ಗಿಗ್ ಆರ್ಥಿಕತೆ ಹಾಗೂ ನಿರುದ್ಯೋಗ ನಿವಾರಣೆಗೆ ನವ ದಾರಿ: ನಿಂಗಪ್ಪ ಹುತಗಣ್ಣವರ

ಇಂದಿನ ಜಗತ್ತಿನಲ್ಲಿ ಉದ್ಯೋಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಹಿಂದಿನ ದಿನಗಳಲ್ಲಿ ಜನರು ಒಂದು ಸಂಸ್ಥೆಯಲ್ಲಿ ದೀರ್ಘಕಾಲ ಸ್ಥಿರ ಉದ್ಯೋಗ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ತಂತ್ರಜ್ಞಾನ ಕ್ರಾಂತಿ, ಡಿಜಿಟಲ್ ಪ್ಲಾಟ್ಫಾರ್ಮ್ಗಳ ವಿಸ್ತರಣೆ ಮತ್ತು ಆನ್ಲೈನ್ ಜಗತ್ತಿನ ಪ್ರಭಾವದಿಂದ ಉದ್ಯೋಗದ ಮಾದರಿ ಸಂಪೂರ್ಣವಾಗಿ ಬದಲಾಗಿದೆ. ಈ ಹೊಸ ಉದ್ಯೋಗ ಮಾದರಿಯನ್ನು ಗಿಗ್ ಆರ್ಥಿಕತೆ ಎಂದು ಕರೆಯಲಾಗುತ್ತದೆ. “Gig” ಎಂಬ ಪದವು ಸಂಗೀತ ಕ್ಷೇತ್ರದಲ್ಲಿ ತಾತ್ಕಾಲಿಕ ಪ್ರದರ್ಶನವನ್ನು ಸೂಚಿಸಲು ಬಳಸಲಾಗುತ್ತಿತ್ತು. ಈಗ ಅದನ್ನು ತಾತ್ಕಾಲಿಕ, ಪ್ರಾಜೆಕ್ಟ್ ಆಧಾರಿತ ಅಥವಾ … Read more

‘ಎದೆ ತುಂಬಿ ಹಾಡಿದ ಕವಿ ಜಿ. ಎಸ್ ಶಿವರುದ್ರಪ್ಪ’: ಡಾ. ಸುಶ್ಮಿತಾ. ವೈ.

ನವೋದಯ ಕವಿ ದಿಗ್ಗಜರುಗಳ ಸಾಲಿನಲ್ಲಿ ‘ಬೆಳಕಿನ ಮನೆಯ ಕವಿ’ ಜಿ.ಎಸ್.ಎಸ್ ಅವರದ್ದೂ ಮಹತ್ವದ ಹೆಸರು. ಇವರು ತಮ್ಮ ಹೈಸ್ಕೂಲಿನ ದಿನಗಳಿಂದಲೇ ಚಿಕ್ಕ ಚಿಕ್ಕ ಕವಿತೆಗಳನ್ನು ಬರೆಯುತಿದ್ದರು. ಆನಂತರದಲ್ಲಿ ಗಳಗನಾಥ, ವೆಂಕಟಾಚಾರ್ಯ, ಕುವೆಂಪು, ಅನಕೃ, ಶಿವರಾಮ ಕಾರಂತರ ಬರಹಗಳು ಸಾಹಿತ್ಯದ ಬಗೆಗೆ ಅವರಲ್ಲಿ ಪ್ರೀತಿ, ಆಸಕ್ತಿಯನ್ನು ಹುಟ್ಟಿಸಲು ಕಾರಣವಾದವು. ಅವರು ಕಾಲೇಜಿನ ದಿನಗಳಲ್ಲಿ ಅನುವಾದಿಸಿದ ‘ಥಾಮಸ್ ಗ್ರೇ’ ಕವಿಯ ಕವಿತೆಗೆ ಅಧ್ಯಾಪಕರಾಗಿದ್ದ ಜಿ.ಪಿ ರಾಜರತ್ನಂ ಅವರಿಂದ ಪ್ರಶಂಸೆಯೂ ದೊರಕಿತ್ತು. ಅದು ಪ್ರಕಟವಾಗಿ ಕಾವ್ಯ ರಚನೆಗೆ ಹೊಸ ಹುಮ್ಮಸ್ಸು ದೊರೆಯಿತು. … Read more

ಮಳೆಯ ಜೋಕಾಲಿಯಲಿ ಜೋಗದಲಿ…..: ಬಿ.ಕೆ.ಮೀನಾಕ್ಷಿ, ಮೈಸೂರು.

