ಅಂತರಾಗ್ನಿ (ಭಾಗ 3): ಕಿರಣ್. ವ್ಹಿ

ಇಲ್ಲಿಯವರೆಗೆ ಹೊರಗೆ ಬಂದ ಇಬ್ಬರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಮುಂದಾದರು. ಹರಿಗೆ ತನ್ನ ಬೈಕ್ ಸರಿಯಾದರೆ ಸಾಕಾಗಿತ್ತು. ಆ ನಡುರಸ್ತೆಯಲ್ಲಿ ಕೆಟ್ಟು ನಿಂತದ್ದು ಮತ್ತೊಂದು ತಲೆನೋವಾಗಿತ್ತು. ಸಹಾಯಕ್ಕೆಂದು ಮ್ಯಾನೇಜರ್ ರವಿಯ ಬಳಿ ಹೋದ. ಗೋಪಾಲ್ ವರ್ಮಾರವರು ಕೂಡ ತಮ್ಮ ಮನೆಯವರೆಲ್ಲರ ಜೊತೆ ಸಪ್ತಗಿರಿಯನ್ನು ನೋಡಲು ಹೊರಟರು. ರವಿ, ಹರಿಗೆ ಒಬ್ಬ ಮೆಕ್ಯಾನಿಕ್ನನ್ನು ಪರಿಚಯಿಸಿ ಅವನ ಜೊತೆಯಲ್ಲಿ ಹೋಗಿ ಬೈಕನ್ನು ರಿಪೇರಿ ಮಾಡಿ, ತೆಗೆದುಕೊಂಡು ಬರಲು ಹೇಳಿದ. ಇಬ್ಬರು ಮೆಕ್ಯಾನಿಕ್ ನ ಬೈಕ್ನಲ್ಲಿ ಹೋಗಿ ಗಾಡಿಯನ್ನು ರಿಪೇರಿ … Read more

ಅಂತರಾಗ್ನಿ (ಭಾಗ ೨): ಕಿರಣ್. ವ್ಹಿ

ಇಲ್ಲಿಯವರೆಗೆ ಆಗಲೇ ಮೊವತ್ತು ಕಿಲೋಮೀಟರ್ ಪ್ರಯಾಣಿಸಿಯಾಗಿತ್ತು. ಮುಂದೆ ಸಿಗುವುದು ಬರೀ ಕಾನನ, ತಿರುವು-ಮುರುವು ರಸ್ತೆ ಹಾಗು ನೀರವ ಮೌನವೆಂದು ಅವನಿಗೆ ಗೊತ್ತಿತ್ತು. ಇದನ್ನೇ ಅರಸಿ ಅವನ ಅಂತರಾಳ ಇಲ್ಲಿಗೆ ಕರೆದುಕೊಂಡು ಬಂದಿತ್ತೊ ಏನೊ…! ಸಪ್ತಗಿರಿಯದು ದೊಡ್ಡ ಘಾಟ್ ಆಗಿತ್ತು. ಸುಮಾರು ನಲವತ್ತು ಕಿಲೋಮೀಟರ್ ನಷ್ಟು ರಸ್ತೆ ತಿರುವಿನಿಂದಲೆ ಕೂಡಿತ್ತು. ಒಂದು ಬದಿಗೆ ಮುಗಿಲು ಮುಟ್ಟುವಷ್ಟು ಎತ್ತರದ ಗುಡ್ಡ, ಮತ್ತೊಂದು ಬದಿಗೆ ನೆಲ ಕಾಣಿಸದಷ್ಟು ಆಳವಾದ ಪ್ರಪಾತ. ಅದೆಷ್ಟು ಅಮಾಯಕ ಜೀವಿಗಳು ಪ್ರಾಣ ತೆತ್ತಿವೆಯೋ ಏನೊ. ಕಾಡು ಎಷ್ಟೊಂದು … Read more

ಅಂತರಾಗ್ನಿ: ಕಿರಣ್. ವ್ಹಿ

ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ  ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ. “ಥೋ  ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. … Read more

ಓಯಸಿಸ್: ನಿನಾದ (ಭಾಗ 4)

