ಲಾಕ್ಡೌನ್ – ವರ್ಕ್ ಫ಼್ರಮ್ ಹೋಮ್ ಮತ್ತು ಫ಼ಾರ್ ಹೋಮ್!!: ಸಹನಾ ಪ್ರಸಾದ್

ಅಬ್ಬಾ, ೪ ತಿಂಗಳು!! ಇಷ್ಟು ಸಮಯ ಒಟ್ಟಿಗೆ ಮನೆಯಲ್ಲಿ ಇದ್ದದ್ದು ನೆನಪಿಲ್ಲ. ಮೊದಲ ಸಲ ಮಾರ್ಚ್ ೨೪ರಿಂದ ಎಲ್ಲಾ ಲಾಕ್ ಎಂದು ಘೋಷಿಸಿದಾಗ ಮೊದಲು ಅನಿಸಿದ್ದು ” ಅಯ್ಯೊ, ಕೆಲಸದವಳು ಇಲ್ಲವಲ್ಲ, ಹೇಗೆ ನಿಭಾಯಿಸುವುದು” ಎಂದು. ಎಲ್ಲರೂ ಕೋವಿಡ್, ಕೋವಿಡ್ ಎಂದು ಕೂಗಾಡುತ್ತಿದ್ದರೂ ಅಷ್ಟೇನು ಭಯವಿರಲಿಲ್ಲ. ಶಾಲಾ, ಕಾಲೇಜು ರಜೆ ಎಂದಾಗ ಮನಸ್ಸು ಸ್ವಲ್ಪ ಸೀರಿಯಸ್ ಆಗಿದ್ದು ನಿಜ. ಬೆಳಗ್ಗೆ ಎದ್ದ ತಕ್ಷಣ ಶುರುವಾದ ಕೆಲಸಗಳು ಮುಗಿಯುತ್ತಲೇ ಇಲ್ಲ, ಪಾತ್ರೆಗಳು ಸಿಂಕ್ ಅಲ್ಲಿ ಕರಗುತ್ತಲೇ ಇಲ್ಲ! ಮನೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಲ್ಲರೂ ಮಲಗಿದ್ದಾಗ…: ಗುರುಪ್ರಸಾದ ಕುರ್ತಕೋಟಿ

ಚಿಕ್ಕಂದಿನಲ್ಲಿ ನನಗೆ ನಿದ್ದೆಯಲ್ಲಿ ನಡೆದಾಡುವ (Sleep walking) ಖಾಯಿಲೆ ಇತ್ತು. ಹಾಗೆ ರಾತ್ರಿ ಅಡ್ಡಾಡಿದ್ದು ಬೆಳಿಗ್ಗೆ ಎದ್ದಾಗ ನನಗೆ ನೆನಪೇ ಇರುತ್ತಿರಲಿಲ್ಲ. ಆ ನನ್ನ ಖಾಯಿಲೆಯಿಂದ ತುಂಬಾ ಕಷ್ಟ ಅನುಭವಿಸಿದವಳು ನನ್ನಮ್ಮ. ಮಗ ಹೀಗೆ ಒಂದು ರಾತ್ರಿ ಎದ್ದು ಹೊರಗೆ ಹೋಗಿಬಿಟ್ಟರೆ ಎನು ಗತಿ ಅಂತ ಮನೆಯ ತಲಬಾಗಿಲಿಗೆ ಹಾಗು ಹಿತ್ತಲ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿ ಮಲಗುತ್ತಿದ್ದಳು. ನಾನು ಎದ್ದು ಅಡ್ಡಾಡುತ್ತಿದ್ದೆನೆ ವಿನಃ ಕೀಲಿ ತೆಗೆದು ಹೊರಗೆ ಹೋಗುತ್ತಿರಲಿಲ್ಲ, ಅದೊಂದು ವಿನಾಯತಿ ನೀಡಿತ್ತು ಆ ಖಾಯಿಲೆ! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಖಾಲಿಯಿದೆ… ಈಗಲೂ ನನ್ನೀ ಹೃದಯ ನೆತ್ತರು ಚಿಮ್ಮುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಹೃದಯವಿನ್ನೂ ಖಾಲಿಯಿದೆ ದಣಿವಿಲ್ಲ ಗುರಿಯಿಲ್ಲ ಕನಸೇಕೋ ಕಾಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾತಕ್ಕಾಗಿಯೋ ಹೆಣಗಾಟ ಹಾರಿ ಹೋಗದು ಜೀವ ತೂರಾಡುತಿಹುದು ಭಾವ ಬೀಸುತಿದೆ ಬಿರುಗಾಳಿ ಹೃದಯವಂತೂ ಖಾಲಿಯಿದೆ ಏನ ಬಯಸಿ ಸೋಸುತಿಹುದು ಜೀವ ಹಿಡಿಯಲಾಗದೇನೋ ಮನದ ನೋವಾ ದಕ್ಕುವುದೇ ಎಂದಿಗಾದರೂ ಪ್ರೇಮಾಮೃತಪಾನ ಹೃದಯವು ಸದಾ ಖಾಲಿಯೇ ಖಾಲಿ ಕಾವಲಿಯ ಕಾವಲಿಗೆ ನಿಂತು ಮಾಡುವುದೇನು ಹೃದಯವೀಗಲೂ ಖಾಲಿ ಖಾಲಿ –ಚಿನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಮದುವೆ (ಭಾಗ 3): ನಾರಾಯಣ ಎಂ ಎಸ್

