ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!: ಜೆ.ವಿ.ಕಾರ್ಲೊ.
ಇಂಗ್ಲಿಶಿನಲ್ಲಿ: ಫ್ರೆಡ್ರಿಕ್ ಫೊರ್ಸೈತ್ ಸಂಗ್ರಹಾನುವಾದ: ಜೆ.ವಿ.ಕಾರ್ಲೊ. ಕೆಲಸ ಕೇಳಿಕೊಂಡು ಬಂದಿದ್ದ ಹೊಸ ಹುಡುಗನ ಕಡೆಗೆ ಮ್ಯಾಕ್ವೀನ್ ತಲೆ ಎತ್ತಿ ಕೊಂಚ ಹೊತ್ತು ನೋಡಿದ. ಅವನಿಗೆ ಸಮಧಾನವಾಗಲಿಲ್ಲ. ತನ್ನಷ್ಟಕ್ಕೆ ತಲೆಯಲ್ಲಾಡಿಸಿದ. ಈ ಮೊದಲು ಕೆಲಸ ಕೇಳಿಕೊಂಡು ಇಂತವರು ಯಾರೂ ಅವನ ಬಳಿ ಬಂದಿರಲಿಲ್ಲ. ಹಾಗಂತ ಅವನೇನು ನಿರ್ದಯಿಯಾಗಿರಲಿಲ್ಲ. ಹುಡುಗನಿಗೆ ಕೆಲಸ ಅಷ್ಟೊಂದು ಜರೂರಿಯಾಗಿದ್ದು ಎಲ್ಲರಂತೆ ಕೆಲಸ ಮಾಡುವಂತವನಾಗಿದ್ದರೆ ಅವನದೇನು ಅಭ್ಯಂತರವಿರಲಿಲ್ಲ. “ಇದು ಲೆಕ್ಕ-ಪತ್ರ ಬರೆದಿಡುವ ಕುರ್ಚಿ ಕೆಲಸ ಅಲ್ಲ, ಮೈಮುರಿಯುವಂತ ಕೆಲಸ ಕಣಪ್ಪ. ಯೋಚಿಸು.” ಎಂದ ತನ್ನ ಬೆಲ್ಫಾಸ್ಟ್ … Read more
ದಿಗಂಬರ ಸತ್ಯ (ಭಾಗ ೨): ಗುರುಪ್ರಸಾದ್ ಕುರ್ತಕೋಟಿ
ಇಲ್ಲಿಯವರೆಗೆ ಚಳಿಗಾಲ ಬಂದರೆ ಹೇಗೆ ಟೈಮ್ ಪಾಸು ಮಾಡೋದು ಅನ್ನುವ ಪ್ರಶ್ನೆಗೆ ಅಲ್ಲಿನ ಎನ್ನಾರೈ ಹೈಕ್ಳು ಕೆಲವು ವಿಧಾನಗಳನ್ನು ಹೇಳಿಕೊಟ್ಟರು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಅಂದರೆ “spiritual” ದಾರಿ. ಅಯ್ಯೋ ಆಧ್ಯಾತ್ಮ, ದೇವರು, ಭಜನೆ ಅಲ್ಲಾ ರೀ… ನಾ ಹೇಳಿದ ‘ಸ್ಪಿರಿಟ್’ ಬೇರೆಯದು! ಭಾರತದಲ್ಲಿ ‘ಚಾ ಮಾಡ್ಲಾ’ ಅಂತ ಕೇಳಿದಂಗೆ ಅಲ್ಲಿನ ಗೆಳೆಯರ ಮನೆಗೆ ಹೋದಾಗ ‘ನಿಮಗೆ ಯಾವುದು ಅಡ್ಡಿ ಇಲ್ಲ? ಅಂತ ಸ್ಪಿರಿಟ್ ಗಳ ಹಲವಾರು ಬಗೆಗಳನ್ನು ತೋರಿಸಿ ಬಾಯಲ್ಲಿ ನೀರು ಹರಿಸಿ ದೇಹಕ್ಕೆ … Read more
ಮರೆಯಲಾಗದ ಮದುವೆ (ಭಾಗ 2): ನಾರಾಯಣ ಎಂ ಎಸ್
ಇಲ್ಲಿಯವರೆಗೆ ಮದುವೆ ನಿಶ್ಚಯವಾದ ಮನೆಗಳು ಸಡಗರ ಸಂಭ್ರಮಗಳಿಂದ ತುಂಬಿಹೋಗುವುದು ಸಹಜ. ಇನ್ನು ಇಲ್ಲಿ ತೀರ ಎರಡೇ ತಿಂಗಳಲ್ಲಿ ಮದುವೆ ಗೊತ್ತಾಗಿರುವಾಗ ಕೇಳಬೇಕೆ? ಮಾಡಲು ಬೆಟ್ಟದಷ್ಟು ಕೆಲಸಗಳಿದ್ದವು. ವಿಶಾಖಪಟ್ಟಣದ ಕೃಷ್ಣಯ್ಯರ್ ಮನೆಯಲ್ಲಿ ಮದುವೆ ತಯಾರಿಯ ಕಲರವದ ತಾಂಡವ ಜೋರಾಗೇ ನಡೆದಿತ್ತು. ಹಾಗಂತ ತಿರುವಾರೂರಿನ ಗಂಡಿನ ಮನೆಯಲ್ಲೇನೂ ಕಡಿಮೆ ಗದ್ದಲವಿರಲಿಲ್ಲ. ಮುದ್ರಿಸಬೇಕಿದ್ದ ಲಗ್ನಪತ್ರಿಕೆಯ ವಿನ್ಯಾಸ, ಕರೆಯಬೇಕಿದ್ದ ಅತಿಥಿಗಳ ಪಟ್ಟಿ, ಕೊಡಬೇಕಿದ್ದ ಉಡುಗೊರೆಗಳು, ತೆಗೆಯಬೇಕಾದ ಜವಳಿ, ಗೊತ್ತುಮಾಡಬೇಕಿದ್ದ ಫೋಟೋಗ್ರಾಫರ್ ಒಂದೇ… ಎರಡೇ? ಪ್ರತಿಯೊಂದಕ್ಕೂ ಚರ್ಚೆ, ಸಮಾಲೋಚನೆ ಅಭಿಪ್ರಾಯ ಭೇದಗಳಿಂದ ದಿನವಿಡೀ ಮನೆ … Read more
ಗೆಳೆಯನಲ್ಲ (ಭಾಗ 2): ವರದೇಂದ್ರ ಕೆ.
