ಗೆಳೆಯಾ..: ನಂದಾದೀಪ, ಮಂಡ್ಯ

ಹಗಲು ರಾತ್ರಿಗಳನ್ನು ಒಂದುಗೂಡಿಸುವ ಒಂದು ಎಳೆಯೆಂದರೆ ಮುಸ್ಸಂಜೆ..! ಅಂತಹ ಮುಸ್ಸಂಜೆಯ ತಂಪಿನಲಿ ಕಡಲ ಮರಳಿನ ಮಡಿಲಿನಲಿ ಕುಳಿತು ಬೆರಳು ನಿನ್ನ ಹೆಸರನು ಗೀಚುವಾಗ ಆ ಅಲೆಗಳಿಗೂ ಅದೇನು ಸಂಕಟವೋ ಓಡೋಡಿ ಬಂದು ಅಳಿಸಲೆತ್ನಿಸುತ್ತವೆ..ಅಲೆಗಳು ಅಳಿಸಿದಷ್ಟು ನಿನ್ಪ ಹೆಸರನ್ನು ಮತ್ತಷ್ಟು ನನ್ನೆದೆಯಲ್ಲಿ ಗಟ್ಟಿಯಾಗಿ ಅಚ್ಚೊತ್ತುಕೊಳ್ಳಬೇಕೆಂಬ ಭಾವಗಳು ಮೂಡಿ, ಅಮೂಲ್ಯವಾದ ಕನಸುಗಳನ್ನು ಹುಟ್ಟು ಹಾಕಿಬಿಡುತ್ತದೆ.. ಇಂತಹ ಭಾವನೆಗಳು ಮನಸನ್ನು ಅರಳಿಸುವುದಕ್ಕಿಂತ ಎಲ್ಲಿ ನೀ ಸಿಗದೆ ನರಳಿಸಿಬಿಡುತ್ತದೊ ಎಂಬ ಭಯವೊಂದು ಕಾಡದೆ ಇರಲಾರದು.. ಆದರೆ ಒಲವೆನ್ನುವುದೆ ಹಾಗೆ ಅಲ್ಲವೆ ಒಂಟಿ ಹೆಜ್ಜೆಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಲವ ಹೊರೆ ಹೊರಿಸಿದವಳೇ..: ವಿಭಾ ವಿಶ್ವನಾಥ್

ನೀನ್ಯಾಕಿಷ್ಟು ಚೆಂದವೇ ಹುಡುಗಿ? ನನ್ನ ಮನಸೂರೆಗೊಂಡು ಕನಸಲ್ಲೂ ಲಗ್ಗೆ ಇಡುವಷ್ಟು..? ಸುಂದರತೆ ಎಂದರೆ ಬರೀ ಬಾಹ್ಯ ಸೌಂದರ್ಯ ಮಾತ್ರ ಎಂದುಕೊಂಡವನ ಮನ ಬದಲಿಸಿದ್ದು ನೀನಲ್ಲದೆ ಮತ್ಯಾರು ಎಂದುಕೊಂಡೆ..?  ನೀನ್ಯಾಕಿಷ್ಟು ಒಳ್ಳೆಯವಳು ಹೇಳು..? ಒಳ್ಳೆಯತನ ಬೂಟಾಟಿಕೆ ಎಂದುಕೊಂಡಿದ್ದವನ ಮನವನ್ನು ಬದಲಿಸುವಷ್ಟು ಒಳ್ಳೆತನ ನಿನ್ನಲ್ಲಿಲ್ಲದೇ ಹೋಗಿದ್ದರೆ ಅದೆಷ್ಟು ಕೆಟ್ಟವನಾಗಿರುತ್ತಿದ್ದೆ ನಾನು.. ಆದರೂ ಸುಂದರವಾದದ್ದು, ಒಳ್ಳೆಯದ್ದು ದೂರದಲ್ಲೇ ಇರಬೇಕು ಅಲ್ಲವೇ..? ಅದಕ್ಕೆ ಇರಬೇಕು ನಿನ್ನಂತಹವರು ಗಗನ ಕುಸುಮಗಳಂತೆ ಭಾಸವಾಗುವುದು. ಪಾರಿಜಾತದಂತಹವಳು ನೀನು.. ಅದರ ಬಿಳುಪು, ಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು. ಅದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮವೆ ಬಾಳಿನ ಬೆಳಕು: ವರದೇಂದ್ರ ಕೆ

