ಶಾಲಾ ಶೈಕ್ಷಣಿಕ ಯೋಜನೆ: ವೈ. ಬಿ. ಕಡಕೋಳ

ಸ್ವಂತ ಜ್ವಾಲೆಯಿಂದ ಉರಿಯುವ ದೀಪ ಮತ್ತೊಂದು ದೀಪವನ್ನು ಹೇಗೆ ಹೊತ್ತಿಸಲಾರದೋ ಹಾಗೆಯೇ ಸ್ವತಃ ಕಲಿಯದೇ ಇದ್ದ ಶಿಕ್ಷಕನು ಸಮರ್ಥವಾಗಿ ಬೋಧಿಸಲಾರ -ರವೀಂದ್ರನಾಥ ಠಾಗೂರ್ ಜೂನ್ ತಿಂಗಳು ಬಂತೆಂದರೆ ಶಾಲೆಗಳ ಪ್ರಾರಂಭ. ಇಲ್ಲಿ ಪಾಲಕರು. ಮಕ್ಕಳು ಶಿಕ್ಷಕರು ತಮ್ಮದೇ ಆದ ತಯಾರಿ ಮಾಡಿಕೊಳ್ಳುವ ಮೂಲಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ದರಾಗುವ ಸಮಯ. 2018-19 ಶೃಕ್ಷಣಿಕ ವರ್ಷ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾಗುವ ಮೊದಲು ವೇಳಾಪತ್ರಿಕೆ, ವರ್ಗದ ಶೈಕ್ಷಣಿಕ ರೂಪರೇಷೆಗಳ ಅಂದಾಜು ಪತ್ರಿಕೆ,ಅಭ್ಯಾಸ ಪತ್ರಿಕೆ, ದಿನಚರಿ ಹೀಗೆ ಒಂದಲ್ಲಾ ಹಲವು ದಾಖಲೆಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದಲಾವಣೆ ಜಗ(ನ)ದ ನಿಯಮ: ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ

ಕಾಲ ಎಂದೆಂದೂ ಕಾಲ ಕಾಲವೇ.. ಮನುಷ್ಯನ ಗುಣಸ್ವರೂಪ ಮಾತ್ರ ಬದಲಾಗುವುದಲ್ಲವೇ.. !!!! ಹಿಂದಿನ ಕಾಲದಲ್ಲಿ ಬಾಂಧವ್ಯಗಳ ಬೆಸುಗೆ ಜಾಸ್ತಿಯಾಗಿತ್ತು.ಒಗ್ಗಟ್ಟಿತ್ತು.ಪರಸ್ಪರ ಸಹಬಾಳ್ವೆ ಜಾಸ್ತಿಯಾಗಿತ್ತು.ಆದರೆ ಇಂದಿನ ಕಾಲದಲ್ಲಿ ಅದ್ಯಾವುದೂ ಇಲ್ಲ.ಕೊಲೆ,ಸುಲಿಗೆ,ಅತ್ಯಾಚಾರಗಳು ತಾಂಡವವಾಡುತ್ತಿವೆ.ಸಂಬಂಧಗಳ ಬೆಲೆಯೇ ತಿಳಿಯದೇ ಅಣ್ಣ-ತಂಗಿ,ಅಪ್ಪ – ಮಗಳು,ಪುಟ್ಟ ಮಕ್ಕಳು ಎನ್ನುವ ಭಾವನೆಗಳಿಲ್ಲದೇ ಅತ್ಯಾಚಾರ ಮಾಡುವ ಮನಸ್ಥಿತಿ ಇಂದಿನವರದು ಎನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.ಮೊದಲಿನ ಕಾಲದ ಭಾರತೀಯ ಸಂಸ್ಕೃತಿ ಉನ್ನತವಾಗಿತ್ತು.ಈಗಿನ ಜನರು ಮಾನವೀಯತೆ ಮರೆಯುತ್ತಿದ್ದಾರೆ ಎಂಬ ನುಡಿಗಳು ಕರ್ಣಗಳ ಕೊರೆದು ಸಾಗುತ್ತಲೇ ಇರುತ್ತದೆ. ಹಾಗಾದರೆ ಹಿಂದಿನ ಕಾಲದಲ್ಲಿ ದುಷ್ಟರು,ದುರ್ಜನರು ಇರಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಯೆಯೇ ಧರ್ಮದ ಮೂಲ (ಭಾಗ 1): ಸುನಂದಾ ಎಸ್ ಭರಮನಾಯ್ಕರ

