ಕಾವ್ಯಧಾರೆ

ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು

  ನಾಲ್ಕು ಗೋಡೆಗಳು ನಾಲ್ಕು ಮೂಲೆಗಳು ಜೇಡರಬಲೆಯೊಳಗಿಂದ ನುಗ್ಗಿದ್ದ ಧೂಳು, ನನ್ನ ಮುಖದ ಮೇಲೊಷ್ಟು ನೋವ ಮುಚ್ಚುವ ಕತ್ತಲು, ಹಿಡಿ ಸುಣ್ಣದ ಪುಡಿ ತೂರಿದಂತೆ ಬೆಳಕು, ಸುತ್ತಲೂ   ನನ್ನನ್ನೇ ದುರುಗುಟ್ಟುತಿದ್ದ ನೆರಳುಗಳೇ ಮೆಲ್ಲಗೆ ಮೂರ್ನಾಲ್ಕು ಬಾರಿ ಪಿಸುನುಡಿದಂತೆ ಧೂಳ ಕಣಗಳ ನಡುವೆ "ಸತ್ತರೆ ಮಣ್ಣ ಸೇರುತ್ತಾನೆ ಕೊಳೆಯದಿದ್ದರೆ ಕೊಳ್ಳಿ ಇಡುವ ಬೂದಿಯಾಗಲಿ ಮೂಳೆ"   ಬಾಗಿಲ ಕಿಂಡಿಯಲ್ಲಿ ತೂರಿ ಬಂದ ತಂಡಿ ಗಾಳಿ ಎದೆಯ ಬೆವರ ಬೆನ್ನ ನೇವರಿಸಿದ ಸಾಂತ್ವಾನ, ಜೊಲ್ಲು ಇಳಿಸುತ್ತಾ ಅಡಗಿದ್ದ ಜೇಡರ […]

ಪಂಜು-ವಿಶೇಷ

ವಾರಕೊಮ್ಮೆ ಯಶವಂತಪುರ ಸಂತೆ: ಶಿವು ಕೆ.

                   ಇತ್ತೀಚೆಗೆ ತೇಜಸ್ವಿಯವರ "ಸಂತೆ" ಕಥೆ ಓದಿದಾಗ ನನಗೂ ಸಂತೆಗೆ ಹೋಗಬೇಕೆನಿಸಿತ್ತು.  ನನ್ನ ಮಡದಿ ಪ್ರತಿ ಭಾನುವಾರ  ಸಂಜೆ  ಯಶವಂತಪುರ ಸಂತೆಗೆ ತರಕಾರಿ ಹಣ್ಣು ಹೂಗಳನ್ನು ತರಲು ಹೋಗುತ್ತಿದ್ದಳು.  ಹೋಗುವ ಮೊದಲು ನಾನು ಜೊತೆಯಲ್ಲಿ ಬರಬೇಕೆಂದು ತಾಕೀತು ಮಾಡುತ್ತಿದ್ದಳು.  ಮೊದಮೊದಲು ಅವಳು ಕರೆದಾಗ ನಾನು ಉತ್ಸಾಹದಿಂದ ಹೋಗುತ್ತಿದ್ದೆನಾದರೂ ಅಲ್ಲಿ ಆಗಾಗ ಆಗುವ ಕೆಲವು ಬೇಸರದ ಅನುಭವಗಳು ನೆನಪಾಗಿ,  ನನಗೆ ಬ್ಲಾಗು, ಫೋಟೊಗ್ರಫಿ ಇತ್ಯಾದಿ ಕೆಲಸಗಳಿದೆಯೆಂದು ತಪ್ಪಿಸಿಕೊಳ್ಳುತ್ತಿದೆ. […]

ಕಥಾಲೋಕ

ವಿಪರ್ಯಾಸ: ಬದರಿನಾಥ ಪಲವಳ್ಳಿ

  ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ. ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ. ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು […]