ಜೋಗ್ನಲ್ಲಿ ಫಾಗ್ ನೋಡಬೇಕೆಂದು ಆಸೆಯಾಗಿ, ಆ ಆಸೆಯನ್ನು ದಮನಿಸಲಾಗದೆ ಮೈಸೂರಿನಿಂದ ಹೊರಟೇ ಬಿಟ್ಟೆವು. ತಾಳಗುಪ್ಪ ರೈಲು ಹತ್ತಿ ಹೊರಟಿದ್ದು. ರಾತ್ರಿ ಹೊತ್ತು, ಸ್ಲೀಪರ್ ಕೋಚು. ಬೇಜಾರು. ಹೊರಗಡೇದೇನೂ ನೋಡೋದಕ್ಕಾಗಲ್ಲ, ಕಣ್ತುಂಬಿಕೊಳ್ಳೋಕಾಗಲ್ಲ! ಅಲ್ಲಾರೀ ನನಗೇನನಿಸುತ್ತದೆ ಅಂದ್ರೆ ಈ ಜನ, ಕಿಟಕಿಯಿಂದ ಆಚೆ ನೋಡುತ್ತಾ ಕೂರದೆ ಅದು ಹೇಗಾದರೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಾರೆ ಅಂತ?! ನಿಮಗೂ ಈ ತರ ಯೋಚನೆ ಬರುತ್ತದೆ ತಾನೇ? ಹ್ಞಾಂ! ಸರಿಯಾಗಿ ಯೋಚಿಸಿದ್ದೀರಿ. ಸುತ್ತ ಇರೋರೆಲ್ಲ ಗೊರಕೆ ಆಸಾಮಿಗಳೇ. ನಾನಿನ್ನೇನು ಮಾಡಲಿ? ನಾನೂ ಹಾಗೇ ಮುದುಡಿಕೊಂಡೆ … Read more

ನೂಕುನುಗ್ಗಲು – ಕಾಲ್ತುಳಿತ: ಚಂದಕಚರ್ಲ ರಮೇಶ ಬಾಬು

ಜೂನ್ ೩ ತಾರೀಕಿನ ರಾತ್ರಿ ೧೧ ಗಂಟೆ. ಬೆಂಗಳೂರಿನ ಕ್ರಿಕೆಟ್ ತಂಡವೆನಿಸಿದ ರಾಯಲ್ ಛಾಲೆಂಜರ್ಸ್ ಮತ್ತು ದೆಹಲಿಯ ಡಿಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಫೈನಲ್ಸ್ ಪಂದ್ಯದ ಆಖರಿ ಕ್ಷಣಗಳು. ಅಹಮದಾಬಾದಿನಲ್ಲಿ ಕೂತ ಸುಮಾರು ೯೧ ಸಾವಿರ ಪ್ರೇಕ್ಷಕರು, ಟಿವಿ ತೆರೆಗಳಿಗ ಅಂಟಿಕೊಂಡು ಕೂತು ಕಾಯುತ್ತಿದ್ದ ಲಕ್ಷಗಟ್ಟಲೆ ವೀಕ್ಷಕರು ಕಾತರದಿಂದ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಅಲ್ಲಿಯವರೆಗೆ ಮೂರು ಬಾರಿ ಫೈನಲ್ಸ್ ಗೆ ಬಂದರೂ ಟ್ರೋಫಿ ಗೆಲ್ಲದ ಬೆಂಗಳೂರಿನ ತಂಡ ಕೊನೆಗೂ ಐಪಿಲ್ ಟ್ರೋಫಿಯನ್ನು ಕೈ ವಶಮಾಡಿಕೊಂಡಿತು. ಕೆಲ ಆಟಗಾರರ ಆನಂದ … Read more

ಕಾಕತಾಳೀಯಗಳ ಸರಣಿಯಲ್ಲೇ ಸ್ತ್ರೀ ಪೀಡನೆಗೆ ಮದ್ದು ಅರೆದ ಸು ಫ್ರಂ ಸೋ: ಡಾ. ಅಭಿಲಾಷ ಹೆಚ್ ಕೆ

ಬಹಳ ದಿನಕ್ಕೆ‌ ಒಂದೊಳ್ಳೆ‌ ಫಿಲ್ಮ್ ನೋಡ್ದೆ, ತುಂಬಾ‌ ಕಾಮಿಡಿ‌ ಇದೆ‌ ನಕ್ಕು‌ನಕ್ಕು ಸಾಕಾಯ್ತು ಅಂದ್ರು ಕೆಲವರು. ನಿಜ ನೋಡ್ಲೇಬೇಕಾದ ಸಿನೆಮಾ‌ ನೋಡು‌ ಅಭಿ‌ ಅಂತ ಹಕ್ಕೊತ್ತಾಯ ಮಾಡಿದರು ಗೆಳೆಯರು. ಆದರೆ ಇವರ್ಯಾರು ಸಿನೆಮಾದ ಕಥೆಯ ಸಣ್ಣ ಎಳೆಯನ್ನೂ ಬಿಟ್ಟುಕೊಡಲಿಲ್ಲ. ಫೈನಲಿ‌ ನಾನೂ ಸಿನೆಮಾ ನೋಡಿದೆ. ಸಿನೆಮಾದ ತಾಂತ್ರಿಕ ಮಿತಿಗಳನ್ನು ಕುರಿತು ಹೇಳೋದು ನನ್ನ ಉದ್ದೇಶ ಅಲ್ಲ. ಆ ಕೆಲಸ ಸಿನೆಮಾ ಕ್ಷೇತ್ರದ ಪರಿಣಿತರಿಗೆ ಬಿಟ್ಟದ್ದು. ಒಬ್ಬ ಸಾಮಾನ್ಯ ಸಹೃದಯ ಪ್ರೇಕ್ಷಕಳಾಗಿ ‘ಸು ಫ್ರಂ ಸೋ’ ಸಿನೆಮಾ ನನ್ನಲ್ಲಿ … Read more

