್ಮ ಅನುಭವಗಳನ್ನು ಬರೆದು ನಮಗೆ ಕಳುಹಿಸಿಕೊಡಿ. ಲೇಖನಗಳಿಗೆ ಪದಗಳ ಮಿತಿ ಇಲ್ಲ. ಲೇಖನದಲ್ಲಿ ಕನಿಷ್ಠವೆಂದರೂ 500 ಪದಗಳಿರಲಿ. ನಿಮ್ಮ ಲೇಖನಗಳು ಅಕ್ಟೋಬರ್ 5, 2019 ರ ಒಳಗೆ ನಮಗೆ ತಲುಪಲಿ. ನಮ್ಮ ಇ ಮೇಲ್ ವಿಳಾಸ: editor.panju@gmail.com, smnattu@gmail.com ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ಪಂಜು ಬಳಗ
ಸಂಕಲನ ಮತ್ತು ವ್ಯವಕಲನಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಕಲಿಸಿದ ಪಾರಂಪರಿಕ ವಿಧಾನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸುವುದು ಸುಲಭವಲ್ಲ. ಅಲ್ಲದೇ ಆ ವಿಧಾನಗಳನ್ನು ನಾವು ಉಪಯೋಗ ಮಾಡಬೇಕಾಗಿಯೂ ಇಲ್ಲ. ಅದಕ್ಕಿಂತ ಸುಲಭದ ಮನಸ್ಸಿನಲ್ಲಿಯೇ ಕ್ಷಣಮಾತ್ರದಲ್ಲಿ ಮಾಡುವಂತಹ ವಿಧಾನಗಳನ್ನು ಈ ವಿಡಿಯೋ ದಲ್ಲಿ ನೀಡಲಾಗಿದೆ. ಇದಕ್ಕೆ ಪ್ರಾಕ್ಟೀಸ್ ಮಾಡಲು ಕೊಂಡಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಒತ್ತಿ: Practical test
ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ. “ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ. “ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು. ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ … Read more
ಖಾಸಗಿ ಶಾಲೆಗಳಲ್ಲಿ ಪ್ರತಿಷ್ಠಿತ ವಿದ್ಯಾರ್ಥಿಗಳೇ ಹೆಚ್ಚು, ಪೋಷಕರಿಗೂ ತಮ್ಮ ಮಕ್ಕಳ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ, ಆಡಳಿತಾಧಿಕಾರಿ, ಕಾರ್ಯಕಾರಿ ಮಂಡಳಿಯ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳೋದೆ ಒಂದು ಶ್ರೀಮಂತಿಕೆ ಎನ್ನಬಹುದು ಒಂದು ನಗರದ ಹೃದಯ ಭಾಗದಲ್ಲಿದ್ದ ಒಂದು ಪ್ರಸಿದ್ಧ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಸೇರಿದ್ದ ಮೊದಲ ವರ್ಷದಲ್ಲಿ ……………. . ! ಎಂಟನೆಯ ತರಗತಿಗೆ ಪ್ರವೇಶ ಮಾಡುವ ಕೆಲ ವಿದ್ಯಾರ್ಥಿಗಳಿಗೆ ನಾನು ಕೆಲವು ಪ್ರಶ್ನೆಗಳನ್ನು ಅವರ ಮೆಂಟಲ್ ಎಬಿಲಿಟಿ, ಮೆಮೋರಿ, ರೀಡಿಂಗ್, ರೈಟಿಂಗ್, ಜಿ. ಕೆ. ಸ್ಕಿಲ್ಸ್ ಬಗ್ಗೆ … Read more