ಮೊದಲು ಓದುಗನಾಗು

ಡಾ. ಅನಸೂಯಾದೇವಿಯವರ ಕೃತಿ “ಪ್ರಕೃತಿ ಮತ್ತು ಪ್ರೀತಿ”: ಹನಿಯೂರು ಚಂದ್ರೇಗೌಡ

  ಕೃತಿ ವಿವರ: ಪುಸ್ತಕದ ಹೆಸರು        : ಪ್ರಕೃತಿ ಮತ್ತು ಪ್ರೀತಿ- ವೈಚಾರಿಕ ಲೇಖನಗಳ ಸಂಗ್ರಹ ಲೇಖಕಿ                    : ಡಾ.ಅನಸೂಯಾ ದೇವಿ ಬೆಲೆ                        :  ೩೫೦ ರೂ. ಪ್ರಕಾಶನ ಸಂಸ್ಥೆ         : ದೇಸಿ ಪುಸ್ತಕ, ವಿಜಯನಗರ, ಬೆಂ.-೪೦ ಪ್ರಕಟಣೆ […]

ರುಕ್ಮಿಣಿ ಎನ್ ಅಂಕಣ

ಶಾಂತಿ ನಿವಾಸ: ರುಕ್ಮಿಣಿ ಎನ್.

ಎಷ್ಟೋ ದಿನಗಳಿಂದ ತೆರೆದುಕೊಂಡಿದ್ದ ಮನೆ-ಕಿಟಕಿ ಬಾಗಿಲುಗಳು ತೆರೆದುಕೊಂಡತೆಯೇ ಇದ್ದವು. ರಭಸವಾಗಿ ಬಿದ್ದ ಮಳೆಗೆ ಮಣ್ಣಿನ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಕಿಟಕಿ ಬಾಗಿಲುಗಳಲ್ಲಿ ಜೇಡರ ಮಹಾರಾಯ ಸುಖಾಂತವಾಗಿ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ಮನೆ ತುಂಬಾ ಮುತ್ತಿಗೆ ಎಂಬಂತೆ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದ್ದ. ಮನೆಯ ಪಕ್ಕದಲ್ಲಿ ಇದ್ದ ಬೇವಿನ ಮರದ ಫಲ-ಪುಷ್ಪಗಳು ಮನೆಯ ಮೆಟ್ಟಿಲುಗಳನ್ನು ಶೃಂಗರಿಸಿದ್ದವು. ಸಂಜೆಯಾಗುತ್ತಿದ್ದಂತೆ ಕಟ್ಟೆಗೆ ಕೂತು ಹರಟುತ್ತಿದ್ದ ವಯೋವೃದ್ದರ ಬಾಯಲ್ಲಿ ಎದುರಿನಲ್ಲಿದ್ದ ಹಾಳು ಬಿದ್ದ  ಮನೆಯ ಕತೆಯೇ ವಿಷಯ ವಸ್ತುವಾಗಿರುತ್ತಿತ್ತು. ಆ ಮನೆಯ […]

ಲೇಖನ

ಸೋಮವಾರದ ಸಂಚಿಕೆಯಲ್ಲಿ ನಿರೀಕ್ಷಿಸಿ…

1. ಚುಟುಕ ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ. 2. ಸಿನಿಲೋಕ ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್ 3. ಕಾವ್ಯಧಾರೆ  ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ 4. ಹಾಸ್ಯ  ಕೊಂಕು….ಕೊಂಚ ಕಚಗುಳಿಗೆ!!:ಸಂತು 5. ಪ್ರೀತಿ ಪ್ರೇಮ  ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್ 6. ಕಥಾಲೋಕ  ತಂತ್ರ: ರಾಘವೇಂದ್ರ ತೆಕ್ಕಾರ್ 7. ಕಥಾಲೋಕ  ವಿಪರ್ಯಾಸ: ಬದರಿನಾಥ ಪಲವಳ್ಳಿ 8. ಸರಣಿ ಬರಹ  […]