ಇಲ್ಲಿಯವರೆಗೆ.. 3 ತನ್ನನ್ನು ಹುಡುಗ ನೋಡಿ ಹೋಗಿದ್ದು, ಅವನು ತನ್ನನ್ನು ಒಪ್ಪಿದ್ದು. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ತಾನೂ ಒಪ್ಪಿದ್ದು ಎಲ್ಲ ವಿಷಯವನ್ನು ಸಂತೋಷ್ಗೆ ಹೇಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಂತೋಷ್ ಸಂಪರ್ಕಕ್ಕೆ ಸಿಗ್ತಾನೇ ಇರ್ಲಿಲ್ಲ. ಮದುವೆ ಆಗುವ ಹುಡುಗ ಸಂಪತ್ನ ಫೋಟೋ ಕಳಿಸಬೇಕು ಎಂದು ಎಷ್ಟು ಬಾರಿ ಅಂದುಕೊಂಡರೂ ಸಂತೋಷ್ ಸಂಪರ್ಕಕ್ಕೆ ಸಿಗದ ಕಾರಣ ಸುಮ್ಮನಾದಳು. ಮದುವೆ ದಿನವೂ ಗೊತ್ತಾಯ್ತು, ಪ್ರೀತಿ ತನ್ನ ಎಲ್ಲ ಸ್ನೇಹಿತರಿಗೆ ಬರಲು ತಿಳಿಸಿದಳು. ಹಾಗೆ ಸಂತೋಷ್ಗೆ ಕಾಲ್ ಮಾಡಿ ಹೇಳಬೇಕು. ನನ್ನ ಮದುವೆ … Read more
ಮೆಟಾಫಿಸಿಕಲ್ ಸ್ಕೂಲ್‍ನ – ಜಾನ್ ಡನ್: ನಾಗರೇಖಾ ಗಾಂವಕರ
ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ … Read more
“ತೆರೆಮರೆಯ ಕಲೆಗಾರ ಅಪ್ಪ”: ಕವಿತಾ ಜಿ. ಸಾರಂಗಮಠ
‘ಬದುಕಿನ ಪುಟಗಳಲ್ಲಿ ಭರವಸೆಯ ಹಾದಿಯಲ್ಲಿ ನೂರು ಕನಸ ಹೊತ್ತು ಸಾಗಿಹನು. . ತಾ ಲಾಲಿಸಿದ ಮಕ್ಕಳಿಗೆ. . ‘ ಅಪ್ಪ ಎಂದರೆ ಭಯ, ಆತಂಕ, ಗೊಂದಲ, ಕೋಪ, ಪಕ್ಷಪಾತಿ ಎಂಬಿತ್ಯಾದಿ ಭಾವನೆಗಳ ಚಿತ್ರ ಎಲ್ಲ ಮಕ್ಕಳ ಮನದಲ್ಲಿ ಮೂಡಿರುತ್ತದೆ. ಆದರೆ ವಾಸ್ತವವೇ ಬೇರೆ. “ಅಪ್ಪ ಎಂದರೆ ಮಕ್ಕಳ ಪಾಲಿನ ಅದ್ಭುತ ಶಕ್ತಿ. ಉತ್ತಮ ಸ್ಥಾನ, ಮಾನ, ನಾಗರೀಕತೆಯ ಹಿರಿಮೆಯನ್ನು ಸಮಾಜದಲ್ಲಿ ಮಕ್ಕಳಿಗೆ ತಂದುಕೊಡುವ ದಿವ್ಯ ಚೇತನ” ನಾವೆಲ್ಲ ಅಮ್ಮನ ಬಗ್ಗೆ ಚಿಂತಿಸುತ್ತೇವೆ. ಅವಳ ತ್ಯಾಗ, ಹೋರಾಟ, ಹಿರಿಮೆ … Read more
ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್
ಇದು ನೆನ್ನೆಮೊನ್ನೆಯ ಮಾತಲ್ಲ. ಸುಮಾರು ಹತ್ತಿಪ್ಪತ್ತು ವರ್ಷಗಳೇ ಕಳೆದಿರಬೇಕು. ಆ ಕಾಲಕ್ಕಾಗಲೇ ಊರ ಕಣ್ಣಲ್ಲಿ ರಾಜನ್ಅಯ್ಯರ್ ಒಬ್ಬ ಹಿರೀಕನೆನಿಸಿದ್ದರು. ಆಗಲೇ ಎರಡು ಮೊಮ್ಮಕ್ಕಳಿಗೆ ಅಜ್ಜನಾಗಿದ್ದ ಅಯ್ಯರನ್ನು ಊರ ಜನ ಹಿರಿಯನೆನ್ನದೆ ಮತ್ತಿನ್ನೇನು ತಾನೇ ಅಂದೀತು? ಆದರೆ ಅಜ್ಜನಾದ ಬೆನ್ನಲ್ಲೇ ರಸಿಕ ರಾಜನ್ ಅಯ್ಯರ್ ಆ ಇಳಿವಯಸ್ಸಿನಲ್ಲೂ ಮಡದಿ ಸೀತಮ್ಮಳನ್ನು ಮತ್ತೊಮ್ಮೆ ಬಸಿರಾಗಿಸಿ ಹಲ್ಗಿಂಜುತ್ತಲೇ ಊರವರು ಆತುರದಲ್ಲಿ ಕಟ್ಟಿದ ಹಿರೀಕನ ಪಟ್ಟವನ್ನು ಮುಗುಮ್ಮಾಗಿ ಪಕ್ಕಕ್ಕೆ ಸರಿಸಿಟ್ಟುಬಿಟ್ಟಿದ್ದರು. ಅದೇಕೋ ಅಯ್ಯರಿಗೆ ಈ ಹಿರಿಯನೆಂಬ ಹೊಸ ಗೌರವದ ಹಣೆಪಟ್ಟಿಗಿಂತ ಲಾಗಾಯ್ತಿನಿಂದ ತನಗಿದ್ದ … Read more
