ಮೂವರ ಕವನಗಳು: ಡಿ.ವಿ.ಪಿ., ಉರ್ಬಾನ್ ಡಿಸೋಜ, ಅನುರಾಧಾ ಪಿ. ಎಸ್.
ಹೀಗೊಂದು ಹಾದಿ.!! ಬಿಮ್ಮನೆ ಧ್ಯಾನಸ್ಥ ಭಂಗಿಯಲ್ಲಿ ಹರವಿಕೊಂಡ ಹಾದಿ., ಅದೆಷ್ಟೋ ಚೈತ್ರಗಳ ಹೂ ಅರಳುವಿಕೆಯನ್ನು ಕಂಡಿದೆಯಂತೆ. ಮುಳ್ಳುಗಳ ಸೋಕಿ ಸುರಿದ ನೆತ್ತರ ಪಸೆಯನ್ನು ಇಂಗಿಸಿಕೊಂಡಿದೆಯಂತೆ. ಹಾದಿ ಮೀರಿ ಬಂದವರೆಷ್ಟೋ ತಾವಾಗೇ ಉಳಿಯದೇ ಮಾರ್ಪಾಡಾಗಿದ್ದಾರೆ ಎನ್ನುವ ವರ್ತಮಾನ.!! ಮೌನವನ್ನೇ ಮೈಮೇಲೇರಿಕೊಂಡಂತೆ ನಿರ್ಲಿಪ್ತವಾಗಿ ಮಲಗಿದೆ ಹಾದಿ ಬದಲಾವಣೆಗಳಿಗೆ ಸಾಕ್ಷಿಯಾಗಿ.!! ಉಬುಕಿ ಬಂದ ಹಸಿವ ನುಂಗಿ ಬಸವಳಿದವರೆಷ್ಟೋ ಹಾದಿಯ ಕ್ರಮಿಸಿ ಬಂದು ನೋಡಿದರೆ, ಹಸಿವೇ ರಾಗವಾಗಿದೆಯಂತೆ.!! ಅಳಲುಗಳೊಳಗೆ ತಾ ಮುಳುಗಿ ನಿಶ್ಚಲ ಗೋಡೆಗೊರಗಿ ಬಿಟ್ಟ ನಿಟ್ಟುಸಿರು, ಹಾದಿಯ ಕ್ರಮಿಸಿದೊಡನೆ ಕೊಳಲಾಗಿದೆಯಂತೆ.!! ಯುದ್ಧ … Read more