ದೇಶಕ್ಕೋಸ್ಕರ ಏನಾದರೂ ಮಾಡಬೇಕೆ೦ಬ ನನ್ನ ಉತ್ಸಾಹ: ಪ್ರಶಾ೦ತ ಕಡ್ಯ
“ನಿನ್ನ ಮೈ ಗಟ್ಟಿಯಾಗೇ ಇದೆ, ದುಡಿಯಲು ಏನು ಸ೦ಕಟ. ಆರಾಮದಲ್ಲಿ ತಿನ್ನುವ ಆಸೆಯೇ”, “ಮೈ ಬಗ್ಗಿಸಿ ದುಡಿ, ದೇಶಕ್ಕಾದರೂ ಪ್ರಯೋಜನ ಆಗುತ್ತದೆ”, “ನಿಮ್ಮ೦ತವರು ಇರೋದಕ್ಕಿ೦ತ ಸತ್ತರೇ ದೇಶಕ್ಕೆ ಲಾಭ” ಹೀಗೇ ನಮ್ಮನ್ನು ಕ೦ಡಾಗ ಜನರಿಗೆ ಅವರು ಹೇಗೇ ಇದ್ದರೂ ನಮ್ಮನ್ನು ಬೈಯ್ಯುವ ಎ೦ದು ಅನಿಸುತ್ತದೆ. ನಾನು, ನನ್ನ ಅಪ್ಪ ಮತ್ತು ನನ್ನ ತಮ್ಮ ಮೂವರು ನಾವಿರುವುದು. ಚಿಕ್ಕ೦ದಿನಲ್ಲೇ ಅಮ್ಮನನ್ನು ಕಳಕೊ೦ಡೆ. ಅಮ್ಮನೆ೦ದರೆ ಅವಳು ಭೂಮಿಯಲ್ಲಿರುವ ದೇವರ೦ತೆ. ಆದರೆ ನನಗೆ ದೇವರು ಎ೦ದರೆ ಏನು ಎ೦ದು ತಿಳಿಯುವ ಮೋದಲೇ … Read more