ಪಂಜು ಕಾವ್ಯಧಾರೆ

ಕಾಗದದ ನಾವೆ ತೇಲಿ ಬಿಟ್ಟಿವೆ ದೋಣಿಗಳ ಪುಟ್ಟ ಕನಸು ಕೈಗಳು ತೇಲಿ ಸಾಗಿದಷ್ಟೂ ಹರುಷ ಕಂಗಳಲಿ ಪ್ರತಿಫಲಿಸುವ ತಿಳಿನೀರು ಗಾಳಿಗೆ ಹೊಯ್ದಾಡುತ್ತ ಸಾಗುತಿವೆ ಕಾಗದದ ನಾವೆಗಳು ಅರಿಯದ ಗುರಿಯೆಡೆಗೆ ಹೊಳೆಯ ಹರಿವಿನೆಡೆ ಮೌನ ಪಯಣ ಅಂದು ನಾನೂ ಕಳಿಸಿದ್ದೆ ದೋಣಿಗಳ ಹೊಳೆಗುಂಟ ಸಾಗಿ ಅದರ ಹಿಂದಿಂದೆ ಕಲ್ಲುಗಳ ತಡವಿ ಗಿಡಗಂಟಿಗಳ ದಾಟಿ ದೂರ ದೂರ ಯಾನ ಕೆಲವು ಮುಳುಗಿ ಕೆಲವು ತೇಲಿ  ಕಣ್ ಹಾಯ್ದಷ್ಟು ದೂರ ನೋಡಿ ಮತ್ತಷ್ಟು ದೋಣಿಗಳು ಹೆಗಲ ಚೀಲದಲ್ಲಿ ನಾಳೆಯ ಪಯಣಕೆ ಸಜ್ಜಾಗಿ … Read more

ನಿರ್ಧಾರ!: ಎಸ್.ಜಿ.ಶಿವಶಂಕರ್

ಕೊನೆಗೂ ಸದಾನಂದರು  ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು. ಯಾವುದಕ್ಕಾಗಿ ಮೂವತ್ತು ವರ್ಷಗಳಿಂದ ಹಿಂಜರಿಯುತ್ತಿದ್ದರೋ ಅದನ್ನಿಂದು ಹತ್ತಿಕ್ಕಿದ್ದರು! ಜೀವನದಲ್ಲಿ ಎಂದೂ ತೆಗೆದುಕೊಳ್ಳದ ಮಹತ್ವದ ನಿರ್ಧಾರವನ್ನು ಸದಾನಂದರು ತೆಗೆದುಕೊಂಡಿದ್ದರು. ಅವರ ನಿರ್ಧಾರ ಯಾವ ಸ್ವರೂಪದ್ದು ಎಂಬುದರ ಕಲ್ಪನೆ ಮನೆಯವರಿಗೆ ಇರಲಿಲ್ಲ;  ಶ್ಯಾಮಲೆಗೂ  ಇರಲಿಲ್ಲ. ಹಾಗೇನಾದರೂ ಗೊತ್ತಾಗಿಬಿಟ್ಟಿದ್ದರೆ ಅವರ ಕಣ್ಣಿನಲ್ಲಿ ಸದಾನಂದರು ಏಕದಂ ವಿಲನ್ ಅಗಿಬಿಡುತ್ತಿದ್ದರು. ಎಲ್ಲರೂ ಹಿಡಿಹಿಡಿ ಶಾಪ ಹಾಕುತ್ತಿದ್ದುದರಲ್ಲಿ ಸಂದೇಹವೇ ಇರಲಿಲ್ಲ. ಇವೆಲ್ಲಾ ಸದಾನಂದರಿಗೆ ಗೊತ್ತಿತ್ತು. ಅದಕ್ಕೇ ಇಷ್ಟು ವರ್ಷ ಅದನ್ನೆಲ್ಲ ಒಳಗೇ ಹಿಡಿದಿಟ್ಟಿದ್ದರು. ಮೂವತ್ತು ವರ್ಷಗಳಿಂದ ಯಾವುದಕ್ಕೆ ಹಿಂದೇಟು ಹಾಕುತ್ತ … Read more

ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು: ಅನುರಾಧ ಪಿ. ಸಾಮಗ

ಬಿರುಸಾದ ಗಾಳಿ. ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ. ಬಿಸಿಲ ಸುಳಿವೇ ಇಲ್ಲದೊಂದು ಹಗಲು. ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಇರುವಿಕೆ ಮತ್ತದರ ಮೌನ, ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ ಇವೆಲ್ಲವೂ ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಎಡೆ ಮಾಡಿಕೊಡಬೇಕಾಗಿತ್ತು. ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ಸುಂದರಸ್ವಪ್ನವಾಗಬಹುದಾದದ್ದು ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರ … Read more

ಹಿಮಾಲಯವೆಂಬ ಸ್ವರ್ಗ (ಭಾಗ 6): ವೃಂದಾ ಸಂಗಮ್

ಇಲ್ಲಿಯವರೆಗೆ  ಸಾಯಂಕಾಲ ಹೃಷಿಕೇಶಕ್ಕೆ. ಇದು ಭಾರತದ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹಿಮಾಲಯಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ ಹೃಷಿಕೇಶ ವಿಷ್ಣುವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ.  ಸ್ಕಂದ ಪುರಾಣದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ಹೃಷಿಕೇಶ ಕೇದಾರ ಖಂಡದ ಭಾಗ. ಇಂದಿನ ಗಢ್ವಾಲ್ ಪ್ರದೇಶವು ಹಿಂದೆ ಕೇದಾರ ಖಂಡ ವೆಂದು ಕರೆಯಲ್ಪಡುತ್ತಿತ್ತು.         … Read more

ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ಸ್ತ್ರಿ ಶೋಷಣೆಯ ವಿರುದ್ಧ ಕಹಳೆ: ನಾಗರೇಖಾ ಗಾಂವಕರ

ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವೈವಸ್ಥೆಯಲ್ಲಿ  ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿತ ಸಾಹಿತ್ಯದಲ್ಲಿಯೂ ಸ್ತ್ರೀ ಪಾತ್ರಗಳು ಉನ್ನತ ಮೌಲ್ಯಗಳ ಪ್ರತಿಬಿಂಬಿಸುವ ಪಾತ್ರಗಳಾಗಿ ತನ್ನ ತ್ಯಾಗದಿಂದ ಇತರರ ಉದ್ದರಿಸುವ ಅಪರೂಪದ ದೇವತಾ ಸ್ವರೂಪದ ಪ್ರತಿಮೆಗಳಾಗಿ ಮೂಡಿಬರುತ್ತಲೇ ಇವೆ. ಪ್ರಾಚೀನ ಪರಂಪರೆಯಲ್ಲಿ  ಹೆಣ್ಣನ್ನು ದೇವತೆಯಾಗಿಸಿ, ಶಕ್ತಿಯ ಪ್ರತೀಕವಾಗಿಸಿ ಚಿತ್ರಿಸಿದ ಹತ್ತು ಹಲವು ಪಾತ್ರಗಳೂ ಇವೆ. ತನ್ನ ಸಹನೆಗೆ, ಹೆಸರಾದ ಹೆಣ್ಣು  ಆತ್ಮಾಭಿಮಾನಕ್ಕೆ … Read more

ಕಳ್ಳನ ಕಥೆ: ಶ್ರೀಮಂತ ಯನಗುಂಟಿ

ಮೂಲ: ರಸ್ಕಿನ್ ಬಾಂಡ್ ಕನ್ನಡಕ್ಕೆ: ಶ್ರೀಮಂತ ಯನಗುಂಟಿ ರೋಮಿಗೆ ಭೇಟಿಯಾದಾಗ ನಾನಿನ್ನೂ ಕಳ್ಳನಾಗಿದ್ದೆ. ಕೇವಲ ಹದಿನೈದು ವರ್ಷದವನಾಗಿದ್ದರೂ ಕಳ್ಳತನದಲ್ಲಿ ನಾನೊಂದು ಅನುಭವಿ ಮತ್ತು ಯಶಸ್ವೀ ಹಸ್ತವಾಗಿದ್ದೆ.  ನಾನು ರೋಮಿಯ ಬಳಿ ಹೋದಾಗ ಅವನು ಕುಸ್ತಿ ಪಂದ್ಯವನ್ನು ವಿಕ್ಷೀಸುತ್ತಿದ್ದ. ಅವನು ಇಪ್ಪತ್ತೈದು ವರ್ಷದವನಿರಬಹುದು. ನನ್ನ ಉದ್ದೇಶಕ್ಕೆ ಸರಳವಾಗಿ ಸರಿಹೊಂದುವ ಹಾಗೆ ಕಾಣಿಸಿದ. ಈ ಯುವಕನ ವಿಶ್ವಾಸವನ್ನು ಗೆಲ್ಲಬಲ್ಲೆ ಎಂದು ನನಗೆ ಖಚಿತವಾಯಿತು.  "ನೀನು ಸ್ವಲ್ಪ ಕುಸ್ತಿ ಪಟುವಿನ ಹಾಗೆ ಕಾಣಿಸುತ್ತಿಯ", ನಾನು ಹೇಳಿದೆ. ಮಂಜುಗಡ್ಡೆಯನ್ನು ಕರಗಿಸಲು ಯಾವುದೇ ಹೊಗಳಿಕೆಯ … Read more

ಪುನೀತಭಾವ: ಸತೀಶ್ ಶೆಟ್ಟಿ ವಕ್ವಾಡಿ.

  ಸೂರ್ಯನಿಗೆ ಆಗಷ್ಟೇ ಬೆಳಗಾಗಿತ್ತು. ಹಕ್ಕಿಗಳ ಚಿಲಿಪಿಲಿ ಇಲ್ಲದ್ದಿದ್ದರೂ ಡಿಸೆಂಬರ್ ತಿಂಗಳ ಚುಮು ಚುಮು ಚಳಿಗೆ ಮುಂಜಾನೆ ಆಹ್ಲಾದಕರವಾಗಿತ್ತು. ಶೀತಗಾಳಿಗೆ ಮೈಯೊಡ್ಡಿ ಮಂಜಿನಹನಿಗಳನ್ನು ಹೊತ್ತ ಹುಲ್ಲಿನ ಮೇಲೆ ಬರಿಗಾಲಿನಲ್ಲಿ  ನೆಡೆಯುವುದೇ ಒಂದು ಅನನ್ಯ ಅನೂಭೂತಿ.  ಹಾಗೆ ಹಲ್ಲಿನ ಜೊತೆ ಜಗಳಕ್ಕೆ ಬಿದ್ದ ಬ್ರಷ್ ನೊಂದಿಗೆ ಕಾದಾಡುತ್ತ ಮನೆ ಎದುರಿನ ಗದ್ದೆಯ ಅಂಚಿನಲ್ಲಿ ಹೆಜ್ಜೆಹಾಕುತ್ತಿದ್ದೆ.  ಬೆಂಗಳೂರಿನಂತೆ ಇಲ್ಲಿ ತರಕಾರಿಯವನ ಬೊಬ್ಬೆ ಇಲ್ಲ.  ಕಸದವಳ ಶೀಟಿ ಸ್ವರವಿಲ್ಲ, ಸ್ಕೂಲ್ ವ್ಯಾನಿನ ಕರ್ಕಶ ಹಾರ್ನಿನ ಮಾರ್ಧನಿ ಇಲ್ಲ. ಆಗಷ್ಟೇ ಕೊಯ್ಲು ಮಾಡಿದ … Read more

