editor
ಆಪರೇಷನ್ ಡೆಂಗ್ಯೂ (ಭಾಗ 2): ನಟರಾಜು ಎಸ್ ಎಂ
ಇಲ್ಲಿಯವರೆಗೆ ಸಿಲಿಗುರಿಯನ್ನು ಎರಡನೇ ಕೋಲ್ಕತ್ತಾ ಎನ್ನುತ್ತಾರೆ. ಸಿಲಿಗುರಿ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲು ಇದ್ದಂತೆ. ಇಂತಹ ಸಿಲಿಗುರಿಯನ್ನು ತಲುಪುತ್ತಿದ್ದಂತೆ ನಾವು ಮಾಡಿದ ಮೊದಲ ಕೆಲಸವೆಂದರೆ ಸಿಲಿಗುರಿಯ ನಕ್ಷೆಯನ್ನು ಒಂದು A4 ಹಾಳೆಯಲ್ಲಿ ಪ್ರಿಂಟ್ ಮಾಡಿಸಿಕೊಂಡೆವು. ಸಿಲಿಗುರಿಯ ನಕ್ಷೆಯನ್ನು ಪ್ರಿಂಟ್ ಮಾಡಿಸಿಕೊಂಡ ಕಾರಣವೇನೆಂದರೆ ಸಿಲಿಗುರಿಗೆ ಸೇರಿದ ಒಟ್ಟು 47 ವಾರ್ಡ್ ಗಳಲ್ಲಿ ನಮ್ಮ ಜಲ್ಪಾಯ್ಗುರಿಗೆ ಸೇರಿದ 14 ವಾರ್ಡ್ ಗಳಲ್ಲಿ ಯಾವ ವಾರ್ಡ್ ಗಳ ಜನರು ಡೆಂಗ್ಯೂ ಜ್ವರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕಿತ್ತು. ನಮ್ಮ ಬಳಿಯಿದ್ದ ಡಾಟಾ … Read more
ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಕಗ್ಗೊಲೆ ವೈಚಾರಿಕತೆಯ ಮೇಲಿನ ಧಾಳಿ: ಜೈಕುಮಾರ್
ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ ೨೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: ೨೦.೦೮.೨೦೧೩ ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ! ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: … Read more
ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 1): ಶಿವು ಕೆ.
ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ. ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ: ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ ದೂರದ ಕೊಲ್ಕತ್ತಗೆ … Read more
ಮಳೆ ಎನ್ನುವುದು ಒಂಥರಾ ಆಕ್ಸಿಡೆಂಟ್!: ಹೃದಯಶಿವ ಅಂಕಣ
ತುಂಟ ಕವಿಯ ಗಾಂಭೀರ್ಯತೆ ನವ್ಯ ಕಾಲದಲ್ಲಿ ಹೊಸಕಾವ್ಯವೆಂದರೆ ಕೇವಲ ದುರಂತಮಯವಾದದ್ದು, ಕ್ಲಿಷ್ಟವಾದದ್ದು, ಸಿನಿಕತನದ್ದು ಎಂಬಂತಹ ತಿಳುವಳಿಕೆ ರೂಢಿಯಲ್ಲಿತ್ತು. ಉತ್ಸಾಹದಿಂದ ಜೀವಂತ ಕಾವ್ಯ ರಚಿಸಿದ ಬಿ. ಆರ್. ಲಕ್ಷ್ಮಣ್ ರಾವ್ ಕಳೆದ ಮೂರು ದಶಕಗಳಲ್ಲಿ ತಮ್ಮದೇ ಶೈಲಿಯ ಕಾವ್ಯ ರಚಿಸಿದವರು ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಮ್ಯಂ ಪ್ರಸ್ತಾಪಿಸಿರುತ್ತಾರೆ. ಹೌದು, ಬಿ.ಆರ್.ಎಲ್. ಮೇರೆಗಳನ್ನು ದಾಟಿ ನಿಂತವರು. ಸಾಹಿತ್ಯ ಸರೋವರದಲ್ಲಿ ತಮ್ಮದೇ ವಿನೂತನ ಶೈಲಿಯ ತರಂಗಗಳನ್ನು ಸೃಷ್ಟಿಸಿದವರು. ಗಂಭೀರ ವಿಷಯಗಳನ್ನು ಸರಳವಾಗಿ ಕಾವ್ಯಕ್ಕೆ ಇಳಿಸಿ ಗಮನ … Read more
ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್: ವಾಸುಕಿ ರಾಘವನ್ ಅಂಕಣ
ಆಗಿನ್ನೂ ಅಮೇರಿಕಾದಲ್ಲಿ ವರ್ಣಬೇಧ ಹೆಚ್ಚು ಇದ್ದ ಕಾಲ. ಬಿಳಿಯರು ಮತ್ತು ಕರಿಯರು ಬಸ್ಸುಗಳಲ್ಲಿ ಒಟ್ಟಿಗೆ ಕೂರುವಂತಿರಲಿಲ್ಲ. ಇಬ್ಬರ ನಡುವೆ ಮದುವೆಯಂತೂ ದೂರದ ಮಾತು, ಸುಮಾರು ರಾಜ್ಯಗಳಲ್ಲಿ ಅದು ಶಿಕ್ಷಾರ್ಹ ಅಪರಾಧ ಕೂಡ ಆಗಿತ್ತು. ಅದೇ ಸಮಯದಲ್ಲಿ ಬಿಡುಗಡೆಯಾದ ಸ್ಟಾನ್ಲಿ ಕ್ರೇಮರ್ ನಿರ್ದೇಶನದ “ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್” ಈ ವರ್ಣಬೇಧ ಮತ್ತು ಜನರಲ್ಲಿರುವ ತಾರತಮ್ಯದ ಬಗೆಗಿನ ಚಿತ್ರಣ ಹೊಂದಿದೆ. ಜೋಯೀ ಮುಕ್ತ ಮನಸ್ಸಿನ ಹದಿಹರೆಯದ ಹುಡುಗಿ. ಪತ್ರಿಕೋದ್ಯಮಿ ತಂದೆ ಮ್ಯಾಟ್ ಮತ್ತು ಅಮ್ಮ … Read more
ಹೀಗೊಂದು ಮಾತು: ಶ್ರೀವತ್ಸ ಕಂಚೀಮನೆ
ಕಳೆದ ಮಹಿಳಾ ದಿನಾಚರಣೆಗಾಗಿ ಒಂದು ಲೇಖನ ಬರೆದಿದ್ದೆ. ಬರೆದ ವಿಷಯ ಸತ್ಯವೇ. ತುಂಬಾ ಜನ ಮೆಚ್ಚಿಕೊಂಡರು ಕೂಡ. ಆದರೆ ನನಗೇ ಯಾಕೋ ಸಂತೃಪ್ತ ಅನ್ನಿಸಿಲ್ಲ. ಬರೆದ ಬರಹದಲ್ಲಿ ದೇಹ ಸದೃಢವಾಗೇ ಇದ್ದರೂ ಯಾಕೋ ಆತ್ಮ ಇಲ್ಲ ಅನ್ನಿಸ್ತಾ ಇತ್ತು. ಕಾರಣ ಇಷ್ಟೇ ನನ್ನ ಮನಸು ಪುರುಷ ಪ್ರಧಾನ ಮತ್ತು ಸ್ತ್ರೀ ಪ್ರಧಾನ ಎಂಬ ಎರಡೂ ವಾದಗಳನ್ನು ಒಪ್ಪಲಾರದು. ನಾನೆನ್ನುತ್ತೇನೆ ನಮ್ಮನೆಲ್ಲ ಸಷ್ಟಿಸಿದ ಪ್ರಕೃತಿ ಮಾತ್ರ ಪ್ರಧಾನ. ಅದರ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳದ ನಾವು, ಅದು ನೀಡಿದ ಮಿತಿಗಳನ್ನು ಮೀರಲು … Read more
ಮುಂದಿನ ಪೀಳಿಗೆಗೊಂದು ಪುಟ್ಟ ಪತ್ರ: ಅಖಿಲೇಶ್ ಚಿಪ್ಪಳಿ ಅಂಕಣ
ಭವಿಷ್ಯದ ಪುಟಾಣಿಗಳೆ, ಈ ಭೂಮಿ ಹುಟ್ಟಿ ೪೬೦ ಕೋಟಿ ಅಗಾಧ ವರ್ಷಗಳಾದವು. ನವಮಾಸಗಳು ಹೊತ್ತು-ಹೆತ್ತು ಇವತ್ತು ಜಗತ್ತಿಗೆ ಬಂದು ಕಣ್ಬಿಡುವ ಹೆಚ್ಚಿನ ನೀವುಗಳು ಖಾಸಗಿ-ಸರ್ಕಾರಿ ಆಸ್ಪತ್ರೆಗಳ ಫಿನೈಲ್-ಡೆಟಾಲ್‌ಗಳ ವಾಸನೆಗಳನ್ನೇ ಸೇವಿಸಿ ವಿಸ್ಮಿತರಾಗಿ ಹೊರಜಗತ್ತನ್ನು ಗಮನಿಸುತ್ತೀರಿ. ಕಲುಷಿತ ವಾತಾವರಣ ನಿಮಗೆ ಥಂಡಿ-ಜ್ವರ-ಕಫಗಳನ್ನು ಧಾರಾಳವಾಗಿ ಧಾರೆಯೆರೆಯುತ್ತದೆ. ಗಾಬರಿಗೊಂಡ ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಸಮಾಧಾನ ಮಾಡಲು ಜೊತೆಗೆ ನಿಮಗಾದ ಜಡ್ಡನ್ನು ಹೋಗಲಾಡಿಸಲು ಹಲವಾರು ಮದ್ದುಗಳಿವೆ, ಚುಚ್ಚುಮದ್ದುಗಳಿವೆ, ಸಿರಫ್‌ಗಳಿವೆ ಇತ್ಯಾದಿ ಸಾವಿರಗಳಿವೆ. ಇವುಗಳನ್ನು ಪೂರೈಸಿ ತಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳಲು ಅಂತಾರಾಷ್ಟ್ರೀಯ ಕಂಪನಿಗಳು ತುದಿಗಾಲಲ್ಲಿ … Read more
