ʼ ರೂಪಾಂತರ ʼ- ಹೊಸತರ ಹಂಬಲ: ಎಂ ನಾಗರಾಜ ಶೆಟ್ಟಿ

ಸಿನಿಮಾ ಮುಗಿದು ತೆರೆಯ ಮೇಲೆ ಕ್ರೆಡಿಟ್ಸ್‌ ಬರತೊಡಗುತ್ತದೆ. ಆದರೆ ಪ್ರೇಕ್ಷಕರು ಸೀಟು ಬಿಟ್ಟು ಕದಲುವುದಿಲ್ಲ. ಮಾತಿಲ್ಲದೆ, ಯಾವುದೋ ಗುಂಗಿಗೊಳಗಾದವರಂತೆ ಕೂತಿದ್ದು, ನಿಧಾನವಾಗಿ ಏಳುತ್ತಾರೆ. ಇದು ʼ ರೂಪಾಂತರ ʼ ಸಿನಿಮಾದ ಕುರಿತು ಬಹಳಷ್ಟನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಪ್ರೇಕ್ಷಕನ್ನು ಆವರಿಸಿಕೊಂಡರೆ, ಇನ್ನೊಂದು ತರದಲ್ಲಿ ಗೊಂದಲʼ. ರೂಪಾಂತರ ʼ ಚಿತ್ರದ ವಿಶೇಷವಿರುವುದೇ ಇಲ್ಲಿ! ಮೊದಲ- ವಿಚಿತ್ರ, ಕರಾಳ, ವಿಕೃತ- ದೃಶ್ಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ಕತೆ ಚೆನ್ನಾಗಿಲ್ಲದ್ದರೆ ಸಾಯಿಸುತ್ತೇವೆ ಎನ್ನುವ … Read more

ವೃತ್ತ ಮೀರುವ ತವಕ – ‘ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ’: ಎಂ. ನಾಗರಾಜ ಶೆಟ್ಟಿ

ವೃತ್ತ ಮೀರುವ ತವಕ – ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ಅಗ್ನಿ ಮಾಂಸದ ಕುಲುಮೆಯಲಿನನ್ನ ಕಾಯಿಸಿ ಬಣ್ಣವ ಮಾಡಿಮರಳಿ ನನ್ನ ರೂಪನೇ ಕಡೆವಏ ನನ್ನಾಳದ ಅಳುವೇನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ಎನ್ಕೆ ಹನುಮಂತಯ್ಯನವರ ಕವಿತೆ ಕೇಳುವ ʼ ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ʼ ಪ್ರಶ್ನೆಯೇ ” ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ʼ ನಾಟಕದ ಮೂರು ಪಾತ್ರಗಳ ಒಳಗುದಿ. ಚಂದ್ರಶೇಖರ್‌ ಮಾಡಿದ ಬಾರ್‌ ಸಿಂಗರ್‌ ಪಾತ್ರ ತನ್ನ ಹೆಸರನ್ನು ʼಬಾಬ್ ಮಾರ್ಲಿʼ ಎಂದು ಬದಲಾಯಿಸಿಕೊಂಡು … Read more

ನೆಲದ ಘಮಲಿನ ʼಸಿನಿಹಬ್ಬʼ: ಎಂ ನಾಗರಾಜ ಶೆಟ್ಟಿ

   ʼನೆಲದ ದನಿಗಳ ಹುಡುಕಾಟʼ ಇದು ಈ ಬಾರಿಯ ʼಸಿನಿಹಬ್ಬʼದ ವಿಷಯ. ಡಾ ಬಿ ಆರ್‌ಅಂಬೇಡ್ಕರ್‌ವಿದ್ಯಾರ್ಥಿಗಳ ಕಲ್ಯಾಣ ಸಂಘ, ಕೃಷಿ ಮಹಾವಿದ್ಯಾಲಯ, ಧಾರವಾಡ ಹಾಗೂ ಮನುಜಮತ ಸಿನಿಯಾನ ಸಹಯೋಗದಲ್ಲಿ ಧಾರವಾಡದಲ್ಲಿ ಎರಡು ದಿನಗಳ ʼಸಿನಿಹಬ್ಬʼ ಮೇ 20 ಮತ್ತು 21ರಂದು ಜರಗಿತು. ನೆಲದ ದನಿಗಳ ಹುಡುಕಾಟಕ್ಕೆ 542 ಹೆಕ್ಟೇರುಗಳ ವಿಶಾಲ ಹಸಿರು ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯದ ಆವರಣಕ್ಕಿಂತ ಸೂಕ್ತವಾದ ಜಾಗ ಇಲ್ಲವೇನೋ ಎನ್ನುವಂತಿತ್ತು ಸಿನಿಹಬ್ಬದ ಜಾಗ. ಮೇ 20 ರ ಮುಂಜಾನೆ ಆಹ್ಲಾದಕರ ವಾತಾವರಣದಲ್ಲಿ ʼಸಿನಿಹಬ್ಬʼ … Read more