ದಿಗಂಬರ ಸತ್ಯ! (ಭಾಗ ೧): ಗುರುಪ್ರಸಾದ ಕುರ್ತಕೋಟಿ
ನನಗೆ ತುಂಬಾ ಚೆನ್ನಾಗಿ ನೆನಪಿದೆ. ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಅಲ್ಲಿನ ಗೆಳೆಯರೊಬ್ಬರು ಕರೆದುಕೊಂಡು ಹೋಗಿದ್ದರು. ಅದೇ ಮೊದಲ ಸಲ ತುಂಬಾ ಜನ ಕನ್ನಡಿಗರು ಒಟ್ಟಿಗೆ ಸೇರಿದ್ದು ನೋಡಿ ಸಹಜವಾಗಿ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಅದೂ ಅಲ್ಲದೆ ನಮ್ಮ ಕನ್ನಡಿಗರು ಅಲ್ಲಿ ಕನ್ನಡ ಮಾತಾಡುತ್ತಿದ್ದರು! ಅದು ಮತ್ತೊಂದು ದೊಡ್ಡ ಅದ್ಭುತವಾಗಿತ್ತು. ಕನ್ನಡಿಗರು ಒಂದಾಗಬೇಕು ಹಾಗೂ ಕನ್ನಡ ಮಾತಾಡಬೇಕು ಅಂದರೆ ಅವರು ವಿದೇಶದಲ್ಲಿ ನೆಲಸಿರಬೇಕು ಅನ್ನೋದು ನನಗೆ ಆಗ ಮನದಟ್ಟಾಯಿತು. ಕನ್ನಡ ಸಂಘದಲ್ಲಿ ಪ್ರತಿ ಹಬ್ಬಕ್ಕೆ ಅಂತ ಒಂದು ಕಾರ್ಯಕ್ರಮ … Read more
ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್
ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ … Read more
ಕವಡಿ ಈರಯ್ಯ..: ತಿರುಪತಿ ಭಂಗಿ
ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು. “ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ … Read more
ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು: ಅಶ್ಫಾಕ್ ಪೀರಜಾದೆ
ಸಾಹಿತಿ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ನಮ್ಮನ್ನು ಅಗಲಿ ಇದೇ ಜೂನ ೨೧ಕ್ಕೆ ಒಂದು ವರ್ಷವಾಯಿತು. ಈ ಪ್ರಯುಕ್ತ ಒಂದು ಲೇಖನ. ಪ್ರಿಯ ಈಶ್ವರ…..ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹೀಗಂತಾ ನೆನಪಿಸಿದವನು ನಿನ್ನ ಮಗ ರಾಜಶೇಖರ. ಅಪ್ಪನ ಪುಣ್ಯಸ್ಮರಣೆ ಲೇಖನ ಬರೆಯಿರಿ ಅಂಕಲ್ ಅಂತಾ ಮೆಸೇಜ ಮಾಡಿದ್ದ. ನೀನು ಹೋಗಿ ಇಷ್ಟು ಬೇಗ ಒಂದು ವರ್ಷವಾಯಿತೇ? ನಂಬಲಾಗುತ್ತಿಲ್ಲ. ನೀನು ಅಲ್ಲಿ-ಇಲ್ಲಿ, ಹಿಂದೆ-ಮುಂದೆ ಸದಾ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳೆಂದರೆ ಕೊನೆಯಿಲ್ಲದ ಒರತೆ. ಈ … Read more
ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.
ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ … Read more
ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ
ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. … Read more
ಗುಂಪುಗಳಲ್ಲಿ “ಗುಂಪುಗಾರಿಕೆ”: ಸಹನಾ ಪ್ರಸಾದ್
ಯಾವ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ, ಅಂದಿರಾ? ನಮ್ಮ ದೇಶದಲ್ಲಿ ಹೇರಳವಾಗಿ ಸಿಗುವ ಜಾತಿ, ಮತ, ಭಾಷೆ, ಜನಾಂಗ, ವ್ಯಕ್ತಿಗಳ ಪರ, ವಿರೋಧಗಳ ಗುಂಪಲ್ಲ, ಮಾರ್ರೆ. ನಾ ಹೇಳ್ತಾ ಇರೋದು ಈ ಮುಖಪುಟ, ವಾಟ್ಸಾಪ್, ಇನ್ಸ್ಟಾ, ಟೆಲಿಗ್ರಾಮ್ ಇತ್ಯಾದಿಗಳಲ್ಲಿ ಕಾಣ ಸಿಗುವ ” ಗ್ರೂಪ್” ಗಳು. ಊಟ, ಸೀರೆ, ಸಾಹಿತ್ಯ, ಅಡುಗೆ, ಭಾಷೆ, ಪಂಗಡ… ಯಾವುದು ಬೇಕು ಹೇಳಿ? ಎಲ್ಲ ರೀತಿಯ ಗುಂಪುಗಳೂ ನಿಮಗೆ ಕಾಣ ಸಿಗುತ್ತವೆ. ಗಣತಿಯ ಪ್ರಕಾರ ೬೨೦ಮಿಲ್ಲಿಯನ್ ಗ್ರೂಪುಗಳು ಇವೆಯಂತೆ ಬರೀ ಮುಖಪುಟದಲ್ಲಿ! ಇವುಗಳ … Read more
ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್
-೩೧- ಬೀದಿ ದೀಪ್ಗಳು ಇಲ್ದೆ ಊರು ಗವ್ವನ್ನದು ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ ಅವ್ರ್ ಕಾಲು ದಿಕ್ಕಾ ಪಾಲಾಗಿ ನಾನು ಮೋರಿ ಪಾಲಾದಿ ಮೋರಿ ಬದಿ ನನ್ ಮೈಮಾರ ಮೆತ್ತಿ ನಿಗುರಿ ನಿಗುರಿ ನೋಡ್ತಿದ್ದಾಗ ನೀಲವ್ವೋರು ಬಾಗುಲು ಸಂದಿಲಿ ಇಣ್ಕುದ್ರು. ಚೆಂಗುಲಿ ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ ಹೆಗುಲ್ಗ ಕೊಟ್ಗಂಡು ಯಳ್ಕಂಡು ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು ಒಳಗಿಂದ ನೀಲವ್ವೋರು ಎಳಿತಿದ್ರ ಈಚ್ಲಿಂದ ಚೆಂಗುಲಿ ತಳ್ತಿದ್ದ ನೀಲವ್ವೋರು ಎಳುದ್ರು ಚೆಂಗುಲಿನು ತಳ್ದ ಆ ದೆಸ್ಗ, ಅಯ್ನೋರು ಒಳಕ್ಕೋದಂಗಾಯ್ತು … Read more
ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ: ವೈ.ಬಿ.ಕಡಕೋಳ
ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರಿನವರು. ಇವರು ಸ್ವಾತಂತ್ಯ ಹೋರಾಟಗಾರರು ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರು, ಮಾಜಿ ಶಾಸಕರು. ವಿಧಾನಸಭೆಯ ವಿರೋಧಪಕ್ಷದ ಉಪನಾಯಕರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರಾಗಿ ಬದುಕಿ ಬಾಳಿದವರು. ಇವರು ಹರ್ಡೇಕರ್ ಮಂಜಪ್ಪನವರ ಜೀವನಚರಿತ್ರೆ, ಬಸರೀಗಿಡದ ವೀರಪ್ಪನವರ ಅಭಿನಂದನ ಗ್ರಂಥ ಹೊರತಂದವರು. ಅಷ್ಟೇ ಅಲ್ಲ 1932 ರಲ್ಲಿ … Read more
‘ಸಿರ್ಫ್ ಪ್ರೀತಿ’: ಬೀರೇಶ್ ಎನ್ ಗುಂಡೂರ್
ನನ್ನ ಕೂದಲಿನಲ್ಲಿ ಸದಾ ಹುದುಗಿ ಮರೆಯಾಗುವ ಆ ಮೂರು ಬೆರಳಿನ ಹಣೆಯಲ್ಲಿ ಯಾರೋ ಟಿಪ್ಪಣಿ ಬರೆದಿದ್ದಾರಂತೆ. ಜೀವನದಲ್ಲಿ ಎಲ್ಲಾ ಘಟಿಸುವುದು ಅಲ್ಲಿಯ ಪೂರ್ವ ನಿರ್ಧಾರಿತವಂತೆ. ಯಾವುದೂ ಇಲ್ಲಿ ನಮ್ಮ ಕೈಯಲ್ಲಿಲ್ಲ, ಶಾಶ್ವತವಲ್ಲವೆಂಬುದು ಸದಾ ಕೇಳುವ ಮಾತು. ಎಲ್ಲವೂ ಅದಾಗಲೇ ನಿಶ್ಚಿತವಾಗಿದೆಯಂತೆ. ನಾವು ನೆಪ ಮಾತ್ರವಂತೆ. ಜೀವದ ಉಸಿರಾಗಿರುವ ಗೆಳತಿಯ ಸಮ್ಮತಿಗಿಂತ…ಈ ಹಣೆಯಲ್ಲಿ ಅವಳ ಹೆಸರು ಬರೆದಿರಬೇಕಂತೆ. ವಾಸ್ತವದಲ್ಲಿ, ಇಂತಹ ಎಷ್ಟೋ ಇಲ್ಲ್ಯೂಷನ್ ಗಳಿಗೆ ನನ್ನದು ಯಾವಾಗಲೂ ತಕರಾರು. ನಮ್ಮ ಅಸಮರ್ಥತೆಯನ್ನು ಒಪ್ಪದೇ..ಹುಡುಕಿಕೊಂಡ ಕತೆಗಳಿವು ಅನಿಸುತ್ತದೆ. ಸದಾ ಸೋತು … Read more
ಸ್ನೇಹಲೋಕವೋ!! ಭ್ರಮಾಲೋಕವೋ?: ಚೈತ್ರಭೂಲಕ್ಷ್ಮೀ
ಸ್ನೇಹವೆಂಬುದು ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ. ಯಾವಾಗ ನಾವು ಚೌಕಟ್ಟುಗಳನ್ನು ಮೀರಿ ಮತ್ತೊಬ್ಬ ವ್ಯಕ್ತಿಯನ್ನು ತನ್ನಂತೆ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅಲ್ಲಿ ಸ್ನೇಹಬೀಜ ಮೊಳೆಯುತ್ತದೆ. ಕಾಲಚಕ್ರ ಉರುಳಿದಂತೆ, ಎಳೆವಯಸ್ಸಿನ ಬೆಸ್ಟೆಸ್ಟ್ ಆಗಿದ್ದವರು ಅಪರಿಚಿತರಾಗಿ ಹೋಗಬಹುದು. ಅಷ್ಟೇನೂ ಒಡನಾಟವಿಲ್ಲದವರ ಜತೆಗೆ ಗಾಢ ಬಾಂಧವ್ಯ ಬೆಸೆದು ಹೋಗಬಹುದು ಅಥವಾ ಹೊಸ ಪರಿಚಯವಾಗಿ ಅವರು ನಮ್ಮದೇ ಛಾಪೆನ್ನುವಷ್ಟು ಒಂದಾಗಿ ಬಿಡಬಹುದು. ಸ್ನೇಹವಿಲ್ಲದ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ವಯಸ್ಸಿನಲ್ಲೂ ಎಲ್ಲರಿಗೂ ತಮ್ಮದೇ … Read more
ಪಂಜು ಕಾವ್ಯಧಾರೆ
