ಲಿನಕ್ಸ್ install ಮಾಡೋದು ಹೇಗೆ ?: ಪ್ರಶಸ್ತಿ ಪಿ.

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ … Read more

ಹರಕೆ ತೀರಿತ್ತು…! (ಮೊದಲ ಭಾಗ) : ಸಾವಿತ್ರಿ ವಿ. ಹಟ್ಟಿ

ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ … Read more

ಅಲ್ಲಿ ಮಾವಿಗೆ ಮರಣದಂಡನೆ – ಇಲ್ಲಿ ಕಾಡೆಮ್ಮೆ ಕರುವಿನ ದುರಂತ: ಅಖಿಲೇಶ್ ಚಿಪ್ಪಳಿ

ನೈಸರ್ಗಿಕ ಸಂಪತ್ತನ್ನು ಬರಿದು ಮಾಡಲು ಯಾರೆಲ್ಲಾ, ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ. ಪಶ್ಚಿಮಘಟ್ಟಗಳ ಕಾಡನ್ನು ಬರಿದು ಮಾಡಲಾಗಿದೆ. ಅಳಿದುಳಿದ ಅರಣ್ಯವನ್ನು ನುಂಗಿ ನೊಣೆಯುವ ಹಂತಕ್ಕೆ ಸರ್ಕಾರವೇ ಬಂದು ನಿಂತಿದೆ. ನಮ್ಮ ಘನ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, ನೀಲಗಿರಿ, ಅಕೇಶಿಯಾದ ಕೆಲವು ತಳಿಗಳು, ಅಡಕೆ-ತೆಂಗಿನ ಮರಗಳು, ನಿಂಬೆ-ಪೇರಳೆ ಗಿಡ, ಕಾಫಿ ಗಿಡ, ಹಳದಿ ಬಿದಿರು, ಹೆಬ್ಬೇವು, ಶಮೆಗಳ ಹೀಗೆ ಒಟ್ಟು 26 ಗಿಡ-ಮರಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದರಿಂದ ವಿನಾಯತಿ ನೀಡಲಾಗಿದೆ. ಅಂದರೆ, ಅರಣ್ಯ … Read more

ಜೇ.ಸಿ.ಬಿ!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು.  …ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ … Read more

ಮೂರು ಕವಿತೆಗಳು: ಸಂತೋಷಕುಮಾರ ಸೋನಾರ, ಲಕ್ಷ್ಮೀಕಾಂತ ಇಟ್ನಾಳ, ನಳಿನಾಕ್ಷಿ ಹೀನಗಾರ್

ಅಪ್ಪ ಬೆಂಕಿ ಉಗುಳುವ ಕಣ್ಣು| ಘರ್ಜಿಸುವ ದನಿ| ಹೃದಯ ಸೂಕ್ಷ್ಮ | ಒಮ್ಮೊಮ್ಮೆ ಉಗ್ರ ಪ್ರತಾಪಿ | ಮಗದೊಮ್ಮೆ ಮಗುವಿನ ಮನಸ್ಸು|  ಅರ್ಥಕ್ಕೆ ನಿಲುಕದಾ ನನ್ನ ಅಪ್ಪ ನೆನಪಾಗುತ್ತಾರೆ !   ಏನೀ ಪ್ರಶ್ನೆಗಳು? ಈ ಹಳೆಯ ಕಾಲದ ಮಂದಿ| ಏನೇನೋ ಕೇಳುವರು ದೊಡ್ಡ ವೈದ್ಯರಿಗೇ ಪ್ರಶ್ನೆ | ಈ ನರ್ಸುಗಳು |  ಬಿಳಿ ಬಟ್ಟೆ ವೈದ್ಯರು ಕಂಡಾಪಟ್ಟೆ ಓದಿದವರು|  ಆತನ ಪ್ರಶ್ನೆಗಳಿಗೆ ಉತ್ತರಿಸಲಾರರು ಅದಕ್ಕೆ ಅಪ್ಪ ನೆನಪಾಗುತ್ತಾರೆ ! ಇನ್ನೂ ಈ ಮಕ್ಕಳು ಮರಿಗಳು? ಚಿಕ್ಕವರಿದ್ದಾಗ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜ್ಞಾನೋದಯವಾದವ ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು. “ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು. “ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ. “ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು. “ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ ***** ೨. ಸಭ್ಯಾಚಾರ ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ … Read more