ಅಷ್ಟು ಹೊತ್ತಿಗೆ ನಿಶಾಂತ್ ಕರೆ ಮಾಡಿ ಹೇಳಿದ ತಡೆ  ಹಿಡಿದ ವೇತನ ಬಿಡುಗಡೆ ಆಗಿದೆ. ಯಾವ್ ಯಾವ್ದಕ್ಕೆ ಎಷ್ಟು ಎಂದು ವಿಲೇವಾರಿ  ಹೇಳು. ಮೊದಲು ಆ ಜೈನ್  ಗೆ ಫೋನ್ ಮಾಡಿ ಹೇಳು, ಹೇಳಿದ್ರೆ ಆವಾ ನಂಬೋಲ್ಲ ನಿನ್ನೆ ಅಕೌಂಟ್ ಗೆ  ಹಾಕಿದ ಹಣ ವಾಪಸು ಮಾಡಬೇಕು. ಸರಿ ಈಗಲೇ ಹೇಳುವೆ ನೀ ವಾಪಾಸು  ಮಾಡಿ ಬಿಡು. ಎಂದು ನಿಶಾಂತ್ ಹೇಳಿ ಕರೆಯನ್ನು ಮುಗಿಸಿದ. ಅಲ್ಲಿಗೆ ಒಂದು ವಿಲೇವಾರಿ ಆಯಿತು. ಅಂತೂ ಚಿಂತೆಯ ಮೂಟೆ ಹೊತ್ತು ಬಂದು ಎಲ್ಲ … Read more

ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ … Read more

ಸ್ನೇಹ ಭಾಂದವ್ಯ (ಕೊನೆಯ ಭಾಗ): ನಾಗರತ್ನಾ ಗೋವಿಂದನ್ನವರ

        (ಇಲ್ಲಿಯವರೆಗೆ…) ರಾಜೇಶ ಇನ್ನು ಮನೆಗೆ ಬಂದಿರಲಿಲ್ಲ. ಆಗ ಪದ್ಮಮ್ಮ ರೇಖಾಳಿಗೆ ಬಾರಮ್ಮ ಬಾ ನಿನ್ನಿಂದ ಒಂದು ಉಪಕಾರ ಆಗಬೇಕಾಗಿದೆ ಎಂದಳು. ನಮ್ಮ ರಾಜೇಶ ಸುಧಾಳ ನೆನಪಲ್ಲೆ ಹುಚ್ಚನ ಹಾಗಾಗಿದ್ದಾನೆ. ನಿನ್ನ ಮಾತಿಗೆ ಆತ ಗೌರವ ಕೊಡುತ್ತಾನೆ ದಯವಿಟ್ಟು ಅವನಿಗೆ ಮೊದಲಿನ ರಾಜೇಶ ಅಗೋಕೆ ಹೇಳಮ್ಮ. ಇದ್ದ ಒಂದು ವಂಶದ ಕುಡಿನು ದ್ವೇಷಿಸೋಕೆ ಕಲಿತಿದ್ದಾನೆ. ಏನು ಮಾಡಬೇಕು ಅಂತ ತಿಳಿತಿಲ್ಲಾ ಎಂದರು ಪದ್ಮಮ್ಮ. ಆದರೆ ಅಂದು ಎಷ್ಟು ಹೊತ್ತಾದರು ರಾಜೇಶ ಬಾರದಿರುವುದನ್ನ ಕಂಡು … Read more

ಸ್ನೇಹ ಭಾಂದವ್ಯ (ಭಾಗ 11): ನಾಗರತ್ನಾ ಗೋವಿಂದನ್ನವರ

            ಇಲ್ಲಿಯವರೆಗೆ ಪತ್ರ ಓದಿದ ಸುಧಾಳಿಗೆ ತುಂಬಾ ಸಂತೋಷವಾಯಿತು. ಅವಳು ಕಲಾಕೃತಿಯನ್ನು ಕೈಗೆ ತಗೊಂಡು ನೋಡಿದಳು. ಆಗ ಚಂದ್ರು ಏನಕ್ಕಾ ನೀನು ಎಷ್ಟೊಂದು ಒಳ್ಳೆ ಉಡುಗೊರೆಗಳು ಬಂದಿವೆ ಅದು ಬಿಟ್ಟು ನೀನು ಕಡಿಮೆ ಬೆಲೆಯ ಆ ಕಲಾಕೃತಿಯನ್ನು ಹಿಡಿದಿದೆಯಲ್ಲ ಎಂದ. ಚಂದ್ರು ಹಾಗೆಲ್ಲ ಅನಬಾರದು. ಉಡುಗೊರೆಗಳಿಗೆಲ್ಲಾ ಹಾಗೆಲ್ಲ ಬೆಲೆ ಕಟ್ಟಬಾರದು. ಇಷ್ಟೆಲ್ಲಾ ಉಡುಗೊರೆಗಳಲ್ಲಿ ಈ ಉಡುಗೊರೆ ತುಂಬಾ ಅಮೂಲ್ಯವಾದದ್ದು ಗೊತ್ತಾ ಇದರಲ್ಲಿ ತಾಯಿ ಮಗುವಿನ ಬಂಧ ಎಂತದು ಅನ್ನೊದು ಗೊತ್ತಾಗತ್ತೆ. … Read more