ಇಂದು ಮಾನವ ಕಟುಕನಾಗಿದ್ದಾನೆ, ಕರುಣೆ, ಕನಿಕರ ಎಲ್ಲವೂ ಅವನಿಂದ ಮಾಯವಾಗಿದೆ ಎನ್ನುವುದು ಸತ್ಯ. ಅತೀ ಶ್ರೇಷ್ಠ ಎನಿಸಿಕೊಂಡ ಮಾನವ ಜೀವಿ ಕರುಣಾ ಮೂರ್ತಿ, ಸಹನಾಮಯಿ, ಸಂಘಜೀವಿ ಎಂದೆಲ್ಲಾ ಬಿರುದು ಪಡೆದಿರುವ ಮನುಷ್ಯ ಇಂದು ತನ್ನೆಲ್ಲ ಮೌಲ್ಯಯುತ ಗುಣಗಳನ್ನು ತೊರೆದು ರಾಕ್ಷಸ ಪ್ರವೃತ್ತಿಗೆ ಇಳಿದಿರುವುದು, ಹೇಯಕರ ಸಂಗತಿ. ನಮ್ಮ ಧರ್ಮಗಳು, ಪರಸ್ಪರ ಮಾನವರು ಮಾತ್ರವಲ್ಲ ಇಡೀ ಪ್ರಕೃತಿಯನ್ನೇ ಪ್ರೀತಿಸುವದಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ಪ್ರಳಯ ಎದುರುಗೊಂಡರೂ ಕೈಯಲ್ಲಿರುವ ಸಸಿಯನ್ನು ನಾಟಿ ಮಾಡಿರೆಂದು ಹೇಳುತ್ತವೆ. ನಾವು ಬೆಳೆದ ಕೃಷಿಯನ್ನು ಮಾನವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾರತವ ವಿಶ್ವವಿಖ್ಯಾತಗೊಳಿಸಿದ ಆ ಎರಡು ಘಟನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮಳೆಬಿಲ್ಲು” ಪುಸ್ತಕಾವಲೋಕನ: ಯಲ್ಲಪ್ಪ ಎಮ್ ಮರ್ಚೇಡ್

ಕವನ ಸಂಕಲನ: ಮಳೆಬಿಲ್ಲು ಲೇಖಕರು: ಶಿವಶಂಕರ ಕಡದಿನ್ನಿ ಪ್ರಕಾಶಕರು: ತಾಯಿ ಪ್ರಕಾಶನ, ಮಾನ್ವಿ ಮೊ.ನಂ: 7899211759 ಪುಸ್ತಕಾವಲೋಕನ: ಯಲ್ಲಪ್ಪ ಎಮ್ ಮರ್ಚೇಡ್ ಕನ್ನಡ ಸಾಹಿತ್ಯ ಪರಂಪರೆಯನ್ನು ಗತಕಾಲದಲ್ಲೂ ಬರೆದು ಪೋಷಿಸಿಕೊಂಡು ಬಂದ ಕವಿ ಗಣವನ್ನೇ ಕಾಣಬಹುದು. ಆಧುನಿಕ ಯುಗದಲ್ಲಿಯೋ ಕಾಣಬಹುದು, ಸಾಹಿತ್ಯ ರಚಿಸುವ ಕವಿ ಬಳಗಕ್ಕೆ ಕೊರತೆ ಇಲ್ಲ, ಕನ್ನಡ ಸಾಹಿತ್ಯ ಕೃಷಿಯಲ್ಲಿ ಅನೇಕ ಸಾಹಿತಿಗಳು ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ, ಮತ್ತು ಬೆಳೆಯುತ್ತಲಿದ್ದಾರೆ, ಆ ಸಾಲಿನಲ್ಲಿ ಬೆಳೆಯುವ ಸಿರಿ ಮೊಳೆಕೆಯಲ್ಲಿ ಕಾಣುವಂತೆ ಯುವಕವಿ “ಶಿವಶಂಕರ ಕಡದಿನ್ನಿ” ಹೆದ್ದೊರೆ ನಾಡೆಂದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ತ್ರೀ ದೇಹ –ಅದರ ಅಧಿಪತ್ಯ: ನಾಗರೇಖಾ ಗಾಂವಕರ