ಚಿನ್ಮಯ್ ಮಠಪತಿ ಅಂಕಣ

ಹೆಣ್ಣಿಲ್ಲದೆ ಮನೆಯೊಂದು ಮನೆಯಲ್ಲ: ಸಿ ಎಸ್ ಮಠಪತಿ

ಲೇ ಊಂಟಗೇಡಿ “ನೀನು ಹೆಣ್ಣಾಗಿ ಹುಟ್ಟ ಬಾರದಿತ್ತಾ.. ನೀ ಹೆಣ್ಣಾಗಿ ಹುಟ್ಟಿದ್ರ ನಾಳೆ ಮದ್ವಿ ಆದ್ ಮ್ಯಾಗ ಒಂದೆರಡ ಮಕ್ಳನ್ನ ಹಡ್ದು ಅವ್ನ ಬಾಳ್ ಚೆಲೋತಂಗೆ ಸಾಕ್ತಿದ್ದಿ. ಆ ದೇವ್ರ್ ನಿನ್ನ ಯಾಕರ ಗಂಡಾಗಿ ಹುಟ್ಸಿದಾ ಅನ್ಸಾಕತ್ತೈತಿ ನಂಗ” ಖರೇನ್ ಹೇಳ್ ತೀನಿ, ನೀ ಏನರಾ ಹೆಣ್ಣಾಗಿ ಹುಟ್ಟಿದ್ದಿ ಅಂದ್ರ, ನನ್ನ ಮಮ್ಮಗಗ ತಗೋಂಡು ಮನಿ ಸ್ವಸಿ ಮಾಡ್ಕೊಂಡ್ ಬಿಡ್ತಿದ್ನಿ.! ದೇವ್ರು ಮೋಸ ಮಾಡ್ದಾ.  ತಪ್ಪಾಗಿ ನಿನ್ನ ಗಂಡ್ಸಾಗಿ ಹುಟ್ಸಿದಾ..!! ನಮ್ಮ “ಬಸವ್ವ” ಆಯಿ ಹಿಂಗಂತ ನಂಗ […]

ಕಾವ್ಯಧಾರೆ

ಮೂವರ ಕವಿತೆಗಳು: ಪ್ರೀತೀಶ, ದಿಲೀಪ್ ರಾಥೋಡ್, ಸ್ವರ್ಣ ಎನ್.ಪಿ.

  ನೀ ಕೊಟ್ಟೆ ಪರೀಕ್ಷೆ ಸೀತೆ, ನೂರು ದುಗುಡಗಳ ತುಂಬಿಕೊಂಡು ಸುಮ್ಮನೆ ಕೂತುಬಿಟ್ಟೆಯಲ್ಲೇ ಶೋಕವನದೊಳಗೆ;   ಅಯ್ಯೋ ಪಾಪ ಸೀತೆ ಅಷ್ಟೈಶ್ವರ್ಯ ಬಿಟ್ಟು ಕಾಡಿಗೆ ಹೋದಳು ಎಂದು ನೊಂದ ಕವಿಯ ಕಂಡು ನೊಂದುಕೊಂಡೆವಲ್ಲೇ? ಹೊಳೆಯಲೇ ಇಲ್ಲ ನಮಗೆ ನಿನಗೆ, ನಿನ್ನ ಜೊತೆಗೆ ಕೈ ಹಿಡಿದು ನಡೆವ ಕಣ್ಣೀರು ತೊಡೆವ ಮುತ್ತುಗಳ ಮತ್ತಿನಲ್ಲಿ ಮೈಮರೆಸುವ, ಚಿಗುರುತ್ತಿಹ ಜವ್ವನದ ಸಂಭ್ರಮಗಳ ತಣಿಸುವ ನಲ್ಲನಿದ್ದಾನೆಂದು! ಉರ್ಮಿಳೆಯಂತೆ ಬರೀ ವೈಢೂರ್ಯಗಳು ಮಾತ್ರ ಇಲ್ಲವೆಂದು.   ಕೂತು ಬಿಟ್ಟೆ ನೆಪವಾಗಿ ಕೈಕಾಲು ಆಡಿಸದೆ ರಾವಣ […]

