ಮೂವರ ಕವನಗಳು: ನೂರುಲ್ಲಾ ತ್ಯಾಮಗೊಂಡ್ಲು, ಅಜ್ಜೀಮನೆ ಗಣೇಶ್, ಬಿದಲೋಟಿ ರಂಗನಾಥ್
ಗೊಹರ್ ಮನದ ಹರಕೆಯು ಕನಸಾಗಿ ಕಾಡಿದೆ ಕಣ್ಣಿನಾಳದಲಿ ಮಗನೆ ನೀ ಬೆಳೆದು ಬಳಕುವ ಬಳ್ಳಿಯೊಡಲಲಿ ಹೂಗಳು ನಗುತಲಿರಲಿ ಘಮ್ಮನೆ. ಬೆಳೆದು ದೊಡ್ಡವನಾಗಿ ಹಾರದಿರು ನಕ್ಷತ್ರದ ಸುಳಿಗೆ ಇಲ್ಲೆ ಕೂಡಿಬಾಳೊ ಇರುವ ಗುಡಿಯೆ ಸ್ವರ್ಗ ನಮಗೆ. ಸಾವಿರಾರು ವ್ಯೆಭೋಗದಾಭರಣಗಳು ಸಮುದ್ರ ದೊಡಲಿನ ಸಿಂಗಾರಕೆ? ಹೃದಯ ಸಮುದ್ರದಲ್ಲಿನ ಮುತ್ತನ್ನು (ಗೊಹರ್) ಹೊತ್ತ ಎನಗೆ ಯಾವುದೇತರಹಂಗೆ? ನಡೆ,ನಿನ್ನ ಅಂಬೆಗಾಲುಗಳಲಿ ಹೊನ್ನಕಿರಣಗಳು ಸೂಸಲಿ ನಾಳಿನಾಸೆಯ ಎಮ್ಮಮನಗಡಲಲಿ ಹರ್ಷದಲೆಗಳು ಏಳಲಿ. -ನೂರುಲ್ಲಾ ತ್ಯಾಮಗೊಂಡ್ಲು ಜಗತ್ತು …. … Read more