editor
ನಾನು ನೋಡಿದ ಚಿತ್ರ, ಚೌಕಟ್ಟು ಮೀರಿದ ಶ್ರಮ: ಅಮರ್ ದೀಪ್ ಪಿ.ಎಸ್.
ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರ ಶಿವಾಜಿ ಸಿನಿಮಾ ಬಂದಿತ್ತು. ಅದರಲ್ಲಿ ರಜನಿಕಾಂತ್ ಎಲ್ಲಾ ಆಸ್ತಿ ಕಳಕೊಂಡ ನಂತರ ವಿಲನ್ ಸುಮನ್ ರಜನಿಕಾಂತ್ ಅವರಿಗೆ ಒಂದು ರುಪಾಯಿ ಕಾಯಿನ್ ಎಸೆಯುತ್ತಾನೆ. ಆ ಒಂದು ರುಪಾಯಿ ಕಾಯಿನ್ ಸಿನೆಮಾ ಅಂತ್ಯವಾಗುವವರೆಗೂ ಪದೇ ಪದೇ ಪರದೆ ಮೇಲೆ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ. ಅದೂ ರಜನಿ ಸ್ಟೈಲಿಶ್ ನಟನೆಯೊಂದಿಗೆ. ನನಗೆ ಪದೇ ಪದೇ ಆ ಒಂದು ರೂಪಾಯಿಯೇ ನೆನಪಾಗುತ್ತದೆ. ಬಿಡಿ, ಸಿನೆಮಾ ಬೇರೆ. ಜೀವನ ಬೇರೆ. ಒಮ್ಮೊಮ್ಮೆ ಒಬ್ಬನ … Read more
ಹೀಗೊಂದು ಗೆಳೆಯರ ಬಳಗ! (ಅಳಿದುಳಿದ ಭಾಗ?!): ಗುರುಪ್ರಸಾದ ಕುರ್ತಕೋಟಿ
(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್ ***** ನಮ್ಮ ಬಳಗದ ಇನ್ನೊಂದು ಅವಿಭಾಜ್ಯ … Read more
ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್
ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ … Read more
ಆನೆ ಜೀವನ: ಅಖಿಲೇಶ್ ಚಿಪ್ಪಳಿ
ಮೆಕ್ಸಿಕೊ ದೇಶದ ಪ್ರಜೆಯೊಬ್ಬ ದೊಡ್ಡ ಸೂಟ್‌ಕೇಸಿನಲ್ಲಿ ೫೫ ಆಮೆಗಳನ್ನು ಮತ್ತು ೩೦ ಬಣ್ಣದ ಓತಿಗಳನ್ನು ಸಾಗಿಸುವಾಗ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾನೆ. ಮೆಕ್ಸಿಕೊ ಸಿಟಿಯಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ಬಾರ್ಸಿಲೋನಕ್ಕೆ ಈ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಅಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿದೆ. ೫೦ ರಿಂದ ೬೦ ಸಾವಿರ ಪೌಂಡ್ ಬೆಳೆಬಾಳುವ ಈ ಪ್ರಾಣಿಗಳಲ್ಲಿ ಮೂರು ಆಮೆಗಳು ಸತ್ತು ಹೋಗಿದ್ದವು. ಮತ್ತೊಂದು ಹಾರುವ ಓತಿ ಗರ್ಭ ಧರಿಸಿತ್ತು ಎಂಬುದನ್ನು ಅಲ್ಲಿನ ವನ್ಯಜೀವಿ ತಜ್ಞರು ಹೇಳಿದ್ದಾರೆ. … Read more
ನಮ್ಮ ದೇವರು: ಜೈಕುಮಾರ್.ಹೆಚ್.ಎಸ್