ಅಹ್! ದೇಹ ಹಗುರವಾಗುತ್ತಿರುವ ಅನುಭವ! ಏನಾಯಿತು ಅಷ್ಟೊಂದು ನೋವಾಗುತ್ತಿದ್ದ ದೇಹಕ್ಕೆ? ಪ್ರಸಾದ್ ಯೋಚಿಸುತಿದ್ದಂತೆ ತಿಳಿಯಿತು ಅವನ ಆತ್ಮ ದೇಹದಿಂದ ಹೊರಗೆ ಬಂದಿದೆ!! ಹಾಗಾಗಿ ನೋವು ಮರೆಯಾಗಿದೆ…. ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ನೆನಪಿಗೆ ಬಂತು….. ಕಷ್ಟಪಟ್ಟು ಓದಿ ಶಾಲೆಯಲ್ಲಿ ಮೊದಲನೆಯವನಾಗಿದ್ದ ಪ್ರಸಾದ್. ಎಲ್ಲದರಲ್ಲೂ ಮೊದಲು. ಆಟ ಪಾಠ, ವಿದ್ಯೆ, ಪರಿಶ್ರಮ, ಸಹನೆ, ಸ್ನೇಹ ಎಲ್ಲದರಲ್ಲೂ. ಅತ್ಯಂತ ಶ್ರದ್ಧೆಯಿಂದ ಓದಿ ಡಾಕ್ಟರ್ ಆಗಿದ್ದು ಆಯಿತು. ಉತ್ತಮ ರಾಂಕ್ ಗಳಿಸಿದ್ದಕ್ಕಾಗಿ ಸರ್ಕಾರಿ ಉದ್ಯೋಗವು ಆಯಿತು. ಡಾಕ್ಟರ್ ಆಗಿ ತನ್ನ ಕರ್ತವ್ಯ … Read more
ಇಲ್ಲಿಯವರೆಗೆ -7 – ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ. “ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ … Read more
ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಾಮಾಣಿಕತೆ ಎಂಬುದು ಮಹಾಮೌಲ್ಯವಾಗಿದೆ ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳ ನಂಬಿಕೆ. ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯ ನಡತೆಯ ಅಂಶವನ್ನು ಸೂಚಿಸುವುದಾಗಿದೆ. ಪ್ರಾಮಾಣಿಕತೆಯಲ್ಲಿ ನಿಷ್ಠೆ, ನಿಷ್ಪಕ್ಷಪಾತ, ವಿಶ್ವಾಸರ್ಹ ಮೊದಲಾದ ಗುಣಗಳು ಸೇರಿವೆ. ಇಂದಿಗೂ ನಮ್ಮಲ್ಲಿ ಸತ್ಯ, ನಿಷ್ಟೆ, ಪ್ರಾಮಾಣಿಕತೆಯಂತಹ ಹಲವಾರು ಸದ್ಗುಣಗಳಿವೆ. ಆದರೆ ಅದನ್ನು ಗುರುತಿಸುವ ಒಳಗಣ್ಣು ಬೇಕಾಗಿದೆ. “ನಾನು ಸರಿ, ಉಳಿದವರು ಸರಿಯಿಲ್ಲ” ಎಂಬ ಭಾವನೆಗಳು ಪ್ರಸ್ತುತ ಹೆಚ್ಚಾಗುತ್ತಿವೆ. ನಾವು ಸತ್ಯ ನಿಷ್ಟರೇ? ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಬಗ್ಗೆ … Read more
“ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು ನಿಂತ ಅಗಲವಾದ ಜಾಗ. ಮಧ್ಯೆ ಮಧ್ಯೆ ವಿಚಿತ್ರ ಕೀಟಗಳ ಹಾರಾಟ” ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ “ಹಾಣಾದಿ” ಕಾದಂಬರಿಯ ಸಾಲುಗಳು. … Read more
ಬದುಕನ್ನು ರೂಪಿಸಿಕೊಳ್ಳಲು ಒಂದು ಕೆಲಸ ಬೇಕು. ಕೆಲವರು ವೈಟ್ ಕಾಲರ್ ವೃತ್ತಿಯನ್ನೆ ಹುಡುಕುತ್ತಾರೆ. ಕೆಲವರು ಕಮಾಯಿ ಅಧಿಕವಿರುವುದನ್ನು ಅಪೇಕ್ಷಿಸುತ್ತಾರೆ. ಮತ್ತೆ ಕೆಲವರು ಆದರ್ಶಗಳ ಬೆನ್ನು ಹತ್ತುತ್ತಾರೆ. ದೇಶ ಪ್ರೇಮದ ತುಡಿತವುಳ್ಳವರು ಸೈನಿಕರಾಗುತ್ತಾರೆ. ಅರ್ಪಣಾ ಮನೋಭಾವ ಇರುವವರು ಶಿಕ್ಷಕರಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ‘ತಮ್ಮ ಗುರುಗಳನ್ನು ಅನುಕರಿಸಿ ಶಿಕ್ಷಕರಾಗಬೇಕೆಂದು’ ಹೊರಡುತ್ತಾರೆ . ಕೆಲವರು ಸ್ವ- ಉದ್ಯೋಗದ ದಾರಿ ಹಿಡಿದು ಬದುಕು ಕಟ್ಟಿಕೊಳ್ಳುತ್ತಾರೆ. ಎಷ್ಟೋ ದಿನಗಳ ನಂತರ, ಎದುರು ಸಿಕ್ಕಾಗಲೋ, ಪೋನ್ ಕರೆ ಮಾಡಿದಾಗಲೋ, ನೆನಪುಗಳಿಗೆ ಮತ್ತಷ್ಟು ಹಸಿರು ಬಣ್ಣ ಬಳಿಯುತ್ತಾರೆ. … Read more
ಸುಧಾಕರ ಹಾಗು ಸ್ವಾತಿ ರಾತ್ರೋರಾತ್ರಿ ಊರು ಬಿಟ್ಟು ಹೊರಟು ಹೋದರು. ಇಬ್ಬರದು ಮೂರು ವರ್ಷಗಳ ಪ್ರೇಮ್ ಕಹಾನಿ ಆಗಿದ್ದರಿಂದ ಸೆಳತ ಹೆಚ್ಚಿಗೆಯೆ ಇತ್ತು. ಸುಧಾಕರ, ಆಟೊ ಓಡಿಸಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡುತಿದ್ದ. ಅದ್ಹೇಗೊ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಸುಧಾಕರನ ತಾಯಿ ಜಲಜಮ್ಮನಿಗೆ, ಗಂಡ ತೀರಿ ಹೋದಾಗಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಬಡತನವೊ, ಅಥವ ಮನೆಯ ಯಜಮಾನನಿಲ್ಲವೆಂಬ ಕಾರಣಕೋ, ಸುಧಾಕರನಿಗೆ ವಿದ್ಯೆ ಅಷ್ಟೊಂದು ತಲೆಗೆ ಹೋಗಲಿಲ್ಲ. ಕಾಲಕಳದಂತೆ ಓದಬೇಕೆಂಬ ಹಂಬಲವು ಕಡಿಮೆಯಾಯಿತು. ತಾಯಿಗೆ ವಯಸ್ಸಾಗುತ್ತಿದೆ ಎಂದು … Read more
ಕನಸುಗಳು ಮನುಷ್ಯನನ್ನು ಪ್ರಾಚೀನ ಕಾಲದಿಂದಲೂ ವಿಸ್ಮಯಗೊಳಿಸಿವೆ. ಕನಸೆಂಬುದು ಮಾಯಾಲೋಕ! ನಿಜ ಜೀವನದಲ್ಲಿ ಆಗದಿರುವುದು ಕನಸಿನಲ್ಲಿ ಸಾಧ್ಯವಾಗಬಹು. ಮಲಗಿದ್ದಾಗ ಅರೆ ಎಚ್ಚರದ ಸ್ಥಿತಿಯಲ್ಲಿ ಬೀಳುವಂಥವು ‘ ಕನಸು ‘ . ಕನಸು ಎಂದರೆ ಮಿಥ್ಯ! ಅವು ನನಸು ಆಗಬಹುದು ಆಗದೇ ಇರಬಹುದು. ಬಹುತೇಕ ಆಗಲಾರವು! ರಾತ್ರಿ ಅರೆ ಎಚ್ಚರದ ಸ್ಥಿತಿಯಲ್ಲಿ ಬಿದ್ದು ಎಚ್ಚರವಾಗುತ್ತಿದ್ದಂತೆ ಮಾಯವಾಗುವಂಥವು ಎಷ್ಟರಮಟ್ಟಿಗೆ ನನಸಾಗಿಯಾವು? ಬೆಳಗಿನಜಾವದಲ್ಲಿ ಬಿದ್ದ ಕನಸುಗಳು ನನಸಾಗುತ್ತವಂತೆ ಅಂತ ಯಾರು ಹೇಳಿದರೋ ಏನೋ ಆ ನಂಬಿಕೆಯಿದೆ! ಮನಸ್ಸಿಗೆ ಸಂತೋಷ ನೀಡುವ ಸಕಾರಾತ್ಮಕವಾದ ಕನಸಿರುವಂತೆ … Read more
**ಮಾರಿಬಲೆಯಾ ** ಬಲೆಯೆತ್ತಿ ಹೊರಟಿಹರು ಬೆಸ್ತರು ಸಡಗರದಿ ಜಡಿಮಳೇಲಿ ಕಡಲ ತಡಿಗೆ I ಇಂದು ಸಿಕ್ಕಾವೋ? ಭೂತಾಯಿ ಕೊಡವಾಯಿ ಕಂಡಿಕಿ ಜಾರಿ ನನ್ನ ಬಲಿಗೆ I ಬಂದಿಹುದು ಮಳೆಗಾಲ ಬೀಸುವುದೇ ಬಲೆ ಈಗ! ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I ಮರವಂತೆ ಕಡೆಹೋಪ ಬರುವುದು ಬಾರಿ ಬೆಲೆ ಸಿಕ್ಕರೆ ಭೂತಾಯಿ ಕಂಡಿಕಿ I ಬೋರ್ಗರೆವ ಕಡಲೆಡೆಗೆ ಬಂದಾನೋ ಮೊಗವೀರ ಬೀಸಿದಾ *ಮಾರಿ**ಬಲೆಯಾ I ನನ್ನಯ ಮನೆಯಿಂದ ದೂರಾದ ಮೈಲುವರೆಗೂ ಇಂದು ನನ್ನದೇ ಬಲೆಯೂ I ಬಲೆ ಬಿಡುವುದು … Read more
”ಮುನ್ನೂರು ರೂಪಾಯಿ ಸಾರ್…”, ಅಂದಿದ್ದೆ ನಾನು. ಪರಿಚಿತ ಹಿರಿಯರೊಬ್ಬರು ನನ್ನ ಈ ಮಾತನ್ನು ಕೇಳಿ ನಿಜಕ್ಕೂ ಹೌಹಾರಿಬಿಟ್ಟಿದ್ದರು. ಅಂದು ನಾವು ಮಾತನಾಡುತ್ತಿದ್ದಿದ್ದು ಕ್ಷೌರದ ಬಗ್ಗೆ. ಊರಿನಲ್ಲಿ ನಲವತ್ತು-ಐವತ್ತು ರೂಪಾಯಿಗಳಿಗೆ ಮುಗಿದುಹೋಗುತ್ತಿದ್ದ ಹೇರ್ ಕಟ್ಟಿಂಗಿಗೆ ಅಷ್ಟೊಂದು ಹಣ ಸುರಿಯುವಂಥದ್ದೇನಿದೆ ಎನ್ನುವ ಅಚ್ಚರಿ ಅವರದ್ದು. ‘ಇವೆಲ್ಲ ಬೇಕಾ ನಿಂಗೆ’ ಎಂದು ಕಣ್ಣಲ್ಲೇ ನುಂಗುವಂತೆ ನನ್ನನ್ನು ನೋಡಿದರು. ಎಲ್ಲರಿಗೂ ಈಗ ಶೋಕಿಯೇ ಬದುಕಾಗಿಬಿಟ್ಟಿದೆ ಎಂದು ಬೈದೂಬಿಟ್ಟರು. ಬೈದಿದ್ದು ನನಗೋ ಅಥವಾ ಕ್ಷೌರ ಮಾಡಿಸಿದವನಿಗೋ ಗೊತ್ತಾಗಲಿಲ್ಲ. ಆದರೆ ಭೌತಿಕವಾಗಿ ನಾನೇ ಅಲ್ಲಿ ಇದ್ದಿದ್ದರ … Read more
ಹಿಂದಿ ಮೂಲ – ಪ್ರೇಮಚಂದ ಕನ್ನಡಕ್ಕೆ – ಗಿರೀಶ ಜಕಾಪುರೆ 1. ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’ ‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’ ‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’ ‘ನಾನು ಸದಾಕಾಲ ನಿನ್ನನ್ನು … Read more
ಸಂಬಂಧಗಳು ನಮಗೆಷ್ಟು ಮುಖ್ಯ? ಯಾವ ಸಂಬಂಧಗಳು ನಮ್ಮನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ.? ಯಾವ ಸಂಬಂಧಗಳನ್ನು ನಾವು ಯಾವತ್ತು ಬಿಟ್ಟು ಹೋಗುವುದಿಲ್ಲ.?ಯಾರು ನಮ್ಮನ್ನು ಅತಿಯಾಗಿ ಕಾಡುತ್ತಾರೆ.? ಇಲ್ಲಿ ಸಂಬಂಧಗಳನ್ನು ಬೆಳೆಸಲು ಯಾವ ಮಾನದಂಡಗಳ ಅಗತ್ಯವಿದೆ.? ಪ್ರಶ್ನೆಗಳು ಮುಗಿಯಲಾರದಷ್ಟಿವೆ.. ಉತ್ತರಗಳನ್ನು ನಾವು ಹುಡುಕಬೇಕಷ್ಟೆ.. ನಮ್ಮ ಬದುಕಿನಲ್ಲಿ ಬರುವ ಸಂಬಂಧಗಳು ಅರಿತೋ ಅರಿಯದೆನೋ ನಮ್ಮನ್ನು ಗಾಢವಾಗಿ ತನ್ನ ಬಾಹುಗಳಲ್ಲಿ ಬಂಧಿಸಿರುತ್ತದೆ. ಮಾನವ ಸಂಬಂಧಗಳೆ ಹೀಗೆ ಹುಟ್ಟಿದ ಕೂಡಲೇ ಸಂಬಂಧಗಳ ಸಂಕೋಲೆಯೊಳಗೆ ಬಂಧಿಯಾಗಿರುತ್ತಾನೆ. ತನ್ನ ತಾಯಿ ಜೊತೆ ಶುರುವಾದ ಈ ಸಂಬಂಧ ಇನ್ನಷ್ಟು … Read more
ಇಲ್ಲಿಯವರೆಗೆ – 5 – ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ … Read more
ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು! ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ … Read more