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ … Read more

ನಡುವೆ ಸುಳಿವಾತ್ಮ…: ಮಹಾದೇವ ಹಡಪದ

 ಬನದ-ಭಾರತ ಹುಣಿವಿಗೆ ಯಲ್ಲಮ್ಮ ತಾಯಿ ಜಾತ್ರೆ ಜೋರು ನಡಿತದ. ಉಡಿ ತುಂಬಸೋದು, ಮುತ್ತು ಕಟಗೊಂಡವರು ಸೇವಾ ಮಾಡೋದು, ಬೇವಿನ ತಪ್ಪಲದಾಗ ಕುಂತ ತಾಯಿಯನ್ನ ಎರೆಯೋದು, ದೀಡ ನಮಸ್ಕಾರ ಹಾಕೋದು, ಪಡ್ಡಲಗಿ ಹಿಡದು ನೇಮದ ಸಲುವಾಗಿ ನಾಕೈದು ಮನಿ ಜೋಗ ಬೇಡೋದು ಹಿಂಗ ಒಕ್ಕಲ ಮಕ್ಕಳ ಮನಿಯೊಳಗ ಸಡಗರ ಹೊಗೆಯಾಡತಿರತದ. ಜಡೆಬಿಟ್ಟ ಜೋಗಮ್ಮ ಜೋಗಪ್ಪಗಳು ತಿಂಗಳ ಕಾಲ ಬಿಡುವಿಲ್ಲದ ಮುಯ್ಯಿ ಮಾಡತಿರತಾರು. ಬಳಿ ಒಡೆದು ರಂಡೆ ಮಾಡೋದರಿಂದ ಶುರುವಾಗುವ ವಿಧಿವಿಧಾನಗಳು ಸೀರಿ ಉಡಿಸಿ, ಮುತ್ತು ಕಟ್ಟಿ, ಕುಂಕಮ ಇಡೋವರೆಗೂ … Read more

ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತಾನಂತೆ ಪುಗಸಟ್ಟೆ ಸೌರಶಕ್ತಿ: ರೋಹಿತ್ ವಿ. ಸಾಗರ್

ನಿಸರ್ಗದ ಅತೀ ಬುದ್ಧಿವಂತ ಕೂಸು ಎಂದೇ ಕರೆಯಲ್ಪಡುವ ಮಾನವನ ಅತೀ ಬುದ್ಧಿವಂತಿಕೆಯ ಪರಾಕಾಷ್ಟೆ ಆ ನಿಸರ್ಗದ ಬುಡವನ್ನೇ ಅಲುಗಾಡಿಸುವಂತದ್ದು. ಕುತೂಹಲ ಯೋಚನಾ ಸಾಮರ್ಥ್ಯದ ಬಲದಿಂದ  ಮೊದಲು ಬೆಂಕಿಯನ್ನು ಕಂಡುಹಿಡಿದ, ಅದರಿಂದ  ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಎಗ್ಗಿಲ್ಲದೆ ಮಾಡತೊಡಗಿದ. ಬೇಯಿಸಿದ ಆಹಾರ ರುಚಿಯೆನಿಸಿತು; ಬೆಂಕಿ ಉರಿಸಲು ಕಟ್ಟಿಗೆ ಬೇಕು ಕಾಡು ಕಡಿದ, ಬೆಂಕಿಯ ಬೆಳಕು ಬೇಕು ಕಾಡು ಕಡಿದ, ಮರಕ್ಕಿಂತ ಕಲ್ಲಿದ್ದಲು ಉತ್ತಮ ಎಂದು ಅರಿತ, ಗಣಿ ಬೇಕು, ಕಾಡು ಕಡಿದ, ವಿದ್ಯುತ್ ಕಂಡುಹಿಡಿದ, ಅದಕ್ಕೆ ಅಣೆಕಟ್ಟು ಬೇಕು, … Read more