ದೇಶದ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆವರಣವದು. ದಟ್ಟ ಅರಣ್ಯವನ್ನು ನೆನಪಿಸುವ ದೇಶೀಯ ಮರಗಿಡಗಳಷ್ಟೇ ಅಲ್ಲದೆ ವಿವಿಧ ದೇಶಗಳ ಸಸ್ಯಸಂಪತ್ತನ್ನು ಹೊಂದಿದ್ದು, ಎಂಥಹ ಕಡುಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತಾ ನಳನಳಿಸುವ ಆವರಣವದು. ನೂರಾರು ಎಕರೆಯಷ್ಟು ಹರಡಿರುವ ಆವರಣದಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಕ್ಲಾಸ್ ರೂಮುಗಳು, ವಿದ್ಯಾರ್ಥಿ ನಿಲಯಗಳು, ಕ್ಯಾಂಟೀನ್‌ಗಳು, ವಿಜ್ಞಾನಿಗಳ ವಸತಿ ನಿಲಯಗಳು ಯೋಜಿತ ರೀತಿಯಲ್ಲಿ ವಿಶ್ವದರ್ಜೆಗೆ ಸರಿಸiನಾಗಿ ಅರಣ್ಯದಂಥಹ ಆವರಣದಲ್ಲಿ ಅಡಗಿ ಕುಳಿತಂತಿವೆ. ಅದೊಂದು ದಿನ ಮಧ್ಯಾಹ್ನದ ಹೊತ್ತು ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಸಾಗುತ್ತಿದ್ದಾರೆ. … Read more
ಬ್ಲಾಗುಗಳ ಲೋಕದಲ್ಲಿ: ಪ್ರಶಸ್ತಿ ಪಿ.
ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, … Read more
ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್
ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು! ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. … Read more
ಆಲಿಸ್ ವಾಕರ್ ಳ ಮೂರು ಕವಿತೆಗಳು: ರಮೇಶ್ ಮೇಗರವಳ್ಳಿ
*ಆಲಿಸ್ ವಾಕರ್* ಅಮೇರಿಕಾದ ಜಾರ್ಜಿಯಾದ ಈಟಾನ್ಟನ್ ನಲ್ಲಿ ೯ – ೨ – ೧೯೪೪ ರ೦ದು ಜನಿಸಿದ ಆಲಿಸ್ ವಾಕರ್ ಅಮೇರಿಕಾದ ಸುಪ್ರಸಿದ್ಧ ಕಾದ೦ಬರಿಗಾರ್ತಿ, ಕಥೆಗಾರ್ತಿ, ಕವಯತ್ರಿ, ಪ್ರಬ೦ಧಗಾರ್ತಿ ಮತ್ತು ಹೋರಾಟಗಾರ್ತಿ. ಅವಗಢವೊ೦ದರಲ್ಲಿ ಒ೦ದು ಕಣ್ಣನ್ನು ಕಲೆದುಕೊ೦ಡ ಆಲಿಸ್ ವಾಕರ್ ಳಿಗೆ ಆಗಾಧವಾದ ಓದಿನ ಹಸಿವು. ಸಾರಾ ಲಾರೆನ್ಸ್ ಕಾಲೇಜ್ ಮತ್ತು ಸ್ಪೆಲ್ಮನ್ ಕಾಲೇಜ್ ಗಳಲ್ಲ್ಲಿ ಶಿಕ್ಷಣ ಪಡೆದ ಆಲಿಸ್ ವಾಕರ್ ಳ ಸುಪ್ರಸಿಧ್ಧ ಕಾದ೦ಬರಿ "The color purple" ಗೆ ಪ್ರತಿಷ್ಠಿತ ಪುಲಿಟ್ಸರ್ ಬಹುಮಾನ ಮತ್ತು … Read more
ನಮ್ಮ ಬಳಿ ಇಲ್ಲದಿರುವುದಕ್ಕೆ: ಪದ್ಮಾ ಭಟ್
ಹೈಸ್ಕೂಲು ದಿನಗಳಲ್ಲಿ ಆ ಪದ್ಯ ಓದಿದ ನೆನಪು.. ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು. ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು ಎಂಬ ಪದ್ಯದ ಹೆಸರು ಇಕ್ಕಳ ಎಂದು.. ಹೌದಲ್ವಾ.. ನಮಗೆ ಕಳೆದುಹೋಗಿದ್ದೇ ಚನ್ನಾಗಿರುತ್ತದೆ..ಚಿಕ್ಕವರಿರುವಾಗ ದೊಡ್ಡವರಾಗುವ ಕನಸುಗಳು. ದೊಡ್ಡವರಾದ ಮೇಲೆ ಬಾಲ್ಯವೇ ಚನ್ನಾಗಿತ್ತೆಂಬ ಮನಸು.. ಪ್ರತೀದಿನವೂ ಪ್ರತೀಕ್ಷಣವೂ ಸಿಗದೇ ಇರುವುದೇ ಒಳ್ಳೆಯದೆಂಬ ಮರೀಚಿಕೆ ನಮಗೆ.. ಸಿಗದಿರುವ ದ್ರಾಕ್ಷಿ ಹುಳಿಯೇ ಎಂದು ನರಿಯಂತೆ ನಾವಂದುಕೊಳ್ಳುವುದಿಲ್ಲ. . ಸಿಗದೇ ಇರುವುದೇ ಚನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ ಅಲ್ವಾ..? ಬೇರೆಯವರು ಹಾಕಿಕೊಂಡ ಬಟ್ಟೆಯೇ ಚನ್ನಾಗಿರುತ್ತದೆ.. … Read more