   ಇಲ್ಲಿಯವರೆಗೆ -೩- ಇತ್ತೀಚೆಗೆ ಸೀತಮ್ಮನ ತಂದೆಯವರ ಆರೋಗ್ಯ ಕ್ಷೀಣಿಸಿ ಹಾಸಿಗೆ ಹಿಡಿದುಬಿಟ್ಟಿದ್ದರು. ಮಧುರಮ್ಮನವರಲ್ಲೂ ಮುಂಚಿನ ಕಸುವು ಉಳಿದಿರಲಿಲ್ಲ. ಹಾಗಾಗಿ ಈ ಬಾರಿ ತನ್ನ ಏಳನೇ ಹೆರಿಗೆಗೆ ಸೀತಮ್ಮ ಕಾವಶ್ಯೇರಿಗೆ ಹೋಗಲಿಲ್ಲ. ಆದರೆ ಬಸುರಿ ಹೆಂಗಸಿಗೆ ತಗುಲಿದ ಟಯ್ಫಾಡ್ ಖಾಯಿಲೆ ಸೀತಮ್ಮಳನ್ನು ಹಣಿದುಬಿಟ್ಟಿತು. ಸಾಲದ್ದಕ್ಕೆ ಏಳನೇ ತಿಂಗಳಿಗೆ ಗರ್ಭಪಾತವೂ ಆಗಿಹೋಯಿತು. ಸೀತಮ್ಮಳ ಪುಣ್ಯ! ಅವಳ ಆಯಸ್ಸು ಗಟ್ಟಿಯಿದ್ದಿರಬೇಕು. ತಿರವಾರೂರಿನಲ್ಲಿ ಉಳಿಯದೆ ವಾಡಿಕೆಯಂತೆ ಕಾವಶ್ಯೇರಿಗೆ ಹೋಗಿಬಿಟ್ಟಿದ್ದರೆ ಏನೇನೂ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕುಗ್ರಾಮದಲ್ಲಿ ಅವಳು ಬದುಕುಳಿಯುತ್ತಿದ್ದದು ಅನಮಾನವೇ. ಒಂದೆರಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊಡೆಯ ಕಡ್ಡಿಗಳು ಮತ್ತು ಬೆಚ್ಚನೆಯ ನೆನಪು: ಸಾವಿತ್ರಿ ಹಟ್ಟಿ

ಒಂಬತ್ತು ವರ್ಷದ ಹಿಂದಿನ ನೆನಪು. ಕೊಡೆ ಹಿಡ್ಕೊಂಡು ಅವಸರದಾಗ ಹೊಂಟಾಕಿಗಿ “ಹಿ ಹೀ ಹೀ ಸಾವಿತ್ರಿ ಊಟ ಆಯ್ತಾ” ಅಂತ ಆ ಹಾಲಿನ ಚಿಗವ್ವ ಕೇಳಿದಾಗ ಅಕಿಗೆ ಉತ್ತರ ಹೇಳೂಕ್ಕಿಂತ ನನ್ನೊಳಗ ಎದ್ದ ಪ್ರಶ್ನೆಗೆ ಉತ್ರ ಹೊಳೀಲಿಲ್ಲ. ‘ಊಟಾಯ್ತಾ ಸಾವಿತ್ರಿ’ ಅಂತಷ್ಟೇ ಕೇಳಿದ್ರ ನಡೀತಿರಲಿಲ್ಲನು! ಮತ್ಯಾಕ ಈಕಿ ಅಷ್ಟೂ ಬೆಳ್ಳನ್ನ ಹಲ್ಲು ತಗದು ಹಿಹೀಹೀ ಅಂತ ನಕ್ಳು ಅಂತ ತಲಿ ಕೆರಕೊಂಡು ಆಕಿಗಿ ಉತ್ತರಿಸೂವಷ್ಟರಾಗ ಮತ್ತೆ ಕೇಳೀದ್ಲು, “ ಅಲ್ಲಾ ಸಾವಿತ್ರಿ ತುಂಬಾ ಬೆಳ್ಳಗಿದ್ದೀಯಲ್ಲಾ, ಕಪ್ಪಾಗ್ತೀನಿ ಅಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ

ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊರೋನಾ ವಾರಿಯರ್ಸಗೊಂದು ನಮನ : ತೇಜಾವತಿ ಹೆಚ್. ಡಿ.(ಖುಷಿ)

ಮಾನವೀಯತೆಯ ದೀಪದಲ್ಲಿ ಕರುಣೆಯ ಬತ್ತಿ ಹಚ್ಚಿ ಜ್ಯೋತಿಯಾದೆ ನೀನುಅಂತಃಕರಣದ ಮಿಡಿತದಿಂದ ಆತ್ಮವಿಶ್ವಾಸದ ಕಿರಣಬೀರಿ ಬೆಳಕಾದೆ ನೀನು ಶುಭ್ರ ಶ್ವೇತ ವಸನವನ್ನುಟ್ಟು ಸ್ವಚ್ಛ ಮನವ ತೊಟ್ಟು ರೋಗಿಗಳ ಆರೈಕೆ ಮಾಡಿ ಮರಣದ ಕದ ತಟ್ಟಿದವರಿಗೆ ಹೆಗಲಾಗಿ ಸಾಂತ್ವನ ನೀಡುವ ದಿಟ್ಟೆಯಾದೆ ನೀನು ಅಬ್ಬಬ್ಬಾ…… ಮಹಿಳೆಯರ ಒಳಹೊರಗಿನ ಮಾನಸಿಕ ಸ್ಥಿತಿಗತಿಗಳು ಅವರಿಗಷ್ಟೇ ಗೊತ್ತು. ತಮ್ಮ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಮೀರಿ ದಿಟ್ಟ ಹೆಜ್ಜೆಯನ್ನಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾಮಣಿಗಳು ಅವರಿಗೆ ಅವರೇ ಸಾಟಿ ಎನ್ನುವುದನ್ನು ತಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩- ಕರಿ ನಾಯಿ ಕಿಂವ್ಞ್ ಕಿಂವ್ಞ್ ಅನ್ತ ಬಾಲ ಅಳ್ಳಾಡುಸ್ತ ಬಂದು ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು ಈ ಶಂಕ್ರಪ್ಪೋರು ಬಂದು ಕುಂತು ಎಸ್ಟೊತ್ತಾಯ್ತು ಈ ಅಯ್ನೋರ್ ನಿದ್ದ ಮುಗಿನೇ ಇಲ್ಲ.. ತ್ವಾಟದ ಬೇಲಿ ಇಣುಕುದ್ರ ಊರೊಳಗ ತಮ್ಟ ಸದ್ದು ಜೋರಾಯ್ತು ಜೊತ್ಗ ಬೆಳಕೂ ಹರಿತು. ಈ ಅಯ್ನೋರು ಈಗ ಈಚ ಬಂದು ಮೈ ಮುರಿತಾ… ಆಕುಳುಸ್ತಾ ಕಣ್ಣಾಡುಸ್ತ ಕಣ್ಣಾಡುಸ್ತ ಕಲ್ಲಾಸಿನ ಮ್ಯಾಲ ಶಂಕ್ರಪ್ಪೋರು ಕುಂತಿರದ ನೋಡುದ್ರು ಈ ಅಯ್ನೋರು, ‘ಹ್ಞು ಈಗ ಗ್ಯಾನ ಬತ್ತಾ’ ‘ನಾನೇನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಳೆಯನಲ್ಲ (ಭಾಗ 3): ವರದೇಂದ್ರ ಕೆ.