ಮಕ್ಕಳ ಹಕ್ಕುಗಳ ಗ್ರಂಥಾಲಯ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ: ವಾಣಿ ಚೈತನ್ಯ

ಗ್ರಂಥಾಲಯ ಎಂದರೇನೆಂದು ಕೇಳಿದ್ದೇವೆ, ಮಕ್ಕಳ ಹಕ್ಕುಗಳ ಗ್ರಂಥಾಲಯವೆಂದರೆ ಏನು ಎಂದು ಎಲ್ಲರೂ ಯೋಚಿಸಬಹುದು. ವಿಶ್ವಸಂಸ್ಥೆ ರಚಿಸಿ, ಭಾರತವು ಸಹಿ ಮಾಡಿದ ಮಕ್ಕಳ ಹಕ್ಕುಗಳು ಇರುವುದೇ ಎಲ್ಲರಿಗೂ ಗೊತ್ತಿಲ್ಲದೇ ಇರುವಾಗ, ಮಕ್ಕಳ ಹಕ್ಕುಗಳ ಗ್ರಂಥಾಲಯ ಬಗ್ಗೆ ಸಾರ್ವತ್ರಿಕ ತಿಳುವಳಿಕೆ ಇನ್ನೊಂದು ಹೊಸ ಸವಾಲು. ಸಾಮಾನ್ಯವಾಗಿ ಗ್ರಂಥಾಲಯವೆಂದರೆ, ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಮನೆ. ಪುರಾತನ ಕಾಲದಿಂದ, ಮಾನವರು ಅನುಭವಿಸಿ ಕಲಿತ, ವಿಜ್ಞಾನಿಗಳು ಪ್ರಯೋಗಗಳಿಂದ ಕಂಡುಕೊಂಡ ಜ್ಞಾನ ಭಂಡಾರಗಳ, ಮಾಹಿತಿಗಳ ಮೂಲ. ಶಾಲೆಗೆ ದಾಖಲಾಗಿ ಪಠ್ಯ ಪುಸ್ತಕಗಳನ್ನು ಓದುವುದೇ ದುಸ್ತರವಾಗಿದ್ದ ಕಾಲದಲ್ಲಿ … Read more

ಬುದ್ಧನ ಕಥೆಯಲ್ಲಿ ‘ಸ್ತ್ರೀ’: ಡಾ. ಎಚ್.ಎಸ್. ಸತ್ಯನಾರಾಯಣ

ಮನುಕುಲದ ಮಹಾವ್ಯಕ್ತಿಗಳಲ್ಲಿ ಗೌತಮಬುದ್ಧನ ಸ್ಥಾನ ಅತ್ಯಂತ ಎತ್ತರದ್ದು, ಹಿರಿದಾದುದು. ಅವನ ಉನ್ನತ ವ್ಯಕ್ತಿತ್ವವು ಯಾವ ಹಂತಕ್ಕೇರಿದೆಯೆಂದರೆ ಆತ ಅವತಾರ ಪುರುಷನೆಂದು ಬಲವಾಗಿ ನಂಬುವಷ್ಟರಮಟ್ಟಿಗೆ! ಈಗಲೂ ಅನೇಕರಲ್ಲಿ ದಶಾವತಾರಗಳಲ್ಲಿ ಬುದ್ಧಾವತಾರವೂ ಒಂದೆಂಬ ನಂಬುಗೆ ಬಲವಾಗಿ ನೆಲೆಯೂರಿದೆ. ಆದರೂ ಬುದ್ಧನನ್ನು ಒಳಗೊಂಡು ರಚಿತವಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ತೀರಾ ಕಡಿಮೆ. ಲೆಕ್ಕಮಾಡಿದರೆ ಸುಮಾರು ಮುವತ್ತೈದು ಪ್ರಕಟಣೆಗಳ ಶೀರ್ಷಿಕೆಯನ್ನು ಪಟ್ಟಿ ಮಾಡಬಹುದೇ ಹೊರತು ಓದುಗರ ನೆನಪಿನಲ್ಲುಳಿಯುವ ಗಟ್ಟಿ ಕೃತಿಗಳು ಕೆಲವು ಮಾತ್ರ! ಅದರಲ್ಲಿಯೂ ಬುದ್ಧನಿಗೆ ಸಂಬಂಧಿಸಿದ ವೈಚಾರಿಕ ಕೃತಿಗಳೂ, ಅನುವಾದಗಳೂ ಪಾಲು … Read more

“ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು”: ಡಾ. ವೀಣಾಕುಮಾರಿ ಎ. ಎನ್.‌,

ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಹರಡುವ ರೋಗಗಳಾಗಿವೆ. ʼಝುನೋಸಿಸ್ʼ ಎಂಬ ಪದವು ರುಡಾಲ್ಫ್ ವಿರ್ಚೊ (Rudolph Virchow) ಎಂಬಾತನಿಂದ 1880ರಲ್ಲಿ ಪರಿಚಯಿಸಲ್ಪಟ್ಟಿದೆ. ʼಝೂನೋಸಿಸ್ʼ ಎಂಬ ಪದವು ಮೂಲತಃ ಗ್ರೀಕ್ ಭಾಷೆಯ ಪದವಾಗಿದ್ದು, ʼಝೂನೋʼ ಎಂದರೆ ʼಪ್ರಾಣಿʼ ಹಾಗೂ ʼನೊಸೆಸ್ʼ ಎಂದರೆ ʼಅನಾರೋಗ್ಯʼ ಎಂದರ್ಥ. ಇವುಗಳು ವೈರಸ್ ಗಳು (ರೇಬೀಸ್‌, ಆರ್ಬೋವೈರಸ್‌ ಸೋಂಕುಗಳು, ಕ್ಯಾಸನೂರ್‌ ಫಾರಸ್ಟ್‌ ಡಿಸೀಸ್/ಮಂಗನ ಕಾಯಿಲೆ, ಹಳದಿ ಜ್ವರ, ಇನ್ ಫ್ಲುಯೆಂಜಾ), ಬ್ಯಾಕ್ಟೀರಿಯಾಗಳು (ಉದಾಹರಣೆ: ಆಂಥ್ರಾಕ್ಸ್‌, ಬ್ರುಸೆಲ್ಲೋಸಿಸ್‌, ಪ್ಮೇಗ್‌, ಲೆಪ್ಟೋಸ್ಪೈರೋಸಿಸ್‌, … Read more

ಬಾ ಬಾ ಓ ಬೆಳಕೇ…..: ಚಂದಕಚರ್ಲ ರಮೇಶ ಬಾಬು

ಚರಿತ್ರೆ ಪುನರಾವೃತಗೊಳ್ಳುತ್ತದೆಂದು ಓದಿ ತಿಳಿದಿದ್ದರೂ, ಹೇಳಿದವರಿಂದ ಕೇಳಿದ್ದರೂ ಅದು ಇಷ್ಟುಬೇಗ ತನ್ನ ಆವರಿಸುತ್ತದೆ ಎಂದು ಮತ್ತು ಅದರ ಮಿಕ ತಾನಾಗಬೇಕಾಗುತ್ತದೆ ಎನ್ನುವ ಸತ್ಯ ಜಯತೀರ್ಥನಿಗೆ ಕಹಿಯೂಟವಾಗಿತ್ತು.ಮೊನ್ನೆ ವರೆಗೂ ತನ್ನ ಸಂಪತ್ತೇನು, ಮೆರೆದಾಟವೇನು, ಕಂಡ ಕನಸುಗಳೇನು ? ಒಂದೇ ಎರಡೇ? ಜೀವನವಿಡೀ ಕಾಮನಬಿಲ್ಲಿನ ಕನಸಿನಲ್ಲೇ ಕಳೆದುಹೋಗುತ್ತದೆ ಎಂದೆಣಿಸಿ, ಸೊಕ್ಕಿನಲ್ಲಿ ಮುಕ್ಕುತ್ತಿದ್ದ ಅವನಿಗೆ ಆರ್ಥಿಕ ಮುಗ್ಗಟ್ಟು ಲಕ್ವದ ತರ ಬಂದೆರಗಿತ್ತು. ಇಂಥ ಮುಗ್ಗಟ್ಟು ಶುರುವಾಗಿ ಒಂದು ವರ್ಷವಾಗಿದ್ದರೂ ಅವನು ಮತ್ತು ಅವನ ಹೆಂಡತಿ ಅದಕ್ಕೆ ಹೊರತಾಗೇ ಉಳಿದಿದ್ದರು. ಶುರುವಾದ ವರ್ಷಗಳಲ್ಲಿ … Read more

ಅನಿರೀಕ್ಷಿತ ಬದಲಾವಣೆಗಳ ಬೆನ್ನು ಏರಿ..: ವಿಜಯ್ ಕುಮಾರ್ ಕೆ. ಎಂ.

