ಬೆಳದಿಂಗಳ ಕಡಲಲ್ಲಿ ನೆನಪಿನ ಅಲೆಗಳು:ರೇಷ್ಮಾ ಎ.ಎಸ್.
ಬೆಳಿಗ್ಗೆ ನಾಲ್ಕೂವರೆಗೆ ಪ್ರತಿನಿತ್ಯ ಏಳಲೇಬೇಕಾದ ಅನಿವಾರ್ಯುತೆ ನನ್ನದು. ಎಷ್ಟೇ ಕಾಳಜಿ ವಹಿಸಿದರೂ ಒಮ್ಮೊಮ್ಮೆ ತಡವಾಗಿ ಎಚ್ಚರವಾಗಿ ಇಡೀ ದಿನದ ಕಾರ್ಯಕ್ರಮವೆಲ್ಲಾ ಅಸ್ತವ್ಯಸ್ತವಾಗಿ ಸಾಕೋ ಸಾಕಾಗಿ ಹೋಗುವುದೂ ಉಂಟು. ಕೆಲದಿನಗಳ ಹಿಂದೆ ಒಳ್ಳೆಯ ನಿದ್ರೆಯಲ್ಲಿದ್ದಾಗ ಕಾಗೆಗಳ ಕರ್ಕಶ ಕೂಗಿನಿಂದ ಬಡಿದೆಬ್ಬಿಸಿದಂತಾಗಿ ಗಡಬಡಿಸಿ ಕಣ್ಣು ಬಿಟ್ಟೆ. ಕಿಟಕಿಯತ್ತ ನೋಡಿದಾಗ ಬೆಳ್ಳನೆಯ ಬೆಳಕು. ಆಯ್ತು, ಬೆಳಗಾಗೇ ಬಿಟ್ಟಿತು. ಈ ದಿನವೆಲ್ಲ ನನ್ನದು ಹಾಳು. ಹಾಳು ನಿದ್ದೆ ಎಂದು ಶಪಿಸುತ್ತಾ ಗಡಿಯಾರದತ್ತ ನೋಡಿದರೆ ರಾತ್ರಿ ಎರಡು ಗಂಟೆಯಷ್ಟೇ. ಅಚ್ಚರಿಯಿಂದ ಕಿಟಕಿಯ ಬಳಿ ಬಂದುನಿಂತು … Read more