ಕೆಲವು ತಿಂಗಳುಗಳ ಹಿಂದೆ ಲಾಹೋರಿನ 16 ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಪಾಕ್ ಎಂಬ ಯುವಕನ ತಂಗಿಯ ಮೇಲೆ ಅತ್ಯಚಾರ ಎಸಗಿದ. ಇದನ್ನು ಸೇಡಿಗೆ ತೆಗೆದುಕೊಂಡ ಆ ಯುವಕ ಆತನ ತಂಗಿಯನ್ನು ಆಕೆಯ ಕುಟುಂಬ ಎಲ್ಲರೆದುರೇ ಅತ್ಯಾಚಾರ ಮಾಡಿದ್ದ. ಹೀಗೆ ಮಾಡುವಂತೆ ಅಲ್ಲಿಯ ಗ್ರಾಮ ಮಂಡಳಿಯೇ ತೀರ್ಮಾನ ತೆಗೆದುಕೊಂಡು ಆತನಿಗೆ ಆದೇಶಿಸಿತ್ತು. ಹಾಗೆ ಮಾಡಿದಾಗ ಮಾತ್ರ ಆ ಮತ್ತೊಬ್ಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾಜಿಕ ಸಂವೇಧನೆಯಲ್ಲಿ ಉಸಿರು ಬಿಗಿ ಹಿಡಿದ ಭವರಿ: ಕೆ.ಎಂ.ವಿಶ್ವನಾಥ ಮರತೂರ.

ಈ ಭವರಿಗಾಗಿ ಒಂದು ದಿನ ಕಾಯಬೇಕಾಯಿತು. ಪಾರ್ವತಿ ಸೋನಾರೆಯವರು ಕರೆ ಮಾಡಿ ಪುಸ್ತಕ ಓದಿ ಸರ್ ಎಂದರು. ಅವರ ಮಾತಿನಲ್ಲಿ ಒಬ್ಬ ಕಥೆಗಾರ ತನ್ನ ಮೊದಲ ಕಥಾ ಸಂಕಲನದ ಬಗ್ಗೆ ಅವರಿಗಿರುವ ಕಾಳಜಿ ಎದ್ದು ಕಂಡಿತು. ಭವರಿ ಕೈಸೇರಿದಳು. ಭಾರಿ ಒತ್ತಡದ ಕೆಲಸಗಳು. ವೃತ್ತಿ ಹಾಗೂ ಪ್ರವೃತ್ತಿಗಳ ಮಧ್ಯೆ ಪ್ರತಿದಿನ ಜಟಾಪಟಿ ಜೀವನ ನಮ್ಮದು ಆದರೂ ಭವರಿ ಯಾರು ಎಂಬ ಪ್ರಶ್ನೆ ಕಾಡಿದಾಗ “ಭವರಿ” ಕಥಾಸಂಕಲನ ಓದಬೇಕಾಯಿತು. ಇಲ್ಲಿ ಭವರಿ ಒಬ್ಬಳೆ ಅಲ್ಲಾ ಎಂಬುವುದು ಅರ್ಥವಾಯಿತು. ಬಂಜಗೇರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ದಾವಾಗ್ನಿ ಸೊರಗಿದೆದೆಯ ಇಳಿಬಿದ್ದ ಮಾಂಸದ ಮುದ್ದೆಗಳಂತೆ ಗತ ವೈಭವದ ಪ್ರೀತಿ ಬೆರಳು ಬೆಚ್ಚಗಿನ ಬಯಕೆಗಳು ತಣ್ಣಗಾಗಿ ಚಿರ ನಿದ್ರೆಗೆ ಜಾರಿವೆ ಕಾವು ಕಳೆದಕೊಂಡ ಕಾಯ ಪಡೆದ, ಕಳೆದುಕೊಂಡದ್ದರ ಕುರಿತು ಲೆಕ್ಕಾಚಾರ ನಡೆಸಿದೆ ಸೋತ ಕಂಗಳ ಕಣ್ಣೀರು ಮೈಮೇಲಿನ ಗೀರು ಗಾಯದ ಗುರ್ತುಗಳು ಎದುರಿಟ್ಟುಕೊಂಡು ಪಂಚನಾಮೆಗೆ ತೊಡಗಿದೆ ಭಗ್ನಾವಶೇಷವಾದ ಹೃದಯ ಕುಲುಮೆಯಲೀಗ ಬರೀ ಪ್ರತಿಕಾರದ ದಾವಾಗ್ನಿ ಬೇಯುತಿದೆ. *** ಅಂತರ ಸೂರ‍್ಯನಿಗೆ ಕಣ್ಣಿಲ್ಲ ದೇಹವೆಲ್ಲ ದೃಷ್ಟಿ ! ನದಿಗೆ ಕಾಲಿಲ್ಲ ಶರವೇಗದ ಶಕ್ತಿ ! ಗಾಳಿಗೆ ರೆಕ್ಕೆಗಳಿಲ್ಲ ಹಾರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಣಸುದ್ದಿ 11: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಂಡಿ ಯಲ್ಲವ್ವ: ಭೀಮಣ್ಣ ಮಾದೆ

ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜನ್ನತ್: ಅಶ್ಫಾಕ್ ಪೀರಜಾದೆ

ಶಬ್-ಏ-ಮೆಹರಾಜ ! ಮುಹ್ಮದ ಪೈಗಂಬರರನ್ನು ಸರ್ವಶ್ರೇಷ್ಠ ಅಲ್ಲಾಹ ತನ್ನ ಆಸ್ಥಾನಕ್ಕೆ ಸ್ವಾಗತಿಸಿ ಆದರಾತಿಥ್ಯ ನೀಡಿದ ಮಹತ್ವದ ರಾತ್ರಿ. . . ಅಲ್ಲಾಹ ಮತ್ತು ಪೈಗಂಬರರ ಈ ಅಪೂರ್ವ ಸಮ್ಮಿಲನದ ಸವಿನೆನಪಿಗಾಗಿ ಇಡೀ ಮುಸ್ಲಿಂ ಸಮುದಾಯದವರು ಆ ಇಡೀ ರಾತ್ರಿಯನ್ನು ಅಲ್ಲಾಹನ ನಾಮಸ್ಮರಣೆ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ವಿಶೇಷ ಪ್ರಾರ್ಥನೆ, ಪ್ರವಚನಗಳ ಮುಖಾಂತರ ತಮಗೂ ‘ಜನ್ನತ್’ ಅಂದರೆ ಸ್ವರ್ಗ ಲಭ್ಯವಾಗಲೆಂದು ಕೋರುತ್ತಾರೆ. ಸಾದೀಕ ಕೂಡ ಈ ಸಾಮೂಹಿಕ ಪ್ರಾರ್ಥನೆ, ಪ್ರವಚನಗಳಲ್ಲಿ ಭಾಗಿಯಾಗಲು ತನ್ನ ಮೊಹಲ್ಲಾದ ಮಸೀದಿಗೆ ತಲಪುತ್ತಾನೆ. ಇಶಾ ನಮಾಜಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುದೀನ ರೈಸ್ ಮತ್ತು ಹಲಸಿನ ಹಣ್ಣಿನ ಪಾಯಸ ರೆಸಿಪಿ: ವೇದಾವತಿ ಹೆಚ್. ಎಸ್.