ಮರೆಯುವುದನ್ನು ಮರೆಯುವ ಬಗೆ ಹೇಗೆ?: ಹೊರಾ.ಪರಮೇಶ್
"ಮರೆವು" ಎಂಬುದು ಜ್ಞಾನಾಸಕ್ತರಿಗೆ ಅದರಲ್ಲೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶತ್ರುವಂತೆ ಕಾಡುತ್ತದೆ.ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಈ "ಮರೆವು" ಉಂಟಾಗಿ ಕೆಲವೊಮ್ಮೆ ಅವಮಾನ, ಮತ್ತೆ ಕೆಲವೂಮ್ಮೆ ಅಪಘಾತ ಇನ್ನೂ ಕೆಲವು ಸಾರಿ ಆನಂದವನ್ನೇ ಉಂಟು ಮಾಡುತ್ತದೆ.ಅದಕ್ಕೆ ಮನೋವಿಜ್ಞಾನಿಗಳು "ಮರೆವು ಮನುಷ್ಯನಿಗೆ ವರವೂ ಹೌದು ಶಾಪವೂ ಹೌದು" ಎಂದಿದ್ದಾರೆ. ನಿಜ ನಮ್ಮ ಮೆದುಳಿನಲ್ಲಿ ನಮ್ಮ ಪಂಚೇ೦ದ್ರಿಯಗಳಿಂದ ಪಡೆದ ಅನುಭವಗಳೆಲ್ಲವನ್ನು ದಾಖಲಿಸುವ ಸಾಮರ್ಥ್ಯ ಇರುತ್ತದೆ.ಆದರೆ ಆ ಧಾರಣ ಸಾಮರ್ಥ್ಯವು … Read more
ನನ್ನೊಳಗಿನ ಗೆಳತಿ: ಸುಮನ್ ದೇಸಾಯಿ
ಅದೊಂದು ಸುಂದರ ಸಂಜೆ. ಪಾರ್ಕಿನೊಳಗ ಅವರಿಗಾಗಿ ಕಾಯಿಕೊಂಡು ಕೂತಿದ್ದೆ. ಇಗೀಗಷ್ಟೆ ಅವರ ಪರಿಚಯ ಆಗಿತ್ತು. ದಿನಾಲು ವಾಕಿಂಗ್ ಬರ್ತಿದ್ರು. ಸುಮಾರು ೫೩ ರ ಅಂಚಿನ ಅವರು, ಅದ್ರ ಹಂಗ ಅನಿಸ್ತಿದ್ದಿಲ್ಲ. ನಲವತ್ತೈದರ ಆಸು ಪಾಸು ಅನಿಸ್ತಿತ್ತು. ತಿಳಿಯಾದ ಬಣ್ಣ, ಸ್ವಲ್ಪ ಕೋಲೆನ್ನಬಹುದಾದ ಮುಖ, ಕಂಡು ಕಾಣದಂತೆ ನಗುವ ಕಣ್ಣುಗಳು, ಧೀಮಂತ ಮುಖಕ್ಕೆ ಒಪ್ಪುವ ಕನ್ನಡಕ. ಸ್ನೆಹಮಯವಾದ ಸಂಯಮದಿಂದ ಕೂಡಿದ ಮಾತುಗಳು. ಇತ್ತೀಚಿಗ್ಯಾಕೊ ಮನಸ್ಸಿಗೆ ಹತ್ತರ ಆಗ್ಲಿಕತ್ತಿದ್ರು. ಆವತ್ತ ಅವರನ್ನ ನೋಡಿದ ಮೊದಲ ದಿನ, ನನ್ನ … Read more
ಸಾಮಾನ್ಯ ಜ್ಞಾನ (ವಾರ 30): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು: ೧) ಮೇ – ೨೬ – ೨೦೧೪ ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ? ೨) ಇತ್ತಿಚೆಗೆ ನಡೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ ? ೩) ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ||ಹರ್ಷವರ್ಧನ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿದೆ ? ೪) ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ … Read more
ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.
ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು … Read more
“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.
ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು. ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ ಕನ್ನಡೀಕರಿಸಿರಬಹುದು. ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ ನನ್ನ ಪ್ರಶ್ನೆ ಇರುವುದು ಈಗ ಈ ಅಂಗ ಊನತೆ ಇರುವ ಜನರನ್ನು … Read more
ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ
ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ ಕಾವೇರಿಯ ಉಗಮಸ್ಥಾನದಿಂದ ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಅಲ್ಲಿಂದ ಮರಳುವಾಗ … Read more
ಪಕ್ಷಿ ವೀಕ್ಷಣೆಗೊಂದು ದಿನ: ಡಾ. ಅಶೋಕ್ ಕೆ. ಆರ್.
ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ. ಪಕ್ಷಿ ವೀಕ್ಷಕರಿಗೆ, ಛಾಯಾಗೃಹಕರಿಗೆ ಕೊಕ್ಕರೆ ಬೆಳ್ಳೂರು ಚಿರಪರಿಚಿತ. … Read more
ಮೇ ೨೨ ಹಾಗೂ ಜೂನ್ ೫ ರ ನಡುವೆ: ಅಖಿಲೇಶ್ ಚಿಪ್ಪಳಿ
ಮೇ ೨೨ ಜೀವಿ ವೈವಿಧ್ಯ ದಿನ. ಮೇ ತಿಂಗಳು ಕಳೆದ ನಂತರ ಜೂನ್ ಮೊದಲ ವಾರದಲ್ಲೇ ಅಂದರೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ. ಈ ಪರಿಸರದಲ್ಲಿ ಎನೆಲ್ಲಾ ವೈವಿಧ್ಯಗಳಿವೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿವರ್ಷ ಹೊಸ ಸಸ್ಯವೈವಿಧ್ಯ ಹಾಗೂ ಜೀವಿಗಳು ಪತ್ತೆಯಾಗುತ್ತಿರುತ್ತವೆ. ನಿಸರ್ಗ ಅದ್ಯಾವುದೋ ಲೆಕ್ಕಾಚಾರ ಹಾಕಿಯೇ ಜೀವಿಗಳನ್ನು ಸೃಷ್ಟಿ ಮಾಡುತ್ತಿರುತ್ತದೆ. ನಮ್ಮ ಗ್ರಹಿಕೆ ಬರುವ ಮೊದಲೇ ಹಲವು ಜೀವಿಗಳು ನಾಮಾವಶೇಷವಾಗುತ್ತವೆ. ಪ್ರಕೃತಿಯ ಅಗಾಧ ಅಚ್ಚರಿಗಳ ಎದುರು ನಾವು ಹುಲುಮಾವನರಷ್ಟೆ ಸೈ. … Read more
ಕಥಾಕಾಲ: ಪ್ರಶಸ್ತಿ ಪಿ.