ಸಾವಿತ್ರಿ: ಡಾ. ಗವಿಸ್ವಾಮಿ
ಅದು ಎರಡಂಕಣದ ಗುಡಿಸಲು. ಅಲ್ಲಲಿ ಸುಣ್ಣದ ಚಕ್ಕೆಎಡೆದು ಕೆಂಪಗೆ ಗಾಯಗೊಂಡಂತೆ ಕಾಣುತ್ತಿದೆ. ಛಾವಣಿಯ ಗರಿಗಳು ಮಳೆ-ಬಿಸಿಲಿನ ಹೊಡೆತಕ್ಕೆ ಜೀರ್ಣವಾಗಿ ಬೂದಿ ಬಣ್ಣಕ್ಕೆ ತಿರುಗಿದೆ. ಒಂದು ಕೆಂಚಬೆಕ್ಕು ಛಂಗನೆ ಛಾವಣಿ ಮೇಲೆ ನೆಗೆಯಿತು. ಅದು ನೆಗೆದು ಕೂತ ರಭಸಕ್ಕೆ ಛಾವಣಿ ಮೇಲೆ ಜಲಿಜಿಲಿಜಲಿಜಲಿ ಅಂತಾ ಸದ್ದಾಯಿತು. ''ತತ್ತದ ಇಲ್ಲಿ ಇಟ್ಟನ್ದೊಣ್ಯಾ, ಮನಗಸ್ಬುಡ್ತಿನಿ ಒಂದೇ ಏಟ್ಗಾ.. ಇಲ್ಲ್ಯಾರ್ ಆಟ್ ಇದ್ದದು ಅಂತ್ಯಾಕಣಿ ಗಳ್ಗಸೊತು ಬಂದದು'' ಎಂದು ಬೈಯುತ್ತಾ ಕಾಳಮ್ಮ ಗುಡಿಸಿಲಿನಿಂದ … Read more
ಪ್ರೀತೀಶನ ಚುಟುಕಗಳು
೧. ಸಾಧ್ಯ ಮರಳುಗಾಡಿನಲೂ ಹೂದೋಟ ಬೆಳೆಯಬಲ್ಲೆ ನಾನು, ಭಾವಗಳು ಹುಟ್ಟಬೇಕಷ್ಟೇ. ೨. ಪರಿಹಾರ ಹೃದಯಕೊಂದು ಒಡೆದ ಗಾಜು ನೆಟ್ಟಿದೆ, ಕಿತ್ತೊಗೆಯಲೊಂದು ಹೂವು ಬೇಕಿದೆ. ೩. ಅರಿವು ಕೊಳಕು ಮೆತ್ತಿದ್ದು ಬಟ್ಟೆಗೆ ತಿಳಿಯಬೇಕಿಲ್ಲ ಕೊಳೆಗೆ ಗೊತ್ತಾಗಬೇಕು ಇಲ್ಲ ಸಾಬೂನು ಅರಿಯಬೇಕು. ೪. ತಪ್ಪು ಮಡದಿ ಸಿಟ್ಟಾದರೆ ತಪ್ಪು ಯಾರದ್ದೇ ಆಗಿರಬಹುದು ಮಗ ಕೋಪಿಸಿಕೊಂಡರೆ ಮಾತ್ರ ತಪ್ಪು ನನ್ನದೇ. ೫. ಗುರಿ ನದಿ ಹುಟ್ಟಿದಾರಭ್ಯ ಸಮುದ್ರ ಹುಡುಕಿ ಹೊರಡುವುದಿಲ್ಲ; ಹರಿಯುತ್ತ ಹೋಗುವುದು ಅನಿವಾರ್ಯ ಕರ್ಮವದಕೆ. … Read more
ಎದೆಯೊಳಗೆ ನದಿಯೊಂದು ಹರಿಯುತಿದೆ ಪ್ರೀತಿಯ ಹೊತ್ತು: ನಾಗರಾಜ್ ಹರಪನಹಳ್ಳಿ
* ಆವತ್ತು ಬೆಳದಿಂಗಳ ರಾತ್ರಿ. ಅಕ್ಟೋಬರ್ ತಿಂಗಳ ಒಂದು ದಿನ. ಸರಿಯಾಗಿ ನೆನಪಿಲ್ಲ. ದಂಡೆಯಲ್ಲಿದ್ದ ಜನ ಮನೆಗೆ ಮರಳಿಯಾಗಿತ್ತು. ಕತ್ತಲನ್ನು ತನ್ನೊಳಗೆ ಹೀರಿದ ಬೆಳದಿಂಗಳು ಮೆರೆಯುತ್ತಿತ್ತು. ಒಂದೊಂದೆ ನಕ್ಷತ್ರಗಳು ಮಿನುಗುತ್ತಿದ್ದವು. ಸಣ್ಣಗೆ ಮೊರೆಯುತ್ತಿತ್ತು ಕಡಲು. ಬೆಳದಿಂಗಳಿಗೆ ನಾದ ಹರಡಿದಂತಿತ್ತು. ರವೀಂದ್ರನಾಥ ಟ್ಯಾಗೋರ ಹೆಜ್ಜೆಯಿಟ್ಟು ಓಡಾಡಿದ ದಂಡೆಯಲ್ಲಿ ನಾನು ಎಷ್ಟೋ ಗಂಟೆಗಳ ಕಾಲ ಕುಳಿತಿದ್ದವನು ಜನ ಮರೆಯಾಗುತ್ತಿದ್ದಂತೆ, ದಂಡೆಯ ಮೇಲೆ ಒರಗಿಕೊಂಡೆ. ಆಕಾಶಕ್ಕೆ ಮುಖಮಾಡಿ. ಆಕಾಶವನ್ನ ದಿಟ್ಟಿಸಿ ನೋಡುವುದೇ ಸೊಗಸು. ಅದು … Read more
ಅಂತಿಮ ನಮನ: ಸುಮನ್ ದೇಸಾಯಿ ಅಂಕಣ
