ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು: ಪ್ರಶಸ್ತಿ

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ … Read more

ಶಿವಯ್ಯ ಎಂಬ ಒಗಟು: ಎಚ್.ಕೆ.ಶರತ್

ಅವನೆಂದರೆ ನಮ್ಮೊಳಗಿದ್ದೂ ನಮ್ಮಂತಾಗದ ವಿಸ್ಮಯ. ನಮ್ಮ ಟೀಕೆ, ಅಪಹಾಸ್ಯ, ಚುಚ್ಚು ಮಾತುಗಳಿಗೆ ಎಂದೂ ಪ್ರತಿಕ್ರಿಯಿಸಿದವನಲ್ಲ. ತನ್ನ ಪಾಡಿಗೆ ತಾನು, ತನ್ನ ಜಗತ್ತಿನೊಂದಿಗೆ ಮಾತ್ರ ಬೆರೆತು ತನ್ನತನ ಉಳಿಸಿಕೊಂಡ, ನಿಟ್ಟುಸಿರು ಗಳಿಸಿಕೊಂಡ ಮನುಷ್ಯ ಜೀವಿ. ಶಿವಯ್ಯ, ಅವನಿಗೆ ಅವನದಲ್ಲದ ಜಗತ್ತು ಅರ್ಥಾಥ್ ನಾವು ಇಟ್ಟ ಹೆಸರು. ಅಪ್ಪ-ಅಮ್ಮ ಹುಟ್ಟಿದ ದಿನ, ನಕ್ಷತ್ರ, ಹಾಳುಮೂಳು ನೋಡಿ ಇಟ್ಟ ಹೆಸರು ಬೇರೆ ಇತ್ತು. ಆದರದು ದಾಖಲೆಗಳಲ್ಲಿ, ಅವನ ಸ್ವಂತದ ಜಗತ್ತಿನಲ್ಲಿ ಮಾತ್ರ ಚಾಲ್ತಿಯಲ್ಲಿತ್ತು. ಪಲ್ಸರ್ರು, ಕರಿಷ್ಮಾ, ಝಡ್‍ಎಂಆರ್ ಬಂದ ಮೇಲೂ ಅವುಗಳ … Read more

ಕಪ್ಪುಸುಂದರಿಯ ಕಿರಿಗೂಡು!!: ಅಖಿಲೇಶ್ ಚಿಪ್ಪಳಿ

ಅನಿವಾರ್ಯ ಕಾರಣಗಳಿಂದಾಗಿ ಮನೆಯಿಂದ ಹೊರಗೆ ಕಾಲಿಡದೇ ವಾರದ ಮೇಲಾಗಿತ್ತು. ಮನೆಯಲ್ಲಿ ಇದ್ದ-ಬದ್ದ ಪುಸ್ತಕಗಳೆಲ್ಲಾ ಓದಿ ಮುಗಿದವು. ಈಡಿಯಟ್ ಪೆಟ್ಟಿಗೆ ವೀಕ್ಷಿಸಲು ವಿದ್ಯುಚ್ಛಕ್ತಿ ಭಾಗ್ಯವಿಲ್ಲವಾಗಿತ್ತು. ಮಳೆಯಿಲ್ಲದ ಮಳೆಗಾಲದಲ್ಲೆ ಬಿರುಬೇಸಿಗೆಗಿಂತ ಸುಡುವ ಬಿಸಿಲು. ಆಕಾಶ, ಗಾಳಿ, ನೆಲವೆಲ್ಲಾ ಬಿಸಿಯ ಝಳದಿಂದ ಕಾದು ಬೆಂದು ಹೋಗಿದ್ದವು. ಮಾಡಲು ಕೆಲಸವಿಲ್ಲದಿದ್ದಾಗ ಸಮಯದ ಸೆಕೆಂಡಿನ ಮುಳ್ಳು ನಿಧಾನಕ್ಕೇ ಚಲಿಸುತ್ತದೆ. ಅದರಲ್ಲೂ ಈ ತರಹದ ವ್ಯತಿರಿಕ್ತ ವಾತಾವರಣ ಮಾನಸಿಕ ಆರೋಗ್ಯವನ್ನೇ ತಿಂದು ಬಿಡುತ್ತದೆ. ಲವಲವಿಕೆಯಿಲ್ಲದೇ ಮರದ ಕೊರಡಿನಂತೆ ಬಿದ್ದುಕೊಂಡಿದ್ದವನಿಗೆ, ಕಾಲಬುಡದಲ್ಲೊಂದು ಹೆಜ್ಜೇನಿಗಿಂತ ಕೊಂಚ ದೊಡ್ಡದಾದ ಕರೀ … Read more

ವಿಕಟ ವಿನಾಯಕ: ಎಸ್. ಜಿ. ಸೀತಾರಾಮ್, ಮೈಸೂರು.