(5) ಆ ದಿನ ರಾತ್ರಿ, ಸಂಪತ್ಗೂ ರಿಪ್ಲೈ ಮಾಡದೆ ಅತೀವ ದುಃಖದಿಂದ ಮಲಗಿಬಿಟ್ಟಳು. ಮರುದಿನ ಎದ್ದು, ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ, ಆದ ದುರ್ಘಟನೆಯನ್ನು ನೆನೆದು ಕಣ್ಣೀರಾದಳು. ಮುಖ ಸಪ್ಪೆ, ಕಣ್ಣುಗಳಲ್ಲಿ ಕಾಂತಿ ಇಲ್ಲ. ಮದುವೆ ಆಗುವ ಹುಡುಗಿಗೆ ಇರುವ ಲವಲವಿಕೆ ಇಲ್ಲ. ತವರು ಮನೆ ಬಿಟ್ಟು ಹೋಗುವ ದುಃಖ ಇರಬಹುದೆಂದು ಎಲ್ಲರೂ ಸುಮ್ಮನಾದರು. ಸಂತೋಷ್ ನಿಂದ ಮೆಸೇಜೂ ಇಲ್ಲ, ಕರೆನೂ ಇಲ್ಲ. ಎಂದಿನಂತೆ ಸಂಪತ್ನ ಜೊತೆ ಮಾತನಾಡುತ್ತಿದ್ದರೂ, ಮನಸಲ್ಲಿ ಮಾತ್ರ ಮೋಸ ಮಾಡುತ್ತಿರುವೆನೆಂಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!: ಜೆ.ವಿ.ಕಾರ್ಲೊ.

ಇಂಗ್ಲಿಶಿನಲ್ಲಿ: ಫ್ರೆಡ್ರಿಕ್ ಫೊರ್ಸೈತ್ ಸಂಗ್ರಹಾನುವಾದ: ಜೆ.ವಿ.ಕಾರ್ಲೊ. ಕೆಲಸ ಕೇಳಿಕೊಂಡು ಬಂದಿದ್ದ ಹೊಸ ಹುಡುಗನ ಕಡೆಗೆ ಮ್ಯಾಕ್ವೀನ್ ತಲೆ ಎತ್ತಿ ಕೊಂಚ ಹೊತ್ತು ನೋಡಿದ. ಅವನಿಗೆ ಸಮಧಾನವಾಗಲಿಲ್ಲ. ತನ್ನಷ್ಟಕ್ಕೆ ತಲೆಯಲ್ಲಾಡಿಸಿದ. ಈ ಮೊದಲು ಕೆಲಸ ಕೇಳಿಕೊಂಡು ಇಂತವರು ಯಾರೂ ಅವನ ಬಳಿ ಬಂದಿರಲಿಲ್ಲ. ಹಾಗಂತ ಅವನೇನು ನಿರ್ದಯಿಯಾಗಿರಲಿಲ್ಲ. ಹುಡುಗನಿಗೆ ಕೆಲಸ ಅಷ್ಟೊಂದು ಜರೂರಿಯಾಗಿದ್ದು ಎಲ್ಲರಂತೆ ಕೆಲಸ ಮಾಡುವಂತವನಾಗಿದ್ದರೆ ಅವನದೇನು ಅಭ್ಯಂತರವಿರಲಿಲ್ಲ. “ಇದು ಲೆಕ್ಕ-ಪತ್ರ ಬರೆದಿಡುವ ಕುರ್ಚಿ ಕೆಲಸ ಅಲ್ಲ, ಮೈಮುರಿಯುವಂತ ಕೆಲಸ ಕಣಪ್ಪ. ಯೋಚಿಸು.” ಎಂದ ತನ್ನ ಬೆಲ್ಫಾಸ್ಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಗಂಬರ ಸತ್ಯ (ಭಾಗ ೨): ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಚಳಿಗಾಲ ಬಂದರೆ ಹೇಗೆ ಟೈಮ್ ಪಾಸು ಮಾಡೋದು ಅನ್ನುವ ಪ್ರಶ್ನೆಗೆ ಅಲ್ಲಿನ ಎನ್ನಾರೈ ಹೈಕ್ಳು ಕೆಲವು ವಿಧಾನಗಳನ್ನು ಹೇಳಿಕೊಟ್ಟರು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಅಂದರೆ “spiritual” ದಾರಿ. ಅಯ್ಯೋ ಆಧ್ಯಾತ್ಮ, ದೇವರು, ಭಜನೆ ಅಲ್ಲಾ ರೀ… ನಾ ಹೇಳಿದ ‘ಸ್ಪಿರಿಟ್’ ಬೇರೆಯದು! ಭಾರತದಲ್ಲಿ ‘ಚಾ ಮಾಡ್ಲಾ’ ಅಂತ ಕೇಳಿದಂಗೆ ಅಲ್ಲಿನ ಗೆಳೆಯರ ಮನೆಗೆ ಹೋದಾಗ ‘ನಿಮಗೆ ಯಾವುದು ಅಡ್ಡಿ ಇಲ್ಲ? ಅಂತ ಸ್ಪಿರಿಟ್ ಗಳ ಹಲವಾರು ಬಗೆಗಳನ್ನು ತೋರಿಸಿ ಬಾಯಲ್ಲಿ ನೀರು ಹರಿಸಿ ದೇಹಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಮದುವೆ (ಭಾಗ 2): ನಾರಾಯಣ ಎಂ ಎಸ್