ಮೌನದ ಮನ ಮೌನವಾಗದಿರು ಮನವೇ ಮೊದಲಿಸುವ ಮುಖಗಳ ಕಂಡು ಇದು ನಿನ್ನ ಜೀವನವೇ.. ಕಾಯಕದಲಿ ಹಗಲಿರುಳು ಶ್ರಮಿಸು ಕಿವಿಗೊಡದಿರು ಎಡರು ತೊಡರಿಗೆ ನಿನ್ನೊಳಗಿನ ಮುಕ್ತಿ ಪ್ರಹರಿಸು ಸೋತನೆಂದು ಅಳದಿರು ಗೆದ್ದನೆಂದು ಬೀಗದಿರು ಸಾಧನೆಗೆ ದಾರಿಗಳು ನೂರಾರು ನಡೆವ ದಾರಿಲಿ ಕಲ್ಲು ಮುಳ್ಳುಗಳು ಬರಿ ನೋವ ಅಣಕು ತುಣುಕುಗಳು ಚಿಮ್ಮುತ ಬರಲಿ ನಿನ್ನೊಳಗಿನ ಆವಿಷ್ಕಾರಗಳು –ಹರಾಸು ಮನುಷ್ಯರಿಲ್ಲದ ಬೀದಿಯಲ್ಲಿ… ಮನುಷ್ಯರಿಲ್ಲದ ಬೀದಿಯಲ್ಲಿ ಮನಸು ಅಲೆಯುತ್ತಿತ್ತು ಮನುಷ್ಯನ ಕುಕೃತ್ಯ ಅಲ್ಲಿಲ್ಲಿ ಅವುಗಳ ಕಲೆ ಎಷ್ಟು ಮಳೆ ಸುರಿದರೂ,ಗಂಧ ಲೇಪಿಸಿದರೂ ಶತಮಾನ … Read more
NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ 3): ಗುರುಪ್ರಸಾದ ಕುರ್ತಕೋಟಿ
ಇಲ್ಲಿಯವರೆಗೆ ಮಿಸ್ಟರ್. ಬೆಂಕಿಯ ಜೊತೆ ಜೊತೆಗೆ ನನಗೆ ಇನ್ನೊಬ್ಬ ಗೆಳೆಯನ ಪರಿಚಯವಾಗಿದ್ದು ಅಲ್ಲಿನ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ. ಅವನ ಹೆಸರು ಕೋಮಾ (ದಯವಿಟ್ಟು ಗಮನಿಸಿ: ಇಲ್ಲಿನ ಪಾತ್ರಗಳೆಲ್ಲವೂ ನೈಜ, ಆದರೆ ಹೆಸರುಗಳು ಅಡ್ಡ ಅಥವಾ ಕಾಲ್ಪನಿಕ!). ಅವನಿಗೆ ಕೊಮಾ ಎಂಬಾ ಹೆಸರು ಯಾಕೆ ಅಂದರೆ ಅವನು ತುಂಬಾ ವಿಷಯಗಳಲ್ಲಿ ಬಹು ಬೇಗನೆ ಬೇಜಾರಾಗುತ್ತಿದ್ದ. ಆ ಹೆಸರನ್ನು ಅವನಿಗೆ ಕೊಟ್ಟವನು ಅಪ್ಪು ಗೌಡಾ (ಇದು ಕೂಡ ನೈಜ ಹೆಸರಲ್ಲ. ಈ ಸಂಗತಿಯನ್ನು ನಿಮಗೆ ಪದೆ ಪದೆ ಹೇಳಿದ್ದಕ್ಕೆ … Read more
ಅನುಭೂತಿಗೊಲ್ಲದ ಬಂಧ: ರೇವತಿ ಶೆಟ್ಟಿ
ಆರ್ದ ಮಳೆಯ ಆರ್ಭಟಕ್ಕೆ, ಅಂಗಳದ ತುಂಬೆಲ್ಲಾ ಹರಡಿ ಹಿಪ್ಪೆಯಾದ ಪಾರಿಜಾತ,ಹೆಂಚಿನ ಛಾವಣಿಯಿಂದ ಬೆಳ್ಳಿ ತಂತಿಯಂತೆ ಧೋ ಬೀಳೋ ಮಳೆಸಾಲು, ಪಡಸಾಲೆಯ ಮಧ್ಯದಲ್ಲಿ ನೀಲಾಂಜನ,ಅಲ್ಲೇ ಪಕ್ಕದಲ್ಲಿ ಉಸಿರು ಮರೆತು ಮಲಗಿದ ದೇಹ, ಗುಸುಗುಸು ಮಾತಿನೊಂದಿಗೆ ಅತ್ತಿಂದಿತ್ತ ಸುಳಿದಾಡುತ್ತಾ ಶವ ಸಂಸ್ಕಾರಕ್ಕೆ ತಯಾರಿಯಲ್ಲಿರುವ ಮನೆಯವರು. ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು ನಿರ್ಧಾರದ ದನಿಯಲ್ಲಿ, ಏನೇ ಆಗಲಿ, ಶಂಕರಪ್ಪ ಕೊನೆಗಾಲದಲ್ಲಿ ಅಂತ ಖರೀದಿ ಮಾಡಿದ್ದ ಜಮೀನಲ್ಲೆ ಶವ ಸಂಸ್ಕಾರ ಮಾಡೋಣ, ಅವನ ಆತ್ಮಕ್ಕೂ ಶಾಂತಿ ಸಿಗತ್ತೆ ಅಂತ ಅನ್ನಿಸತ್ತೆ, ಏನಂತೀರಿ? ಅಂತ ಶಂಕರಪ್ಪನ … Read more
ನನ್ನ ಮುದ್ದು ಅಪ್ಪ: ಸುನಿತಾ. ಎಸ್. ಪಾಟೀಲ