ಪುದೀನ ರೈಸ್. ಬೇಕಾಗುವ ಸಾಮಾಗ್ರಿಗಳು: ಪುದೀನ ಸೊಪ್ಪು ½ ಕಟ್ಟು ಕೊತ್ತಂಬರಿ ಸೊಪ್ಪು ½ ಕಟ್ಟು ಬೆಳ್ಳುಳ್ಳಿ 3 ಶುಂಠಿ 1ಇಂಚು ಹಸಿ ಮೆಣಸಿನಕಾಯಿ 4 ಈರುಳ್ಳಿ 1 ತೆಂಗಿನ ತುರಿ ½ ಕಪ್ ನೀರು ¼ ಕಪ್ ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಸಾಮಾಗ್ರಿಗಳು: ತುಪ್ಪ 3 ಚಮಚ ಗೋಡಂಬಿ ಸ್ವಲ್ಪ ಜೀರಿಗೆ 1 ಚಮಚ ಕಾಳುಮೆಣಸು 10 ಪಲಾವ್ ಎಲೆ 1 ಲವಂಗ 4 ಸ್ಟಾರ್ ಅನೈಸ್ 1 ಚಕ್ಕೆ ಒಂದಿಂಚು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನುಕುಲಕ್ಕೊಂದು ವಿನಂತಿಯ ನುಡಿ: ಪಿ. ಕೆ. ಜೈನ್ ಚಪ್ಪರಿಕೆ

ಓ ಮಾನವ, ನಿನ್ನ ಹುಟ್ಟು ಸಾವು ನಿನ್ನ ಪರಿಮಿತಿಯೊಳಗೆ ಇಲ್ಲದೆ ಇರುವ ಇಂತ ಸಂದರ್ಭದಲ್ಲಿ ನಮಗೆಲ್ಲಾ ಜನ್ಮದಾತನಾದೆ. ಇದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ನಿನ್ನ ಸುಖ ಭೋಗಕ್ಕಾಗಿ ನಾವೇನು ನಮ್ಮ ಕೆಲಸವೇನು ನಮ್ಮ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ನಮ್ಮನ್ನು ಆವಿಸ್ಕರಿಸಿ ನಿನ್ನ ಪ್ರಪಂಚದಲ್ಲಿ ಒಂದು ಮಹಾನ್ ಸಾಧನೆಯನ್ನು ಮಾಡಿರುವೆಯಾ. ಸತ್ತ ಮೇಲೆ ಸ್ವರ್ಗ ಸೇರುತ್ತೇವೋ ಇಲ್ಲವೋ ಎಂಬ ಸಂದೇಹದಿಂದ ಭೂಮಿಯ ಮೇಲೆ ಸ್ವರ್ಗಕ್ಕೆ ಸಮನಾಗುವ ರೀತಿಯಲ್ಲಿ ನಿನ್ನ ನೆಲೆಯನ್ನು ರಚಿಸಿಕೊಂಡು ಇದಕ್ಕಾಗಿ ಒಂದೊಂದಾಗಿ ನಮ್ಮನ್ನು ಕಂಡು ಹಿಡಿಯಲು ಹೊರಟೆಯಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾದಿರುವೆ ನಿನಗಾಗಿ: ಜಯಶ್ರೀ. ಜೆ. ಅಬ್ಬಿಗೇರಿ

ಪ್ರಿಯ ಹೃದಯದರಸಿಗೆ, ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ, ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು ದೂಡುತ್ತಿದ್ದ ನನ್ನ ಪಾಡು ಕಂಡ ಅಪ್ಪ,ಅವ್ವ, ಗೆಳೆಯರು, ಸಂಬಂಧಿಕರು `ಒಳ್ಳೆಯ ಕೆಲಸವಿದೆ ಕೈ ತುಂಬಾ ಸಂಬಳವಿದೆ ಯಾಕ ಸೊರಗಿ ಶುಂಠಿಯಾಗಿ? ಮದುವೆಯಾಗಿ ಆರಾಮ ಇರು`. ಎಂದು ಎಷ್ಟು ಪೀಡಿಸಿದರೂ ಜಗ್ಗಿರಿರಲಿಲ್ಲ. ಈ ಜೀವಮಾನದಲ್ಲಿ ನಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕವನ: ವೃಂದಾ ಸಂಗಮ, ವಿಭಾ ಶ್ರೀನಿವಾಸ್

