“ಅಭಿಮಾನಿ ದೇವರುಗಳ ಲೀಲೆಗಳು”: ಪ್ರಸಾದ್ ಕೆ.
“ಭಯ್ಯಾ… ನನ್ನ ಭಾಯಿಯ ಸಿನೆಮಾ ಬರುತ್ತಿದೆ'', ಎಂದು ಕುಣಿಯುತ್ತಾ ಹೇಳಿದ್ದ ಆತ. ಹೀಗೆ ಉತ್ಸಾಹದಿಂದ ನನ್ನ ಜೊತೆ ಮಾತನಾಡುತ್ತಿದ್ದಿದ್ದು ದೆಹಲಿಯ ಮಯೂರ್ ವಿಹಾರ್ ನಿವಾಸಿಯೂ, ನನ್ನ ತಮ್ಮನಂತಿದ್ದ ಮಿತ್ರನೂ ಆಗಿದ್ದ ಸೋನು. ಇಲ್ಲಿ ತನ್ನ “ಭಾಯಿ'' ಎಂದು ಭುಜಕುಣಿಸುತ್ತಾ ಸೋನು ಕರೆಯುತ್ತಿದ್ದಿದ್ದು ನಟ ರಣಬೀರ್ ಕಪೂರ್ ನನ್ನು. ಸೋನು ರಣಬೀರ್ ಕಪೂರ್ ನ ಡೈ-ಹಾರ್ಡ್ ಅಭಿಮಾನಿ. ಅತ್ತ ನಟ ರಣಬೀರ್ ಕಪೂರ್ ಕೆಮ್ಮಿದರೆ ಇತ್ತ ಎದೆ ನೋವಾಗುತ್ತಿದ್ದಿದ್ದು ಸೋನುವಿಗೆ. ನಟ ರಣಬೀರ್ ಕಪೂರ್ ನ ನೆಲಕಚ್ಚಿದ ಚಿತ್ರಗಳ … Read more