ವೀರ್ಯವಂತನಾದ ಆಮೆಯೊಂದು ತನ್ನ ಸಂತತಿ ಉಳಿಸಿದ ಕಥೆ: ಅಖಿಲೇಶ್ ಚಿಪ್ಪಳಿ
ಸ್ಥಳೀಯವಾದ ಒಂದು ಘಟನೆ ಹಾಗೂ ಅಂತಾರಾಷ್ಟ್ರೀಯ ಎರಡು ಘಟನೆಗಳು ಈ ವಾರ ದಾಖಲೆ ಮಾಡಬೇಕಾದ ವಿಷಯಗಳೇ ಸೈ. ಸಾಗರದ ಅಗ್ರಹಾರದಲ್ಲಿ ಬೆಂಗಳೂರು ಮೂಲದ ಶ್ರೀಮಂತ ಉದ್ಯಮಿಯೊಬ್ಬರು ಮನೆ ಕಟ್ಟಲು ಪರವಾನಿಗೆ ತೆಗೆದುಕೊಂಡು, ಮನೆ ಕಟ್ಟಲು ಪ್ರಾರಂಭಿಸಿದರು. ಅವರಿಗೆ ಅಡ್ಡಿಯಾಗಿದ್ದು, ರಸ್ತೆ ಬದಿಯ ಎರಡು ಮರಗಳು. ತುಪ್ಪ ತಿಂದ ತಲೆಯನ್ನು ಓಡಿಸಿದರು. ಅದು ಹೇಗೋ ಒಂದಿಷ್ಟು ಜನ ಮರ ಕಡಿತಲೆಯನ್ನು ವಿರೋಧಿಸುವ ಮನೋಭಾವ ಹೊಂದಿದವರು ಅಡ್ಡಿ ಮಾಡಿದರೆ ಕಷ್ಟ ಎಂದುಕೊಂಡು ಎಲ್ಲವನ್ನೂ ಕಾನೂನಾತ್ಮಕವಾಗಿ ಮಾಡಿ ಮುಗಿಸುವ ಪ್ಲಾನ್ ರಚನೆಯಾಯಿತು. … Read more