      ವಿಚಿತ್ರ ಮೈಸಿರಿ-ಮೈಮೆಗಳಿಂದ, ಆಕೃತಿ-ಅಲಂಕಾರಗಳಿಂದ, “ವಿಕಟಾಯ ನಮಃ” ಎಂದೇ ಆರಾಧಿಸಲ್ಪಡುವ ವಿನಾಯಕನ ವಿಕಟಬಿಂಬವೊಂದನ್ನು ಸೆರೆಹಿಡಿಯಲು ಈ ಅಕ್ಷರಬಂಧದಲ್ಲಿ ಯತ್ನಿಸಲಾಗಿದೆ. ಇದರಲ್ಲಿ “ಅಕಟವಿಕಟ ನುಡಿಕಟ್ಟು”, “ಘನೇಶ ಭವಿಷ್ಯೋತ್ತರ ಪ್ರಲಾಪವು”, “ಚೆಲುಗನ್ನಡದಲ್ಲಿ ಚೆನ್‍ಗಣೇಶ”, “ವಿಶೇಷ ವಿಘ್ನೇಶ” ಮತ್ತು “ವಿನಾಯಕನ ವಿನಿಕೆಗಾಗಿ” ಎಂಬೆನಿಸುವ ಪಂಚಖಂಡಗಳು ಒಳಗೂಡಿವೆ.   ಅಕಟವಿಕಟ ನುಡಿಕಟ್ಟು      ಗಣೇಶವಿಚಾರವನ್ನು ಕುರಿತಂತೆ ‘ಕೃಷ್ಣಶಕ ಹದಿನೂರನೇ’ ಶತಮಾನದ ಕೆಲವು ಸೊಟ್ಟಸೊಲ್ಲುಗಳು ಇಲ್ಲಿವೆ. “ಇವುಗಳನ್ನು ಯುಕ್ತಿಯಿಂದ ನೋಡಿದಲ್ಲಿ, ಬುದ್ಧಿನಾಥನು ಪ್ರಸನ್ನವದನನಾಗಿ ಒಂದೊಂದನ್ನು ನೋಡಿದಾಗಲೂ ಒಂದೊಂದು ವಿಘ್ನವನ್ನು ಉಪಶಾಂತಿಗೊಳಿಸುತ್ತಾ … Read more