ಪಂಜು-ವಿಶೇಷ

ಸಮಾಜ ಸುಧಾರಕಿ, ಮಹಿಳಾವಿಮೋಚಕಿ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ: ಹಿಪ್ಪರಗಿ ಸಿದ್ದರಾಮ್

  ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಪರಂಪರೆಯನ್ನು ಅವಲೋಕಿಸುತ್ತಾ ಹೋದಂತೆ ಭರತಖಂಡವು ಅಮೂಲ್ಯವಾದ ಸಾಮಾಜಿಕ ಸಮಾನತೆಯ ವೈಚಾರಿಕ, ಪ್ರಗತಿಪರ ಮನಸ್ಸುಗಳಿಂದೊಡಗೂಡಿದ ಅಪೂರ್ವ ರತ್ನಗಳ ಗಣಿಯಾಗಿದೆ. ಸಮಾಜ ಸೇವೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಹೀಗೆ ಹಲವಾರು ಸಂಗತಿಗಳನ್ನು ಆಯಾ ಕಾಲಘಟ್ಟವು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿರುವುದನ್ನು ಕಾಣಬಹುದು. ಹೀಗಿದ್ದರೂ ಕೆಲವು ಸಂಗತಿಗಳು ಸಮಾಜದಲ್ಲಿ ಐಕ್ಯತೆಯ ಮಂತ್ರದೊಂದಿಗೆ ಸಾಮರಸ್ಯವನ್ನುಂಟು ಮಾಡುವಲ್ಲಿ ಯಶಸ್ವಿಯಾದರೂ ಮತ್ತೆ ಕೆಲವೊಮ್ಮೆ ಸಾಮಾಜಿಕವಾಗಿ ಬಲಿಷ್ಟರು, ತಾವೇ ಶ್ರೇಷ್ಟರು ಎಂಬ ದುರಂಹಕಾರ ಮನೋಭಾವದ ಕುಹಕಿಗಳ ಕಪಟತನಕ್ಕೆ ಸಾಕ್ಷಿಭೂತವಾಗಿ ಕಹಿ […]

ಪಂಜು-ವಿಶೇಷ

ಗೆಲುವಿನಂಗಳದಿ ಮೂಡುತಿದೆ ಗೆಜ್ಜೆ ಕಾಲ್ಗಳ ಹೆಜ್ಜೆ ಗುರುತು: ಶ್ರೀವತ್ಸ ಕಂಚೀಮನೆ

ಕಾರ್ಯೇಶು ದಾಸಿ – ಕರಣೇಶು ಮಂತ್ರಿ – ಪೂಜ್ಯೇಶು ಮಾತಾ – ಕ್ಷಮಯಾ ಧರಿತ್ರಿ – ರೂಪೇಶು ಲಕ್ಷ್ಮಿ – ಶಯನೇಶು ರಂಭಾ ಎಂದು ಹೆಣ್ಣಿಗೆ ಹಲವಾರು ಶ್ರೇಷ್ಠ ಗುಣಗಳನ್ನು ಆರೋಪಿಸಿ, ತ್ಯಾಗ ಮೂರ್ತಿಯಾಗಿ ಚಿತ್ರಿಸಿ, ಹೊಗಳಿ ಅಟ್ಟಕ್ಕೇರಿಸಿ ಆಕೆಯ ಕಾರ್ಯ ವ್ಯಾಪ್ತಿಯನ್ನು ತನ್ನ ಮನೆಯ ಅಡಿಗೆ ಕೋಣೆ ಮತ್ತು ಶಯನಾಗಾರಕ್ಕೆ ಮಾತ್ರ ಸೀಮಿತಗೊಳಿಸಿದ ಪುರುಷ ಸಮಾಜ ಇಂದು ಸಣ್ಣಗೆ ಕಂಪಿಸುವಂತಾಗಿದೆ. ಕಾರಣ ಹೆಣ್ಣು ನಿಧಾನವಾಗಿ ಅಡಿಗೆ ಕೋಣೆಯ ಕಿಟಕಿಯಿಂದ ಆಚೆ ಗಂಡು ಕೇವಲ ತನ್ನದು ಎಂದುಕೊಂಡಿದ್ದ […]