ಕೋಲಾಪಾನಕ ಉಪಾಖ್ಯಾನ ಸಹಿತ ರಘುವರಚರಿತ ಲಘುವ್ಯಾಖ್ಯಾನವು: ಎಸ್. ಜಿ. ಸೀತಾರಾಮ್

ವಿಧವಿಧ ರಾಮಾಯಣಗಳಿಂದ ಹೆಚ್ಚುತ್ತಿರುವ ಹೊರೆಯಿಂದಾಗಿ, ಭೂಭಾರವನ್ನು ಹೊತ್ತ ಆದಿಶೇಷನು ನುಲಿದಾಡುತ್ತಿದ್ದಾನೆ; ರಾಮಾಯಣ ಸಾಹಿತ್ಯ ಪ್ರದೇಶ ಕಾಲಿಡಲಾಗದಷ್ಟು ನಿಬಿಡವಾಗಿಹೋಗಿದೆ ಎಂಬಂತೆ ಕುಮಾರವ್ಯಾಸನು ಸುಮಾರು ೬೦೦ ವರ್ಷಗಳ ಹಿಂದೆಯೇ ಹೇಳಿದ್ದನೆಂದಮೇಲೆ, ಇಂದು ಆ ಹೊರೆ ಇನ್ನೆಷ್ಟು ಹೆಚ್ಚಿರಬಹುದೆಂದು ಊಹಿಸಬಹುದು. ಆದ್ದರಿಂದಾಗಿ, ಮತ್ತೆ ಅದೇ ಕಥೆಯನ್ನೇ ಇರುಳುದ್ದ ಹೇಳಿ, ಹಗಲು ಹರಿಯುತ್ತಿದ್ದಂತೆ, ರಾಮಣ್ಣ-ರಾವಣ್ಣ ಯೇನ್ ಅಣ್ಣ-ತಮ್ಮಂದ್ರಾ? ಎಂಬ ಆಕಳಿಕೆಯ ಆಲಾಪವನ್ನು ಆಲಿಸುವ ಬದಲು, ಈಗಿನ ರಾಮಜನ್ಮದಿನಾಚರಣೆಗಾಗಿ ಅದೇ ರಘುವರಕಥೆಯ ಕೆಲವೇ ವಿಚಾರಗಳ ಲಘುನೋಟವೊಂದನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಆ ಕಥೆಯ ಕೆಲವು ಪ್ರಮುಖ … Read more

ಬೆಳಕ ಕನಸ ಬೆನ್ನೇರಿ: ಪ್ರಶಸ್ತಿ ಪಿ.