ಎಲೆಕ್ಷನ್ನಾದ ಮೇಲೆ ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದ ಮಳೆಯ ಸುಳಿವೂ ಇಲ್ಲದೇ ಅದೆಷ್ಟೋ ದಿನಗಳಾಗಿ , ತನ್ನನ್ನು ತಾನೇ ಸುಟ್ಟುಕೊಳ್ಳುವಂತಿದ್ದ ಬಿರುಬೇಸಿಗೆ. ಈ ಸುಡುಬೇಸಿಗೆಯಲ್ಲಿ ಕೂತ ಕುರ್ಚಿಯೂ ಕೊಂಚ ಹೊತ್ತಲ್ಲೇ ಕೆಂಡದಂತೆನಿಸಿದರೆ ಆಶ್ಚರ್ಯರ್ಯವೇನಿಲ್ಲ. ಸ್ವಂತಕ್ಕೇ ಸಮಯವಿಲ್ಲದೀ ಸಮಯದಲ್ಲೊಬ್ಬರ ಹುಡುಕಾಟ ನಡೆದಿದೆ. ಅವ್ರೇ ಕತೆಗಾರ ಕಟ್ಟಪ್ಪ. ಈ ಕಟ್ಟಪ್ಪರಿಗೆ ಕತೆ ಬರೆಯೋದು ಅಂದ್ರೆ ಅದೊಂದು ತಪಸ್ಸು. ಯಾರೋ ಕೇಳಿದ್ರು ಅಂತ, ಏನೋ ನೋಡಿದ್ರು ಅಂತ ತಕ್ಷಣಕ್ಕೆಲ್ಲಾ ಏನೇನೋ ಎಳೆಹೊಡೆದು ಅದು ಕತೆಯಾಗೋದಲ್ಲ.ಈ ತತ್ ಕ್ಷಣದ ಕತೆ ಮತ್ತು ಮೂಡಿದ್ದಾಗ, ಬಿಡುವಿದ್ದಾಗೆಲ್ಲಾ ಒಂದೊಂದು … Read more
ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.
ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್): ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..! ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ? ಅವನುತ್ತರ ಗೊತ್ತಿಲ್ಲಪ್ಪ.., ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ … Read more
ನಾನು ಏಕೆ, ಏಕೆ ಹೀಗೆ…?!!!: ಭರತೇಶ ಅಲಸಂಡೆಮಜಲು
ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, … Read more
ಆಡಿಯೋ ಸಹಿತ ಪಂಜು ಕಾವ್ಯಧಾರೆ
ಅಮ್ಮ ನಾನು ಕೈಚಾಚಿ ಹನಿಗಳ ಸ್ಪರ್ಶಿಸಲು ಇಬ್ಬನಿಯ ಹೊತ್ತ ಚಳಿಗಾಳಿ ಮೈಯ ಅಪ್ಪಲು ನೆಲ ತುಂಬಿ ನಿಂತ ನೀರು ಪಾದಗಳ ಮುತ್ತಿಡಲು ನೀನು ನೆನಪಾಗುತ್ತೀಯ ಅಮ್ಮ ಒದ್ದೆಯಾದ ಮೈ ಒರೆಸಿದಂತೆ ಕೆಸರಾದ ಕಾಲ ನೇವರಿಸಿ ತೊಳೆದಂತೆ ಅನ್ನಿಸಿಬಿಡುವುದು ಪ್ರತೀಬಾರಿ ಮಳೆಬರಲು -ಅಕ್ಷಯ ಕಾಂತಬೈಲು ನಾ ನಿನ್ನ ಮರೆತು, ತೊರೆಯ ಹೊರಟರೆ ತಾಯಿ ತನ್ನ ಮಗುವನ್ನು ತೊರೆದಂತೆ ಮರ ತನ್ನ ಬೇರನ್ನು ತಾನೇ ಕಡಿದುಕೊಂಡಂತೆ, … Read more
ಮಾತು ಮುಕ್ಕಿದ ಮೌನ: ನಳಿನಾ ಡಿ.