ಪಂಜು-ವಿಶೇಷ

ಮತ್ತೆ ಬಂದಿದೆ ಮಹಿಳೆಗೊಂದು ದಿನ !!: ಭಾಗ್ಯ ಭಟ್

  ಹಾಗೆ ನೋಡಿದ್ರೆ ಎಲ್ಲಾ ದಿನವೂ ಮಹಿಳೆಯರ ದಿನವೇ …. ಬೆಳಿಗ್ಗೆ ಎದ್ದು ಬಾಗಿಲಿಗೆ ನೀರು ಬಿಟ್ಟು ರಂಗೋಲಿ ಹಾಕೋದ್ರಿಂದ ಶುರು ಆಗಿ ರಾತ್ರಿ ಅರೆ ಊಟ ಮಾಡಿ ಮಗುವನ್ನು ಮಲಗಿಸಲು ಹೋಗೋ ತನಕ ಅದು ಅವಳಿಗೇ ಮೀಸಲಾದ ದಿನ … ಅವಳದ್ದೇ ದಿನಗಳೇ…  ಬಿಡುವಿಲ್ಲದ ದಿನಚರಿ ….  ಕೆಲವೊಂದಿಷ್ಟು ಕನಸುಗಳು … ಕಣ್ಣ ಮುಂದಿನ ಗುರಿ …. ಹೆಗಲ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳು … ಅತ್ತೆ ಮಾವಂದಿರ ಮೇಲಿನ ಕಾಳಜಿ ,ಅಪ್ಪ ಅಮ್ಮನ ಮರೆಯಲಾರದ ವಾತ್ಸಲ್ಯ […]

ಮೊದಲು ಓದುಗನಾಗು

ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’: ಮೋಹನ್ ಕೊಳ್ಳೇಗಾಲ

ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ […]

ಕಲೆ-ಸಂಸ್ಕೃತಿ

ಅಂತರಾಷ್ಟ್ರೀಯ ಸಿನಿಮೋತ್ಸವ ಹಾಗೂ ನಾ ಮೆಚ್ಚಿದ ಸಿನೆಮಾಗಳು: ಮಂಸೋರೆ

ಸಿನೆಮಾ ಜಗತ್ತೊಂದು ಅಕ್ಷಯ ಪಾತ್ರೆಯಿದ್ದಂತೆ. ಇಲ್ಲಿ ಎಷ್ಟೇ ಬಗೆದರೂ ಮತ್ತಷ್ಟು ತುಂಬಿಕೊಳ್ಳುತ್ತದೆ. ಜಗತ್ತನ್ನು ಸಿನೆಮಾ ಮಾಧ್ಯಮ ಆವರಿಸಿರುವ ಪರಿ ಹಾಗಿದೆ. ಬೇರೆಲ್ಲಾ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ವೇಗವಾಗಿ ತನ್ನನ್ನು ತಾನು ಪುನರ್‌ವಿಮರ್ಶಿಸಿಕೊಂಡಿರುವ ಮಾಧ್ಯಮವೆಂದರೆ ಅದು ಸಿನೆಮಾ ಮಾತ್ರ. ಹಾಗಾಗಿಯೇ ಜಗತ್ತಿನ ಅಷ್ಟೂ ಇತಿಹಾಸವನ್ನು ತನ್ನೊಳಗಿನಿಂದ ಅಭಿವ್ಯಕ್ತಿಗೊಳಿಸುತ್ತಾ ಸಾಗುತ್ತಿದೆ. ಹಾಗಾಗಿ ಇದು ಜಗತ್ತಿನೊಳಗಿನ ಬಹುಮುಖಿ ಸಂಸ್ಕೃತಿಯಂತೆ ತನ್ನ ಅಭಿವ್ಯಕ್ತಿಯ ವ್ಯಾಪ್ತಿ, ಆಶಯ, ಆಸ್ಥೆಗಳಲ್ಲೂ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಜಗತ್ತಿನ ಕೆಲವು ಭಾಗಗಳಿಗೆ ಸಿನೆಮಾ ಒಂದು ಸಮಯ ಕಳೆಯಲು ಮನರಂಜನಾ ಮಾಧ್ಯಮವಾಗಿ […]