ಬೀದಿಗೆಲ್ಲಾ ಬೆಳಕೀಯುತ್ತಿದ್ದ ಪಾದರಸ ದೀಪದ ಅಂಚು ಕಪ್ಪುಗಟ್ಟಿತ್ತು. ಕಣ್ಣುರಿಸೋ ಪ್ರಖರ ಬೆಳಕ ಲೆಕ್ಕಿಸದೆ ಅತ್ತಲೇ ದಿಟ್ಟಿಸುವವರಿಗೆ ಆ ಕಪ್ಪೊಂದು ಸಾವರಾಶಿ ಅಂತ ಹೊಳೆಯುತ್ತಿತ್ತು. ಒಳಹೊಕ್ಕಲು ಜಾಗವೇ ಇಲ್ಲವೆಂಬಂತೆ ಭಾಸವಾಗುತ್ತಿದ್ದ ಮರ್ಕ್ಯುರಿ ದೀಪದ ಶಾಖವನ್ನೂ ಲೆಕ್ಕಿಸದೇ ಆ ಹುಳುಗಳು ಅದೇಗೆ ಒಳಹೊಕ್ಕವೋ, ಬೆಳಕ ಜೊತೆಗೇ ಇದ್ದ ಬಿಸಿಗೆ ಸುಟ್ಟು ಸತ್ತವೋ ಮೊದಮೊದಲ ನೋಡುಗನಿಗೆ ಸದಾ ಅಚ್ಚರಿಹುಟ್ಟಿಸುವಂತಿತ್ತು. ಬೆಳಕಿಗೆ ಕಾರಣವ ಹೊತ್ತು ನಿಂತ ಉದ್ದನೆ ಕಂಬಕ್ಕೆ ಕಾಡುತ್ತಿರೋ ಏಕತಾನತೆ, ಎಲ್ಲಾ ಮಲಗಿರುವಾಗ ಎದ್ದಿದ್ದು ಜಗಕೆ ಬೆಳಗ ತೋರೂ ನಿರ್ಲ್ಯಕ್ಷ್ಯಕ್ಕೊಳಗಾಗುತ್ತಿರೋ ಬೇಸರದ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಎರಡು ಮೊಲಗಳ ಬೆನ್ನಟ್ಟಿ ಹೋಗುವುದು.  ಕದನ ಕಲೆಗಳ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಾಪಕನನ್ನು ಸಮೀಪಿಸಿ ಕೇಳಿದ: “ಕದನ ಕಲೆಗಳ ಕುರಿತಾದ ನನ್ನ ಜ್ಞಾನವನ್ನು ಇನ್ನೂ ಉತ್ತಮಗೊಳಿಸಿಕೊಳ್ಳು ಬಯಕೆ ನನ್ನದು. ನಿಮ್ಮಿಂದ ಕಲಿಯುವುದರ ಜೊತೆಯಲ್ಲಿ ಇನ್ನೊಂದು ಶೈಲಿಯನ್ನು ಇನ್ನೊಬ್ಬ ಅಧ್ಯಾಪಕರಿಂದ ಕಲಿಯಬೇಕೆಂದಿದ್ದೇನೆ. ಈ ನನ್ನ ಆಲೋಚನೆಯ ಕುರಿತು ನಿಮ್ಮ ಅನಿಸಿಕೆ ಏನು?” ಗುರುಗಳು ಉತ್ತರಿಸಿದರು: “ ಎರಡು ಮೊಲಗಳ ಬೆನ್ನಟ್ಟಿ ಹೋಗುವ ಬೇಟೆಗಾರ ಯಾವುದೊಂದನ್ನೂ ಹಿಡಿಯುವುದಿಲ್ಲ.” ***** ೨. ಏಕಾಗ್ರತೆ ಬಿಲ್ಲುಗಾರಿಕೆಯ ಅನೇಕ ಸ್ಪರ್ಧೆಗಳಲ್ಲಿ ಗೆದ್ದು ಸರ್ವವಿಜೇತನಾಗಿದ್ದ ಯುವ … Read more

ಚುಟುಕಗಳು: ವೀಣಾ ಭಟ್

ವ್ಯರ್ಥ ಸುಂದರಿಯ ನಡೆಯಲ್ಲಿ  ಸುಗುಣವಿಲ್ಲದಿರೆ  ಆ ಸೌಂದರ್ಯ  ಸುಡುಗಾಡು ಹೊಗೆಯಲ್ಲಿ  ಸುರುಗಿ ಹೂ ಕಂಪು   ಚೆಲ್ದಂತೆ ವ್ಯರ್ಥ.  ಗ್ರಹಚಾರ ಈ ರಾಜಕೀಯ ಮಂತ್ರಿಗಳ ಸರ್ಕಾರ  ರಾಕ್ಷಸರ ಅವತಾರ  ಅವರದೇ ದರ್ಬಾರ  ಹೇಳುವರು ಮಾಡುವೆವು ನಮ್ಮ ಉದ್ದಾರ  ಕೇಳಿ ಪ್ರಶ್ನಿಸಿದರೆ ಇಲ್ಲದ  ಟೆಕ್ಸಾಕಿ ಬಿಡಿಸುವರು ನಮ್ಮ ಗ್ರಹಚಾರ ಹಿಂಗಿದೆ ನೋಡಿ ಸ್ವಾಮೀ ಸಮಾಚಾರ   ಪಜೀತಿ  ನನ್ನುಡುಗಿ ಪಾರ್ವತಿ  ನಾ ಮಾಡ್ತಿದ್ದೆ ತುಂಬಾ ಪಿರೂತಿ  ಅವಳ ಚೆಂದದ ಗೆಳತಿ ಮಾಲತಿ   ಕಂಡಾಗಿನಿಂದ ನಾನಾದೆ ಮಾರುತಿ  ನನ್ನುಡುಗಿ … Read more