ಆಳುವ ಪ್ರಭುತ್ವದ ಅಮಾನವೀಯ ನಡೆಯ ಘನಘೋರ ಚಿತ್ರಣದ ಸಿನಿಮಾ – ಫೋಟೋ: ಚಂದ್ರಪ್ರಭ ಕಠಾರಿ

ಕೊರೊನಾ ಕಾಲದ ವಲಸಿಗರ ಸಂಕಷ್ಟಗಳ ಕತೆಯ ‘ಫೋಟೋ’ ಸಿನಿಮಾ ಅಷ್ಟಾಗಿ ಪ್ರಚಾರಗೊಳ್ಳದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಯುವ ನಿರ್ದೇಶಕ ಉತ್ಸವ್ ಗೋನಾವರ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ. ಅಲ್ಲದೆ – ತನಗಿರುವ ಪ್ರತಿಭೆಯ ಜೊತೆಗೆ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಮೆರೆದಿದ್ದಾರೆ.    ಉತ್ತರಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಪುಟ್ಟ ಗ್ರಾಮದ ಬಾಲಕ ದುರ್ಗ್ಯ, ಶಾಲೆಯಲ್ಲಿದ್ದ ವಿಧಾನಸೌಧದ ಪಟ ಕಂಡು, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸುತ್ತಾನೆ. ಅದೇ ಹೊತ್ತಿಗೆ ಶಾಲೆಗೆ ಹದಿನೈದು … Read more

ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ … Read more

‘ಕಾಂತಾರ’ದೊಳಗೊಂದು ಸುತ್ತು: ಶ್ರೀಧರ ಪತ್ತಾರ, ವಿಜಯಪುರ.

ಕಾಡು, ಅದರ ಸುತ್ತಲಿನ ಜಗತ್ತು ಮತ್ತು ಭೂತಕೋಲದ ದೈವದೊಂದಿಗೆ ತಳಕು ಹಾಕಿಕೊಂಡಿರುವ ಕಾಂತಾರ ನೋಡುಗರಿಗೆ ತನ್ನೊಳಗಿನ ಭಾವವನ್ನು ಬಹಳ ಬೇಗನೆ ಬಿಟ್ಟುಕೊಡುವುದಿಲ್ಲ. ಕಾಂತಾರದ ಕತ್ತಲೆ ಬೆಳಕು, ರವ-ನಿರವಯತೆಯ ಚುಂಗುಹಿಡಿದು ಹೊರಟರೆ ಖಂಡಿತವಾಗಿಯೂ ಕಥೆಯ ಕಾಡಿನೊಳಕ್ಕೆ ಪಯಣಿಸುತ್ತೇವೆ. ನೋಡುನೋಡುತ್ತಲೇ ಅದರೊಳಗೆ ಕಳೆದುಹೋಗುತ್ತೇವೆ. ತನ್ನ ವಾದ್ಯ, ತಾಳಮೇಳದ ಸದ್ದುಗದ್ದಲದೊಂದಿಗೆ ನಮ್ಮನ್ನು ಆಗಾಗ ಬೆಚ್ಚಿಬೀಳಿಸುತ್ತ, ಮೈನವಿರೇಳಿಸುವ ಕಾಂತಾರವೆಂಬ ದೃಶ್ಯಕಾವ್ಯ ನಮ್ಮಲ್ಲಿ ನಿಜಕ್ಕೂ ಆಶ್ಚರ್ಯ ಅದ್ಭುತವೆನ್ನಬಹುದಾದ ಭಾವವೊಂದನ್ನು ಹುಟ್ಟುಹಾಕುತ್ತದೆ. ವಿಭಿನ್ನ ಮತ್ತು ವಿಶೇಷ ಎಂದೆನಿಸುವ ಕಾಡೆಂಬ ನಿಗೂಢ ಜಗತ್ತನ್ನು ತೆರೆದಿಡುವ ಕತೆ ನೋಡುಗರನ್ನು … Read more

