ಸೀಕ್ರೆಟ್ ಡೈರಿ: ಪ್ರಸಾದ್ ಕೆ.
ಕೊಡಚಾದ್ರಿಯ ಎತ್ತರ. ತಣ್ಣನೆ ಗಾಳಿ. ಹಾಗೆ ಸುಮ್ಮನೆ ತಲೆಯ ಒಂದಿಷ್ಟು ಮೇಲಿನಿಂದ ಹಾದುಹೋಗುತ್ತಿರುವ ಮೋಡಗಳ ಚಪ್ಪರ. ಇನ್ನೇನು ಒಂದು ಲಾಗ ಹಾಕಿದರೆ ಹಿಡಿಯಷ್ಟು ಮೋಡವನ್ನು ಬಾಚಿ ಜೇಬಿನಲ್ಲಿಡಬಹುದು ಎಂಬಂತೆ. ಮುಳುಗುತ್ತಿದ್ದ ಸೂರ್ಯ ಕಿತ್ತಳೆಯಂತೆ, ಕೆಂಡದ ಪಾಕದಲ್ಲದ್ದಿದ ನಾಣ್ಯದಂತೆ ಕಾಣುತ್ತಿದ್ದ. ಆದರೆ ಅವನ ವೃತ್ತಾಕಾರದ ಅಂಚುಗಳೋ ಕೈವಾರದಿಂದ ವೃತ್ತ ಕೊರೆದಷ್ಟು ಹರಿತ, ಅಷ್ಟು ಪರಿಪೂರ್ಣತೆ. ಅಷ್ಟು ಎತ್ತರದಲ್ಲಿ ಅವರಿಬ್ಬರೂ ಅಂದು ಇದ್ದರು. ಅವನು ಮತ್ತು ಅವಳು. ಕಳೆದೆರಡು ದಿನಗಳಿಂದ ಪರ್ವತವನ್ನು ಹತ್ತಿ, ಅಲ್ಲಲ್ಲಿ ನಿಂತು, ಅಲ್ಲಿಲ್ಲಿ ನಿದ್ದೆ ಹೊಡೆದು … Read more