ಜನಜಾಗೃತಿಯ ಮಹಾಮಾರ್ಗದ ‘ಆಯುಧ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಬದುಕಿನಲ್ಲಿ ಸರ್ವವನ್ನು ಕಳೆದುಕೊಂಡ ವ್ಯಕ್ತಿಯೋರ್ವ ಅಂತಿಮವಾಗಿ ಗುರುವಿನ ಹುಡುಕಾಟದಲ್ಲಿ ಅಲೆಮಾರಿಯಾಗಿ ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಹಂಬಲಿಸುತ್ತಾ ರಂಗಪ್ರವೇಶಿಸುವುದರೊಂದಿಗೆ ‘ಆಯುಧ’ ನಾಟಕ ಅಸಂಗತವಾಗಿ ಆರಂಭವಾಗುತ್ತದೆ. ಕೆಲಸವಿಲ್ಲದ ವಿದ್ಯಾವಂತ ನಿರುದ್ಯೋಗಿಗಳು ಬಡಾವಣೆಯೊಂದರ ಹರಟೆ ಕಟ್ಟೆಯಲ್ಲಿ ಕಲಿತ ವಿದ್ಯೆಯನ್ನು ಮರೆತು ಇಸ್ಪೀಟು, ಜೂಜಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲಿಗೆ ಆಗಮಿಸುವ ಅನಾಮಿಕನೋರ್ವನು ‘ಸೇವ್ ಇಂಡಿಯಾ ; ಸೇವ್ ಡೆಮಾಕ್ರಸಿ’ ಎಂದು ತನ್ನಷ್ಟಕ್ಕೆ ತಾನೆ ಬಡಬಡಿಸುತ್ತಾ, ನಗುತ್ತಾ ಅವಧೂತನಂತೆ ಆಗಮಿಸಿ, ಕುಳಿತುಕೊಳ್ಳುತ್ತಾನೆ. ಹೀಗೆ ಎಷ್ಟೋ ಹೊತ್ತು ನಡೆದರೂ ನಿರುದ್ಯೋಗಿಗಳು ಮತ್ತು ಅನಾಮಿಕರ ನಡುವೆ ಯಾವುದೇ ಸಂವಹನ … Read more

ನೆರೆಹೊರೆಯವರೊಂದಿಗೆ ಹೇಗಿರಬೇಕು?: ವೈ. ಬಿ. ಕಡಕೋಳ

ಇತ್ತೀಚಿಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು. ಮೋಬೈಲ್ ನೋಡಿದೆ ಅದರ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ ಎಂದು ತಿಳಿಸಿದೆ. ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ ಮರಳಿಸಿರಲಿಲ್ಲ. ಆಫೀಸಿಂದ ಮನೆಗೆ ಬಂದು ಹೆಂಡತಿಯನ್ನು ಅವರ ಮನೆಗೆ ಕಳಿಸಿದೆ. ಅಯ್ಯೋ ಮರೆತೇ ಬಿಟ್ಟಿದ್ದೆವು. ತಗೊಳ್ಳಿ ಎಂದು ಚಾರ್ಜರ್ ಕೊಟ್ಟರಂತೆ. ಅಷ್ಟೇ … Read more

ಕನ್ನಡಿ  ಮತ್ತು  ನಿಂದಕರು: ಕೆ ಟಿ ಸೋಮಶೇಖರ ಹೊಳಲ್ಕೆರೆ

          ಕನ್ನಡಿ ಗೊತ್ತಿಲ್ಲದವರಿಲ್ಲ. ಅದೊಂದು ಹೆಚ್ಚು ಬೆಲೆಬಾಳದ, ಕೆಳಗೆ ಬಿದ್ದರೆ ಸಾಕು ಒಡೆದೇಹೋಗುವ ವಸ್ತು. ಗಾಜಿನ ಒಂದು ಮುಖವನ್ನು ಮೆರುಗುಗೊಳಿಸಿದರೆ ಕನ್ನಡಿ ಸಿದ್ದ! ವಿವಿಧ ಆಕಾರ, ಎತ್ತರಗಳಲ್ಲಿ ಮಾರುಕಟ್ಟಿಯಲ್ಲಿ ದೊರೆಯುವ ನುಣುಪಾದ ಮೇಲ್ಮೈಯುಳ್ಳ ವಸ್ತು! ಹಾಗೆ ನೋಡಿದರೆ ಅದು ವಸ್ತುವೇ ಅಲ್ಲ! ವಿರೂಪ ತೊಡೆದು ಸುರೂಪಿಯಾಗಿಸುವ ಮೂಕ ಸಲಹೆಗಾರ, ಆತ್ಮೀಯ ಸ್ನೇಹಿತ, ಮನೆಯ ಸದಸ್ಯ, ಅಜಾತ ಶತೃ!        ಕನ್ನಡಿಯನ್ನು ಪ್ರೀತಿಸದವರಿಲ್ಲ. ಕನ್ನಡಿಯನ್ನು ಯಾರು ಎಷ್ಟು ಪ್ರೀತಿಸುತ್ತಾರೋ ಅವರು … Read more