“ಪ್ರೇಮಿಸಬೇಕು ಪ್ರೇಮಿಗಳುಮನಸನ್ನು, ಅರಿಯಬೇಕುಕನಸಿನಂತಿಲ್ಲ ಬದುಕೆಂಬುದನು.ಎದುರಿಸಬೇಕುಮದುವೆಗೆ ಮುನ್ನ ಬರುವ ಕಷ್ಟಗಳನ್ನು,ಸಹಿಸಬೇಕು ಮದುವೆನಂತರಬರುವ ಕ್ಲಿಷ್ಟಗಳನ್ನು” ಪ್ರೇಮಿಗಳು, ಮದುವೆಗೆ ಮುನ್ನ ಹೃದಯದೊಳಗೆ ಹುಟ್ಟಿದ ಪ್ರೇಮದ ಚಿಗುರಿಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಮದುವೆ ಬಳಿಕ ಸಂಸಾರದ ಜಂಜಾಟವನ್ನು ಗೆದ್ದು ಪ್ರೇಮವನ್ನು ಉಳಿಸಿ, ಬೆಳೆಸಿ, ಹೆಚ್ಚಿಸಿಕೊಂಡವರು ನಿಜವಾದ ಪ್ರೇಮಿಗಳು. ಪ್ರೇಮ, ಒಂದು ಮಧುರವಾದ ಯಾತನೆ. ಈ ಮಧುರವಾದ ಮಾನಸಿಕ ಯಾತನೆಗೆ ಸೋಲದವರಿಲ್ಲ. ಈ ಯಾತನೆಯನ್ನು ಬೇಡವೆಂದವರೂ, ಬೇಡ ಎನ್ನುವವರೂ ಇಲ್ಲ. ಪ್ರೇಮವಿಲ್ಲದೆ  ಬದುಕಲು ಸಾಧ್ಯವಿಲ್ಲ ಧರೆಯಲ್ಲಿ. ಧರೆಯ ಪ್ರೇಮದ ಫಲವೇ ನಮ್ಮ ಆಹಾರ. ಎಲ್ಲಕ್ಕೂ ಮೂಲವಾದ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀ ಕೊಂಡುಕೊಂಡ ಮುಖವಾಡದ ಅಂಗಡಿಯಲ್ಲಿ ನನಗೊಂದನ್ನು ಕೊಡಿಸು: ಮಹಾಂತೇಶ್. ಯರಗಟ್ಟಿ

ನಿನ್ನ ಬಗ್ಗೆ ಬರೆಯಲು ಈಗ ಏನೂ ಉಳಿದಿಲ್ಲ ಆದರೂ ಬರೇಯುತ್ತೇನೆ. ನಿನ್ನ ಹೆಸರಿನಲ್ಲಿ ಬರೆದಿಟ್ಟ ಒಂದಿಷ್ಟು ಪತ್ರಗಳ ಬಗ್ಗೆ ಕೆಣುಕಿ ಕಾಡಿ ನನ್ನನ್ನ ಈ ಪ್ರೀತಿಗಾಳಕ್ಕೆ ಸಿಲುಕಿಸಿ ನೀನು ಮಾತ್ರ ಗೆದ್ದವರ ಸಾಲಿನಲ್ಲಿ ನಿಂತು ನಗುತ್ತಿ, ಆದರೂ ಬೇಜಾರಿಲ್ಲ. ನಾನು ಯಾವಾಗಲೊ ನಿನಗೆ ಸೋತಿದ್ದೇನೆ. ಗೆದ್ದ ನಿನ್ನ ಹಸಿವು ತೀರಿತು ಆದರೆ ಸೋತವನ ಹಂಬಲ ಮಾತ್ರ ನೀ ಬಿಟ್ಟು ಹೋದ ಗಳಿಗೆಯಿಂದ ವಿಲ ವಿಲ. ನಾನಾಗಿ ನಿನಗೆ ಬರೆದ ಅದೆಷ್ಟೋ ಪತ್ರಗಳಲ್ಲಿ ನಿನ್ನನ್ನ ಒಂದು ಮಾತು ತೆಗಳಲಿಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ

ಮೊಟ್ಟ ಮೊದಲು ಎಲ್ಲರಿಗು ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. ಭೂಮಿಮೇಲೆ ಜೀವಿಸುವ ಪ್ರತಿ ಜೀವಿಗಳು ಪ್ರೇಮಿಗಳೇ. ಈ ಜಗದಲ್ಲಿ ಗಾಳಿ, ನೀರು, ಬೆಳಕಿನ ಅಸ್ತಿತ್ವ ಎಷ್ಟು ಸತ್ಯವೋ ಹಾಗೆ ಈ ಪ್ರೀತಿ, ಪ್ರೇಮವೆಂಬ ಭಾವನೆಗಳ ಅಸ್ತಿತ್ವವು ಅಷ್ಟೇ ಸತ್ಯ ಮತ್ತು ಅವಶ್ಯಕ. ಪ್ರೀತಿ ಎಂದರೆ ತಂಗಾಳಿ, ಪ್ರೀತಿ ಎಂದರೆ ಹರಿವ ನೀರು, ಪ್ರೀತಿ ಎಂದರೆ ಬಿಸಿ ಉಸಿರು, ಪ್ರೀತಿ ಎಂದರೆ ಸಿಹಿ ಸ್ಪರ್ಶ, ಪ್ರೀತಿ ಎಂದರೆ ಹುಸಿ ಮುನಿಸು, ಪ್ರೀತಿ ಎಂಬುದು ಸದಾ ಹಸಿರು. ಪ್ರೀತಿ ಎಂಬುದು ಕಣ್ಣಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಿಗಳ ದಿನಾಚರಣೆಯ ಸಂಭ್ರಮ ಸಲಹೆ : ಸಿಂಧು ಭಾರ್ಗವ್. ಬೆಂಗಳೂರು

ಈ ಪ್ರೀತಿಗೆ ಪರಿಧಿ ಎಂಬುದಿಲ್ಲ. ಭ್ರೂಣದಿಂದ ಮರಣದವರೆಗೂ ಪ್ರೀತಿ ವಿಸ್ತಾರವಾಗಿ ಮನಸ್ಸನ್ನು ಹರಡಿಕೊಳ್ಳುತ್ತದೆ. ಅಲ್ಲದೇ ಪ್ರೇಮಿಗಳ ದಿನವನ್ನು ಕೂಡ ಯುವಕ ಯುವತಿಯರು ಮಾತ್ರ ಆಚರಿಸಬೇಕೆಂದಿಲ್ಲ‌. ಪ್ರೀತಿಯನ್ನು ಆರಾಧಿಸುವ ಪ್ರತಿಯೊಬ್ಬನಲ್ಲೂ ಆ ಸಂಭ್ರಮ ಮನೆ‌ ಮಾಡುತ್ತದೆ‌. ತೋರಿಸಿಕೊಳ್ಳದೆ ಇರಬಹುದು. ಇಲ್ಲ ಮುಂಜಾನೆದ್ದು ಮಡದಿ ಕೆನ್ನೆಗೆ ಸಿಹಿ ಮುತ್ತನಿಟ್ಟು ಶುಭಾಶಯ ಕೋರಬಹುದು. ಮಗುವಿನ ಹಣೆಗೆ ಮುತ್ತನಿಟ್ಟು ಅಪ್ಪಿಕೊಂಡು ಮುದ್ದಾಡಬಹುದು. ವಯೋವೃದ್ದ ದಂಪತಿಗಳು ಕೂಡ ಒಂದು ಕೆಂಪು ಗುಲಾಬಿ ನೀಡಿ ಪರಸ್ಪರ ಖುಷಿಪಡಬಹುದು. ಆದರೂ ಪ್ರೇಮಿಗಳ ದಿನಾಚರಣೆ ಎಂದಾಗ ಎಲ್ಲರ ಕಣ್ಣು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿ-ಮರ ಮತ್ತು ಬಳ್ಳಿ: ಕು.ಸ.ಮಧುಸೂದನ ರಂಗೇನಹಳ್ಳಿ