ಬದಲಾವಣೆಗಳು ಅನಿರೀಕ್ಷಿತ, ಇನ್ನಷ್ಟು ಬದಲಾವಣೆಗಳು ನಿರೀಕ್ಷಿತ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳಲ್ಲಿ ಹೆಚ್ಚು ದೀರ್ಘಾವಧಿ ಆಯಸ್ಸು ಬಯಸಲು ಕಷ್ಟವಾಗಬಹುದು ಆದರೆ ನಿರೀಕ್ಷಿತ ಬದಲಾವಣೆಗೆ ಒಂದಷ್ಟು ಆಯಸ್ಸು ಹೆಚ್ಚು ಇರುತ್ತದೆ. ರಾತ್ರೋರಾತ್ರಿ ಸಿಕ್ಕ ಲಾಟರಿಯ ಜಯ, ತಾನು ಕಂಡು ಕೇಳರಿಯದಷ್ಟು ಸಿಕ್ಕ ಹಣ ಮತ್ತು ಒಡವೆ, ನಿರೀಕ್ಷೆಯಿಲ್ಲದೆ ದೊರೆತ ಗೆಲುವು, ಬಯಸದೆ ಸಿಕ್ಕ ಮೆಚ್ಚುಗೆ ಇದೆಲ್ಲವೂ ಮನಸ್ಸಿನಲ್ಲಿ ಇನ್ನಿಲ್ಲದ ಸಂತೋಷ ನೀಡಿತಾದರೂ ಅದರ ಹಿಂದೆ ಬರುವ ಒಂದಷ್ಟು ಜವಾಬ್ದಾರಿ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಇದೆಲ್ಲವೂ ಬಹು ಮುಖ್ಯವಾಗುವುದರಲ್ಲಿ ಸಂಶಯವಿಲ್ಲ. ಪ್ರೌಢಾವಸ್ಥೆಗೆ … Read more

ಅಂಕ ಪ್ರಯಾಣ: ನಾಗಸಿಂಹ ಜಿ ರಾವ್

ಸಿಂಹಾವಲೋಕನ 3 “ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ … Read more

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ): ನಾಗಸಿಂಹ ಜಿ ರಾವ್

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ)ರಚನೆ: ನಾಗಸಿಂಹ ಜಿ ರಾವ್ಪಾತ್ರಗಳು: ಫೇಸ್ ಬುಕ್ಇನ್ಸಾಟಾಗ್ರಾಂವಾಟ್ಸ್ಆಪ್ಬಾಲಕಿ / ಬಾಲಕ (ಈ ನಾಟಕವನ್ನು ಬೀದಿನಾಟಕ, ರಂಗನಾಟಕ ಹಾಗೂ ಆತ್ಮೀಯ ರಂಗಭೂಮಿಯಲ್ಲೂ ಪ್ರದರ್ಶಿಸಬಹುದು) (ದೃಶ್ಯ ೧)ಹಾಡು:ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ ಮೋಹಕ ಬಾಲಗೋಮುಖ ವ್ಯಾಘ್ರನ ಬಣ್ಣದಜಾಲ ಕಾಮುಕ ಹರಡಿದ ಸುಂದರ ಬಲೆಲೈಕು ಕಾಮೆಂಟಿಗೆಆದರೆ ಮರುಳುಮುಗಿದೇ ಹೋಯಿತು ಬಾಲ್ಯದ ಕೊಲೆದೂರವಿರುಅದು ವಿಷದ ಹುಳು ಉತ್ತಮರೀತಿಯಲಿ ಬಳಸೋ ಜಾಣನೆನಪಿಡುಅದು ಸಾಮಾಜಿಕಜಾಲತಾಣಮರುಳಾಗದಿರು ಬಣ್ಣದ ಮಾತಿಗೆಅತಿ ಬಳಕೆ ಒಳ್ಳೆಯದಲ್ಲ ಬದುಕಿಗೆ ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ … Read more

ಲೋಕದ ಡೊಂಕ ತಿದ್ದುವ ಬದಲು….!!: ಶೋಭಾ ಶಂಕರಾನಂದ

ಜಗತ್ತಿನಲ್ಲಿ ಇತರರನ್ನು ತಿದ್ದುವ ಅಧಿಕಾರ ಮತ್ತು ಶ್ರಮ ಬೇಡ. ಒಬ್ಬ ವ್ಯಕ್ತಿ ಒಳ್ಳೆಯವರು/ ಕೆಟ್ಟವರು ಎಂದು ನಿರ್ಧಾರ ಮಾಡುವ ಕಷ್ಟವೂ ನಮಗೆ ಬೇಡ. ಒಬ್ಬರಿಗೆ ಒಳ್ಳೆಯವರಾಗಿ ಕಂಡವರು ಇನ್ನೊಬ್ಬರಿಗೆ ಕೆಟ್ಟವರಾಗಿ ಕಾಣುಬಹುದು ಅಥವಾ ಇನ್ನೊಬ್ಬರಿಗೆ ಕೆಟ್ಟವರಾಗಿ ಕಂಡವರು ಮತ್ತೊಬ್ಬರಿಗೆ ಒಳ್ಳೆಯವರಾಗಿ ಕಾಣಬಹುದು. ಅದು ಆಯಾ ಸಂದರ್ಭಕ್ಕೆ ಅನ್ವಯಿಸಿರುತ್ತದೆ. ವಸ್ತುಗಳಿಗೆ ಕೊಟ್ಟಷ್ಟು ಬೆಲೆಯನ್ನು ನಾವು ಇಂದು ವ್ಯಕ್ತಿಗಳಿಗೆ ನೀಡುತ್ತಿಲ್ಲ. ಕಾರು ಬಂಗಲೆ ಐಷಾರಾಮಿ ಜೀವನಕ್ಕಾಗಿ ಕಾತರಿಸುತ್ತೇವೆಯೇ ಹೊರತು, ವ್ಯಕ್ತಿಗಳಿಗೆ ಅಲ್ಲ ಎನ್ನುವುದು ಹಲವಾರು ಸಂದರ್ಭದಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ … Read more

