ತರಾವರೀ ತರ್ಕ ಮತ್ತು ಹಾಸ್ಯ: ಎಂ.ಎಸ್. ನಾರಾಯಣ
‘ತರ್ಕ ಅಂದ್ರೇನಪ್ಪಾ?’ ಎಂದು ಬೆಳಬೆಳಗ್ಗೇನೇ ರಾಗ ಎಳೆದಳು ಮೊದಲ ಪೀಯೂಸಿ ಕಲಿಯುತ್ತಿರುವ ನನ್ನ ಮಗಳು. ಹಾಗೆಲ್ಲಾ ಅವಳು ಸುಮ್ಮ ಸುಮ್ಮನೆ ಏನನ್ನೂ ಕೇಳುವುದಿಲ್ಲವೆಂದರಿತಿದ್ದ ನಾನು ಓದುತ್ತಿದ್ದ ಪೇಪರಿನಿಂದ ತಲೆಯೆತ್ತದೆ ‘ಯಾಕೇ?’ ಅಂದೆ. ‘ಕನ್ನಡಾ ಮ್ಯಾಮ್ ಅಸೈನ್ಮೆಂಟ್ ಕೊಟ್ಟೀದಾರಪ್ಪ, ತರ್ಕದ ಬಗ್ಗೆ ಎಸ್ಸೆ ಬರ್ಕೊಂಡೋಗ್ಬೇಕು’ ಎಂದುಲಿಯಿತು ಕಾನ್ವೆಂಟಿನಲ್ಲಿ ಕಲಿತ ನನ್ನ ಕನ್ನಡದ ಕಂದ. ‘ತರ್ಕ ಅಂದ್ರೆ ಲಾಜಿಕ್ಕು ಕಣಮ್ಮಾ’ ಎಂದೊಡನೆ ಅಸಡ್ಡೆಯಿಂದ ‘ಓ, ಲಾಜಿಕ್ಕಾ…?’ ಎಂದವಳೇ ಪ್ರಬಂಧ ಬರೆಯಲು ಸಿದ್ಧತೆ ನಡೆಸತೊಡಗಿದಳು. ಸೀದಾ ಲ್ಯಾಪ್ಟಾಪ್ ತೆಗೆದವಳೇ ಇಂಟೆರ್ನೆಟ್ಟಿನಲ್ಲಿ ‘ಎಸ್ಸೇಸ್ … Read more