ಗೆಳತಿಯರು ಕಳೆದುಹೋಗುತ್ತಾರಾ? ಆದರೆ ಗೆಳತಿಯರನ್ನು ಜತನದಿಂದ ಸಂಪಾದಿಸುವುದು ಹೇಗೆ? ಇದು ನಾನು, ನಿನ್ನ ಏಕೈಕ ಗೆಳೆಯ ಎಂದು ಎದೆಯುಬ್ಬಿಸಿ ಹೇಳಿದಾಗಲೆಲ್ಲಾ ನನ್ನ ಸ್ನೇಹದ ಸವಿಯರಿತ ಅವಳ ಮನಸ್ಸು ಉಬ್ಬುವುದು, ಮತ್ತೆ ಜಗತ್ತಿನ ಅತ್ಯಂತ ಸುಖವಾದ ಗೆಳತಿ ನಾನೇ ಕಣೋ, ಅದು ನಿನ್ನಿಂದಾನೇ ಅಂತ ಅವಳ ಸಂಭ್ರಮಿಸಿ ಭತ್ತದ ಹೊಲಗಳ ಹಸಿರು ಬಯಲಿನಲ್ಲಿ ಕೂಗಿದಾಗ, ನನ್ನ ಮನಸ್ಸಿನೊಂದಿಗೆ ದೇಹವೂ ಊರಾಚೆಯಲ್ಲಿ ಗೋಚರಿಸುವ ಗುಡ್ಡದ ಮೇಲೇನೇ ಕೂತುಬಿಟ್ಟಿರತ್ತೆ. ನನ್ನಷ್ಟು ಎತ್ತರ ಯಾರೂ ಇಲ್ಲ ಎಂಬ ಕೋಡು. ಐದಾರನೇ … Read more
ಗಂಡ ಒಬ್ಬ ಸೆನ್ಸಿಟಿವ್ ಗೆಳೆಯನಂತೆ ಯಾಕಿರೋಲ್ಲ/ಯಾಕಾಗೋಲ್ಲ?: ಸುಮನ್ ದೇಸಾಯಿ
ಕಪ್ಪುಗಟ್ಟಿರುವ ಆಕಾಶ, ಹೆಪ್ಪುಗಟ್ಟಿರುವ ವಿಷಾದವನ್ನು ಹೆಚ್ಚಿಸುವ ಬಣ್ಣ. ಟೆರೇಸ್ ಮೇಲೆ ಒಬ್ಬಳೇ ಕುಳಿತಿದ್ದೇನೆ. ಮಾತನಾಡುವಾಸೆ. ಅವನು ಜತೆಗಿಲ್ಲ. ಮತ್ತದೇ ಬೇಸರ. ಅದೇ ಸಂಜೆ, ಅದೇ ಏಕಾಂತ. ಅದೇನೋ ಗೊತ್ತಿಲ್ಲ, ಸಂಜೆಗೂ ಬೇಸರಕ್ಕೂ ಎಲ್ಲಿಲ್ಲದ ನಂಟು. ಸಂಜೆಯಾಗುತ್ತಿದ್ದಂತೆ ಮನಸ್ಸು ಮಾತನಾಡಲು ಹಾತೊರೆಯುತ್ತದೆ. ಮನಸ್ಸಿನ ಮಾತು ಕೇಳಿಸಿಕೊಳ್ಳುವವರಿಗಾಗಿ ಹುಡುಕಾಡುತ್ತದೆ. ಮೊಬೈಲ್ನಲ್ಲಿರೋ ಕಾಂಟ್ಯಾಕ್ಟ್ ನಂಬರುಗಳನ್ನೆಲ್ಲಾ ತಡಕಾಡುತ್ತೇನೆ. ಒಬ್ಬರೂ ಸಿಗಲೊಲ್ಲರು. ಹಾಗೆ ಸಿಕ್ಕಿದವರೆಲ್ಲರ ಜತೆ, ಇದ್ದಬದ್ದವರ ಜತೆ ಮನಸ್ಸನ್ನ ಬಿಚ್ಚಿಡಲಾಗುತ್ತದಾ, ಹಂಚಿಕೊಂಡು ಹಗುರಾಗಬಹುದಾ? ಇಲ್ಲವೇ ಇಲ್ಲ. ಅದಕ್ಕೂ ಒಂದು ವಿಶ್ವಾಸಾರ್ಹತೆ ಬೇಕು. ಸ್ನೇಹದ … Read more
ಸಾಮಾನ್ಯ ಜ್ಞಾನ (ವಾರ 29): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು: ೧. ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು ? ೨. ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಸ್ಥಾಪನೆಯಾದ ವರ್ಷ ಯಾವುದು ? ೩. ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ ? ೪. ಅಖಿಲ ಭಾರತ ವಾಖ್‌ಶ್ರವಣ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ ? ೫. ಇತಿಹಾಸದ ಪಿತಾಮಹ ಯಾರು ? ೬. ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ ? ೭. ಭಾರತ ದೇಶಿಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು ? … Read more
ಇಲ್ಲಿ ಎಲ್ಲವೂ ಬದಲಾಗುತ್ತದೆ: ನಟರಾಜು ಎಸ್. ಎಂ.