ಪಂಜು-ವಿಶೇಷ

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ: ರಾಜೇಂದ್ರ ಬಿ. ಶೆಟ್ಟಿ

ಯೋಗ ಅಂದರೆ ಏನೋ ಒಂದು ಅಲರ್ಜಿ. ಮಾಧ್ಯಮದವರು ಸುಮ್ಮನೆ ವಿಪರೀತ ಪ್ರಚಾರ ಕೊಡುತ್ತಿದ್ದಾರೆ ಅನ್ನುವ ಭಾವನೆ ನನ್ನಲ್ಲಿ ಬೇರೂರಿತ್ತು. ಮಂಗಳೂರಿನಿಂದ ಆಗಾಗ ದೂರವಾಣಿಯ ಮೂಲಕ ನನಗೆ ಕರೆ – ಒಂದು ವಾರ ಇದ್ದು ಯೋಗ ಕಲಿತು ಹೋಗಿ. ಆಮೇಲೆ ನೋಡಿ ನಿಮ್ಮಲ್ಲಿ ಆಗುವ ಬದಲಾವಣೆ. ಒಲ್ಲದ ಮನಸ್ಸಿನಿಂದ ಹೋದೆ. ಯೋಗದ ಮೊದಲ ಅಭ್ಯಾಸದಲ್ಲೇ ನನ್ನ ಅಭಿಪ್ರಾಯ ಬದಲಾಯಿತು ಎಂದು ಹೇಳುವ ಅಗತ್ಯವಿಲ್ಲ ಅನಿಸುತ್ತದೆ. ಮೊದಲ ಕ್ಲಾಸಿನ ಕೊನೆಯಲ್ಲಿ ನನ್ನ ಮುಖದಲ್ಲಿ ಮಂದಹಾಸವಿತ್ತು. ಮಗು ಒಂದು ಬಾವಿಗೆ ಬಿದ್ದು, […]

ಕಾವ್ಯಧಾರೆ

ಮೂವರ ಕವಿತೆಗಳು: ಜಮುನಾ ಪ್ರದೀಪ್, ವೀಣಾ ಭಟ್, ಶ್ರೀವತ್ಸ ಕಂಚೀಮನೆ

ನನ್ನವಳು ನನ್ನವಳು ಹೂರಾಣಿ ನಾನವಳ ಆರಾಧಕ ಆಸ್ವಾದಿಸುತ ಆಘ್ರಾಣಿಸುತ ಆಧರಿಸುತ ಸವಿಯಬೇಕು ಅವಳ ಸೌಂದರ್ಯದ ಸಿರಿಯ ಬಿಂಕ ಬೆಡಗಿನ ಒಯ್ಯಾರದ ಪರಿಯ ಹೇಳುವಾಸೆಯು ನನಗೆ ಬೆರಗುಕಂಗಳಲಿ- "ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!"   ನನ್ನವಳು ಭಾವುಕಳು ನಾನಾಗಲಾಸೆ ಅವಳು ಬಯಸುವ ಸ್ವಪ್ನ ನಾಚುತಲಿ  ನಗುನಗುತ ಕನವರಿಸಿ ಕರಗಿ ಮಿಡಿಯಲಿ ಮೌನವೀಣೆ ಝೇಂಕರಿಸಿ ಖುಷಿಯಲ್ಲಿ ಜಗವ ಮರೆತು..   ನನ್ನವಳು ಜಲಪಾತ ನಾನಾಗಬೇಕು ಜಾರಿಸಾಗುವ ನಡುವಿನ ಕಲ್ಲುಹಾಸಿನ ಧರೆಯು ನನ್ನ ಅಪ್ಪುತಲಿ ಹೊಸಕುತಲಿ ಬಳುಕುತಲಿ ಜಿಗಿಯಬೇಕು ರೌಧ್ರ ರಭಸದಿ […]

ರುಕ್ಮಿಣಿ ಎನ್ ಅಂಕಣ

ನಿರ್ಮಲ: ರುಕ್ಮಿಣಿ ಎನ್.

