ಪ್ರೀತಿಯೆಂದರೆ…
ಪ್ರೀತಿ ಪ್ರೀತಿಯೆಂಬುದು ಬರಿಯ ಭಾವಗಳೆಂಬ ಅಪ್ಪಳಿಸುವ ಅಲೆಗಳ ಭೋರ್ಗರೆವ ಸಮುದ್ರವಲ್ಲ, ಎಂದೋ ಪೌರ್ಣಿಮೆ-ಅಮಾವಸ್ಯೆಗಳಲಿ ಮಾತ್ರವೇ ಚಂದಿರನಿಗಾಗಿ ಹಾತೊರೆವ ಮೋಹವಲ್ಲ, ಒಡಲಲಿ ಸಾವಿರ ಗುಟ್ಟುಗಳನಿಟ್ಟ, ಒಮ್ಮೆ ಈಜಲೇ ಬೇಕೆಂಬ ಕುತೂಹಲವಲ್ಲ, ಶಾಂತತೆಯ ತೋರಿಕೆಯಲಿ ಒತ್ತಡವ ತನ್ನೂಳಗೆ ಬಚ್ಚಿಟ್ಟು, ಕಡೆಗೆ ಸುನಾಮಿಯೆಬ್ಬಿಸುವ ಭಯಂಕರತೆಯಲ್ಲ, ಸಿಹಿನದಿಗಳ, ಕರಗುವ ಹಿಮವನೆಲ್ಲವ ಕಬಳಿಸಿ ವಿಸ್ತಾರವಾಗುತಲಿ, ತೀರವ ಕೊರೆವ ಸ್ವಾರ್ಥವಲ್ಲ, ಎಂದಿಗೂ ಉಪ್ಪೇ ಆಗಿರುವ, ಕುಡಿಯಲೇ ಆಗದ ಜಲವಲ್ಲ, ದಿನವೂ ರವಿಯೊಡನೆ ಸರಸವಾಡುತಲಿ, ರೂಪ-ನೋಟಗಳಲಿ ಕಣ್ಸೆಳೆಯುವ ಆಕರ್ಷಣೆಯಲ್ಲ, ದಡದ ಮರಳಿನ ಮೇಲೆ ಗಿಚಿ ಮರೆಯಾದ ಹೆಸರಲ್ಲ, … Read more