ಮುಂಜಾನೆ ನಸಿಕಲೇ 5 ಗಂಟೆ ಆಗಿತ್ತು. ಅದ ಇನ್ನು ಜಂಪ ಹತ್ತಲಿಕತ್ತಿತ್ತು. ಅತ್ತಿಯವರ ನರಳಾಟ ಕೇಳಿ ಸುಧಾಗ ಎಚ್ಚರಾತು. ರಾತ್ರಿಯೆಲ್ಲಾ ಮಲಗಿದ್ದೆಯಿಲ್ಲ. ಅದೇನ ಸಂಕಟಾ ಆಗಲಿಕತ್ತಿತ್ತೊ ಅವರಿಗೆ ಗೊತ್ತು. ಸಾಯೋ ಮುಂದಿನ ಸಂಕಟಾ ಭಾಳ ಕೆಟ್ಟ ಇರತದಂತಾರ ಇದ ಏನೊ ಅನಿಸ್ತು. ಆದ್ರ ಸುಧಾಗ ಅದ ಕ್ಷಣಾ ಅಂಥಾ ಪರಿಸ್ಥಿತಿಯೊಳಗ ನಗುನು ಬಂತು. ಅಲ್ಲಾ ತಮ್ಮಷ್ಟಕ್ಕ ತಾವು ಅತೀ ಶಾಣ್ಯಾರ ಅನಕೊಂಡ ದೀಡ ಪಂಡಿತರು “ ಸಾಯೊ ಸಂಕಟಾ ಭಾಳ ಕೆಟ್ಟ ಇರತದ “ ಅಂತ … Read more
ಕೆಂಗುಲಾಬಿ (ಭಾಗ 12): ಹನುಮಂತ ಹಾಲಿಗೇರಿ
ಇಲ್ಲಿಯವರೆಗೆ ಮರುದಿನ ನಮ್ಮನ್ನು ಹುಡುಕಿಕೊಂಡು ರತ್ನಮ್ಮನ ಪ್ರಿಯಕರನೆನಿಸಿಕೊಂಡಿದ್ದ, ರತ್ನಮ್ಮ ಇಲ್ಲದಿದ್ದಾಗ ಗಲ್ಲೆ ಮೇಲೆ ಕೂಡ್ರುತ್ತಿದ್ದ ಧರ್ಮಣ್ಣ ಪೊಲೀಸ್ ಸ್ಟೇಷನ್ನಿನೊಳಗೆ ನಾವಿರುವ ಕಡೆ ಬಂದಿದ್ದ. ಆತನನ್ನು ಅದ್ಹೇಗೋ ಪೋಲೀಸರು ಒಳಗೆ ಬಿಟ್ಟಿದ್ದರು. ಇಲ್ಲಿಂದ ಬಿಡಿಸಿಕೊಂಡು ಹೋಗಲು ಸಾವಿರಾರು ರೂಪಾಯಿ ಖರ್ಚಾಗುತ್ತವೆ. ರತ್ನಮ್ಮ ಹತ್ತು ಸಾವಿರ ಹೊಂದಿಸಿ ನಿಮ್ಮನ್ನು ಬಿಡಿಸಿಕೊಳ್ಳಾಕ ತಯಾರದಾಳ. ನೀವು ಮೇಲಿನ ಖರ್ಚುಗಳಿಗಾಗಿ ಪ್ರತಿಯೊಬ್ಬರು ಐದೈದು ನೂರು ಕೊಡಬೇಕು ಎಂದು ಕರಾರು ಮಾಡಿದ. ಆದರೆ ನಮ್ಮಲ್ಲಿ ಯಾರೊಬ್ಬರಲ್ಲಿಯೂ ಹಣವಿರಲಿಲ್ಲ. ಅದು ಅವನಿಗೂ ಗೊತ್ತಿತ್ತು. ‘ಈಗ … Read more
ಲೂಸಿಯಾ: ಪ್ರಶಸ್ತಿ ಅಂಕಣ
ಫಿಲ್ಮಿಗೆ ಹೋಗಿ ಕೂತಿದ್ವಿ. ನಿನ್ನೊಳೆಗೆ ಮಾಯೆಯೋ, ಮಾಯೆಯೊಳಗೆ ನೀನೋ ಅಂತ ಶುರುವಾಯ್ತು..ಹೆಸರು ತೋರಿಸುವವ ಹೊತ್ತಿಗೆ ಹೂವೊಳಗೆ ಸುಗಂಧವೋ, ಸುಗಂಧದೊಳಗೆ ಹೂವೋ, ಜಿಘ್ರಾಣಿಸುವುದರೊಳಗೆ ಇವೆರಡೋ.. ಅಂತ ಮುಂದುವರಿಯೋ ಅಲ್ಲಮಪ್ರಭುವಿನ ವಚನ. ಅದು ಕನಕದಾಸರ ರಚನೆ ಅಂತ ಆಮೇಲೆ ತೋರಿಸುವವರಿಗೂ ಕೆಲವರಿಗೆ ಪಕ್ಕಾ ಕನ್ಫ್ಯೂಷನ್ನು. ಸರಿ, ನಿರ್ದೇಶಕ ಪವನ, ನಿರ್ಮಾಪಕರು .. ? ಏನಿದು, ಹತ್ತಾರು ಹೆಸರುಗಳು, ಸಹ ನಿರ್ಮಾಪಕರು, ನೂರಾರು ಹೆಸರುಗಳು.. ಯಪ್ಪಾ.. ಒಟ್ಟು ನೂರಾ ಏಳು ಜನ ನಿರ್ಮಾಪಕರು ಸೇರಿ ನಿರ್ಮಿಸಿದ ಚಿತ್ರ.ಅಂದರೆ ಜನರ ಚಿತ್ರ..ನಾನು ಯಾವ ಚಿತ್ರದ ಬಗ್ಗೆ … Read more
ಪದ್ದಿಯ ಪತ್ರ: ಅಣ್ಣಪ್ಪ ಆಚಾರ್ಯ, ಹೊನ್ನಾವರ