ಸ್ನೇಹ ಭಾಂದವ್ಯ (ಭಾಗ 10): ನಾಗರತ್ನಾ ಗೋವಿಂದನ್ನವರ

ರೇಖಾ ಇನ್ನು ಎರಡು ದಿನಕ್ಕೆ ತಿರುಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು. ಆದ್ದರಿಂದ ಸುಧಾಳನ್ನು ಇನ್ನೊಂದು ಸಲ ನೋಡಬೇಕು ಎಂದುಕೊಂಡಳು. ಸಾಯಂಕಾಲ ರಾಜೇಶ ಸುಧಾಳನ್ನು ಮನೆಗೆ ಕರೆತಂದ. ಆಗ ಕಾವೇರಮ್ಮ ಬರ್ರಿ ಅಳಿಯಂದ್ರೆ ಎಂದಳು. ಸುಧಾ ಒಳಗೆ ಹೋದಳು. ರಾಜೇಶ ಅತ್ತೆ ನಾನು ಹೋಗ್ತಿನಿ ಅಂದ. ಕಾಫಿ ಕುಡಿದು ಹೋಗುವಿರಂತೆ ಎಂದಳು. ಬೇಡಾ ಅತ್ತೆ ಮನೆಯಲ್ಲಿ ಅಮ್ಮ ಕಾಯ್ತಿರ್‍ತಾಳೆ ಹೋಗ್ತಿನಿ ಎಂದು ಹೋಗಿಯೆಬಿಟ್ಟ. ಮರುದಿನ ರೇಖಾ ಸುಧಾಳ ಮನೆಗೆ ಹೋಗಬೇಕೆಂದು ಕೊಂಡವಳು ಅವಳತ್ತೆಗೆ ನನ್ನ ಕಂಡರೆನೆ ಆಗಲ್ಲಾ ಏನು ಮಾಡೋದು … Read more

ಸ್ನೇಹ ಭಾಂದವ್ಯ (ಭಾಗ 9): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. … Read more

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ … Read more

ಸ್ನೇಹ ಭಾಂದವ್ಯ (ಭಾಗ 7): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ರೇಖಾ ಶಿವಮೊಗ್ಗಕ್ಕೆ ಹೋದಳು. ಅವಳಿಗೆ ಮಾತ್ರ ತಾನು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವ ಹಕ್ಕಿ ತಾನಾಗಬೇಕು ಎಂದೆನಿಸಿತು. ಸುಧಾಳ ಬಗ್ಗೆ ಅವಳಿಗೆ ಅತೀವ ದುಃಖವಾಯಿತು. ತನ್ನ ಗೆಳತಿಯ ಜೀವನ ಹೀಗೇಕಾಯಿತು ಅಂದು ಚಿಂತಿಸುತ್ತಿದ್ದಳು.       ಈ ಸಲ ದೀಪಾವಳಿ ಹಬ್ಬಕ್ಕೆ ಅಳಿಯ-ಮಗಳನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ವೆಂಕಟಗಿರಿಗೆ ಕಾವೇರಮ್ಮ ಹೇಳಿದರು. ಅದರಂತೆ ಹೌದು ಕಣೆ ಮರೆತುಬಿಟ್ಟಿದ್ದೆ. ಇವತ್ತೆ ಹೋಗಿ ಹೇಳಿ ಬರುತ್ತೇನೆ ಎಂದು ವೆಂಕಟಗಿರಿ ಸುಧಾಳ ಮನೆಗೆ ಹೋದರು. ಬಾಗಿಲಲ್ಲಿ ಕುಳಿತಿದ್ದ ರಮಾನಂದರು ವೆಂಕಟಗಿರಿಯನ್ನು … Read more

ಸ್ನೇಹ ಭಾಂದವ್ಯ (ಭಾಗ 6): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ಇತ್ತ ರೇಖಾಳ ಮನೆಯಲ್ಲಿ ರಾಧಮ್ಮ ನೋಡ್ರಿ ನಾವು ನಮ್ಮ ರೇಖಾಳಿಗೆ ಮದುವೆ ಮಾಡಬೇಕೂರಿ ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಶಿವಾನಂದ ಮಾಡೋಣ ಬಿಡು ಈಗ ಅವಳಿಗೇನು ವಯಸ್ಸಾಗಿರೋದು ಎಂದು ಮಾತು ತೇಲಿಸಿದನು. ರೇಖಾಳಿಗೆ ವಾರ್ಷಿಕ ಪರೀಕ್ಷೆಯು ಹತ್ತಿರ ಬಂದಿದ್ದರಿಂದ ಓದುವುದು ಹೆಚ್ಚಾಗಿ ಊರಿಗೆ ಬರಲು ಸಾಧ್ಯವಾಗಲಿಲ್ಲ. ಅವಳು ಸುಧಾಳಿಗೆ ಪರೀಕ್ಷೆಗೆ ಹಾಜರಾಗಲು ಪತ್ರ ಬರೆದಳು. ಅದನ್ನೊದಿದ ಸುಧಾಳಿಗೆ ಗೆಳತಿಗೆ ತನ್ನ ಬಗ್ಗೆ ಇರುವ ಕಾಳಜಿಯನ್ನು ಕಂಡು ರೇಖಾಳ ಬಗ್ಗೆ ಅಭಿಮಾನ ಮೂಡಿತು. ಒಂದು ದಿನ ಅವಳು … Read more

ಕೆಂಗುಲಾಬಿ (ಕೊನೆಯ ಭಾಗ): ಹನುಮಂತ ಹಾಲಿಗೇರಿ

ರಾಜಿಯ ದಾಂಪತ್ಯದ ಬದುಕಿನ ಬಗ್ಗೆ ಶಾರದೆಯ ಮೂಲಕ ದೀಪಾಳಿಗೂ, ದೀಪಾಳ ಮೂಲಕ ನನಗೂ ಗೊತ್ತಾಗುತ್ತಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮತ್ತು ಮುಖದ ಮೇಲಿನ ಕಳೆ ಮಾಯವಾಗುತ್ತಿರುವುದು ಶಾರದೆಯ ಗಮನಕ್ಕೂ ಬಂದಿತಂತೆ. ರಾಜಿಯ ದಾಂಪತ್ಯದೊಳಗೆ ಹೊಗೆಯಾಡಲಿಕ್ಕೆ ಶುರುವಾಗಿದೆ ಎಂಬುದನ್ನು ಅವಳು ಅರಿತುಕೊಂಡಿದ್ದಳು. ಅಳಿಯ ಕೆಲಸಕ್ಕೆ ಹೋಗೋದನ್ನು ಬಿಟ್ಟು ಪೂರ್ತಿಯಾಗಿ ಕುಡಿತಕ್ಕೆ ಅಂಟಿಕೊಂಡಿದ್ದ. ಕೆಲಸಕ್ಕೆ ಹೋಗು ಅಂತ ರಾಜಿ ಗಂಡನನ್ನು ಒತ್ತಾಯಿಸಿದಾಗ ಆತ ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. ‘ನಿಮ್ಮಮ್ಮನ್ನ ತಂದ್ಹಾಕು ಅಂತ ಹೇಳು. ಒಬ್ಬ … Read more

ಸ್ನೇಹ ಭಾಂದವ್ಯ (ಭಾಗ 5): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಇತ್ತ ಸಂಜೆ ಆಫೀಸಿನಿಂದ ಮನೆಗೆ ಎಂದ ರಾಜೇಶ ತುಂಬಾ ಖುಷಿಯಾಗಿರುವದನ್ನು ಗಮನಿಸಿದ ಪದ್ಮಮ್ಮ ಏನೋ ರಾಜೇಶ ಇವತ್ತು ತುಂಬಾ ಖುಷಿಯಾಗಿದೆಯಲ್ಲೋ ಏನಾದರೂ ಲಾಟರಿ ಹೊಡೆಯಿತೇನೋ ಎಂದಳು. ಆಗ ರಾಜೇಶನಿಗೆ ಬೇಸರವಾಗಿ ಹೋಗಮ್ಮ ನಿನಗ್ಯಾವಾಗಲು ದುಡ್ಡಿನದೇ ಚಿಂತೆ ಎನ್ನುತ್ತಾ ತನ್ನ ರೂಮಿಗೆ ಹೋದ. ಅವನಿಗೆ ಬೇಗ ನಿದ್ದೆ ಬರದೆ ತನ್ನ ಕಾಲೇಜಿನ ದಿನಗಳು ನೆನಪಾದವು. ತನ್ನ ಸಹಪಾಠಿಯಾದ ಸುನಿತಾಳನ್ನು ತುಂಬಾ ಪ್ರೀತಿಸುತ್ತಿದ್ದ. ದಿನಾ ಅವಳನ್ನು ನೋಡುತ್ತಾ ತನ್ನ ಮನದಲ್ಲಿರೋದನ್ನ ಅವಳಿಗೆ ಹೇಳಬೇಕು ಅಂತ ಎಷ್ಟೊಂದು ಬಾರಿ ಪ್ರಯತ್ನಿಸಿದರೂ … Read more

ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು … Read more

ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ … Read more

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…)  ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ … Read more

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   … Read more

ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…) ಮರುದಿನ ಎಂದಿನಂತೆಯೆ ಗೆಳತಿಯರಿಬ್ಬರು ಅಂದುಕೊಂಡಂತೆಯೇ ಅದೇ ಮಾವಿನ ಮರದ ಕೆಳಗೆ ಭೇಟಿಯಾದರು. ಆಗ ರೇಖಾಳೆ ಮಾತಿಗಾರಂಭಿಸಿದಳು. ಏ ಸುಧಾ ಈಗಾಗಲೇ ಕಾಲೇಜ್ ಅಡ್ಮೀಷನ್ ಶುರು ಆಗಿ ನಾಲ್ಕೈದು ದಿನಗಳಾಗಿವೆ. ಇನ್ನು ಹತ್ತು ದಿನದೊಳಗಾಗಿ ನಾವು ಪಟ್ಟಣಕ್ಕೆ ಹೋಗಿ ಅಡ್ಮೀಷನ್ ಮಾಡಿಸಿ ಬರಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೌದು ಕಣೆ ರೇಖಾ ಆದಷ್ಟು ಬೇಗ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಕಾಲೇಜನ್ನ ಮರೆತು ಮನೆಯಲ್ಲಿದ್ದ ಬಿಡಬೇಕಾಗುತ್ತದೆ ಎಂದಳು. ಈಗೇನು ಮಾಡೋದು ಅಂತ ಮೊದಲು ಹೇಳು ಸುಧಾ … Read more

ಕೆಂಗುಲಾಬಿ (ಭಾಗ 16): ಹನುಮಂತ ಹಾಲಿಗೇರಿ

    (ಇಲ್ಲಿಯವರೆಗೆ) ಜನನಿಬಿಡ ಮಾರುಕಟ್ಟೆಯಲ್ಲಿ ರಸ್ತೆಯ ಎರಡು ಬದಿಗೆ ಶಾರದೆಗಾಗಿ ಕಣ್ಣು ಹಾಯಿಸುತ್ತಾ ನಡೆದಿದ್ದಾಗ ದೀಪಾಳ ಹಿಂದಿನಿಂದ ದೊಡ್ಡ ಹೊಟ್ಟೆಯ ಮುದಿ ಹೆಂಗಸೊಂದು ಧಾವಿಸಿ ಮುಂದೆ ಬಂದಿತು. ನಾವಿಬ್ಬರು ಒಂದು ಕ್ಷಣ ದಂಗುಗೀಡಾದೆವು. ಸ್ವಲ್ಪ ಹೊತ್ತಿನಲ್ಲಿ ದೀಪಾ ಸಾವರಿಸಿಕೊಂಡು ಆ ಮುದಿ ಮಹಿಳೆಯನ್ನು ಸಮಾಧಾನಿಸಿಕೊಂಡು ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟೆಯ ಹತ್ತಿರಕ್ಕೆ ಕರೆದುಕೊಂಡು ಬಂದಳು. ಮುಂಗಟ್ಟೆ ಮೇಲೆ ಕುಳಿತು ನಿಮಿಷಗಳೇ ಉರುಳಿದ್ದರೂ ಆ ಮುದಿ ಹೆಂಗಸು ಜೋರಾಗಿ ಉಸಿರಾಡುತ್ತಲೆ ಇತ್ತು. ಆಕೆ ತಡಬಡಾಯಿಸುತ್ತಲೇ ಬಯ್ಯಲು ಬಾಯ್ತೆರೆದಳು. … Read more