ಕಾವ್ಯಧಾರೆ: ಶೀತಲ್, ಸಿಪಿಲೆನಂದಿನಿ, ಶಿವಕುಮಾರ ಚನ್ನಪ್ಪನವರ, ಕು.ಸ.ಮಧುಸೂದನ್

ಸ್ವಾತಂತ್ರ ನಿನ್ನ ಖೈದಿ  ನಾ  ಬೇಡ ನನಗೆ ನೀ ಕೊಡುವ ಬಿಡುಗಡೆ …..  ನಿನ್ನ ಗುಲಾಮ  ನಾ   ಕೊಡಬೇಡ ನೀ ನನಗೆ ಯಾವುದೇ  ಸಂಭಾವನೆ ….  ನಿನ್ನ ಅಗಲಿ ನಾ ಬದುಕಲು  ಅರ್ಥವಿಲ್ಲದ ಕವನವದು …..  ನೀನಿಲ್ಲದ ಜೀವನವೇಕೆ ಹೇಳು  ನೆತ್ತರಿಲ್ಲದ ನರವದು ……  ಇದ್ದಾಗ ನೀ   ಗಾಳಿಗೂ ಅಸೂಯೆ ಹುಟ್ಟಿಸುವೆ ನಾ…  ಕೈಬಿಟ್ಟಾಗ ನೀ  ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ….  (ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ) -ಶೀತಲ್        … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನೂರಿ ಬೆ ಎಂಬಾತನ ಪುರಾತನ ಪೆಠಾರಿ ಚಿಂತನಶೀಲ ನೂರಿ ಬೆ ಅಲ್ಬೇನಿಯಾದ ಒಬ್ಬ ಗೌರವಾನ್ವಿತ ನಿವಾಸಿ. ತನಗಿಂತ ಬಹಳಷ್ಟು ಚಿಕ್ಕವಳಾಗಿದ್ದವಳೊಬ್ಬಳನ್ನು ಅವನು ಮದುವೆಯಾಗಿದ್ದ. ಒಂದು ದಿನ ಅವನು ಮಾಮೂಲಿಗಿಂತ ಬೇಗನೆ ಮನೆಗೆ ಹಿಂದಿರುಗಿದಾಗ ಅವನ ಅತ್ಯಂತ ವಿಧೇಯ ಸೇವಕನೊಬ್ಬ ಓಡಿ ಬಂದು ಹೇಳಿದ, “ನಿಮ್ಮ ಹೆಂಡತಿ, ಅರ್ಥಾತ್ ನಮ್ಮ ಯಜಮಾನಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ. ಅವರ ಕೊಠಡಿಯಲ್ಲಿ ಒಬ್ಬ ಮನುಷ್ಯ ಹಿಡಿಸಬಹುದಾದಷ್ಟು ದೊಡ್ಡ ಪೆಠಾರಿಯೊಂದಿದೆ. ಅದು ನಿಮ್ಮ ಅಜ್ಜಿಯದ್ದು. ನಿಜವಾಗಿ ಅದರಲ್ಲಿ ಕಸೂತಿ ಕೆಲಸ ಮಾಡಿದ ಪುರಾತನ … Read more

ಸಾಮಾನ್ಯ ಜ್ಞಾನ (ವಾರ 76): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಪರ್ಪಂಚ್ ಇರೋತನಕ ಕನ್ನಡ ಪದಗೋಳನುಗ್ಗಿ ಎಂದು ನುಡಿದವರು ಯಾರು? 2.    ಐ.ಐ.ಟಿ (IIT) ಯ ವಿಸ್ತೃತ ರೂಪವೇನು? 3.    ಸ್ನಿಗ್ಧತೆಯನ್ನು ಅಳತೆ ಮಾಡುವ ಸಾಧನ ಯಾವುದು? 4.    ನಾಲ್ ಸರೋವರ ಪಕ್ಷಿಧಾಮ ಎಲ್ಲಿದೆ? 5.    ಬಾವೂಲ್ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಕಲೆಯಾಗಿದೆ? 6.    2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ ಕರ್ನಾಟಕದ ಸಾಕ್ಷಾರತಾ ಪ್ರಮಾಣ ಎಷ್ಟು? 7.    ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ ಎಲ್ಲಿದೆ? … Read more

Happy 50th anniversary to “ಸಂಸ್ಕಾರ” …: ಆದರ್ಶ ಬಿ. ವಶಿಷ್ಟ

ಹಿಂದಿರುಗಿ ನೋಡಿದಾಗ …  ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು … Read more

ಹೀಗೊಂದು ಸ್ವ-ವಿಮರ್ಶೆ: ಅಭಿ ಸಾರಿಕೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು ಯಾರು ಇಲ್ಲ. ಬಲಪಕ್ಕದಲ್ಲಿರುವನಿಗೆ ಎರಡಂತಸ್ತಿನ ಮನೆ, ಎಡಪಕ್ಕದಲ್ಲಿರುವ ನಿಲ್ಲಲು ಸೂರಿಲ್ಲದ ಭಿಕಾರಿ, ಒಂದಸ್ತಿನ ಮನೆಯಲ್ಲಿರುವ ನಾವು ಎರಡಂತಸ್ತಿರುವನನ್ನು ನೋಡಿ … Read more