ಪ್ರೀತಿಯ ಪತಿದೇವರಿಗೆ.., ನಿಮ್ಮ ಪ್ರಾಣಕಾಂತೆ ಪದ್ದಿಯ ‘ಸಕ್ಕರೆಗಿಂತ ಸಿಹಿ’ಯಾದ ಮುತ್ತುಗಳು..! ಏನ್ರೀ.., ನಾನು ಪ್ರೀತಿಯಿಂದ ನಾಲ್ಕು ಮಾತು ಬೈಯ್ದೆ ಅಂತ ಮನೆ ಬಿಟ್ಟು, ಆ ಸತ್ಯಾನಂದ ಸ್ವಾಮಿ ಆಶ್ರಮ ಸೇರುವುದಾ..? ಗಣೇಶನ ಹಬ್ಬಕ್ಕೆ ಬಿಗ್‍ಬಜಾರ್‍ನಲ್ಲಿ ಡಿಸ್ಕೌಂಟ್‍ನಿಂದ ನಾಲ್ಕು ಸೀರೆಯನ್ನು 2000 ರೂಪಾಯಿಗೆ ತಂದು 5000 ರೂಪಾಯಿ ಬಿಲ್ ತೊರಿಸಿದ್ದಕ್ಕೆ ಬೇಜಾರಾ..? ಅಥವಾ ಹಬ್ಬದ ದಿನ ನಾನು ಅಡುಗೆ ಮಾಡಿದ್ದಕ್ಕಾ..?! ರೀ.., ಇನ್ಮುಂದೆ ಹಬ್ಬದ ದಿನವೂ ನೀವೇ ಅಡುಗೆಮಾಡಿ. ಗಣೇಶನ ಹಬ್ಬದ ದಿನ ನಾನು ಮಾಡಿದ ಅಡುಗೆ ಎಷ್ಟು … Read more
ಫೋಟೋಗ್ರಾಫಿ:ಪ್ರಭು ಕೆ.ಎನ್.
ಬೆಂಗಳೂರಿನ Advanced Centre for Plant Biotechnologyಯ ಸಂಶೋಧನಾ ವಿದ್ಯಾರ್ಥಿ ಪ್ರಭು ಕೆ.ಎನ್. ಕ್ಯಾಮರಾಕ್ಕೆ ಸೆರೆಸಿಕ್ಕ ನಿಸರ್ಗವಿದು…
ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ
ಆಗಷ್ಟ್ ತಿಂಗಳ ಮೊದಲ ವಾರದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದರ ರಿಪೋರ್ಟ್ ನಲ್ಲಿ 3 ಡೆಂಗ್ಯೂ ಜ್ವರದ ಕೇಸ್ ಗಳು ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ ಎಂಬ ಈ ಮೇಲ್ ನಮ್ಮ ಪಬ್ಲಿಕ್ ಹೆಲ್ತ್ ವಿಭಾಗದ ಈ ಮೇಲ್ ಗೆ ಬಂದಿತ್ತು. ಮೂರ್ನಾಲ್ಕು ಡೆಂಗ್ಯೂ ಜ್ವರದ ಕೇಸ್ ಗಳು ಒಂದೇ ಊರಿನಲ್ಲಿ ಕಾಣಿಸಿಕೊಂಡಿರುವುದು ಡೇಂಜರ್ ಸಿಗ್ನಲ್ ಎಂದರಿತ ನಾವು ತಕ್ಷಣ ಆ ತಾಲ್ಲೂಕಿನ ವೈದ್ಯಾಧಿಕಾರಿಗೆ ಕರೆ ಮಾಡಿ ಕೇಸ್ ಗಳು ಪತ್ತೆಯಾಗಿರುವುದನ್ನು ದೃಢಪಡಿಸಿಕೊಂಡೆವು. ಮಾರನೆಯ ದಿನ ನಮ್ಮ ಟೀಮ್ ಆ ಹಳ್ಳಿಯನ್ನು … Read more
ಇದು ಜೈಲು ಹಕ್ಕಿಗಳ ಮಾದರಿ ಕಾಯಕ: ಹನಿಯೂರು ಚಂದ್ರೇಗೌಡ
ಅತಿಕಡಿಮೆ ಬಂಡವಾಳ-ಹೆಚ್ಚು ಆದಾಯದ ಉದ್ಯೋಗ; ಹಂದಿಸಾಕಾಣಿಕೆ ಮನಸು ಮಾಡಿದರೆ ಏನು ಬೇಕಾದರೂ ಮಾಡಿ ತೋರಿಸಬಹುದೆನ್ನುವುದಕ್ಕೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಕೆಲಸ ಮಾದರಿಯಾಗಿದೆ. ಇತರ ಉದ್ಯೋಗಕ್ಕಾಗಿ ಅಲೆಯುವ ನಿರುದ್ಯೋಗಿ ಯುವಕರ ಪಾಲಿಗೆ ಇಲ್ಲಿನ ಕೈದಿಗಳು, “ಕೆಲಸ ತಮ್ಮ ಕೈಯಲ್ಲಿಯೇ ಇದೆ; ಆದರೆ, ಮನಸು ಮಾಡಬೇಕು” ಎಂಬುದನ್ನು ಬಂದಿಖಾನೆಯಲ್ಲಿ ಬಂಧಿಯಾಗಿದ್ದರೂ ಸ್ವತಃ ಹಂದಿಸಾಕುವ ಮೂಲಕ ಇಲಾಖೆಗೆ ಆದಾಯ ತಂದುಕೊಡುತ್ತಿದ್ದಾರೆ. ಆ ಮೂಲಕ ಪರಿಸ್ಥಿತಿ, ಸನ್ನಿವೇಶಕ್ಕೆ ಬಲಿಯಾಗಿ ಒಂದಿಲ್ಲೊಂದು ಅಪರಾಧವೆಸಗಿ ಜೈಲುಪಾಲಾಗಿರುವ ಇವರು, … Read more
ದುರ್ಗಾಸ್ತಮಾನದ ನೆಪದಲ್ಲಿ ತರಾಸು ನೆನೆಯುತ್ತಾ:ರಾಘವೇಂದ್ರ ಪದ್ಮಶಾಲಿ
