ಚೇತನ: ದಿವ್ಯ ಆಂಜನಪ್ಪ
"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. … Read more