ಗಜ಼ಲ್: ಡಾ. ಗೋವಿಂದ ಹೆಗಡೆ, ಲಕ್ಷ್ಮಿಕಾಂತ ನೇತಾಜಿ ಮಿರಜಕರ
ಗಜ಼ಲ್-೧ ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ ಎಂಥ ನೋವಿನಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ ಬಂದ ದಾರಿಯಲಿ ಸುರಿದ ಮಂಜು ಮುಂದಕ್ಕೂ ಚಾಚಿ ಮಬ್ಬು ಯಾರಿಗೆ ದೂರು ಹೇಳಿದ್ದೇನೆ ಒಡಕು ತಮಟೆಯ ಬಡಿಯುತ್ತ ಖಚಿತ ಚಹರೆಗಳೇ ಇಲ್ಲದೆ ಹೇಗೋ ಬರೆದಿದ್ದೇನೆ ಚಿತ್ರ ಮುಖ ಮೀಸೆ ಬರಿದೆ ಮೆತ್ತಿದ್ದೇನೆ ಗೆರೆಯ ಎಳೆಯಲು ಸೋಲುತ್ತ ಎಲ್ಲದು ಅಗಣಿತ ಸಂದಣಿಯಲ್ಲಿ ಕಳೆಯಿತು ಒಂಟಿದನಿ ಬರಿದೇ ಸಂತೆ ತಿರುಗಿದ್ದೇನೆ ನನ್ನನೇ ನಾನು ಹುಡುಕುತ್ತ ಕೈ ಕೈ ಹಿಡಿದು ಒಟ್ಟಿಗೆ ನಡೆದೂ … Read more