" …. ಇತ್ತ ಕಡೆ ಮದಕರಿನಾಯಕ ವ್ಯಾಸರಾಯಮಠದ ಮೇಲೆ ನಿಂತು, ಕೋವಿ ಹಾರಿಸುತ್ತಾ ತನ್ನ ಸೈನಿಕರ ಹೃದಯದಲ್ಲಿ ಧೈರ್ಯ ತುಂಬುತ್ತಿರುವಾಗ, ಅತ್ತ ಹೈದರಾಲಿಯೂ ಮತ್ತಷ್ಟು ಸೇನೆಯೊಂದಿಗೆ ಬಂದು, ತನ್ನ ಕಡೆಯವರನ್ನು ಹುರಿದುಂಬಿಸಲು ಯತ್ನಿಸಿದ. ಶತ್ರುಸೈನ್ಯದ ಮಧ್ಯದಲ್ಲಿ ಹೈದರಾಲಿಯ ಖಾಸಾ ಹಸಿರು ನಿಶಾನೆಯನ್ನು ಕಾಣುತ್ತಿದ್ದಂತೆಯೇ ದುರ್ಗದ ಸೈನಿಕರಲ್ಲಿ ಮತ್ತಷ್ಟು ರಣೋತ್ಸಾಹವೇರಿ, ಇಮ್ಮಡಿ ಹುರುಪಿನಿಂದ ಶತ್ರುಗಳನ್ನು ಸದೆಬಡಿಯಲಾರಂಭಿಸಿದರು. ಏರಿದ ಬಿಸಿಲಿನಲ್ಲಿ ಸಾವಿರಾರು ಖಡ್ಗಗಳು ಮಿಂಚುಗಳಂತೆ ಹೊಳೆಯುತ್ತಿದ್ದವು. ಕೋವಿಗಳ ಗುಂಡಿನ ಚಟಪಟ ಸದ್ದು, ತೋಫಿನ ಗರ್ಜನೆ, ಸೈನಿಕರ ರಣಕೇಕೆ – ದುರ್ಗದ … Read more
ಮೂವರ ಕವಿತೆಗಳು: ವಿಲ್ಸನ್ ಕಟೀಲ್, ರಾಶೇಕ್ರ, ಶಶಿಕಿರಣ್
ವಿಷ ೧ ಮನುಜರನ್ನು ನಾನು ಬೆರಳುಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಗಭೇದಿಗಳು "ಎಲ್ಲಾ ಬೆರಳುಗಳು ಸಮಾನವಾಗಿಲ್ಲ" ಎಂದು ಮುಷ್ಟಿ ಬಿಗಿದರು ಮನುಜರನ್ನು ನಾನು ರೋಮಗಳಿಗೆ ಹೋಲಿಸಿದೆ ಆದರೆ, ಕೆಲವರು "ಇರುವ ಜಾಗಕ್ಕನುಗುಣವಾಗಿ ಅವುಗಳಲ್ಲಿಯೂ ಮೇಲು-ಕೀಳುಗಳಿವೆ" ಎಂದು ಮೀಸೆ ತಿರುವಿದರು ಮನುಜರನ್ನು ನಾನು ರಕ್ತಕಣಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಣಗೇಡಿಗಳು "ಅಲ್ಲಿಯೂ ಬಿಳಿಯರಿದ್ದಾರೆ" ಎಂದು ನಂಜು ಕಾರಿದರು ಕೊನೆಗೆ ಮನುಜರನ್ನು ನಾನು ಕವಿತೆಯ ಪದಗಳಿಗೆ ಹೋಲಿಸಿದೆ ಆದರೆ, ಕೆಲ ಕಾವಿಯನ್ನು(ಕಾವ್ಯವನ್ನಲ್ಲ) ಉಟ್ಟವರು ಅಲ್ಲಿಯೂ ಪಂಕ್ತಿಭೇದವನ್ನು … Read more
ಚುನಾವಣೆ:ಸುಮನ್ ದೇಸಾಯಿ
ಲೊಕಲ ಎಲೆಕ್ಷನ್ ದಿನಗೊಳ ಹತ್ರ ಬರಲಿಕತ್ತಿದ್ವು.ಜಬರದಸ್ತ ಪ್ರಚಾರ ಶೂರು ಆಗಿದ್ವು. ಸಣ್ಣ ಮಕ್ಕಳಿಂದ ಹಿಡದು ಹರೆದ ಹುಡುಗುರು ಸುಧ್ಧಾ ಓಣ್ಯಾಗೆಲ್ಲಾ " ಅಕ್ಕಾ ಅಕ್ಕಾ ಶಾಣ್ಯಾಕಿ… ಪಕ್ಷಕ್ಕ ಓಟ ಹಾಕಾಕಿ, ಮಾಮಾ ಭಾಳ ಶಾಣ್ಯಾಂವಾ… ಪಕ್ಷಕ್ಕ ಓಟ ಹಾಕಾಂವಾ, ಅಂಥೇಳಿ ಒದರಿಕೊತ ಪ್ರಚಾರ ಮಾಡಕೊತ ಅಡ್ಯಾಡಲಿಕತ್ತಿದ್ರು. ಎಲೆಕ್ಷನ್ ಅಂದ್ರ ಎಲ್ಲಾಕಡೆ ಅದೊಂದ ಥರಾ ಲಹರಿನ ಬ್ಯಾರೆ ಇರತದ. ಮನಿ ಮನಿಗೆ ಹೋಗಿ ಪ್ರಚಾರ ಮಾಡೊದು ನಡದಿತ್ತು. ಒಳಗಿಂದೊಳಗ ನಮಗ ಓಟ ಹಾಕ್ರಿ ಅಂಥೇಳಿ ಆಣಿ ಪ್ರಮಾಣಾ ಮಾಡಿಸ್ಕೊಳ್ಳೊದು … Read more
ನೀ ಬರುವ ದಾರಿ ತಿರುಗಾ ಮರುಗಾ!:ಹೃದಯಶಿವ ಅಂಕಣ