ಬಿಡುಗಡೆಗೆ ಹಂಬಲಿಸುವ ಮಹಿಳಾ ಧ್ವನಿಯ ’ದ್ಯೂತಭಾರತ’: ಹಿಪ್ಪರಗಿ ಸಿದ್ಧರಾಮ

ಮಹಾಭಾರತ ಕಥನ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂಥದ್ದೇ. ಆಯಾ ಕಾಲಘಟ್ಟದಲ್ಲಿ ಸೃಜನಶೀಲತೆಯ ವಿವಿಧ ಆಯಾಮಗಳೊಂದಿಗೆ ವಿವಿಧ ಪ್ರಕಾರಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ಈ ಮಹಾಭಾರತದಲ್ಲಿ ಹೆಚ್ಚಾಗಿ ಮೋಸ, ಕುತಂತ್ರ, ಶೋಷಣೆ, ಅಪಮಾನ, ಹಾದರ, ಬಹುಪತಿತ್ವ, ಬಹುಪುತ್ರತ್ವ, ಮಂತ್ರ ಜಪಿಸಿದ ಕ್ಷಣ ಮಾತ್ರದಲ್ಲಿ ಜನಿಸುವ ವೀರರು, ಹೀನ ರಾಜಕಾರಣ, ಸೇಡು, ಕಿಡಗೇಡಿತನ, ಹೊಣೆಗೇಡಿತನ, ರಸಿಕತನ, ಹುಂಬತನ, ಸ್ನೇಹ ಹೀಗೆ ಹಲವಾರು ಸಂಗತಿಗಳು ವಿಜೃಂಭಿಸಿರುವುದು ಸುಳ್ಳೇನಲ್ಲ. ಇಂತಹ ಮಹಾಭಾರತದಲ್ಲಿ ಶಕುನಿ ಮಾಮಾನ ಕುತಂತ್ರದಿಂದ ಪಗಡೆಯಾಟದ ಜೂಜಿನಲ್ಲಿ ಸೋಲುಂಡ ಪಾಂಡವರು ಕರಾರಿನಂತೆ ವನವಾಸ-ಅಜ್ಞಾತವಾಸ ಅನುಭವಿಸುತ್ತಾರೆ. … Read more