ಅಪ್ಪ ಎಂಬ ಎರಡಕ್ಷರದ ಈ ಪದ ಸ್ವಲ್ಪ ಭಾರ, ಮಕ್ಕಳಿಗೆ ಮುಜುಗರ ಉಂಟುಮಾಡುವಂತದ್ದು. ಅಪ್ಪ ಎಂಬ ಸಂಬಂಧಕ್ಕೆ ಬಹುಶಃ ಯಾರು ಅಷ್ಟೊಂದು ಪ್ರಾಶಸ್ತ್ಯ ಕೊಡೋದಿಲ್ಲ. ಹಾಗಂತ ಪ್ರೀತಿ ಇಲ್ಲ ಅಂತಲ್ಲ. ಅಪ್ಪನಿಗೆ ಕಂಡರೆ ಅದೇನೋ ಮುಜುಗರ, ಗೌರವ, ಭಯ. ಏಕೆಂದರೆ ಅಮ್ಮನ ಜೊತೆ ಇರುವ ನಮ್ಮ ಸೆಂಟಿಮೆಂಟ್, ಅಟ್ಯಾಚ್ಮೆಂಟ್, ಅಪ್ಪನ ಜೊತೆ ಸ್ವಲ್ಪ ಕಡಿಮೆನೇ ಅಲ್ವಾ? ಆದರೆ ಎಲ್ಲರಿಗೂ ಗೊತ್ತು ಅಪ್ಪ ಅಂದ್ರೆ ಸ್ಫೂರ್ತಿ, ಅಪ್ಪ ಅಂದ್ರೆ ತ್ಯಾಗ, ಅಪ್ಪ ಅಂದ್ರೆ ಆಕಾಶ, ಅವರ ಪರಿಶ್ರಮಕ್ಕೆ ಬೆಲೆ … Read more
ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್
-೨೯- ಅವತ್ತೊಂದಿನ ಈ ಅಯ್ನೋರು ಹೊಳಕರಲಿ ಕೈಯಿ ಕಾಲು ತೊಳಕಂಡು ನನ್ನೂ- ಮರುಳ್ಗಾಕಂಡು ಉಜ್ಜಿ ತೊಳ್ದು ನೀರಂಜಿ ಮರದ ಬುಡದಲ್ಲಿ ನೀರ ಸೋರಕ ಬುಟ್ಟು ಗರಕ ಮ್ಯಾಲ ತಿಕ ಊರಿ ಕುಂತ್ಮೇಲ ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ ನೆಪ್ಪಿರ ಮುಂದಾಳು ಬಂದ್ರು. ನಾನು ನೋಡ್ತನೆ ಇದ್ದಿ ಗಗ್ಗೇಶ್ವರಿ ಆಣ್ಗುಂಟ ಹೊಳ ದಾಟ್ಗಂಡು ಚೆಂಗುಲಿ ಬತ್ತಿರದು ಕಾಣ್ತು ಅವನ ಕಂಕುಳಲ್ಲಿ ಏನಾ ಇತ್ತು. ಬಂದವ ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ ಪುರಿ ಸುರುದು ಕಾರಸ್ಯಾವ್ಗ ಕಳ್ಳ … Read more
ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ
ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more
ಸ್ನೇಹದ ಕಡಲಲ್ಲಿ: ಸುಧಾ ಹುಚ್ಚಣ್ಣವರ
ಮನುಷ್ಯ ಇತರ ಎಲ್ಲ ಜೀವಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ, ಹಾಗೆಯೇ ಸಂಘಜೀವಿ. ಸಮಾಜವನ್ನು ಬಿಟ್ಟು ಬದುಕಲಾರ ತನ್ನ ಎಲ್ಲ ಬೇಕು ಬೇಡಿಕೆಗಳನ್ನು ಸಮಾಜದ ಸಂಘ ಜೀವನದಲ್ಲಿ ಈಡೇರಿಸಿಕೊಳ್ಳುತ್ತಾನೆ. ತನ್ನ ಕುಟುಂಬದ ಸದಸ್ಯರ ಜೊತೆ ನೆರೆಹೊರೆಯವರ ಜೊತೆ ಪ್ರೀತಿ ಸ್ನೇಹ ಸಹಕಾರ ಕೊಟ್ಟು ತೆಗೆದುಕೊಳ್ಳುವ ಭಾವನೆಯಿಂದ ಬೆಳೆಯುತ್ತಾ ಸಾಗುತ್ತಾನೆ. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ “ಜೀವನದ ಮೌಲ್ಯಗಳು” ಎಂಬ ವಿಷಯದ ಕುರಿತು ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಹೇಳುತ್ತಾರೆ, ಮಕ್ಕಳೇ ಜೀವನದಲ್ಲಿ “ಪ್ರೀತಿ ಸ್ನೇಹ “ಎಲ್ಲವೂ ಬಹಳಷ್ಟು ಮುಖ್ಯ. ಮನುಷ್ಯ … Read more
