ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್
"ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?" ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೋ ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. … Read more