ಇಲ್ಲಿಯವರೆಗೆ ಮದುವೆ ನಿಶ್ಚಯವಾದ ಮನೆಗಳು ಸಡಗರ ಸಂಭ್ರಮಗಳಿಂದ ತುಂಬಿಹೋಗುವುದು ಸಹಜ. ಇನ್ನು ಇಲ್ಲಿ ತೀರ ಎರಡೇ ತಿಂಗಳಲ್ಲಿ ಮದುವೆ ಗೊತ್ತಾಗಿರುವಾಗ ಕೇಳಬೇಕೆ? ಮಾಡಲು ಬೆಟ್ಟದಷ್ಟು ಕೆಲಸಗಳಿದ್ದವು. ವಿಶಾಖಪಟ್ಟಣದ ಕೃಷ್ಣಯ್ಯರ್ ಮನೆಯಲ್ಲಿ ಮದುವೆ ತಯಾರಿಯ ಕಲರವದ ತಾಂಡವ ಜೋರಾಗೇ ನಡೆದಿತ್ತು. ಹಾಗಂತ ತಿರುವಾರೂರಿನ ಗಂಡಿನ ಮನೆಯಲ್ಲೇನೂ ಕಡಿಮೆ ಗದ್ದಲವಿರಲಿಲ್ಲ. ಮುದ್ರಿಸಬೇಕಿದ್ದ ಲಗ್ನಪತ್ರಿಕೆಯ ವಿನ್ಯಾಸ, ಕರೆಯಬೇಕಿದ್ದ ಅತಿಥಿಗಳ ಪಟ್ಟಿ, ಕೊಡಬೇಕಿದ್ದ ಉಡುಗೊರೆಗಳು, ತೆಗೆಯಬೇಕಾದ ಜವಳಿ, ಗೊತ್ತುಮಾಡಬೇಕಿದ್ದ ಫೋಟೋಗ್ರಾಫರ್ ಒಂದೇ… ಎರಡೇ? ಪ್ರತಿಯೊಂದಕ್ಕೂ ಚರ್ಚೆ, ಸಮಾಲೋಚನೆ ಅಭಿಪ್ರಾಯ ಭೇದಗಳಿಂದ ದಿನವಿಡೀ ಮನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಳೆಯನಲ್ಲ (ಭಾಗ 2): ವರದೇಂದ್ರ ಕೆ.

ಇಲ್ಲಿಯವರೆಗೆ.. 3 ತನ್ನನ್ನು ಹುಡುಗ ನೋಡಿ ಹೋಗಿದ್ದು, ಅವನು ತನ್ನನ್ನು ಒಪ್ಪಿದ್ದು. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ತಾನೂ ಒಪ್ಪಿದ್ದು ಎಲ್ಲ ವಿಷಯವನ್ನು ಸಂತೋಷ್ಗೆ ಹೇಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಂತೋಷ್ ಸಂಪರ್ಕಕ್ಕೆ ಸಿಗ್ತಾನೇ ಇರ್ಲಿಲ್ಲ. ಮದುವೆ ಆಗುವ ಹುಡುಗ ಸಂಪತ್ನ ಫೋಟೋ ಕಳಿಸಬೇಕು ಎಂದು ಎಷ್ಟು ಬಾರಿ ಅಂದುಕೊಂಡರೂ ಸಂತೋಷ್ ಸಂಪರ್ಕಕ್ಕೆ ಸಿಗದ ಕಾರಣ ಸುಮ್ಮನಾದಳು. ಮದುವೆ ದಿನವೂ ಗೊತ್ತಾಯ್ತು, ಪ್ರೀತಿ ತನ್ನ ಎಲ್ಲ ಸ್ನೇಹಿತರಿಗೆ ಬರಲು ತಿಳಿಸಿದಳು. ಹಾಗೆ ಸಂತೋಷ್ಗೆ ಕಾಲ್ ಮಾಡಿ ಹೇಳಬೇಕು. ನನ್ನ ಮದುವೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟಾಫಿಸಿಕಲ್ ಸ್ಕೂಲ್‍ನ – ಜಾನ್ ಡನ್: ನಾಗರೇಖಾ ಗಾಂವಕರ

ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ತೆರೆಮರೆಯ ಕಲೆಗಾರ ಅಪ್ಪ”: ಕವಿತಾ ಜಿ. ಸಾರಂಗಮಠ

‘ಬದುಕಿನ ಪುಟಗಳಲ್ಲಿ ಭರವಸೆಯ ಹಾದಿಯಲ್ಲಿ ನೂರು ಕನಸ ಹೊತ್ತು ಸಾಗಿಹನು. . ತಾ ಲಾಲಿಸಿದ ಮಕ್ಕಳಿಗೆ. . ‘ ಅಪ್ಪ ಎಂದರೆ ಭಯ, ಆತಂಕ, ಗೊಂದಲ, ಕೋಪ, ಪಕ್ಷಪಾತಿ ಎಂಬಿತ್ಯಾದಿ ಭಾವನೆಗಳ ಚಿತ್ರ ಎಲ್ಲ ಮಕ್ಕಳ ಮನದಲ್ಲಿ ಮೂಡಿರುತ್ತದೆ. ಆದರೆ ವಾಸ್ತವವೇ ಬೇರೆ. “ಅಪ್ಪ ಎಂದರೆ ಮಕ್ಕಳ ಪಾಲಿನ ಅದ್ಭುತ ಶಕ್ತಿ. ಉತ್ತಮ ಸ್ಥಾನ, ಮಾನ, ನಾಗರೀಕತೆಯ ಹಿರಿಮೆಯನ್ನು ಸಮಾಜದಲ್ಲಿ ಮಕ್ಕಳಿಗೆ ತಂದುಕೊಡುವ ದಿವ್ಯ ಚೇತನ” ನಾವೆಲ್ಲ ಅಮ್ಮನ ಬಗ್ಗೆ ಚಿಂತಿಸುತ್ತೇವೆ. ಅವಳ ತ್ಯಾಗ, ಹೋರಾಟ, ಹಿರಿಮೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್

ಇದು ನೆನ್ನೆಮೊನ್ನೆಯ ಮಾತಲ್ಲ. ಸುಮಾರು ಹತ್ತಿಪ್ಪತ್ತು ವರ್ಷಗಳೇ ಕಳೆದಿರಬೇಕು. ಆ ಕಾಲಕ್ಕಾಗಲೇ ಊರ ಕಣ್ಣಲ್ಲಿ ರಾಜನ್ಅಯ್ಯರ್ ಒಬ್ಬ ಹಿರೀಕನೆನಿಸಿದ್ದರು. ಆಗಲೇ ಎರಡು ಮೊಮ್ಮಕ್ಕಳಿಗೆ ಅಜ್ಜನಾಗಿದ್ದ ಅಯ್ಯರನ್ನು ಊರ ಜನ ಹಿರಿಯನೆನ್ನದೆ ಮತ್ತಿನ್ನೇನು ತಾನೇ ಅಂದೀತು? ಆದರೆ ಅಜ್ಜನಾದ ಬೆನ್ನಲ್ಲೇ ರಸಿಕ ರಾಜನ್ ಅಯ್ಯರ್ ಆ ಇಳಿವಯಸ್ಸಿನಲ್ಲೂ ಮಡದಿ ಸೀತಮ್ಮಳನ್ನು ಮತ್ತೊಮ್ಮೆ ಬಸಿರಾಗಿಸಿ ಹಲ್ಗಿಂಜುತ್ತಲೇ ಊರವರು ಆತುರದಲ್ಲಿ ಕಟ್ಟಿದ ಹಿರೀಕನ ಪಟ್ಟವನ್ನು ಮುಗುಮ್ಮಾಗಿ ಪಕ್ಕಕ್ಕೆ ಸರಿಸಿಟ್ಟುಬಿಟ್ಟಿದ್ದರು. ಅದೇಕೋ ಅಯ್ಯರಿಗೆ ಈ ಹಿರಿಯನೆಂಬ ಹೊಸ ಗೌರವದ ಹಣೆಪಟ್ಟಿಗಿಂತ ಲಾಗಾಯ್ತಿನಿಂದ ತನಗಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಗಂಬರ ಸತ್ಯ! (ಭಾಗ ೧): ಗುರುಪ್ರಸಾದ ಕುರ್ತಕೋಟಿ