ಪುಟ್ಟಿ ಮತ್ತು ದೇವರು: ಅನಿತಾ ನರೇಶ್

ನಮ್ಮ ಪಕ್ಕದ ಮನೆ ಪುಟ್ಟಿಗೆ, ನಮ್ಮ ಮನೆಗೆ ಯಾವಾಗೆಂದರಾವಾಗ ಬರಲು ವೀಸಾ, ಪಾಸ್ಪೋರ್ಟ್ ಏನೂ ಬೇಡ. ಇವತ್ತು ಮಧ್ಯಾಹ್ನ ನನ್ನ ಊಟ ಆಗಿತ್ತಷ್ಟೇ. ಅವಳ ಹೆಜ್ಜೆಯ ಅಂದರೆ ಗೆಜ್ಜೆಯ ಸದ್ದು ಕೇಳಿಸಿತು.  ಒಂದು ಕೈಯಲ್ಲಿ ಕಥೆ ಪುಸ್ತಕ, ಇನ್ನೊಂದು ಕೈಯಲ್ಲಿ ಡ್ರಾಯಿಂಗ್ ಪುಸ್ತಕ ಹಿಡಿದು ‘ಅಕ್ಕಾ ಇವತ್ತು ಎರಡು ಕಥೆ, ಮೂರು ಡ್ರಾಯಿಂಗ್ ಗೊತ್ತಾಯ್ತಾ’ ಎಂದಳು. ನನ್ನದಿನ್ನೂ ಊಟದ ಪಾತ್ರೆಗಳನ್ನು ತೊಳೆಯುವ ಕೆಲಸ ಆಗಿರಲಿಲ್ಲ. ಹಾಗಾಗಿ ಅವಳನ್ನು ಅಲ್ಲೇ ಕಟ್ಟೆಯ ಮೇಲೆ ಕೂರಿಸಿ ಪಾತ್ರೆ ತೊಳೆಯಲು ಕುಳಿತೆ.  … Read more

ಮಂಕಿ ಬ್ಯುಸಿನೆಸ್: ಅಖಿಲೇಶ್ ಚಿಪ್ಪಳಿ

ಮಂಗಳೂರಿನ 800 ಜನ ರೈತರು ಮಂಗಗಳ ಕಾಟದಿಂದ ಬೇಸತ್ತು 2012ರಿಂದ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಂಗನ ಕಡಿತಕ್ಕೆ ಪರಿಹಾರ ನೀಡುವ ಏಕೈಕ ರಾಜ್ಯ ಉತ್ತರಾಖಂಡ. ಜಮ್ಮು ಜಿಲ್ಲೆಯಲ್ಲಿ ಪ್ರತಿವರ್ಷ 33 ಕೋಟಿ ರೂಪಾಯಿ ಮೊತ್ತದ ಬೆಳೆ ನಾಶ ಮಂಗಗಳಿಂದ. ಹಿಮಾಚಲ ಪ್ರದೇಶದಲ್ಲಿ ಪ್ರತಿವರ್ಷ ಮಂಗಗಳಿಂದ ಆಗುವ ಬೆಳೆ ಹಾನಿ ಮೊತ್ತ 500 ಕೋಟಿ ರೂಪಾಯಿಗಳು. ಮಂಗಗಳ ವಿರುದ್ಧ ಸೆಣೆಸಲು ಆಗ್ರಾ ಸಿಟಿ ಡೆವಲಪ್‍ಮೆಂಟ್ ಅಥಾರಿಟಿ ಪ್ರತಿವರ್ಷ ಖರ್ಚು ಮಾಡುವ ಹಣದ ಮೊತ್ತ 2 ಕೋಟಿ ರೂಪಾಯಿಗಳು. ದೇಶದ … Read more

ಬಂದ್: ಪ್ರಶಸ್ತಿ ಪಿ.

ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ  ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ … Read more