2006 ರ ಮೇ ತಿಂಗಳ 11ನೇ ದಿನ ಕೋಲ್ಕತ್ತಾದಲ್ಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಅಂದು ನಾನು ಓದುತ್ತಿದ್ದ ನ್ಯೂಸ್ ಪೇಪರ್ ನ ಮುಖಪುಟದಲ್ಲಿ ನಗುತ್ತಿರುವ ಬುದ್ಧದೇವ್ ಭಟ್ಟಾಚಾರ್ಯರ ಮುಖವನ್ನು ಕಾರ್ಟೂನ್ ಮಾಡಿ ನೂರಾ ಎಪ್ಪತ್ತೈದು ಬಾರಿ ಪ್ರಿಂಟ್ ಮಾಡಿದ್ದರು. 175 ಅಂದು ಸಿಪಿಎಂ ಪಕ್ಷ ಪಡೆದಿದ್ದ ಒಟ್ಟು ಸೀಟುಗಳ ಸಂಖ್ಯೆಯಾಗಿತ್ತು. ಸಿಪಿಎಂನ ವಿರೋಧಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ್ ಕಾಂಗ್ರೆಸ್ ಕೇವಲ 30 ಸೀಟುಗಳನ್ನು ಪಡೆದಿತ್ತು. ಒಟ್ಟು 294 ಸೀಟುಗಳಿರುವ ಬೆಂಗಾಳದ ವಿಧಾನ ಸಭೆಯಲ್ಲಿ … Read more
ಆಡಿಯೋ ಸಹಿತ ಪಂಜು ಕಾವ್ಯಧಾರೆ
ಕನ್ನಡ ನಾಡಿನಲಿ ಶ್ರೀಗಂಧದ ನಾಡಿನಲಿ ಸಹ್ಯಾದ್ರಿಯ ಗೂಡಿನಲಿ ಕಾವೇರಿಯ ಮಡಿಲಿನಲಿ ನನ್ನದೊಂದು ಪುಟ್ಟ ಗುಡಿಸಲು ಕನ್ನಡ ನುಡಿಯು ಮಿನುಗುವುದಲ್ಲಿ ಹಸಿರು ತೋರಣದೊಲು ಹಸಿರನುಟ್ಟ ಭುವನಗಿರಿ ಮುಡಿಯಲಿಟ್ಟು ನವಿಲುಗರಿ ಹಕ್ಕಿಗೊರಲ ತಬ್ಬಿ ಹಿಡಿದು ಚಂದಿರನ ಗಿಲಕಿ ಬಡಿದು ನನ್ನ ಹ್ರುದಯ ಕನ್ನಡವನೆ ಮಿಡಿಯುವುದು ನನ್ನ ಮಡದಿ ಮತ್ಸ್ಯಕನ್ಯೆ ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ ರಾಷ್ಟ್ರನುಡಿ ರಾಜನುಡಿ ಯಾವುದಾದರೇನು ದಾಯಾದಿಗಳ ನುಡಿಯ ನಡೆಯು … Read more