ನನಗೆ ತುಂಬಾ ಚೆನ್ನಾಗಿ ನೆನಪಿದೆ. ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಅಲ್ಲಿನ ಗೆಳೆಯರೊಬ್ಬರು ಕರೆದುಕೊಂಡು ಹೋಗಿದ್ದರು. ಅದೇ ಮೊದಲ ಸಲ ತುಂಬಾ ಜನ ಕನ್ನಡಿಗರು ಒಟ್ಟಿಗೆ ಸೇರಿದ್ದು ನೋಡಿ ಸಹಜವಾಗಿ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಅದೂ ಅಲ್ಲದೆ ನಮ್ಮ ಕನ್ನಡಿಗರು ಅಲ್ಲಿ ಕನ್ನಡ ಮಾತಾಡುತ್ತಿದ್ದರು! ಅದು ಮತ್ತೊಂದು ದೊಡ್ಡ ಅದ್ಭುತವಾಗಿತ್ತು. ಕನ್ನಡಿಗರು ಒಂದಾಗಬೇಕು ಹಾಗೂ ಕನ್ನಡ ಮಾತಾಡಬೇಕು ಅಂದರೆ ಅವರು ವಿದೇಶದಲ್ಲಿ ನೆಲಸಿರಬೇಕು ಅನ್ನೋದು ನನಗೆ ಆಗ ಮನದಟ್ಟಾಯಿತು. ಕನ್ನಡ ಸಂಘದಲ್ಲಿ ಪ್ರತಿ ಹಬ್ಬಕ್ಕೆ ಅಂತ ಒಂದು ಕಾರ್ಯಕ್ರಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್

ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಡಿ ಈರಯ್ಯ..: ತಿರುಪತಿ ಭಂಗಿ

ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು. “ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು: ಅಶ್ಫಾಕ್ ಪೀರಜಾದೆ

ಸಾಹಿತಿ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ನಮ್ಮನ್ನು ಅಗಲಿ ಇದೇ ಜೂನ ೨೧ಕ್ಕೆ ಒಂದು ವರ್ಷವಾಯಿತು. ಈ ಪ್ರಯುಕ್ತ ಒಂದು ಲೇಖನ. ಪ್ರಿಯ ಈಶ್ವರ…..ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹೀಗಂತಾ ನೆನಪಿಸಿದವನು ನಿನ್ನ ಮಗ ರಾಜಶೇಖರ. ಅಪ್ಪನ ಪುಣ್ಯಸ್ಮರಣೆ ಲೇಖನ ಬರೆಯಿರಿ ಅಂಕಲ್ ಅಂತಾ ಮೆಸೇಜ ಮಾಡಿದ್ದ. ನೀನು ಹೋಗಿ ಇಷ್ಟು ಬೇಗ ಒಂದು ವರ್ಷವಾಯಿತೇ? ನಂಬಲಾಗುತ್ತಿಲ್ಲ. ನೀನು ಅಲ್ಲಿ-ಇಲ್ಲಿ, ಹಿಂದೆ-ಮುಂದೆ ಸದಾ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳೆಂದರೆ ಕೊನೆಯಿಲ್ಲದ ಒರತೆ. ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.

ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ

ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುಂಪುಗಳಲ್ಲಿ “ಗುಂಪುಗಾರಿಕೆ”: ಸಹನಾ ಪ್ರಸಾದ್‌

ಯಾವ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ, ಅಂದಿರಾ? ನಮ್ಮ ದೇಶದಲ್ಲಿ ಹೇರಳವಾಗಿ ಸಿಗುವ ಜಾತಿ, ಮತ, ಭಾಷೆ, ಜನಾಂಗ, ವ್ಯಕ್ತಿಗಳ ಪರ, ವಿರೋಧಗಳ ಗುಂಪಲ್ಲ, ಮಾರ್ರೆ. ನಾ ಹೇಳ್ತಾ ಇರೋದು ಈ ಮುಖಪುಟ, ವಾಟ್ಸಾಪ್, ಇನ್ಸ್ಟಾ, ಟೆಲಿಗ್ರಾಮ್ ಇತ್ಯಾದಿಗಳಲ್ಲಿ ಕಾಣ ಸಿಗುವ ” ಗ್ರೂಪ್” ಗಳು. ಊಟ, ಸೀರೆ, ಸಾಹಿತ್ಯ, ಅಡುಗೆ, ಭಾಷೆ, ಪಂಗಡ… ಯಾವುದು ಬೇಕು ಹೇಳಿ? ಎಲ್ಲ ರೀತಿಯ ಗುಂಪುಗಳೂ ನಿಮಗೆ ಕಾಣ ಸಿಗುತ್ತವೆ. ಗಣತಿಯ ಪ್ರಕಾರ ೬೨೦ಮಿಲ್ಲಿಯನ್ ಗ್ರೂಪುಗಳು ಇವೆಯಂತೆ ಬರೀ ಮುಖಪುಟದಲ್ಲಿ! ಇವುಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್