“ಯುದ್ದಕ್ಕೂ ಸಿದ್ದ ಶಾಂತಿಗೂ ಬದ್ದ”: ಚಲುವೇಗೌಡ ಡಿ ಎಸ್

ನಾವು ಭಾರತೀಯರು, ಭಾರತಾಂಬೆಯ ಮಡಿಲಲಿ ಜೀವಿಸುತ್ತಿರುವ ಮಕ್ಕಳು, ಶಾಂತಿ, ಸೌಹಾರ್ದತೆ, ತ್ಯಾಗ, ಕರುಣೆ, ಮಮತೆ, ಏಕತೆ, ಧರ್ಮ ಸಹಿಷ್ಣುತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಪ್ರಜೆಗಳುಳ್ಳ ಬೃಹತ್ ರಾಷ್ಟ್ರ ನಮ್ಮದು. ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ, ಅರಸಿ ಬಂದವರಿಗೆ ಆಶ್ರಯ ನೀಡುವ, ಮಾನವೀಯ ಗುಣಗಳನ್ನು ಹೊಂದಿರುವ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ನಮ್ಮ ಪಾಡಿಗೆ ಯಾವ ರಾಷ್ಟ್ರದ ತಂಟೆಗೂ ಹೋಗದೆ ಶಾಂತಿಯಿಂದ ಬದುಕು ಸಾಗಿಸುತ್ತಿದ್ದೆವು ಆದರೂ ನಮ್ಮ ಭಾರತಾಂಬೆಯ ನೆಲಕ್ಕೆ ಕಾಲಿಟ್ಟ ಉಗ್ರರಕ್ಕಸರು ಭಾರತಮಾತೆಯ ಪುತ್ರರ ಕೊಂದು … Read more

ಎಕ್ಸ್ಪೀರಿಯೆನ್ಸ್ ಅಂದ್ರೆ ಸುಮ್ನೆ ಅಲ್ಲ: ಮಧುಕರ್ ಬಳ್ಕೂರು

“ಬಿಡು, ಇದೆಲ್ಲ ಕಾಮನ್, ಒಂದ್ ಎಕ್ಸ್ಪೀರಿಯೆನ್ಸ್ ಅಷ್ಟೇ. ಇದರಲ್ಲೇನು ಹೋದಂಗಾಯಿತು..?” “ಸುಮ್ಮನೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತ ಮಾಡ್ತಿದೀನಿ ಮತ್ತಿನ್ನೇನಿಲ್ಲ. ಇದರಲ್ಲೇನು ಹೋಗೋದಿದೆ..?” ಒಂದ್ ನಿಮಿಷ… ಎಕ್ಸ್ಪೀರಿಯೆನ್ಸ್ ಅನ್ನೋದೆ ಒಂದ್ ದೊಡ್ಡ ವಿಚಾರ. ಇದನ್ನೇನು ಬಿಡು ಕಾಮನ್ ಅಂತ ಹೇಳೋದು..? ಎಕ್ಸ್ಪೀರಿಯೆನ್ಸ್ ಅನ್ನೋದೆ ಪ್ರಾಕ್ಟಿಕಲ್ ಜ್ಞಾನ. ಇನ್ನು ಅದರಲ್ಲೇನು ಹೋದಂಗಾಯಿತು ಅನ್ನೋದು..? ಏನೇ ಮಾಡಿದ್ರು ಎಕ್ಸ್ಪೀರಿಯೆನ್ಸ್ ಸಿಗ್ತದೆ ಅಂದ ಮೇಲೆ ಎಕ್ಸ್ಪೀರಿಯೆನ್ಸ್ ಗೆ ಅಂತಾನೇ ಮಾಡ್ತಿದೀನಿ ಅನ್ನೋದರಲ್ಲಿ ಅರ್ಥ ಇದೆಯಾ..? ಇಲ್ಲಾ ಅಲ್ವಾ.. ಹಾಗಿದ್ರೆ ಯಾಕೆ ಇಂತಹ … Read more