ಜಾನಪದದಲ್ಲಿ ಪ್ರೇಮ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಈ ಜಗತ್ತು ಸುಂದರ ಮತ್ತು ಸುಖಮಯವಾಗಿ ಕಾಣುವಲ್ಲಿ ಪ್ರೇಮದ ಕೊಡುಗೆಯು ಸಿಂಹಪಾಲು ಬಹುಶಃ ಮಾನವನೆದೆಯಲ್ಲಿ ಉಂಟಾಗುವ ಭಾವನೆಗಳಿಗೆ ಮೂರ್ತ ರೂಪ ನೀಡುವಲ್ಲಿ ಈ ಪ್ರೇಮಕ್ಕೆ ಹಲವು ರೀತಿಯ ಮುಖಗಳಿವೆ. ಮೊದಲ ನೋಟಕ್ಕ ಉಂಟಾಗುವಂತಹದ್ದು ಪ್ರೀತಿ ಆತ್ಮೀಯತೆ ಅರಳಿಸುವಂತಹದ್ದು ಪ್ರೇಮ ಕನಸುಗಳ ಮೈದಡವಿ ಬಯಕೆಗಳ ಬೆನ್ನೇರಿಸಿಕೊಂಡು ಭೂಮ್ಯಾಕಾಶದ ಆಚೆಗೂ ಪಯಣಿಸುವ ಹುಮ್ಮಸ್ಸು ತುಂಬುವಂತಹದ್ದು ಒಲವು. ಇಹಲೋಕದಲ್ಲವನ್ನೂ ಧಿಕ್ಕರಿಸುತ್ತಾ ಅನೂಹ್ಯ ಲೋಕದ ಸುಖವನ್ನು ಅನುಭವಿಸುವ ಸ್ವರ್ಗಲೋಕದ ತುತ್ತ‌ ತುದಿಗೆ ಒಯ್ದು ಬದುಕನ್ನು ಸುಂದರಗೊಳಿಸುವಂತಹದ್ದು ಪ್ರಣಯ. ಗಂಡು ಹೆಣ್ಣುಗಳ ಮನಸ್ಸುಗಳು ಹುಟ್ಟಾ … Read more

‘ಎಮ್ಮೆಗುಂಡಿಯಲ್ ಒಂದು ದಿನ ‘ “ನಿಲುವಂಗಿಯ ಕನಸು “: ದಾಕ್ಷಾಯಿಣಿ

ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ. ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ … Read more

“ಅಲೈದೇವ್ರು” ನಾಟಕ ಪ್ರದರ್ಶನ

ಬೆಂಗಳೂರಿನ ವಿಶ್ವರಂಗ ತಂಡವು ಕೋರೊನಾ ನಂತರದಲ್ಲಿ “ಅಲೈದೇವ್ರು” ಎಂಬ ಮಹತ್ವದ ನಾಟಕವನ್ನು ಆಯ್ದುಕೊಂಡಿದ್ದು, ರವಿವಾರ ಸಂಜೆ ೪.೩೦ಕ್ಕೆ ಮತ್ತು ೭.೩೦ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಎರಡು ಪ್ರದರ್ಶನ ನೀಡುತ್ತಿದೆ. ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ ೩೫ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ … Read more

ಪರಸಗಡ ನಾಟಕೋತ್ಸವ 2020: ವೈ. ಬಿ. ಕಡಕೋಳ

ಜನೇವರಿ 25 ರಿಂದ ಪೆಬ್ರವರಿ 2 ರ ವರೆಗೆ ಸವದತ್ತಿ ಕೋಟೆಯಲ್ಲಿ ಪರಸಗಡ ನಾಟಕೋತ್ಸವ 2020 ಈ ವರ್ಷ ಸವದತ್ತಿ ಕೋಟೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ(ರಿ) ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ಇದೇ ಜನೇವರಿ 25 ರಿಂದ ಆರಂಭವಾಗುತ್ತಿದೆ. ಈ ಸಂಘಟನೆಯವರು ಶ್ರೀ ವಿಶ್ವೇಶ್ವರತೀರ್ಥ ಪೇಜಾವರ ಶ್ರೀಗಳ ಹಾಗೂ ಶ್ರೀ ಗಿರೀಶ್ ಕಾರ್ನಾಡ್ ಸ್ಮರಣೆಯೊಂದಿಗೆ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು. ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ … Read more