ಪಂಜು ಕಾವ್ಯಧಾರೆ

" ಶಾಂತಿ " ಮಳೆ ಹನಿಗಳು ಧರೆಗಿಳಿದಂತೆ ಶಾಂತಿ ದೊರೆಯುತ್ತಿದೆ ಹಕ್ಕಿಗಳ ಕಲರವದಲ್ಲಿ  ಶಾಂತಿ ದೊರೆಯುತ್ತಿದೆ ತಿಳಿಕೊಳದಲ್ಲಿ ಮೀನು ಈಜಿದಂತೆ ಶಾಂತಿ ದೊರೆಯುತ್ತಿದೆ ಪುಟ್ಟ ಮಕ್ಕಳ ನಗುವಿನಲ್ಲಿ ಶಾಂತಿ ದೊರೆಯುತ್ತಿದೆ ಕಾಡಿನಲ್ಲಿ ನೆಡೆಯವಾಗ ಶಾಂತಿ ದೊರೆಯುತ್ತಿದೆ ಕಡಲತಡಿಯಲ್ಲಿ ಸೂರ್ಯೋದಯ ಶಾಂತಿ ದೊರೆಯುತ್ತಿದೆ ವಿವಿಧ ರೀತಿಯಲ್ಲಿ ಶಾಂತಿ ದೊರೆಯಲಿ ನನಗೂ, ನಿಮಗೂ, ನಮ್ಮೆಲ್ಲರಿಗೂ ಕೂಡಾ ಚೀನಾದ ಕವಿ Lin LiMei ಯವರು ಚೀನಾ ಭಾಷೆಯಲ್ಲಿ ಕಳುಹಿಸಿರುವ ಶಾಂತಿ ಸಂದೇಶದ ಕನ್ನಡ ಅನುವಾದ -ಉದಯ ಶಂಕರ ಪುರಾಣಿಕ     … Read more

ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

ಮನುಷ್ಯರೆಲ್ಲರಿಗೂ ಕನಸು ಬೀಳುತ್ತವೆ. ಅದರಲ್ಲಿ ಕೆಲವು ಬರಿ ಕಾಣುವ ಕನಸುಗಳು ಮಾತ್ರ, ಆದರೆ ಕನಸುಗಳನ್ನು ಕಟ್ಟುವವರು ಬಹಳ ಕಡಿಮೆ ಹಾಗೆಯೇ ಕಟ್ಟಿದ ಕನಸುಗಳಿಗೆ ರೆಕ್ಕೆ ಕೊಡುವವರು ಇನ್ನೂ ಬಹಳ ಕಡಿಮೆ. ಹಾಗಾದರೆ ಮೊದಲು ನೀವು ಕನಸು ಕಾಣುವುದು ಮತ್ತು ಕಟ್ಟುವುದರ ಮಧ್ಯೆಯ ಸೂಕ್ಷ್ಮ ವ್ಯತ್ಯಾಸವನ್ನು  ತಿಳಿದುಕೊಳ್ಳಬೇಕು. ಇದನ್ನು ನಿಮಗೆ ಅಬ್ದುಲ್ ಕಲಾಂ ಅವರ ಮಾತುಗಳಿಂದ ಬೇಗ  ತಿಳಸಬಹುದು ಅನ್ನಿಸುತ್ತದೆ. ಅಬ್ದುಲ್ ಕಲಾಂ ಹೇಳುತ್ತಾರೆ " ಮಲಗಿದಾಗ ಬೀಳುವುದು ಕನಸಲ್ಲ , ನಿಮ್ಮನ್ನು ಯಾವುದು ಮಲಗಲು ಬಿಡುವುದಿಲ್ಲವೋ ಅದು … Read more

ನೆನಪಿನ ಪಯಣ – ಭಾಗ 6: ಪಾರ್ಥಸಾರಥಿ ಎನ್ 

ಇಲ್ಲಿಯವರೆಗೆ ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ. ಎಲ್ಲ … Read more