ಕುಮಧ್ವತಿಯ ತಟದಲ್ಲಿ: ಶಿವಕುಮಾರ ಚನ್ನಪ್ಪನವರ

ಕುಮಧ್ವತಿಯ ಸೋದರಿಗೆ, ಪ್ರೀತಿಯ ಭಾಗೀರಥಿಗೆ………… ತಟ್ಟಕ್ಕನೇ ಅಲೆಯೆಬ್ಬಿಸಿ ಮರೆಯಾಗುವ ಮೀನು ತುಂಬಿ ತುಳುಕಾಡುವ ಕುಮಧ್ವತಿಯ ದಡದಲ್ಲಿ ನೀನು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡ ಅಳಿಸುವ ಹುನ್ನಾರ ನಡೆಸಿದಂತೆ ಕಾಣುತ್ತದೆ.  ರಾತ್ರಿಯೆಲ್ಲಾ ಕಣ್ಣ ರೆಪ್ಪೆ ಮುಚ್ಚುತ್ತಿದ್ದಂತೆ ಕಣ್ಣ ಪರದೆಯ ಪಟಲದಲ್ಲಿ ಕುಣಿಯುವ ನಿನ್ನ ನೆನಪುಗಳು ಚಾಪೆಯಡಿ ಕುಳಿತ ತಿಗಣೆಗಳಿಗೂ ಅಳು ಬರಿಸುವಂತಿರುತ್ತದೆ. ಒಬ್ಬಂಟಿಯಾಗಿ ಬಿಚ್ಚಿ ಹರವಿಕೊಂಡ ಅವೇ ನೆನಪುಗಳ ಮಧ್ಯದಿಂದಲೇ ನಿನ್ನ ಸುಳಿವು ಗುಂಗಾಡಿ ಹುಳುವಿನಂತೆ ಗುಯ್ ಗುಟ್ಟುತ್ತಾ ತಲೆ ಹೊಕ್ಕು ದೇಹದ ಯಾವ ಭಾಗವನ್ನು ಬಿಡದೇ ಸಮಾಜವೆಲ್ಲದರಿಂದ ದೂರವಾಗಿ … Read more

ಪರಿಸರದ ವಿರುದ್ಧ ಜಾಗತಿಕ ಯುದ್ಧ: ಅಖಿಲೇಶ್ ಚಿಪ್ಪಳಿ

ಕೊಡಲಿಯೊಂದು ತಾನಾಗಿಯೇ ಹೋಗಿ ಯಾವುದೇ ಮರವನ್ನು ಕಡಿದ ದಾಖಲೆಯಿಲ್ಲ. ಆದರೆ, ಬೀಜವೊಂದು ತಾನಾಗಿಯೇ ಮಣ್ಣಿನಲ್ಲಿ ಸೇರಿ, ಮರುಹುಟ್ಟು ಪಡೆದ ದಾಖಲೆಗಳು ಎಲ್ಲೆಂದರಲ್ಲಿ ಸಿಗುತ್ತದೆ. ಅಂದರೆ, ನಾಶ ಮಾಡಲು ಪ್ರೇರಕ ಶಕ್ತಿ ಬೇಕು. ಹುಟ್ಟು-ಮರುಹುಟ್ಟು ಈ ಪ್ರಕ್ರಿಯೆ ನಿಸರ್ಗದಲ್ಲಿ ತನ್ನಿಂದ ತಾನೇ ಸಂಭವಿಸುತ್ತದೆ. ಬಿಲ್ಲು-ಬಾಣಗಳು ಖುದ್ದು ಹೋಗಿ ಬೇಟೆಯಾಡುವುದಿಲ್ಲ. ಬಂದೂಕಿನಿಂದ ಗುಂಡು ತಾನಾಗಿಯೇ ಸಿಡಿಯುವುದಿಲ್ಲ. ಇದಕ್ಕೆ ಇನ್ನೊಬ್ಬರ ಸಹಾಯ ಬೇಕು, ಗುರಿ ಇರಬೇಕು, ಶ್ರಮ ಬೇಕು. ಪ್ರಕೃತಿಯ ಸೃಷ್ಟಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗಳಿಗೆ ಶ್ರಮ ಬೇಕಿಲ್ಲ. ಅಡಚಣೆ-ಅಪಾಯಗಳಿಲ್ಲದಿದ್ದರೆ, ನಿಸರ್ಗದಲ್ಲಿ … Read more

ಸಾಮಾನ್ಯ ಜ್ಞಾನ (ವಾರ 72): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು? ೨.    ಜಿ.ಎಸ್.ಎಂ (GSM)  ನ ವಿಸ್ತೃತ ರೂಪವೇನು? ೩.    ಅಧಿಕ ಪ್ರೋಟೀನ್ ಹೊಂದಿರುವ ಬೆಳೆ ಯಾವುದು? ೪.    ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ? ೫.    ೧೯೯೭ – ೨೦೦೩ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು? ೬.    ಸೋಡಾ ವಾಟರ್‌ನಲ್ಲಿರುವ ಆಮ್ಲ ಯಾವುದು? ೭.     ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? ೮.    ೧೯೯೪ ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು? … Read more