ಬಾಲ್ಯದಲ್ಲಿ ಪ್ರಭಾವಿತವಾದ ಯಕ್ಷಗಾನ ಕಲೆ-ಕರ್ನಾಟಕದ ಜಾನಪದ ಕಲೆ: ಚಂದ್ರಿಕಾ ಆರ್ ಬಾಯಿರಿ

ಕಂಬಳಿ ಹೊದ್ದು ತೆಂಗಿನ ಗರಿಯ ಚಾಪೆಯ ಮೇಲೆ ಕುಳಿತು ತೂಕಡಿಸುತ್ತ ಕಡಲೆಬೀಜ, ಚುರುಮುರಿ ತಿನ್ನುತ್ತ ಯಕ್ಷಗಾನ ನೋಡುವ ಪರಿ ಆಹಾ! ಎಷ್ಟು ಸುಂದರ. ರಾತ್ರಿ 7 ಗಂಟೆಗೆ ಊರಿನವರೆಲ್ಲಾ ಸೇರಿ ಕಿಲೋಮೀಟರ್ ಗಟ್ಟಲೆ ಟಾರ್ಚ್ ಹಿಡಿದು ನಡೆದೇ ಹೋಗುವುದು ನನಗಿನ್ನೂ ನೆನಪಿದೆ. ಹಾಗೆಯೇ ಅಪ್ಪನೊಂದಿಗೆ ಯಕ್ಷಗಾನ ತರಗತಿಗೆ ಹೋಗಿ ಅವರೊಂದಿಗೆ ಒಂದೆರಡು ಹೆಜ್ಜೆ ಹಾಕಿದ ಆ ರಸಮಯ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಇಂತಹ ಬಾಲ್ಯ ಖಂಡಿತ ಇನ್ನೊಮ್ಮೆ ಸಿಗದು. ಆ ಕಾಲಘಟ್ಟದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕಂಬಳ, … Read more

ಶಕ್ತಿಸ್ವರೂಪಿಣಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಸನ್ನಿದಿ: ಶ್ರೀ ಜಗದೀಶ ಸಂ.ಗೊರೋಬಾಳ

ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಗ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನಮಗೆ ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಬಹಳ ವಿಶಿಷ್ಟವಾದುದು. ಸರ್ವಮುನಿಜನ ಪೂಜಿತೆ, ಸಂಕಷ್ಟ ಕಳೆಯುವ ಅಂಬಿಕೆ ಶಕ್ತಿಸ್ವರೂಪಿಣಿ ಸನ್ನದಿಗೆ ರಾಜ್ಯ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಶ್ರೀಕ್ಷೇತ್ರ ಮಂದಾರ್ತಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ನಮ್ಮ ಕರ್ನಾಟಕದ ರಮ್ಯಮನೋಹರ ತಾಣ ಮಂದಾರ್ತಿಯ ಕಿರು ಪರಿಚಯ … Read more

ದಿಟ್ಟ ಬಾಲಕಿಯೋರ್ವಳ ಕಥಾನಕದ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕ ಪ್ರದರ್ಶನ: ಪ್ರೊ.ಅನ್ನಪೂರ್ಣ ತಳಕಲ್

ಇತ್ತೀಚೆಗೆ (26-08-2018) ಹುಬ್ಳಳ್ಳಿ-ಧಾರವಾಡ ನಗರಗಳನ್ನು ಸುತ್ತ-ಮುತ್ತ ಬೆಳೆದರೂ ತನ್ನ ಸೊಗಡನ್ನು ಕಳೆದುಕೊಳ್ಳದ ಸುತಗಟ್ಟಿ ಗ್ರಾಮದಲ್ಲಿ ಮಕ್ಕಳ ನಾಟಕವೊಂದನ್ನು ವೀಕ್ಷಿಸುವ ಭಾಗ್ಯ ಸಿಕ್ಕಿತ್ತು. ಆ ನಾಟಕದಲ್ಲಿ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬ ಮಾತಿನಂತೆ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನಲೆಯ ಬಾಲಕಿಯೋರ್ವಳು ತನಗೆದುರಾಗುವ ಸಂಕಷ್ಟಗಳನ್ನು ಸಮಯೋಚಿತವಾಗಿ ಜಾಣ್ಮೆಯಿಂದ ಎದುರಿಸುವ ಕಥಾನಕದ ಕು.ಬಿಂದು ಮತ್ತಿಕಟ್ಟಿ ರಚನೆಯ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕವನ್ನು ಹುಬ್ಬಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತಗಟ್ಟಿಯ ವಿದ್ಯಾರ್ಥಿ ಮಕ್ಕಳು ಶಾಲಾ ಆವರಣದ ರಂಗಮಂದಿರದಲ್ಲಿ … Read more

ಬದಲಾದ ಗಣೇಶೋತ್ಸವದ ಸ್ವರೂಪ!: ಹೊರಾ.ಪರಮೇಶ್ ಹೊಡೇನೂರು

ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ  ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ.           ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ,  ಆಯಾ ಋತುಮಾನಗಳ ಹೊಂದಿಕೆಗೆ … Read more