ಅಮೂಲ್ಯ ಕ್ಷಣ: ಗಿರಿಜಾ ಜ್ಞಾನಸುಂದರ್

ಮೋಡ ತುಂಬಿದ ಆಕಾಶ. ಏನೋ ಒಂಥರಾ ತವಕ, ದುಗುಡ. ಮನಸ್ಸಿನಲ್ಲಿ ತಳಮಳ. ಕೈ ಕೈ ಹಿಸುಕಿ ಕೊಳ್ಳುತ್ತಾ ಓಡಾಡುತ್ತಿದ್ದೆ. ನನ್ನ ಆತಂಕ ಹೆಚ್ಚು ಮಾಡಲೆಂದೇ ಮೋಡ ಮುಸುಕಿದೆಯೇನೋ ಅನ್ನುವಂತಿದೆ. ಅನು ನನ್ನ ಜೀವನಕ್ಕೆ ಬಂದು ೬ ವರ್ಷಗಳಾಯಿತು. ಅವಳಿಲ್ಲದೆ ಒಂದು ದಿನವೂ ಮುಂದೆ ಹೋಗುವುದಿಲ್ಲವೇನೋ ಅನ್ನುವಂತೆ ಬೆಸೆದಿದೆ ಜೀವನ. ಅವಳೇ ಸಾಕು ನಾನು ಸುಖವಾಗಿ ಜೀವನ ನಡೆಸಲಿಕ್ಕೆ ಅನ್ನುವಂತಿದ್ದೆವು. ಮಕ್ಕಳು ಬೇಕೇ ಬೇಕು ಅನ್ನುವ ಹಟವೇನು ನನಗಿರಲಿಲ್ಲ. ಆದರೆ ಅವಳಿಗೆ ಮಕ್ಕಳೆಂದರೆ ಪ್ರಾಣ. ಅವಳ ಆರೋಗ್ಯವನ್ನೇ ಪಣಕ್ಕಿಟ್ಟು … Read more

ಸ್ತ್ರೀ ಸಾಮಥ್ರ್ಯಹರಣ-ಲಿಂಗತ್ವ ರಾಜಕಾರಣ: ನಾಗರೇಖಾ ಗಾಂವಕರ

“I am the commodity you traded in, my chastity, my motherhood, my loyalty now it is time for me to flower free The woman on that poster, half naked, selling socks and shoes- No.no I am not that woman” ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಪಾಕಿಸ್ತಾನಿ ಕವಯತ್ರಿ ಕೀಶ್ವರ ನಯೀದ ಬಣ್ಣಿಸಿದ ಪರಿ ಅನುಪಮ.ಆಕೆಯನ್ನು … Read more

ಬದುಕುವ ಹಕ್ಕಿದೆ ಎಂದು ಮತ್ತೊಬ್ಬರ ಬದುಕು ಕಿತ್ತೊಕೊಳ್ಳುವುದು ಎಷ್ಟು ಸಮಂಜಸ?: ನರಸಿಂಹಮೂರ್ತಿ ಎಂ.ಎಲ್

ಇಂದಿನ ಮಾನವನ ಪ್ರಕೃತಿಯ ಮೇಲಿನ ದಾಳಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಂದು ರೀತಿಯ ಆಘಾತದ ಸಂಗತಿ. ಹಲವು ಬಗೆಯ ವರದಿಗಳು ಹಲವು ಸಲ ನಾವು ವಾಸಿಸುತ್ತಿರುವ ಪರಿಸರದಲ್ಲಿ ಮಾಲಿನ್ಯತೆಯ ಪ್ರಮಾಣದ ಬಗ್ಗೆ ಎಚ್ಚರಿಸುತ್ತಲೇ ಇವೆ.  ಇತ್ತೀಚೆಗೆ ವಾಯು ಮಾಲಿನ್ಯತೆಯ ಪ್ರಭಾವದಿಂದಾಗಿ ದೇಶ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳು ಶಾಲೆಗಳಿಗೆ ರಜೆಗಳನ್ನು ಘೋಷಿಸಲಾಗಿತ್ತು. ಇನ್ನು ನಮ್ಮ ಬೆಂಗಳೂರು ಇದಕ್ಕೆ ಹೊರತಾಗಿಲ್ಲ, ಅಷ್ಟು ಪ್ರಮಾಣ ಇಲ್ಲದಿದ್ದರೂ ಅದರ ಸಮೀಪದಲ್ಲಿದೆ. ಇದಕ್ಕೆಲ್ಲ ಕಾರಣಗಳು ನಮಗೆ ತಿಳಿದಿವೆ. ಹೆಚ್ಚಾದ ವಾಹನಗಳ ಸಂಖ್ಯೆ, ನಿಯಂತ್ರಣದಲ್ಲಿಲ್ಲದ ಕಾರ್ಖಾನೆಗಳ … Read more

ತ್ರಿಪದಿ ಕಥೆ: ಶುಭಶ್ರೀ ಭಟ್ಟ, ಬೆಂಗಳೂರು

#ತ್ರಿಪದಿ_ಕಥೆ-1: ನಕ್ಷತ್ರ ಮನೆಯವರೆಲ್ಲರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದರು ವಿಶ್ವಾಸ-ವಾಣಿ. ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಳೆಂಬಂತೆ ಸುಂದರ ಕುಟುಂಬವಾಗಿತ್ತು. 'ಊರಕಣ್ಣೋ ಮಾರಿಕಣ್ಣೋ' ಯಾರ ಕಣ್ಣೋ ಗೊತ್ತಿಲ್ಲ, ದೃಷ್ಟಿಬಿತ್ತು ಅವರ ಕುಟುಂಬಕ್ಕೆ. ಇದ್ದಕ್ಕಿದ್ದಂತೆ ವಾಣಿ ಹೃದಯಾಘಾತದಿಂದ ನಿಧನಳಾದಳು. ಆಗ ಮಗನಿಗಿನ್ನೂ ಒಂದುವರೆ ವರುಷ. ಮಗಳಿಗೆ ಮೂರು ವರುಷ. ಸಾವೆಂದರೆನೆಂದು ತಿಳಿಯದ ವಯಸ್ಸಲ್ಲಿ ಅಮ್ಮನ ಕಳೆದುಕೊಂಡರು. ಎಲ್ಲಾದ್ರಲ್ಲೂ ವಿಶ್ವಾಸ ಕಳೆದುಕೊಂಡ ವಿಶ್ವಾಸ ಕರ್ತವ್ಯದಿಂದ ವಿಮುಖನಾದ, ಮಕ್ಕಳು ಅಜ್ಜಿಮನೆ ಸೇರಿದರು.  ನಕ್ಷತ್ರವಾದ ಅಮ್ಮನ್ನ ಇನ್ನೂ ಹುಡುಕುತಿಹರು ಮಕ್ಕಳು ನೀಲಿಬಾನ … Read more

ಹಿಮಾಲಯವೆಂಬ ಸ್ವರ್ಗ (ಭಾಗ 5): ವೃಂದಾ ಸಂಗಮ್

ಇಲ್ಲಿಯವರೆಗೆ  ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ.  ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ … Read more

ನಗುವ ಮಗು: ಸುರೇಶ್ ಬಣಕಾರ್

ಅದು ಅಮಾವಾಸ್ಯೆಯ ಒಂದು ದಿನ. ಸೂರ್ಯ ಮುಳುಗುವ ಸಮಯ. ಎಂದಿನಂತೆ ಕಮಲ ಮನೆಯ ಮುಂದಿನ ತೆಂಗಿನ ತೋಟದಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದಳು. ತಟ್ಟನೆ ಒಂದು ಮಗು ನಗುವ ಸದ್ದು. ಕಮಲಳಿಗೆ ಆಶ್ಚರ್ಯ. ಏಕೆಂದರೆ ಆ ಸುತ್ತಮುತ್ತಲೂ ಹತ್ತು ಮೈಲಿ ದೂರದಲ್ಲಿ ಒಂದೂ ಮನೆ ಇರಲಿಲ್ಲ. ಅವಳು ಸುತ್ತಮುತ್ತ ನೋಡಿದಳು, ಏನೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಶಬ್ದ ನಿಂತಿತು. ಏನೋ ಭ್ರಮೆ ಇರಬೇಕೆಂದು ತನ್ನ ಕೆಲಸದಲ್ಲಿ ಮಗ್ನಳಾದಳು. ಮತ್ತದೇ ನಗು!  ಈ ಬಾರಿ ಅವಳು ಗಮನವಿಟ್ಟು ಆಲಿಸಿದಳು. … Read more

“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

  ಪ್ರೀತಿಯ ಒಲವಿನ ಪ್ರಿಯಲತೆಯೇ..,   “ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ … Read more

ಡಾ.ಬಸವಲಿಂಗ ಪಟ್ಟದೇವರ ಸಾಹಿತ್ಯಿಕ ಕೊಡುಗೆ: ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ

ಕರ್ನಾಟಕದಲ್ಲಿ ಬಸವತತ್ವ ಚಿಂತನೆ ಧರ್ಮ ಪ್ರಚಾರದ ಜೊತೆಗೆ ಅನೇಕ ಮಠಾಧೀಶರು ಸಾಹಿತ್ಯದ ಬರವಣಿಗೆಯಲ್ಲಿ ಸಹ ತೊಡಗಿದ್ದಾರೆ. ಅವರಲ್ಲಿ ಡಾ.ಜಚನಿ, ಡಾ.ಮೂಜಗಂ, ಡಾ.ಅನ್ನದಾನೀಶ್ವರ ಸ್ವಾಮಿಗಳು, ಡಾ.ಮುರುಘ ಶರಣರು ಅವರಂತೆ ಡಾ. ಬಸವಲಿಂಗ ಪಟ್ಟದೇವರು ಕೂಡಾ ಒಬ್ಬರು. ಬಸವಲಿಂಗ ಪಟ್ಟದೇವರು ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಚಿಂತನೆಯ ಪ್ರಗತಿಪರ ಚಿಂತಕರು ಹೌದು. ಅವರು ಬಸವ ತತ್ವ ಚಿಂತನೆ ಸಾಹಿತ್ಯವನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಜೊತೆಗೆ ಸಾಹಿತ್ಯದ ರಚನೆಗೂ ತೊಡಗಿದ್ದಾರೆ. ಬಸವಲಿಂಗ ಪಟ್ಟದೇವರು ಮೂಲತಃ ಕವಿಗಳು ಅವರು ವಿದ್ಯಾರ್ಥಿ … Read more

ಜಿಯಾವುಲ್ಲಾಖಾನ್ ಅವರ ಬಳಿ ಎಲ್ಲಾ ದೇಶದ ನೋಟು ಮತ್ತು ನಾಣ್ಯಗಳು: ಪ್ರವೀಣ್ ಕುಮಾರ ಸಲಗನಹಳ್ಳಿ

ಇದು ಡೀಮೋನಿಟೈಜೆಷನ್ ಸಮಯ. ಇಲ್ಲಿ ಹಳೆಯ ನೋಟುಗಳಿಗೆ ಕಾವಡೆ ಕಾಸಿನ ಕಿಮ್ಮತ್ತು ಇಲ್ಲ. ಒಂದು ಕಾಲದಲ್ಲಿ ತಮ್ಮದೇ ಆದ ಮೌಲ್ಯವನ್ನು ಹೊಂದಿದ್ದ ನೋಟುಗಳು, ಇಂದು ಮೌಲ್ಯಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೂಲೆ ಸೇರಿಕೊಳ್ಳುತ್ತಿವೆ. ಆದರೆ, ಆ ರೀತಿ ಮೌಲ್ಯ ಕಳೆದುಕೊಂಡ ನೋಟುಗಳು ಮುಂದೂಂದು ದಿನ ನಮ್ಮನ್ನು ಕಣ್ಣರಳಿಸಿಕೊಂಡು ನೋಡುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಅಂತಹ ಕಣ್ಣರಳಿಸಿಕೊಂಡು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ನೋಡಬೇಕು ಎಂದರೆ ಶಿವಮೊಗ್ಗ ನಗರದಲ್ಲಿರುವ ತಂಪು ಪಾನಿಯಗಳ ವ್ಯಾಪಾರಿ ಜಿಯಾವುಲ್ಲಾಖಾನ್ ಅವರ ಅಂಗಡಿಗೆ ನೀವು ದಾಂಗುಡಿ … Read more