ಮೂವರ ಕವನಗಳು: ಶಶೀ ತರೀಕೆರೆ, ಜಾನ್ ಸುಂಟಿಕೊಪ್ಪ, ವಲ್ಲಿ ಕ್ವಾಡ್ರಸ್

ಮರುಳನ ಸಾಲುಗಳು ನಿನ್ನ ನೆನಪಿಗಾಗಿ  ಖಾಲಿ ಬೀದಿಯಲ್ಲೂ ಕೈಬೀಸಿ ನಡೆಯೋದು  ಅದೇಷ್ಟು ಹಿತವಾದ ಸಾವು  ನಜ್ಜುಗುಜ್ಜಾದ ಈ ಬದುಕಿಗೆ.. ಬೆಳ್ಳಂಬೆಳಿಗ್ಗೆ ನಿನ್ನದೇ ತಿಳಿಯಾದ ನಿಗೂಢ ಸ್ವಪ್ನವೊಂದು ಥಟಕ್ಕನೆ ಹಾಸಿಗೆಯಿಂದೇಳಿಸುವ ಪರಿ  ಊಹಿಸು ಇನ್ನೆಷ್ಟು ದಿನ… ಚಿಟಿಕೆ ಸದ್ದಿನಷ್ಟಾದರೂ ನಗು ಉಳಿಸಿಕೊಳ್ಳದೆ  ಮುಗ್ಗರಿಸಿರುವ  ಊರುಕೇರಿಗಳ ಮೈಲಿಗಲ್ಲು ಕಟ್ಟಿಕೊಟ್ಟಿತೇ ಇನ್ನೊಂದು ಊರು… ಸುಮ್ಮನೆ ನಿನ್ನಂತೆ ಹ್ಮೂಂ  ಗುಡುವ ಹೂಬನ,ಮರಗಿಡ, ರೈಲು,ಸ್ತಬ್ಧ ಗೋಡೆಯಲ್ಲಿನ ನಿಪುಣ ಗಡಿಯಾರಗಳಿಗೆ  ಹೇಳು ಇದು ಎಷ್ಟರ ಪ್ರಾಯ .. -ಶಶೀ ತರೀಕೆರೆ         … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ತಂದೆ, ಮಗ ಹಾಗು ಕತ್ತೆ ತಂದೆ ಹಾಗು ಮಗ ತಮ್ಮ ಕತ್ತೆಯೊಂದಿಗೆ ನಡೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಹಳ್ಳಿಯವನೊಬ್ಬ ಹೇಳಿದ, “ನೀವೆಂಥ ಮೂರ್ಖರು. ಕತ್ತೆ ಇರುವುದೇ ಸವಾರಿ ಮಾಡಲೋಸುಗವಲ್ಲವೆ?” ಇದನ್ನು ಕೇಳಿದ ತಂದೆ ಮಗನನ್ನು ಕತ್ತೆಯ ಮೇಲೆ ಕುಳ್ಳಿರಿಸಿದ. ಇಂತು ಅವರು ಪ್ರಯಾಣ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅವರು ಒಂದು ಗುಂಪಾಗಿ ಹೋಗುತ್ತಿದ್ದ ಕೆಲವರನ್ನು ಸಂಧಿಸಿದರು. ಅವರ ಪೈಕಿ ಒಬ್ಬ ಹೇಳಿದ, “ನೋಡಿ, ನೋಡಿ. ಆ ಯುವಕ ಎಷ್ಟು ಸೋಮಾರಿ! ತನ್ನ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-5

ಕುರುಸಾಡಿ ದ್ವೀಪದಲ್ಲಿ.. ಕಳೆದ ವಾರ ಶ್ರೀಲಂಕಾದಲ್ಲಿನ ಬೆಳಕಿನ ಮರಗಳ ರಹಸ್ಯ ಬೇಧಿಸಿದ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಮರಳಿ ತಮ್ಮ ಊರಿಗೆ ಬರುವಾಗ ಎರಡು ದಿನಗಳ ಮಟ್ಟಿಗೆ ರಾಮೇಶ್ವರದಲ್ಲಿಯೇ ಉಳಿಯುವ ಅನಿವಾರ್ಯತೆ ಎದುರಾಯ್ತು. ಗುಂಡ್ರುಗೋವಿ ಲಗೋರಿಬಾಬಾ ಮತ್ತು ತುಂಡೈದ ಫ್ಲಾಪಿಗೆ ಅವರು ಎಲ್ಲಿದ್ರೂ ಒಂದೇ! “ಆಯ್ತು” ಅಂತ ಇಬ್ರೂ ಅಲ್ಲಿಯೇ ಹೊಟೇಲೊಂದ್ರಲ್ಲಿ ರೂಮ್ ಮಾಡಿ ಉಳಿದುಕೊಂಡ್ರು. ಟಿವಿ, ಪೇಪರ್, ಪುಸ್ತಕ ಇತ್ಯಾದಿಗಳೆಲ್ಲಾ ಇಬ್ಬರಿಗೂ ಇರೋ ಆಸಕ್ತಿ ಅಷ್ಟಕ್ಕಷ್ಟೆ! ಲಗೋರಿಬಾಬಾಗೆ ಹೆಚ್ಚಿನ ಸಮಯ ಧ್ಯಾನ, ನಿದ್ದೆ, ಭಂಗಿ ಸೇದೋದ್ರಲ್ಲೇ ಕಳೆದೊದ್ರೆ, … Read more

ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, … Read more