ಚುಂಬಕ ಚಂದ್ರಮನೊಂದಿಗೆ ಚಲಿಸುತ್ತಾ….: ಶೋಭಾ ಶಂಕರಾನಂದ

ಪ್ರತಿನಿತ್ಯ ನಾವು ನೋಡಬಹುದಾದ ಪ್ರತ್ಯಕ್ಷ ದೈವಗಳಾದ ಸೂರ್ಯ ಮತ್ತು ಚಂದ್ರ ನಮ್ಮ ಬದುಕಿನಲ್ಲಿ ಅಗಾಧ ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ಚಂದ್ರನಿಗೆ ವೇದಗಳಲ್ಲಿ ಅಧಿಕ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಆತನನ್ನು ವೇದಗಳಲ್ಲಿ ‘ಸೋಮದೇವ’ ಎಂದು ಕರೆದಿದ್ದಾರೆ. ಪವಮಾನ ಸೂಕ್ತದಲ್ಲಿ ಅದರ ಹೆಚ್ಚಿನ ಮಾಹಿತಿ ನೋಡಬಹುದು. “ಚಂದ್ರಮಾ ಮನಸೋ ಜಾತಃ” ಎಂದು ಒಂದು ಉಲ್ಲೇಖವಿದೆ. ಚಂದ್ರ ನಮ್ಮ ಮನಸ್ಸಿಗೆ ಅಧಿಪತಿ ಎಂದು ಇದರ ಅರ್ಥ. ನಮ್ಮ ಮನಸ್ಸು ನೆಮ್ಮದಿಯಿಂದ ಇಲ್ಲವೆಂದಾದರೆ, ಚಂದ್ರನ ಧ್ಯಾನ ಮಾಡಬೇಕು. ಏಕೆಂದರೆ ಭೂಮಿಗೂ ಚಂದ್ರನಿಗೂ ನಡುವೆ ಒಂದು … Read more

ಅಂಗವಿಕಲತೆ: ಸಮಾಜದಲ್ಲಿ ಮುಂದುವರಿದ ಊಹಾಪೋಹಗಳ ಓರೆಹೊರೆ: ರಶ್ಮಿ ಎಂ. ಟಿ.

ಅಂಗವಿಕಲತೆ ಎಂಬುದು ಕೇವಲ ವೈದ್ಯಕೀಯ ಅಥವಾ ಶಾರೀರಿಕ ಪರಿಸ್ಥಿತಿಯಲ್ಲ, ಅದು ಹಲವಾರು ಸಾಮಾಜಿಕ ಮೂಡನಂಬಿಕೆಗಳು, ತಪ್ಪು ತಿಳುವಳಿಕೆಗಳು ಮತ್ತು ಅನಾವಶ್ಯಕ ಊಹಾಪೋಹಗಳಿಂದ ಕೂಡಿರುವ ಒಂದು ಸಾಂಸ್ಕೃತಿಕ ಅನುಭವವೂ ಹೌದು. ಈ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾಗಿದ್ದರೂ, ಅಂಗವಿಕಲತೆಯನ್ನು ಇಂದು ಕೂಡ ಕೆಲವು ಮಂದಿ “ಪೂರ್ವ ಜನ್ಮದ ಶಾಪ”, “ತಾಯಿ-ತಂದೆ ಮಾಡಿದ ಕರ್ಮ”, ಅಥವಾ “ಗಾಳಿ ಸೋಕು” ಎಂಬ ನಂಬಿಕೆಗಳ ಮೂಲಕ ನೋಡುತ್ತಿದ್ದಾರೆ. ಇವುಗಳೆಲ್ಲ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಕುಂದಿದ ನಂಬಿಕೆಗಳು. ಒಂದು ಕಾಲದಲ್ಲಿ ಹೆಣ್ಣು ಮಗು … Read more