ಅದೊಂದು ಹಳೆಯ ಮರ! ಹಸಿರಿನ ಯಾವ ಕುರಹೂ ಇರದ ಬೋಳು ಮರ. ಅದರ ರೆಂಬೆ-ಕೊಂಬೆಗಳೆಲ್ಲ ಒಣಗಿವೆ. ಮರದ ಬೇರುಗಳಿನ್ನೂ ಸತ್ತಿಲ್ಲವಾದರೂ ನೆಲದ ಕಸುವ ಹೀರಿ ಕಾಂಡ ರೆಂಬೆ ಕೊಂಬೆಗಳಿಗೆ ಜೀವರಸ ತುಂಬಿ ಮತ್ತೆ ಹಸಿರೊಡೆಸುವ ಶಕ್ತಿ ಕ್ಷೀಣವಾಗಿದೆ. ಅದು ಮುಂಚೆ ಹೀಗಿರಲಿಲ್ಲ. ಎಂತಾ ಬಿರು ಬೇಸಿಗೆಯಲ್ಲೂ ಮೈಯೆಲ್ಲಾ ಹಸಿರಾಗಿ ಕೈ ಇಟ್ಟಲ್ಲೆಲ್ಲಾ ಸಮೃದ್ದ ಹಣ್ಣುಗಳ ಖಜಾನೆ. ಅದರ ನೆರಳಲ್ಲಿ ದಣಿವಾರಿಸಿ ಕೊಂಡವರ, ಹಸಿವು ನೀಗಿಸಿಕೊಂಡವರ ಲೆಕ್ಕ ಸ್ವತ: ಅದಕ್ಕೂ ಸಿಕ್ಕಿಲ್ಲ. ಸದಾ ಹಕ್ಕಿಗಳ ಚಿಲಿಪಿಲಿಯಿಂದ ತುಂಬಿರುತ್ತಿದ್ದ ಮರವಿಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿ ಎಂದರೆ

ಪ್ರೀತಿ ಎಂದರೇನು?? ಪ್ರೀತಿ ಎಂಬ ಪದವೇ ಅಮೋಘ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ. ಪ್ರೀತಿಯ ಮಧುರತೆಯೆ ಹಾಗೇ. ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಪ್ರೀತಿಸುವ ಹೃದಯ ಸದಾ ಜೊತೆಯಿರಬೇಕು ಎಂಬುದೇ ಅದರ ಬಯಕೆ. ಇಲ್ಲಿ ಸಿರಿವಂತ-ಬಡವ, ಮೇಲು-ಕೀಳು ಎಂಬ ಮಾತೆ ಬರಲ್ಲ. ಯಾಕೆಂದರೆ ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಜಾತಿ, ಧರ್ಮ, ಅಂದ-ಚಂದ, ಮೇಲು-ಕೀಳು ದೊಡ್ಡಸ್ತಿಕೆ ಅದೆಲ್ಲವನ್ನು ಮೆಟ್ಟಿ ಏರಿರುವುದು ಪ್ರೀತಿ. ಪ್ರೇಮದಲ್ಲಿರುವುದು ಹೃದಯಗಳ ಪಿಸುಮಾತುಗಳು, ಭಾವನೆಗಳ ಸಮಾಗಮ, ಮೌನಕವಿತೆ. ಪ್ರೀತಿಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುಲ್ವಾಮದಲ್ಲಿ ಬೆಂದ ಪ್ರೇಮದ ಹೂವು…. : ಲೋಕೇಶ್ ಪೂಜಾರಿ

