ದಿಕ್ಕುಗಳು (ಭಾಗ 7): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಆದರೆ ಇಂದು ಲಲಿತಳ ಹುಡುಗುತನವೆಲ್ಲಾ ಒಂದೇ ಏಟಿಗೆ ಸತ್ತು ಹೋಗಿದೆ. ಅವಳು ಚೈತನ್‌ನನ್ನು ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಳು. ಹಾಗಂತ ಆತನನ್ನು ಬೇರೊಬ್ಬಳೊಂದಿಗೆ ನೋಡುಡುವುದೂ ತನ್ನಿಂದಾಗದು ಎಂದು ಬಿಕ್ಕಿದಳು. ಆಕೆ ತನ್ನ ರೂಮಿಗೆ ಬಂದಾಗ ಎಂಟು ಗಂಟೆಯಾಗಿತ್ತು. ಎಂದಿನಂತೆ ಮುಖ ತೊಳೆಯಲಿಲ್ಲ. ಬಟ್ಟೆ ಬದಲಾಯಿಸಲಿಲ್ಲ. ತನ್ನ ಕಂಪ್ಯೂಟರ್ ಮುಂದೆ ಕುಳಿತು, ಇ-ಮೈಲ್ ಬಾಕ್ಸ್ ತೆರೆದಳು. ಅಲ್ಲಿ ಹಲವಾರು ಪತ್ರಗಳು ತನಗಾಗಿ ಕಾಯುತ್ತಿದ್ದವು. ಚೈತನ್‌ನಿಂದ ಕೂಡ ಒಂದು ಪತ್ರ ಬಂದು ಕುಳಿತಿತ್ತು. ಏನು ಬರೆದಿರಬಹುದು ಎಂದು ಆತನ ಪತ್ರವನ್ನು ತೆರೆದಳು. … Read more