ಹೇ ಮಾನವ ನಮ್ಮನ್ನೂ ಬದುಕಲು ಬಿಡಿ: ಮಂಜುಳಾ ಶೆಟ್ಟಿಗಾರ್
ಮುಂಜಾನೆ ಬೇಗನೆ ಎದ್ದೆ ಕಾರಣ ಬಯಕೆಯ ಹಸಿವು. ಗರ್ಬಿಣಿಯಾಗಿದ್ದರಿಂದ ತುಂಬಾ ಆಯಾಸ ಹಾಗಾಗಿ ಹಿಂದಿನ ದಿನ ರಾತ್ರಿಯಾಗುವುದರೊಳಗೆ ಸಿಕ್ಕಿದ್ದನ್ನು ತಿಂದು ಬೇಗನೆ ಮಲಗಿದ್ದೆ. ಅದೇ ಕಾರಣ ಇಂದು ಸೂರ್ಯನ ರಶ್ಮಿ ಸೊಕುವುದಕ್ಕಿಂತ ಮೊದಲೇ ಹಸಿವು ನನ್ನ ಬಡಿದೆಬ್ಬಿಸಿತು. ಸರಿ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು, ನನಗಲ್ಲದಿದ್ದರು ನನ್ನ ಉದರದಲಿ ಬೆಳೆಯುತ್ತಿರುವ ನನ್ನ ಕನಸಿನ ಕೂಸಿಗೆ ಎಂದು ದೌಡಾಯಿಸಿ ಎದ್ದೆ. ಗರ್ಭಿಣಿಯ ಆಯಾಸ ಕಾಡುತಿತ್ತು. ಆಯಾಸ ಎಂದು ಕೂತವಳಿಗೆ ಮತ್ತೇ ಹಸಿವು ಹೊಟ್ಟೆಯಲ್ಲಿ ಚುರ್ ಎಂದು ಎಚ್ಚರಿಸಿತು. ತಡಮಾಡದೆ ಎದ್ದು … Read more
ವಿದಾಯ- ಸಾಧ್ಯವೇ?: ಸಹನಾ ಪ್ರಸಾದ್
ಕಳೆದ ವಾರದಲ್ಲಿ ಚಿಕ್ಕ ವಯಸ್ಸಿನ ವ್ಯಕ್ತಿಗಳ ಸಾವು ನಮ್ಮನ್ನು ನೋಯಿಸಿದೆ. ವಯಸ್ಸಾದವರು ಹೋದರೆ ಮನಸ್ಸಿಗೆ ದುಃಖವಾದರೂ ಸಮಾಧಾನ ಮಾಡಿಕೊಳ್ಳಬಹುದು ” ಹೋಗಲಿ ಬಿಡು, ಬದುಕು ಕಂಡಿದ್ದರು, ಅದರ ಸಿಹಿ, ಕಹಿ ಉಂಡಿದ್ದರು. ಅವರ ಆಯುಸ್ಸು ಮುಗಿದಿತ್ತು. ಭಗವಂತ ಕರೆದುಕೊಂಡ” ಎಂದು. ಚಿಕ್ಕವರಾದರೆ ಮುಮ್ಮಲ ಮರುಗುವುದನ್ನು ಬಿಟ್ಟು ಬೇರೆನೂ ಮಾಡಲಾಗುವುದಿಲ್ಲ. ವಿದಾಯ ಹೇಳುವುದು ಕಷ್ಟ ಎಂಬುದರಲ್ಲಿ ದೂಸರಾ ಮಾತಿಲ್ಲ. ಅತ್ಯಂತ ಕಷ್ಟಕರವಾದ ಪದಗಳಲ್ಲಿ ಮೊದಲ ಬಾರಿಗೆ “ಹಲ್ಲೊ” ಎನ್ನುವುದು, ಕೊನೆಯ ಬಾರಿಗೆ ” ಬೈ” ಎನ್ನುವುದು ಎನಲಾಗಿದೆ. ಹಲ್ಲೊ … Read more
Online Hydroponics ತರಬೇತಿ (ಕನ್ನಡದಲ್ಲಿ)
ಮಣ್ಣನ್ನು ಬಳಸದೆ, ಅವಶ್ಯಕ ಲವಣಾಂಶ ಭರಿತ ನೀರಿನಲ್ಲಿ ನಿಮ್ಮ ಮನೆಯಲ್ಲಿಯೇ ಹಣ್ಣು ತರಕಾರಿ ಬೆಳೆಯುವ ವಿಧಾನದ ಬಗ್ಗೆ ಕೇಳಿದ್ದೀರಾ? ಅದಕ್ಕೆ hydroponics ಅನ್ನುತ್ತಾರೆ. ಅದನ್ನು ನೀವೂ ಕಲಿಯಬೇಕೆ? ಇಲ್ಲಿದೆ ಅವಕಾಶ! ಬೆಳೆಸಿರಿ ಸಂಸ್ಥೆ ಕನ್ನಡಿಗರಿಗಾಗಿ, ಕನ್ನಡದಲ್ಲಿಯೇ ವಿಶೇಷವಾಗಿ ತಯಾರಿಸಿದ ತರಬೇತಿ ಶಿಬಿರ, online ನಲ್ಲಿ… ಅದೂ ವಿಶೇಷ ರಿಯಾಯಿತಿಯೊಂದಿಗೆ !! ಒಬ್ಬರಿಗೆ ಕೇವಲ 999 ಮಾತ್ರ (ಮೂಲ ಬೆಲೆ 1999)! *ಕೆಲವೇ ಸೀಟುಗಳು ಲಭ್ಯ. ಮೊದಲು ಬಂದವರಿಗೆ ಆದ್ಯತೆ. ದಿನಾಂಕ: ಜೂನ್ 21, 2020 – ಭಾನುವಾರ … Read more