ಅಂದು ಡಿಸೆಂಬರ್ 18 , ನಾನು 4-5 ತಿಂಗಳ ನಂತರ ಊರಿಗೆ ಹೊರಟಿದ್ದೆ. ಅವತ್ತು ಅವಳ ಜೊತೆ ಕಳೆದ ಕ್ಷಣಗಳು ನಮ್ಮ ಕೊನೆಯ ಕ್ಷಣಗಳು ಆಗಬಹುದು ಅನ್ನುವುದು ನನಗೆ ತಿಳಿದಿರಲಿಲ್ಲ. ಕಲ್ಪನೆಗಳಿಗೆ ಸಿಗದ ಆ ಸಂದರ್ಭ ಗಳನ್ನು ನೆನೆಯುತ ಮನಸ್ಸುಗಳು ಅಳದೇ ಇರಬಹುದೇ…… ನನ್ನ ಅವಳ ಪರಿಚಯ ಕಾಲೇಜು ದಿನಗಳಿಂದಲೇ ಹಸಿರು ಹುಲ್ಲಿನ ಮೇಲೆ ಪ್ರೀತಿಯ ಹೆಜ್ಜೆಗುರುತನ್ನು ಸಹಿ ಮಾಡಿತ್ತು. ಆ ಸಹಿ, ನಮ್ಮಿಬ್ಬರನ್ನು ಪ್ರೇಮದ ಬಂಧನದಲ್ಲಿ ಸಿಲುಕಿಸಿ ನಿತ್ಯವೂ ಖುಷಿ ಖುಷಿಯ ನೂತನ ಊಟವನ್ನು ಮನಸಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಹೊತ್ತೊಯ್ಯುವ ಮುಂಚೆ… ಕೋಳಿ ಪಿಳ್ಳಿಗಳ ಜತೆ ಓಡಾಟ ಹಸುಕರುಗಳೊಡನೆ ಕುಣಿದಾಟ ಗೆಳೆಯರೊಟ್ಟಿಗೆ ಕೆಸರಿನಾಟ ಅಪ್ಪ ಸಾಕಿದ್ದ ಕಂದು ಬಣ್ಣದ ಮೇಕೆಯ ತುಂಟಾಟ, ನಮಗೆಲ್ಲ ಅದರೊಂದಿಗೆ ಆಡುವದು ಇಷ್ಟ ಅಪ್ಪನಿಗೂ ಮೇಕೆಯಂದ್ರೆ ಪ್ರೀತಿ ಗಾಂಧಿತಾತನಂತೆ ಮೇಕೆ ಹಾಲು ಅವನ ಪಾಲಿಗೆ ಪಂಚಾಮೃತ ಅಪ್ಪ ಕೇಳಿದಾಗಲೆಲ್ಲ ಅವ್ವ ಮಾಡಿಕೊಡಲೇಬೇಕು ಚಹಾ ಹಾಲಿಗಿದೆಯಲ್ಲ ಮೊಗೆದಷ್ಟು ತುಂಬಿಕೊಡುವ ಕಾಮಧೇನು ಒಂದು ದಿನ ಅದೇನೋ ತಿಂದ ಮೇಕೆಗೆ ಹೊಟ್ಟೆಯುಬ್ಬರದ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದು, ಜೀವದಂತಿದ್ದ ಮೇಕೆ ಪ್ರಾಣ ಉಳಿಸದ ಪಶುವೈದ್ಯ ಕಟುಕನಂತೆ ಕಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕಥೆ: ಸುಳ್ಳು ಕಹಿಯಾಗಿರುವುದು: ಸಿಂಧು ಭಾರ್ಗವ್

ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ‌. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ‌ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಸ್ತುತ ವಿಜ್ಞಾನ ತಂತ್ರಜ್ಞಾನದ ಬಳಕೆ: ಪ್ರಿಯಾಂಕಾ ಬನ್ನೆಪ್ಪಗೋಳ

ಭಾರತವು ಕೃಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಅಧಿಕ ಬೆಳೆ ಹಾನಿ ಸಂಭವಿಸಿ ರೈತನು ಆತಂಕಕ್ಕೀಡಾಗಿದ್ದಾನೆ. ರೈತನು ಕೃಷಿಯಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ತನ್ನ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳಿಸಿ ತನ್ನ ಜೀವನಮಟ್ಟವನ್ನು ಸುಧಾರಿಸಬಹುದು. ಇದರಿಂದಾಗಿ ರೈತರ ಜೀವನಮಟ್ಟ ಹೆಚ್ಚಾಗಿ ದೇಶದ ಆದಾಯವೂ ಸಹ ಹೆಚ್ಚಾಗುವುದು. ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯುವರು. ರೈತರು ಬೆಳೆಗಳನ್ನು ಬೆಳೆದರೆ ಮಾತ್ರ ನಮಗೆಲ್ಲರಿಗೂ ಆಹಾರ ದೊರೆಯುವುದು. ಇಲ್ಲದಿದ್ದರೆ ಅಧೋಗತಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 6): ಎಂ. ಜವರಾಜ್

