ಅಂಕ ಪ್ರಯಾಣ: ನಾಗಸಿಂಹ ಜಿ ರಾವ್
ಸಿಂಹಾವಲೋಕನ 3 “ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ … Read more