ವಚನದಲ್ಲಿ ಸಸ್ಯಜೀವಶಾಸ್ತ್ರ: ರೋಹಿತ್ ವಿಜಯ್ ಜಿರೋಬೆ

ವಚನದಲ್ಲಿ ಸಸ್ಯಜೀವಶಾಸ್ತ್ರ: ಬಸವಣ್ಣನ ವಚನಗಳಲ್ಲಿ ಪ್ರಕೃತಿಯ ಜೀವಚಲನಗಳ ಅನಾವರಣ “ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,ನೆನೆಯೊಳಗಣ ಪರಿಮಳದಂತಿದ್ದಿತ್ತು,ಕೂಡಲಸಂಗಮದೇವಾ, ಕನ್ನೆಯ ಸ್ನೇಹದಂತಿದ್ದಿತ್ತು!” ಬಸವಣ್ಣನವರು ಈ ನಾಲ್ಕು ಸಾಲುಗಳಲ್ಲಿ ಬರೆದ ವಚನವನ್ನು ಮೊದಲು ಓದಿದಾಗ ಅದು ಒಂದು ಭಕ್ತಿಪೂರ್ಣ ಕಾವ್ಯವಾಗಿ ತೋರುತ್ತದೆ. ಆದರೆ ಪ್ರತಿ ಸಾಲಿನಲ್ಲಿ ಅಡಗಿರುವ ತತ್ತ್ವಗಳು ಮತ್ತು ವೈಜ್ಞಾನಿಕ ಅರ್ಥಗಳು ನಮ್ಮನ್ನು ಆಳವಾಗಿ ಆಲೋಚನೆಗೆ ತರುವುದು. ಈ ವಚನ ಕೇವಲ ಭಕ್ತಿಯ ನಿರೂಪಣೆಯಲ್ಲ; ಇದು ಪ್ರಕೃತಿಯ ಜೀವಚಲನಗಳ ಸಂವೇದನಾತ್ಮಕ ಹಾಗೂ ವೈಜ್ಞಾನಿಕ ವಿಶ್ಲೇಷಣೆ ಕೂಡ ಹೌದು. … Read more

ಅಮಾಸ ಎಂಬ ದೇವನೂರು ಮಹಾದೇವ: ಸಂತೋಷ್ ಟಿ

ನಮ್ಮ ನಡುವಿನ ಸವ್ಯಸಾಚಿ ಲೇಖಕರಲ್ಲಿ ವಿಶಿಷ್ಟವಾದ ಪ್ರತಿಭೆಯ ಛಾಪನ್ನು ಮೂಡಿಸಿದ ಬರಹಗಾರ ದೇವನೂರು ಮಹಾದೇವ ಅವರು. ಜನಸಾಮಾನ್ಯರ ಆಶೋತ್ತರಗಳಿಗೆ ಬಂಡಾಯ ಮನೋಭಾವದ ಮೂಲಕ ಸ್ವಂದಿಸಿದ ಅವರ ಹೋರಾಟ ಮತ್ತು ಭಾಷಣಗಳು ಸಾಮಾಜಿಕವಾಗಿ ಸಾಂಸ್ಕೃತಿಕ ರಾಜಕಾರಣದಲ್ಲಿ ಪರಿಣಾಮಕಾರಿ. ಅವರು ಕೃತಿಗಳ ಮೂಲಕ ಕಟ್ಟಿಕೊಡುವ ಒಳನೋಟಗಳು ಪ್ರಾದೇಶಿಕ ಸ್ಥಳೀಯ ಗ್ರಾಮೀಣರ ಜೀವನವನ್ನು ತಲಸ್ವರ್ಶಿಯಾಗಿ ಕಂಡ ಅನುಭವ ಮತ್ತು ಭಾಷೆಯ ಸ್ವರೂಪ ವಿನೂತನ ಮಾದರಿ. ಕೃತಿಗಳು ತನ್ನ ಗಾತ್ರದಲ್ಲಿ ಕಿರಿದಾದರೂ ಅವು ಉಂಟುಮಾಡಿದ ಸಾಮಾಜಿಕ ಪಲ್ಲಟಗಳ ಪರಿಣಾಮಕಾರಿ ವಿಸ್ಮಯ ಸೋಜಿಗ ಪಡುವಂತದ್ದು. … Read more

‘ಕಾಮ’

‘ಅಮ್ಮನ ಗುಡ್ಡ’ ಕವಿತೆ ಮತ್ತು ಅದೇ ಹೆಸರಿನ ಕವನ ಸಂಕಲನದಿಂದ ಐವತ್ತು ವರ್ಷಕ್ಕೂ ಮೇಲ್ಪಟ್ಟು ಕಾವ್ಯರಸಿಕರ ಮನಸ್ಸಿನಲ್ಲಿ ಉಳಿದಿರುವ ಕವಿ ಚ. ಸರ್ವಮಂಗಳ. ಈ ಸಂಕಲನವು ೧೯೮೮ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡರೂ, ಇಲ್ಲಿನ ಕೆಲವು ಕವನಗಳ ರಚನೆಯು ೧೯೬೮ರಲ್ಲಿಯೇ ನಡೆದಿದೆ. ಬಾಲ್ಯಕಾಲ ಮತ್ತು ಪ್ರೌಢ ಅನುಭವ ಪ್ರಪಂಚಗಳ ನಡುವಿನಲ್ಲಿ ಅರಳುವ ಪ್ರಜ್ಞೆಯನ್ನು ಹಿಡಿಯಲು ಯತ್ನಿಸುವ ಈ ಸಂಕಲನ ನನ್ನನ್ನು ಬಹಳ ಕಾಲದಿಂದ ಕಾಡಿದೆ. ಇದರಲ್ಲಿ ನನ್ನನ್ನು ಬಹುವಾಗಿ ಆವರಿಸಿರುವ ಕವಿತೆ ‘ಕಾಮ’. ಕವಿತೆಯ ಪಠ್ಯ ಹೀಗಿದೆ: ಕಾಮನಿಧಾನವಾಗಿ … Read more