ಪುಟ್ಟನ ರೈಲು ಪುಟ್ಟಗೆಂದು ಅಪ್ಪ ತಂದ ಚಿಕ್ಕದೊಂದು ರೈಲನು ನೋಡಿ ಈಗ ಪುಟ್ಟನೊಮ್ಮೆ ರೈಲು ಬಿಡುವ ಸ್ಟೈಲನು || ರೈಲು ಈಗ ಓಡುತಿಹುದು ಮನೆಯ ಮೂಲೆ ಮೂಲೆಗೆ ಆಗ ಈಗ ಹಾರುತದೆ ಹಿತ್ತಲಾಚೆ ಬೇಲಿಗೆ ಹೋಗುತಿಹುದು ರೈಲು ನಿಮಗೆ ಎಲ್ಲಿ ಬೇಕೊ ಅಲ್ಲಿಗೆ ನಿಲ್ಲುತದೆ ಚಿಂತೆಯಿಲ್ಲ ನೀವೆ ಕೇಳಿದಲ್ಲಿಗೆ || ಹಳಿಯ ಮೇಲೆ ಓಡ ಬೇಕು ಎಂಬ ನಿಯಮವಿಲ್ಲ ಗೋಡೆ ಮೇಲೆ ಕಿಡಕಿಯೊಳಗೆ ತೂರಿ ನಡೆವುದಲ್ಲ ಚಿಕ್ಕದೇನು ದೊಡ್ಡದೇನು ಅಡ್ಡ ಬಂದ್ರೆ ಎಲ್ಲ ಹಾರಿಕೊಂಡು ಹೋಗುತದೆ ಅದಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಂದೂಕು ಹಿಡಿದ ಕೈಗಳು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕವನ ಸಂಕಲನ: ಬಂದೂಕು ಹಿಡಿದ ಕೈಗಳು ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)….. ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ “ಪಾರ್ಶ್ವ ಸಂಗೀತ” ನಾಟಕ ಪ್ರದರ್ಶನ

ಇದೇ ಜೂನ್ ತಿಂಗಳ 23, 24, 29, 30 ಹಾಗೂ ಜುಲೈ 1 ರಂದು ಸಂಜೆ 7 ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ನೂತನ ಕಿರುರಂಗಮಂದಿರದಲ್ಲಿ ರಂಗವಲ್ಲಿ ತಂಡದ ನೂತನ ರಂಗಪ್ರಯೋಗ, ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕದ ಪ್ರದರ್ಶನವಿದೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕದ ನಿರ್ದೇಶಕರು. ನಾಟಕ ಕುರಿತು ಪಾಶ್ರ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಈ ಒಲವಿನ ಪಯಣಕೆ ನಿನ್ನ ನಯನಗಳೇ ದೀವಟಿಗೆ: ಬಿ.ಎಲ್.ಶಿವರಾಜ್ ದೇವದುರ್ಗ

ಅಂದು ನಾನು ಗ್ರಂಥಾಲಯದಲ್ಲಿ ನನ್ನ ಪಾಡಿಗೆ ನನ್ನ ಇಷ್ಟದ ಪುಸ್ತಕವಾದ ಶಿವರಾಮ್ ಕಾರಂತರ “ಮೈಮನಗಳ ಸುಳಿಯಲ್ಲಿ” ಪುಸ್ತಕದ ತಲಾಶ್ ನಲ್ಲಿ ತಲ್ಲೀನನಾಗಿದ್ದೆ. ರ್ಯಾಕ್ ನಲ್ಲಿ ನನಗೆ ಬೇಕಾದ ಪುಸ್ತಕ ಕಂಡಿತು, ಅದನ್ನು ರ್ಯಾಕ್ ನಿಂದ ತೆಗೆದ ಕೂಡಲೇ ರ್ಯಾಕ್ ನ ಕಿಂಡಿಯಲ್ಲಿ ಹೊಂಬೆಳಕನ್ನು ಹೊತ್ತಿದ್ದ ತಿಳಿ ನೀಲಿ ಬಣ್ಣದ ನಿನ್ನ ನಯನಗಳು ಹೊಳೆದವು. ನೀನು ಕೂಡ ನನ್ನಂತೆ ಪುಸ್ತಕದ ಹುಡುಕಾಟದಲ್ಲಿದ್ದೆ. ಪುಸ್ತಕ ಹಿಡಿದು ಅಲ್ಲೇ ಇದ್ದ ಮೇಜಿನ ಮೇಲೆ ಓದುತ್ತಾ ಕುಳಿತೆ. ಪುಸ್ತಕದ ಮೊದಲ ಪುಟದ ಮೂರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