ಬರದ ಬೇಗೆಯಿಂದ ತತ್ತರಿಸುತ್ತಿದ್ದ ಕೂಲಿಕಾರ್ಮಿಕರಿಗೆ ಆಶಾಕಿರಣವಾದ ಆಲೆಮನೆ: ಹನಿಯೂರು ಚಂದ್ರೇಗೌಡ
ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಹನೂರಿನಲ್ಲಿ ಹಲವಾರು ವರ್ಷಗಳಿಂದ ಮಳೆ-ಬೆಳೆ ಇಲ್ಲದೆ ಬರದ ಬವಣೆಯಲ್ಲಿ ತತ್ತರಿಸಿ ಗುಳೇ ಹೊರಡುವ ಸ್ಥಿತಿಯಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೆಲವರಿಗಾದರೂ ಕೃಷ್ಣನಾಯ್ಡುರವರ ಆಲೆಮನೆ ಆಶಾಕಿರಣವಾಗುವ ಮೂಲಕ ಆಸರೆ ನೀಡಿದೆ. ಗೊಂಬೆ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಸಿದ್ದಪಡಿಸಿರುವುದು. ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಕಾರಣ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬಳೆಯಲು ಆಗದಿರುವಂತಹ ಪರಿಸ್ಥಿತಿಯಲ್ಲಿ, ಯಥೇಚ್ಛ ನೀರನ್ನು ಅಲವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ … Read more