-೩೧- ಬೀದಿ ದೀಪ್ಗಳು ಇಲ್ದೆ ಊರು ಗವ್ವನ್ನದು ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ ಅವ್ರ್ ಕಾಲು ದಿಕ್ಕಾ ಪಾಲಾಗಿ ನಾನು ಮೋರಿ ಪಾಲಾದಿ ಮೋರಿ ಬದಿ ನನ್ ಮೈಮಾರ ಮೆತ್ತಿ ನಿಗುರಿ ನಿಗುರಿ ನೋಡ್ತಿದ್ದಾಗ ನೀಲವ್ವೋರು ಬಾಗುಲು ಸಂದಿಲಿ ಇಣ್ಕುದ್ರು. ಚೆಂಗುಲಿ ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ ಹೆಗುಲ್ಗ ಕೊಟ್ಗಂಡು ಯಳ್ಕಂಡು ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು ಒಳಗಿಂದ ನೀಲವ್ವೋರು ಎಳಿತಿದ್ರ ಈಚ್ಲಿಂದ ಚೆಂಗುಲಿ ತಳ್ತಿದ್ದ ನೀಲವ್ವೋರು ಎಳುದ್ರು ಚೆಂಗುಲಿನು ತಳ್ದ ಆ ದೆಸ್ಗ, ಅಯ್ನೋರು ಒಳಕ್ಕೋದಂಗಾಯ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ: ವೈ.ಬಿ.ಕಡಕೋಳ

ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರಿನವರು. ಇವರು ಸ್ವಾತಂತ್ಯ ಹೋರಾಟಗಾರರು ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರು, ಮಾಜಿ ಶಾಸಕರು. ವಿಧಾನಸಭೆಯ ವಿರೋಧಪಕ್ಷದ ಉಪನಾಯಕರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರಾಗಿ ಬದುಕಿ ಬಾಳಿದವರು. ಇವರು ಹರ್ಡೇಕರ್ ಮಂಜಪ್ಪನವರ ಜೀವನಚರಿತ್ರೆ, ಬಸರೀಗಿಡದ ವೀರಪ್ಪನವರ ಅಭಿನಂದನ ಗ್ರಂಥ ಹೊರತಂದವರು. ಅಷ್ಟೇ ಅಲ್ಲ 1932 ರಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಸಿರ್ಫ್ ಪ್ರೀತಿ’: ಬೀರೇಶ್ ಎನ್ ಗುಂಡೂರ್

ನನ್ನ ಕೂದಲಿನಲ್ಲಿ ಸದಾ ಹುದುಗಿ ಮರೆಯಾಗುವ ಆ ಮೂರು ಬೆರಳಿನ ಹಣೆಯಲ್ಲಿ ಯಾರೋ ಟಿಪ್ಪಣಿ ಬರೆದಿದ್ದಾರಂತೆ. ಜೀವನದಲ್ಲಿ ಎಲ್ಲಾ ಘಟಿಸುವುದು ಅಲ್ಲಿಯ ಪೂರ್ವ ನಿರ್ಧಾರಿತವಂತೆ. ಯಾವುದೂ ಇಲ್ಲಿ ನಮ್ಮ ಕೈಯಲ್ಲಿಲ್ಲ, ಶಾಶ್ವತವಲ್ಲವೆಂಬುದು ಸದಾ ಕೇಳುವ ಮಾತು. ಎಲ್ಲವೂ ಅದಾಗಲೇ ನಿಶ್ಚಿತವಾಗಿದೆಯಂತೆ. ನಾವು ನೆಪ ಮಾತ್ರವಂತೆ. ಜೀವದ ಉಸಿರಾಗಿರುವ ಗೆಳತಿಯ ಸಮ್ಮತಿಗಿಂತ…ಈ ಹಣೆಯಲ್ಲಿ ಅವಳ ಹೆಸರು ಬರೆದಿರಬೇಕಂತೆ. ವಾಸ್ತವದಲ್ಲಿ, ಇಂತಹ ಎಷ್ಟೋ ಇಲ್ಲ್ಯೂಷನ್ ಗಳಿಗೆ ನನ್ನದು ಯಾವಾಗಲೂ ತಕರಾರು. ನಮ್ಮ ಅಸಮರ್ಥತೆಯನ್ನು ಒಪ್ಪದೇ..ಹುಡುಕಿಕೊಂಡ ಕತೆಗಳಿವು ಅನಿಸುತ್ತದೆ. ಸದಾ ಸೋತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