ನನ್ನೊಳಗಿನ ಗುಜರಾತ್ (ಭಾಗ 7): ಸಿ.ಎಸ್. ಮಠಪತಿ
ಗುಜರಾತಿನಲ್ಲಿರುವ ತನಕ ನನ್ನಲ್ಲಿ ಒಂದೇ ಒಂದು ಅಪಸ್ವರವಿದ್ದದ್ದು , ಗುಜರಾತಿನ ತಿಂಡಿ ತಿನಿಸುಗಳ ಬಗ್ಗೆ. ನಮ್ಮೂರು ನಮಗೆ ಅಂದ, ನಮ್ಮೂರ ತಿಂಡಿ ತಿನಿಸುಗಳು ನಮಗೆ ಚೆಂದ ಎಂಬ ಮಾತು ಒಂದು ಕಾರಣವಾಗಿರಬೇಕು. ಮಹಾನಗರಗಳಲ್ಲಿ ಸಿಗುವಂತಹ ಆಹಾರಗಳು ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಭಾರತೀಯರಿಗೆ ಸ್ವಲ್ಪ ಹಿಡಿಸಬಹುದು . ಆದರೆ, ಗ್ರಾಮೀಣ ಪ್ರದೇಶದ ಆಹಾರಗಳು ಸುತಾರಾಂ ಹಿಡಿಸುವುದೇ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಬೆಳಗಿನ ಒಳ್ಳೆಯ ತಿಂಡಿಯ ಅಭಿರುಚಿಯೂ ಇಲ್ಲ. ಅದರಲ್ಲೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ … Read more