ಬಡತನ, ಅಸಮಾನತೆ, ಅತ್ಯಾಚಾರ, ಜಾತೀಯತೆ, ರಾಜಕೀಯ ಅರಾಜಕತೆಯಿಂದ ತುಂಬಿ ತುಳುಕುತ್ತಿದ್ದ ಕೆಸರಿನಲ್ಲಿ ಬಿರಿಯಿತೊಂದು ನೈದಿಲೆ ನಿರ್ಮಲ. ನಿರ್ಮಲ ತಾಯಿಗೆ ಒಬ್ಬಳೇ ಮಗಳು. ವರದಕ್ಷಿಣೆಯ ಕಿರುಕುಳದಿಂದ ಗಂಡನಿಂದ ಬೇರೆಯಾದ ನಿರ್ಮಲಳ ತಾಯಿ ಶಾರದೆಗೆ ತಾಯಿಯ ಮನೆಯಲ್ಲಿ ಆಶ್ರಯ ಕೂಡ ಸಿಕ್ಕಲಿಲ್ಲ. ಎಷ್ಟಾದರೂ ಹೆತ್ತ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಕಾಲ ಅದು. ಕಣ್ಮರೆಯಲ್ಲಿ ಇದ್ದರೆ ಗಾಳಿಮಾತುಗಳನ್ನು ಸೃಷ್ಟಿಸುವರು ಎಂದರಿತ ಶಾರದೆ ಜನರ ಮಾತುಗಳಿಗೆ ಗ್ರಾಸವಾಗಕೂಡದು ಎಂದು ಹುಟ್ಟೂರಲ್ಲೇ ಬಾಡಿಗೆಯ ಮನೆಯೊಂದನ್ನ ಮಾಡಿಕೊಂಡು ಜೀವನ ಎಂಬ ರಣರಂಗದಲ್ಲಿ ಇಳಿದುಬಿಟ್ಟಳು. ಆ […]

ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ್ (ಭಾಗ 7): ಸಿ.ಎಸ್. ಮಠಪತಿ

ಗುಜರಾತಿನಲ್ಲಿರುವ ತನಕ ನನ್ನಲ್ಲಿ ಒಂದೇ ಒಂದು ಅಪಸ್ವರವಿದ್ದದ್ದು , ಗುಜರಾತಿನ ತಿಂಡಿ ತಿನಿಸುಗಳ ಬಗ್ಗೆ. ನಮ್ಮೂರು ನಮಗೆ ಅಂದ, ನಮ್ಮೂರ ತಿಂಡಿ ತಿನಿಸುಗಳು ನಮಗೆ ಚೆಂದ ಎಂಬ ಮಾತು ಒಂದು ಕಾರಣವಾಗಿರಬೇಕು. ಮಹಾನಗರಗಳಲ್ಲಿ ಸಿಗುವಂತಹ ಆಹಾರಗಳು ಒಂದು ರೀತಿಯಲ್ಲಿ ನಮ್ಮ ದಕ್ಷಿಣ ಭಾರತೀಯರಿಗೆ ಸ್ವಲ್ಪ ಹಿಡಿಸಬಹುದು . ಆದರೆ, ಗ್ರಾಮೀಣ ಪ್ರದೇಶದ ಆಹಾರಗಳು ಸುತಾರಾಂ ಹಿಡಿಸುವುದೇ ಇಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಬೆಳಗಿನ ಒಳ್ಳೆಯ ತಿಂಡಿಯ ಅಭಿರುಚಿಯೂ ಇಲ್ಲ. ಅದರಲ್ಲೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಜನರಿಗೆ […]

ಕಥಾಲೋಕ

ಕನಸು: ಗಣೇಶ್ ಖರೆ

ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು  ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ […]