ಮರೆಯಲಾಗದ ಮದುವೆ (ಭಾಗ 15): ನಾರಾಯಣ ಎಮ್ ಎಸ್
ಇಲ್ಲಿಯವರೆಗೆ ಹೇಗಾದರೂ ಮದುವೆ ಪೂರೈಸಬೇಕೆಂದು ಗಟ್ಟಿಮನಸ್ಸಿನಿಂದ ಭಾವನೆಗಳನ್ನು ನಿಗ್ರಹಿಸಿಕೊಂಡಿದ್ದ ಅಯ್ಯರ್ ಕುಟುಂಬವರ್ಗದವರಿಗೆ ಮದುವೆ ಮುಗಿದೊಡನೆ ಮನೆಯೊಡಯನ ಅನುಪಸ್ಥಿತಿಯಲ್ಲಿ ಮದುವೆ ನಡೆಸಿದ ಬಗ್ಗೆ ಪಾಪ ಪ್ರಜ್ಞೆ ಕಾಡತೊಡಗಿತು. ಆವರೆಗೂ ಮಡುಗಟ್ಟಿದ್ದ ಸಂಕಟದ ಕಟ್ಟೆಯೊಡೆದು ಒಂದಿಬ್ಬರು ಮೆಲ್ಲನೆ ಬಿಕ್ಕತೊಡಗಿದರು. ಮದುವೆ ನಡೆದ ಗ್ರೌಂಡ್ ಫ್ಲೋರಿನ ಹಾಲಿನಲ್ಲಿ ಮದುವೆಗೆ ಬಂದಿದ್ದ ಅನೇಕ ಅತಿಥಿಗಳು ಇನ್ನೂ ಕುಳಿತಿದ್ದನ್ನು ಗಮನಿಸಿದ ಮರಳಿಯವರಿಗೆ ಅವರೆದುರು ಮುಜುಗರ ಉಂಟಾಗುವುದು ಬೇಡವಿತ್ತು. ಮದುವೆ ಮಂಟಪದೆದುರು ಹಾಗೆ ಹೆಂಗಸರು ಕುಳಿತು ಅಳುವುದು ವಿವಾಹಿತ ವಧೂವರರಿಗೆ ಶ್ರೇಯಸ್ಸಲ್ಲವೆಂದು ಹೇಳಿ ಎಲ್ಲರನ್ನೂ ಮೂರನೆ … Read more