ಪ್ರಾಮಾಣಿ – ಕತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಇಂದು ಬೇರೆಯವರನ್ನು , ಭ್ರಷ್ಟರನ್ನು  ಸರಿಮಾಡುವುದೆಂದರೆ ನಾವು ಕೆಟ್ಟುಹೋಗುವುದು ಅಂಥ ಅರ್ಥ! ಅಥವಾ ಅತಿ ದುಷ್ಟರಾಗುವುದು ಅಂಥ!  ಏಕೆಂದರೆ ಅವರಿಗೆ ನಾವು ಸರಿಯಿಲ್ಲ ಅನ್ನಿಸುವುದರಿಂದ ನಮ್ಮನ್ನು ಅವರು ಅವರಂತೆ ಆಗಿಸಿಬಿಡುತ್ತಾರೆ! ಪುರಾಣಗಳಲ್ಲಿ ದುಷ್ಟರ ದೌಷ್ಟ್ಯ ಹೆಚ್ಚಾದಾಗ ಭಗವಂತ ಬಂದು ದುಷ್ಟರ ಸಂಹರಿಸುವುದನ್ನು ಓದಿರುತ್ತೇವೆ. ಅಂದರೆ ಸಾಮಾನ್ಯರು ಇವರನ್ನು  ಮಟ್ಟ ಹಾಕಲು ಅಸಮರ್ಥರು ಎಂಬ ಸತ್ಯ ಅಲ್ಲಿ ಅಡಗಿದೆ! ದುಷ್ಟರ ನಾಶ ಮಾಡುವುದಕ್ಕೆ ಭಗವಂತನೇ ಅವತರಿಸಬೇಕಾಗುತ್ತದೆ. ಅವನೆ ಸಮರ್ಥ! ಭ್ರಷ್ಟತೆಯನ್ನು ನಿರ್ನಾಮ ಮಾಡುವವರೆ ಮಹಾಭ್ರಷ್ಟರಾಗಿರುವುದರಿಂದ ಎಲ್ಲಾ … Read more

ಫೇಸ್ ಬುಕ್ ಗೆಳೆಯರಿಗೊಂದು ಪತ್ರ: ನಟರಾಜು ಎಸ್. ಎಂ.

ಹಾಯ್ ಫ್ರೆಂಡ್ಸ್, ಹೇಗಿದ್ದೀರ? ಎಷ್ಟೊಂದು ದಿನಗಳೇ ಆಗಿಹೋಯಿತು ನಿಮ್ಮೊಡನೆ ಸರಿಯಾಗಿ ಮಾತನಾಡಿ. ಒಂದಷ್ಟು ವರುಷಗಳ ಹಿಂದೆ ಹೀಗೆ ಸುಮ್ಮನೆ ಕಣ್ಣಿಗೆ ಬಿದ್ದ ಫೇಸ್ಬುಕ್ ನಲ್ಲಿ ಅಪರಿಚಿತರಾಗಿದ್ದ ನಾವು ಪರಿಚಿತರಾಗುತ್ತ ಹೋದ್ವಿ. ಈ ಪರಿಚಯಗಳಿಗೆ ಈಗ ವರುಷಗಳ ಸಂಭ್ರಮ. ಮೊನ್ನೆ ಮೊನ್ನೆ ಫೇಸ್ ಬುಕ್ ನಮ್ಮ ಗೆಳೆತನಗಳನ್ನು ಪುಟ್ಟ ವಿಡಿಯೋ ರೂಪದಲ್ಲಿ ಸಮ್ಮರಿ ಮಾಡಿ ನಮ್ಮ ಮುಂದಿಟ್ಟಿದೆ. ಈ ತರಹದ ವಿಡಿಯೋವನ್ನು ಫೇಸ್ಬುಕ್ ನೀಡುತ್ತಿರುವುದು ಇದು ಮೊದಲಲ್ಲ. ಆದರೂ ಯಾಕೋ ಈ ವಿಡಿಯೋಗಳು ವಿಶೇಷ ಅನಿಸುತ್ತಿದೆ. ಯಾಕೆಂದರೆ ಈ … Read more

ಪಂಜು ಕಾವ್ಯಧಾರೆ

 ತಂಪ ಸೂಸುವ ತುಂಟ‌ ಚಂದ್ರಮ, ಚದುರಿ ಹೋದನು ಚಹರೆ ಮರೆತು.. ಚಿಲುಮೆ ಒಲುಮೆಯ ಗಾಳಿ ಬೀಸಿ, ಚಂದ್ರ ವಾಚುತ ನಕ್ಕನು..! ಅಬಲೆ ಮಣಿ ನಿನ್ನ ನೋಟಕೆ , ರಸಿಕನಾದೆನು ಭಯವ ಮರೆತು.. ಕನಸ‌ಕಂಡೆನು ಇಂದು ನಾನು, ಹೊಸಲೋಕಕೆ ಪಯಣ ಕಲಿತು..! ಅರಿಯಲಾಗದ ಅರಿವಿನನುಭವ, ಅರಿತೆ ನಾನು ಒಲವಿನಿಂದ.. ಅಮಲು ನೀಡುವ ದಿವ್ಯ‌ಔಷಧಿ.. ಪ್ರೀತಿ ಎನ್ನುವುದ..! ಹರಿದು ಹೋಗದ ಜಾಲವಿದು, ಕರಗಿ ಹೋಗದ ಅರಗಿದು.. ಹರಿದು ಕರಗಿ ಹೋಯಿತೆಂದರೆ, ಹ್ರದಯ ಉರಿಯದೆ ಇರುವುದೇ?!! **** ಪ್ರತಿಫಲಿಸುವ ಹ್ರದಯದ, ಮಿಡಿತವ … Read more

ಕೋಸಿನ ಪಲ್ಯ: ಸಹನಾ ಪ್ರಸಾದ್

ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ. ತನ್ನ ಮದುವೆಯ ದಿನ, … Read more

ನಿಯತ್ತು…: ದುರ್ಗಾ ಪ್ರಸಾದ್

ಮೂರು ದಿನವಾದರೂ ಒತ್ತರಿಸಿ ಬರುತ್ತಿದ್ದ ಸೊಸೆ ಮಾಡಿದ ಅವಮಾನದ ದೃಶ್ಯಗಳನ್ನು ರಂಗಪ್ಪನಿಗೆ ಸಹಿಸಲಾಗುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ಊರಿನಿಂದ ಬಂದ ಮಗಳನ್ನು ನಿಂದಿಸಿರುತ್ತಿರುವ ಸೊಸೆಯನ್ನು ಕಂಡು ರಂಗಪ್ಪನಿಗೆ ಸುಮ್ಮನಿರಲಾಗಲಿಲ್ಲ. ಯಾಕಮ್ಮ ಹಾಗೆಲ್ಲ ಮಾತಾಡುತ್ತಿಯಾ ಎಂದು ಕೇಳಿದಾಕ್ಷಣ ಮಾವನ ಕೊರಳಪಟ್ಟಿ ಹಿಡಿದು ಮತ್ತೊಂದು ಕೈಯಲ್ಲಿ ಚಪ್ಪಲಿ ಹಿಡಿದು ನಿಂತ ಸೊಸೆಯನ್ನು ಹಿಗ್ಗಾ ಮುಗ್ಗಾ ತಳಿಸಿಬಿಡಬೇಕು ಎಂದೆನಿಸಿದರೂ ಉಸಿರು ಗಟ್ಟಿ ಮಾಡಿಕೊಂಡು ಸುಮ್ಮನಾಗಿದ್ದರು. ತಂದೆಯನ್ನು ಕೊರಳಪಟ್ಟಿ ಹಿಡಿದರೂ ಏನೊಂದು ಮಾತಾಡದೆ ಒಳನಡೆದ ಮಗನನ್ನು ಕಂಡು ರೇಜಿಗೆ ಹುಟ್ಟಿತು. ಊರಮಂದಿಯೆಲ್ಲಾ ಮನೆಯ ಮುಂದೆ ನೋಡುತ್ತಾ … Read more

ಅಪ್ಪ: ರಾಜುಗೌಡ ನಾಗಮಂಗಲ

ಅಪ್ಪಂದಿರ ದಿನ ಮುಗಿದೇ ಹೋಯ್ತು. ಇನ್ನೂ ಮುಂದಿನ ವರ್ಷವೇ ಅಪ್ಪನನ್ನ ಹಗಲಿಂದ ಇರುಳಿಬ್ಬಾಗವಾಗುವವರೆಗೂ ತಮ್ತಮ್ಮ ಹೆಗಲಿಗೆ ಕಟ್ಟಿಕೊಂಡು ಹೊಗಳುವುದು, ಹಾಡುವುದು ಕವಿತೆ ಬರೆಯುವುದು ಅಲ್ಲೋ ಇಲ್ಲೋ ಓದಿದ ಆದರ್ಶ ಅಪ್ಪಂದಿರ ಬಗ್ಗೆ ಬರೆಯುವುದು ಎಲ್ಲವೂ ಒಂದಷ್ಟು ಈ ವರ್ಷ ಮುಗಿಯಿತು. ಬರೆಯುವುದೇನು ತಪ್ಪಿಲ್ಲ ಓದಿದವ ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾನೆ, ಅಷ್ಟಕ್ಕೂ ಅಪ್ಪನೆಂದರೆ ದ್ವೇಷವೇನು ಇಲ್ಲಾ. ಜಗತ್ತಿಗೆ ನನ್ನಪ್ಪನನ್ನ ತೋರಿಸುವ ಉಮೇದುವಾರಿಕೇನು ಇಲ್ಲಾ, ನನಗಂತೂ ಅಪ್ಪನೆಂದರೆ ಚಿಪ್ಪೊಡೆಯದ ಮುತ್ತು, ನಾನಾಗ ಚಿಗುರುಗಣ್ಣಿನ ಹುಡುಗ. ಎಸ್. ಎಸ್. ಎಲ್ಸಿ … Read more