ಪ್ರೇಮಕವಿಯ ಪ್ರಸನ್ನ ಕಾವ್ಯ ಏಳು ದಶಕಗಳ ಕಾಲ ಕಾವ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಪ್ರಿಯರನ್ನು ಅಯಸ್ಕಾಂತದಂತೆ ಸೆಳೆದ ನವಿರುಕವಿ ಕೆ.ಎಸ್.ನರಸಿಂಹಸ್ವಾಮಿಯವರು ನಮ್ಮ ನಡುವಿನ ಜೀವಂತ ಸೆಲೆ. ಇವರು ಜನಿಸಿದ್ದು ಮಂಡ್ಯ ಜಿಲ್ಲೆ ಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ ರಂದು, ನಿಧನರಾದದ್ದು ೨೦೦೩ರ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ. ತಮ್ಮ ಸರಳ ಪದಗಳ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದು ಹೃದಯ ಹೃದಯಗಳ ನಡುವೆ ಸೇತುವೆಯಾದರು. ವಾಸ್ತವದ ತಳಪಾಯದ ಮೇಲೆ ನಿಂತು ಕಲ್ಪನೆಯ ಬಾವುಟ ಹಾರಿಸಿದ ಖ್ಯಾತಿ ಇವರದು. … Read more
ಆ ದಿನಗಳು: ವಾಸುಕಿ ರಾಘವನ್ ಅಂಕಣ
“ಆ ದಿನಗಳು” ಚಿತ್ರದ ಬಜೆಟ್ಟಿನ ಮೂರನೇ ಒಂದು ಭಾಗ ಖರ್ಚಾಗಿದ್ದು ಯಾವುದಕ್ಕೆ ಗೊತ್ತಾ? ಹೀರೋ ಸಂಭಾವನೆಗೆ ಅಲ್ಲ, ಅದ್ಧೂರಿಯಾದ ಸೆಟ್ಟಿಗೆ ಅಲ್ಲ, ವಿದೇಶದಲ್ಲಿ ಚಿತ್ರೀಕರಣ ಮಾಡಲು ಅಲ್ಲ. ಅದು ಖರ್ಚಾಗಿದ್ದು ಚಿತ್ರದಲ್ಲಿ ಇಳಯರಾಜಾ ಅವರ ಹಿನ್ನೆಲೆ ಸಂಗೀತಕ್ಕೆ. “ಆ ದಿನಗಳು” ಅಂದಾಕ್ಷಣ ಕಣ್ಣು ಮುಚ್ಚಿಕೊಂಡರೆ ನನಗೆ ಆ ಚಿತ್ರದ ಟೈಟಲ್ ಸಾಂಗ್ ತಲೆಯಲ್ಲಿ ಬರುತ್ತೆ, ಅದರಲ್ಲೂ ಆರಂಭದಲ್ಲಿ ಬರುವ ಆ ಬಿಟ್. ಇಡೀ ಚಿತ್ರದಲ್ಲಿ ಅಲ್ಲಲ್ಲಿ ಕೇಳಿಬರುವ ಈ ಥೀಮ್ ಮ್ಯೂಸಿಕ್ಕಿನಲ್ಲಿ ಚಿತ್ರದ ಭಾವ ಅಡಗಿದೆ! … Read more
ಅಲ್ಲಿ ಫುಕೋಕಾ-ಇಲ್ಲಿ ಚೇರ್ಕಾಡಿ: ಅಖಿಲೇಶ್ ಚಿಪ್ಪಳಿ ಅಂಕಣ
ಬೀಳು ಭೂಮಿಯ ಭೀಷ್ಮ-ಕರ್ನಾಟಕದ ಹೆಮ್ಮೆಯ ಕೃಷಿ ಋಷಿ – ಚೆರ್ಕಾಡಿ ರಾಮಚಂದ್ರರಾವ್ ಭವ್ಯ ಭಾರತದ ಹೆಮ್ಮೆಯ ಕರ್ನಾಟಕದ ಕರಾವಳಿ ತೀರದಲ್ಲಿ ಬರೀ ಎರಡೂಕಾಲು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸಿದ, ದೇಶಕ್ಕೇ ಮಾದರಿಯಾಗಬಲ್ಲ, ಯಾವುದೇ ಕೃಷಿ-ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಮಾಡಿ ಸ್ವಾವಲಂಬಿ ಬದುಕನ್ನು ಬದುಕಿದ ವ್ಯಕ್ತಿ ಆಗಿ ಹೋಗಿದ್ದಾರೆ. ಸರ್ಕಾರದ ಭಿಕ್ಷೆಯಾದ ಸಬ್ಸಿಡಿಯನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಯಾವ ಆಧುನಿಕ ಉಪಕರಣಗಳನ್ನೂ ಬಳಸದೆ, ವಿದ್ಯುತ್ ಇಲ್ಲದೇ ಕೃಷಿಯಿಲ್ಲ, ರಾಸಾಯನಿಕಗಳಿಲ್ಲದೆ ಕೃಷಿ ಅಸಾಧ್ಯ ಎಂಬ … Read more
ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ
ಅಂದು ಮಧ್ಯಾಹ್ನ ಊಟ ಮಾಡಿ ಟಿ.ವಿ ಅನ್ ಮಾಡಿ ಕುಳಿತೆ.ಸಿಟಿ ಚಾನಲವೊಂದರಲ್ಲಿ ಕಿಚ್ಚ ಸುದೀಪನ 'ಸವಿ ಸವಿ ನೆನೆಪು' ಹಾಡು ಬರುತ್ತಿದ್ದಂತೆ ಕೆ.ಇ.ಬಿ ಯವರು ವಿದ್ಯುತ್ ಶಾಕ್ ಕೊಟ್ಟರು, ಏನ್ಮಾಡೋದು? ಅದೇ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಲಗುತ್ತಿದ್ದಂತೆಯೇ ನನಗರಿವಿಲ್ಲದಂತೆ ನನ್ನ. ಕಾಲೇಜು ದಿನಗಳ ನೆನಪುಗಳಿಗೆ ಜಾರಿಕೊಂಡೆ … ಹದಿಹರೆಯದ ದಿನಗಳು ಬಲು ಸೊಗಸು..! ಆಗಿನ ಆಕರ್ಷಣೆ-ವಿಕರ್ಷಣೆಗಳು, ಆಸೆ-ನಿರಾಸೆಗಳು, ಧಿಡೀರ್ ಬದಲಾಗುವ ಚಿತ್ತವೃತ್ತಿಗಳು, ಜಗತ್ತನ್ನೇ ಗೆಲ್ಲುವೆನೆಂಬ ಮನೋಇಚ್ಛೆಗಳು, ಸ್ನೇಹಿತರ ಒಡನಾಟಗಳು….ಹೀಗೆ ಎಲ್ಲವೂ ಅವಿಸ್ಮರಣೀಯ… 'ಹುಚ್ಚು ಕೋಡಿ … Read more
ನಾಟಕಕಾರರಾಗಿ ಕುವೆಂಪು (ಭಾಗ-20) : ಹಿಪ್ಪರಗಿ ಸಿದ್ದರಾಮ್, ಧಾರವಾಡ
ಇಲ್ಲಿಯವರೆಗೆ ಆತ್ಮೀಯ ಓದುಗಪ್ರಭುಗಳೇ, ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಕಳೆದ ಸಂಚಿಕೆಯಲ್ಲಿ ನಾವು ನೋಡಿದ ಚಿಣ್ಣರಿಗಾಗಿ ರಚಿಸಿದ ‘ಮೋಡಣ್ಣನ ತಮ್ಮ’ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು … Read more
ಚಿಲ್ರೆ ಸಮಸ್ಯೆಯೂ, ಗುಂಡಣ್ಣನ ಗ್ಯಾಂಗೂ:ಪ್ರಶಸ್ತಿ ಅಂಕಣ
ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ "ಏನ್ ಚಿಲ್ರೆ ಸಮಸ್ಯೆ ಗುರೂ, ಥೂ..!" ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು. "ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ" ಅಂದ ಮಂಜ. "ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ, ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ … Read more
ಕೆಂಗುಲಾಬಿ (ಭಾಗ 11): ಹನುಮಂತ ಹಾಲಿಗೇರಿ
ಇಲ್ಲಿಯವರೆಗೆ ಯಾರೋ ಬಾಗಿಲು ಬಡಿದಂತಾಗಿ ಅವಸರವಾಗಿ ಮೇಲೆದ್ದು, ಮಲಗಿದ್ದ ಮಗುವನ್ನು ಎತ್ತುಕೊಂಡು ಹೊರ ಬಂದೆ. ಒಂದಿಬ್ಬರು ಗಿರಾಕಿ ಬಂದಿದ್ದರು. ಈ ಸಲ ವಠಾರದ ಮುಂದಿರುವ ಗಲ್ಲೆ ಮೇಲೆ ರತ್ನಮ್ಮ ಕುಳಿತಿದ್ದಳು. ನಾನು ಮಗುವನ್ನು ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿದ್ದೆ. ರತ್ನಮ್ಮ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದುದರಿಂದ ನನಗೆ ಮುಜುಗರವಾಗುತ್ತಿತ್ತು. ಗಿರಾಕಿ ತಮ್ಮಿಷ್ಟದ ಹುಡುಗಿಯರನ್ನು ಆಯ್ದುಕೊಂಡು ರೂಮಿನೊಳಕ್ಕೆ ಮಾಯವಾದರು. ಅವರು ಒಳ ಹೋದ ತಕ್ಷಣ ನನ್ನಲ್ಲಿಗೆ ಬರಬರನೆ ಬಂದ ರತ್ನಮ್ಮ ನನ್ನ ರಟ್ಟೆಯನ್ನು ಹಿಡಿದುಕೊಂಡು ದರ ದರ ಎಳೆಯುತ್ತ … Read more