ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.
ಇತ್ತೀಚೆಗೆ ತೇಜಸ್ವಿಯವರ "ಸಂತೆ" ಕಥೆ ಓದಿದಾಗ ನನಗೂ ಸಂತೆಗೆ ಹೋಗಬೇಕೆನಿಸಿತ್ತು. ನನ್ನ ಮಡದಿ ಪ್ರತಿ ಭಾನುವಾರ ಸಂಜೆ ಯಶವಂತಪುರ ಸಂತೆಗೆ ತರಕಾರಿ ಹಣ್ಣು ಹೂಗಳನ್ನು ತರಲು ಹೋಗುತ್ತಿದ್ದಳು. ಹೋಗುವ ಮೊದಲು ನಾನು ಜೊತೆಯಲ್ಲಿ ಬರಬೇಕೆಂದು ತಾಕೀತು ಮಾಡುತ್ತಿದ್ದಳು. ಮೊದಮೊದಲು ಅವಳು ಕರೆದಾಗ ನಾನು ಉತ್ಸಾಹದಿಂದ ಹೋಗುತ್ತಿದ್ದೆನಾದರೂ ಅಲ್ಲಿ ಆಗಾಗ ಆಗುವ ಕೆಲವು ಬೇಸರದ ಅನುಭವಗಳು ನೆನಪಾಗಿ, ನನಗೆ ಬ್ಲಾಗು, ಫೋಟೊಗ್ರಫಿ ಇತ್ಯಾದಿ ಕೆಲಸಗಳಿದೆಯೆಂದು ತಪ್ಪಿಸಿಕೊಳ್ಳುತ್ತಿದೆ. … Read more