-೬- “ಏಯ್, ಎದ್ರು ಮ್ಯಾಕ್ಕೆ..” ನಾನು ದಿಗ್ಗನೆದ್ದು ಅತ್ತಿತ್ತ ನೋಡ್ದಾಗ ಮಿಂಚು ಫಳಾರ್ ಅಂತ ಹೊಳಿತಲ್ಲಾ.. ಗಾಳಿ ಜೋರಾಗಿ ಬೀಸಿತಲ್ಲಾ.. ಕೂಗಿದ್ಯಾರಾ.. ಅಂತ ಅತ್ತಿತ್ತ ನೋಡ್ತ ಕಣ್ಕಣ್ಣು ಬಿಡೊ ಹೊತ್ತಲಿ “ಏಯ್ ಏನ ಕಣ್ಕಣ್ ಬುಡದು ಮಿಂಚು ಹೊಳಿತಿಲ್ವ ಗಾಳಿ ಬೀಸ್ತಿಲ್ವ ಗಡುಗುಡುಗುಡನೆ ಗುಡುಗು ಸದ್ದಾಗದು ಕೇಳ್ತಿಲ್ವ.. ಬಿರ್ಗಾಳಿನೇ ಬರ್ಬೊದು ನೋಡಾ..” ನಾ ಆ ಕಡೆ ದಿಗಿಲಿಂದ ನೋಡ್ತ “ಇಲ್ಲ ಇಲ್ಲ ಹಂಗೇನಿಲ್ಲ.. ಅಂತಂತ ಹಂಗೇ ಕುಂತರು ಬಿಡದ ಆ ಮೆಟ್ಟು ಬೆಂಕಿ ಕೆಂಡದಡೆತರ ಬೆಳಗಿ ಹಾಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಾಲು, ಮಾಲು, ಕೆಲಸ, ಆರಾಮು!!: ಸಹನಾ ಪ್ರಸಾದ್‌

“ಕೆಲಸ, ಕೆಲಸ, ಕೆಲಸ, ಬರೀ ಇದೇ ಆಗೋಯ್ತಲ್ಲ ನಿಂದು” ಶಾಲುಗೆ ಮಾಲು ಬೈಯುತ್ತ ಇದ್ದಿದ್ದು ಪಕ್ಕದ ರೂಮಿನಲ್ಲಿದ್ದ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. “ಇರೋದು ಒಂದು ಜೀವನ, ಎಂಜಾಯ್ ಮಾಡೋದು ಕಲಿತುಕೊ. ರಜೆ ತೊಗೋ, ಮಜಾ ಮಾಡು. ಅದು ಬಿಟ್ಟು…” ಅವಳ ವಾಕ್ ಪ್ರವಾಹ ನಡೀತಾನೆ ಇತ್ತು. ಇವಳು ಮಾತ್ರ ಮೌನ. ಮಧ್ಯಾಹ್ನ ಲಂಚ್ ಗೆ ಶಾಲು ಸಿಕ್ಕಿದಾಗ ಅವಳ ಮುಖದಲ್ಲಿ ಯಾವ ಆತಂಕವೂ ಕಂಡು ಬರಲಿಲ್ಲ. ಹಾಯಾಗಿ ತಂದಿದ್ದ ಊಟ ಮುಗಿಸಿ ಕಾಫಿ ಕುಡೀತಾ ಕುಳಿತ್ತಿದ್ದವಳನ್ನು ನೋಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೊಬೈಲ್ ಸೆಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು: ಚಂದ್ರಿಕಾ ಆರ್ ಬಾಯಿರಿ

” ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಮಿಗಿಲು”. ಆನೆಯ ಬಗ್ಗೆ ಸಾವಿರ ಪದಗಳಲ್ಲಿ ಬಣ್ಣಿಸುವುದಕ್ಕಿಂತಲೂ ಆನೆಯ ಒಂದು ಚಿತ್ರವನ್ನು ತೋರಿಸುವುದು ಉತ್ತಮ ಎಂದು ಹೇಳುವುದುಂಟು. ಚಿಕ್ಕ ಮಕ್ಕಳಿಗೆ ಪಾಠ ಮಾಡುವಾಗ ಕೇವಲ ವಿವರಣೆ ನೀಡುವುದಕ್ಕಿಂತಲೂ ಚಾರ್ಟ್ ಗಳನ್ನು ತೋರಿಸಿ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈಗಿನ ಕಂಪ್ಯೂಟರ್ ಯುಗದಲ್ಲಿ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ತೋರಿಸುವುದರಿಂದ ಪಾಠವು ನೈಜ ಅನುಭವವನ್ನು ನೀಡುತ್ತದೆ. ಇನ್ನು ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ರೇಡಿಯೋಗಳಿತ್ತು. ಜನರು ವಾರ್ತೆಗಳನ್ನು, ಚಿತ್ರಗೀತೆಗಳನ್ನು ಕೇಳುತ್ತಲೇ ದಿನದ ಕೆಲಸಗಳನ್ನು ಲವಲವಿಕೆಯಿಂದ ಮಾಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸ್ಸು ಒಂದು ಅದ್ಬುತ ಶಕ್ತಿ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಮನಸ್ಸು ಅದ್ಭುತವಾದುದು! ಅತ್ಯದ್ಬುತವಾದುದು! ಯಾರೂ ಅವರವರ ಮನಸ್ಸಿನ ಬಗ್ಗೆ ಚಿಂತಿಸಿದರೆ ಮನಸ್ಸಿನ ಅದ್ಭುತ ಶಕ್ತಿ ಗಮನಕ್ಕೆ ಬರುವುದು. ಅದರ ಬಗ್ಗೆ ಚಿಂತಿಸದಿರುವುದರಿಂದ ಅದರ ಅದ್ಭುತ ಶಕ್ತಿ ಗಮನಕ್ಕೆ ಬರುವುದಿಲ್ಲ! ಆದ್ದರಿಂದ ಯಾರೂ ಮನಸ್ಸಿನ ಅದ್ಭುತ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವುದೇ ಇಲ್ಲ! ಆದನ್ನು ಬಳಸಿದರೆ ಅದಕ್ಕೆ ಇರುವ ಅದ್ಬುತ ಶಕ್ತಿ ತಿಳಿಯುವುದು! ಈಗ ಮನಸ್ಸಿಗೆ ಅದ್ಭುತ ಶಕ್ತಿ ಇದೆ ಎಂದು ಹೇಗೆ ನಂಬಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಹೌದು! ಅದಕ್ಕಿರುವ ಶಕ್ತಿ ಗೊತ್ತಾಗುವುದಿಲ್ಲ! ಅದು ಜೀವಂತ ಮಾನವನಲ್ಲಿದ್ದರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸಾಧನಕೇರಿಯ ಬೇಂದ್ರೆ ಅಜ್ಜ ಕನ್ನಡ ನುಡಿಸೇವೆ ನಿನ್ನ ಕಜ್ಜ. ಪದ್ಯ ಕಟ್ಟಿ ಹಾಡಿದ್ಯಂದ್ರೆ ಕೇಳೋ ಕಿವಿಗಳಿಗೆ ಇಲ್ಲ ತೊಂದ್ರೆ… ಅಜ್ಜ ನಿನ್ನ ಬರೆಯೋ ಕೋಲ್ಗೆ ಎಂಥ ಶಕ್ತಿ ಇತ್ತು. ಅದ್ನೆ ನೀನು ಎತ್ತಿ ಹಿಡಿದೆ ನಿನ್ನ ಕೈ ಕಲ್ಪವೃಕ್ಷವಾಯ್ತು… ನಗ್ ನಗ್ತ್ ಹೇಳ್ದೀ ಬುದ್ಧಿಮಾತು ನಿನ್ ದುಃಖ ನೀನ್ ನುಂಗಿ. ಅಜ್ಜ ಅಂದ್ರ ನೆನಪಿಗ್ ಬರ್ತದ ತಲೆಗೆ ಪಟಗ ನಿಲುವಂಗಿ.. ಅಜ್ಜ ನಿನ್ ಪದಗಳಂತು ಸಜ್ಜಿತೆನಿ ತೊನೆದ್ಹಾಂಗ. ಕೇಳ್ತಾ ಕೇಳ್ತಾ ತಲೆದೂಗ್ತಾವಾ ಹಸುಕಂದಮ್ಗಳು ಹಾಂಗಾ.. ಬಾಳ್ಗೆ ನಾಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೋಕರ್ ಮತ್ತು ಅವನ ಹಿಂದಿನ ತಲೆಮಾರಿನವರು!!: ಸಂತೋಷ್ ಕುಮಾರ್ ಎಲ್.ಎಂ.

