ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು
ಖುಷಿ ಸಂಜೆ ಸೂರ್ಯನ ಹೆಣದ ಮೆರವಣಿಗೆ ಸಾಗುವಾಗ ಬಾನ ಬೀದಿಯೊಳಗೆ ದುಡಿವ ಜನರ ಗೂಡುಗಳ ದೀಪಗಳಿಗೆ ಉಸಿರು ದಕ್ಕಿ ಪಿಸುಗುಟ್ಟಿ ನಸುನಗುತಾವೆ ಒಳಗೊಳಗೆ. ಬದುಕು ದುಡಿಯುವ ಜನರ ಸುಖವು ಕನಸಿನ ತರಹದ್ದು; ಸಂಕಟಗಳ ನತದೃಷ್ಟ ಬದುಕುಗಳಿಗೋ ಹಸಿವಿನ ಸರಹದ್ದು. ಸಹನೆ ದುಡಿವ ಜನರನ್ನು ನೀವು ಬಿರುಬಿಸಿಲ ಬೆಂಕಿಯಲ್ಲಿ ದಹಿಸಿದರೂ ಸಹಿಸುತ್ತಾರೆ; ಮುಂದೊಮ್ಮೆ ನೀವೇ ಸುರಿಸುವ ಪ್ರೀತಿ ಮಳೆಗೆ ತೆರೆದುಕೊಳ್ಳುವ ನೆಲವೇ ಆಗುತ್ತಾರೆ! ಸ್ಪಷ್ಟ ಓ ಸೂರ್ಯ, ದುಡಿವ ಜನರ ನೆತ್ತಿಯ ಸುಡುವುದೆಂದರೆ ಯಾಕೆ ನಿನಗೆ ಇಷ್ಟ? ನೀನು … Read more