೨೦೧೯ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದು, ವಿಮರ್ಶಕರಿಂದ ಶಹಬ್ಬಾಷ್ ಅನ್ನಿಸಿಕೊಂಡ ಇಂಗ್ಲೀಷ್ ಸಿನಿಮಾ “ಜೋಕರ್”. ಈ ಸಿನಿಮಾ ನೋಡಿದ ಮೇಲೆಯೂ ಸಿಕ್ಕಾಪಟ್ಟೆ ಕಾಡುತ್ತದೆ. ಅಸಹಾಯಕತೆ, ಅವಮಾನ, ಹಿಂಸೆ, ತಾನು ಬೆಳೆದ ರೀತಿ, ಕೆಟ್ಟ ಬಾಲ್ಯ.. ಎಲ್ಲವೂ ಒಬ್ಬನನ್ನು ಹೇಗೆ ಹಿಂಸೆಗೆ ತಳ್ಳುತ್ತದೆ ಅನ್ನುವ ಸಿನಿಮಾ. ಗಮನಿಸಿದರೆ ಜೋಕರ್ ಮಾಡುವ ಪ್ರತೀ ಕೊಲೆಗೂ ಒಂದೊಂದು ಕಾರಣವಿದೆ ಈ ಸಿನಿಮಾ ನೋಡಿದ ಮೇಲೆ ಅದರ ವಿವರಗಳ ಬಗ್ಗೆ ಕಣ್ಣಾಯಿಸಿದಾಗ ಸಿಕ್ಕ ಎರಡು ಸಿನಿಮಾಗಳು “ಟ್ಯಾಕ್ಸಿ ಡ್ರೈವರ್(೧೯೭೬)” ಮತ್ತು “ದ ಕಿಂಗ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತೆ: ಸೂರಿ ಹಾರ್ದಳ್ಳಿ

ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಆರಂಕಿಯ ಸಂಬಳ ಪಡೆಯುತ್ತಿದ್ದ ಕಾಶೀಪತಿಗೆ ಸಾಲದ ತುರ್ತು ಅವಶ್ಯಕತೆಯೇನೂ ಇರದಿದ್ದರೂ ಆ ಜಾಹಿರಾತು ಅವನ ತಲೆಯಲ್ಲಿ ದುಷ್ಟ ಯೋಚನೆಗಳನ್ನು ತುಂಬಿದ್ದಂತೂ ನಿಜ. ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ವೈಯಕ್ತಿಕ ಸಾಲ ಬೇಕಾಗಿದೆಯೇ? ಕೇವಲ ಮೂರು ಪರ್ಸೆಂಟ್ ಬಡ್ಡಿಯಲ್ಲಿ ಎರಡು ಕೋಟಿ ರೂ.ಗಳ ತನಕ ಸಾಲ ಪಡೆಯಿರಿ. ಸಂಪರ್ಕಿಸಿ..’ ಎಂಬ ಕ್ಲಾಸಿಫೈಡ್ ಜಾಹೀರಾತು ಬೆಳಗಿನ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಕಾಶೀಪತಿಯ ಕಣ್ಣಿಗೂ ಬಿದ್ದಿತ್ತು, ಅವನ ಹೆಂಡತಿ ಮಾದೇವಿಯ ಕಣ್ಣಿಗೂ ಬಿದ್ದಿತ್ತು. ಕಾಶೀಪತಿ ಪತ್ರಿಕೆಯ ಇತರ ಸುದ್ದಿಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